ಬಿಳಿ ಕೂದಲಿನ ಚಿಂತೆ ಬಿಡಿ ಆದೊಷ್ಟು ಬೇಗ ಕಪ್ಪು ಕೂದಲು ಮಾಡಿಕೊಳ್ಳಿ

ಆರೋಗ್ಯ

ನಮಸ್ತೆ ಪ್ರಿಯ ಓದುಗರೇ, ಮನುಷ್ಯನೂ ಹುಟ್ಟಿನಿಂದ ಸಾಯುವವರೆಗೆ ವಿವಿಧ ಹಂತಗಳನ್ನು ಪಾಸು ಮಾಡುತ್ತಾನೆ. ಯೌವ್ವನದಿಂದ ಮುಪ್ಪಿನೆಡೆಗೆ ಸಾಗುತ್ತಲೇ ಮನುಷ್ಯನ ದೇಹವು ಶಕ್ತಿಯನ್ನು ಕಳೆದುಕೊಳ್ಳುತ್ತಾ ಬರುತ್ತದೆ. ಮತ್ತು ಮನುಷ್ಯನ ದೇಹದ ಪ್ರತಿಯೊಂದು ಭಾಗವೂ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಅದರಲ್ಲಿ ಕೂದಲು, ಸುಂದರವಾದ ಕೂದಲನ್ನು ಯಾರು ಇಷ್ಟ ಪಡುವುದಿಲ್ಲ ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಉದ್ದವಾದ ಕೂದಲು ಅಂದ್ರೆ ತುಂಬಾನೇ ಇಷ್ಟವಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಯುವ ಜನತೆಯ ಕೂದಲಿನ ವಿಷಯದ ಬಗ್ಗೆ ಹೇಳತೀರದು. ಕೂದಲು ಉದುರುವ ಸಮಸ್ಯೆ ಕೂದಲು ಬೆಳ್ಳಗೆ ಆಗುವುದು ಕೂದಲು ತೆಳುವಾಗುವುದು ಈ ಸಮಸ್ಯೆಗಳು ಬರಲು ವಯಸ್ಸು ಬೇಕಾಗಿಲ್ಲ. ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿ ಕೂದಲು ಬೆಳ್ಳಗೆ ಆದ್ರೆ ಇನ್ನೂ ಕೆಲವರಿಗೆ 40-50 ವರ್ಷ ದಾಟುತಿದ್ದಂತೆ ಕೂದಲು ಬೆಳ್ಳಗೆ ಆಗುತ್ತಿರುತ್ತದೆ. ಈ ಕೂದಲಿನ ವಿಷಯ ಅನ್ನುವುದು ಎಲ್ಲರಲ್ಲೂ ಭಯ ಆತಂಕ ಕೋಪ ತಾಪವನ್ನು ಹುಟ್ಟಿಸುತ್ತದೆ. ಕೂದಲು ಬೆಳ್ಳಗೆ ಆಗುವುದನ್ನು ತಡೆಯಲು ಸುಮಾರು ಜನರು ತಲೆಗೆ ಹೇರ್ ಪ್ಯಾಕ್ ಮಾಡಿ ಹಚ್ಚಿಕೊಳ್ಳುತ್ತಾರೆ.

ಇದು ಕೆಲವರಿಗೆ ಸೆಟ್ ಆಗುತ್ತದೆ ಇನ್ನೂ ಕೆಲವರಿಗೆ ಸೆಟ್ ಆಗದೆ ಆ ಜಾಗದಲ್ಲಿ ಉರಿ ಶುರು ಆಗಿ ಕೂದಲು ಜಾಸ್ತಿ ಹೋಗುತ್ತದೆ. ಹಾಗಾದ್ರೆ ಇಂದಿನ ಲೇಖನದಲ್ಲಿ ಮನೆಯಲ್ಲಿ ಸುಲಭವಾಗಿ ಬಿಳಿ ಕೂದಲನ್ನು ಕಪ್ಪು ಕೂದಲನ್ನಾಗಿ ಮಾಡಲು ಒಂದು ಸುಲಭವಾದ ಹೇರ್ ಪ್ಯಾಕ್ ಅನ್ನು ತಿಳಿಸಿಕೊಡುತ್ತೇವೆ ಬನ್ನಿ. ಸಾಮಾನ್ಯವಾಗಿ ಕೂದಲು ಚೆನ್ನಾಗಿದ್ದರೆ ಮನುಷ್ಯರು ತುಂಬಾನೇ ಸುಂದರವಾಗಿ ಕಾಣುತ್ತಾರೆ. ಅಷ್ಟರಲ್ಲಿ ಅವರು ಕೂದಲು ವಯಸ್ಸು ಮೀರುವ ಮುನ್ನ ಮತ್ತೆ ವಯಸ್ಸು ಮೀರಿದ ನಂತ್ರ ಕೂದಲು ಬೆಳ್ಳಗೆ ಆಗುತ್ತವೆ ಅದಕ್ಕೆ ಸುಮಾರು ಜನರು ಕೂದಲಿಗೆ ಬಣ್ಣವನ್ನು ಬಳೆಯುತ್ತಾರೆ. ಇದಕ್ಕೆ ಮೂಲ ಕಾರಣ ತಾಮ್ರದ ಕೊರತೆಯಿಂದ ಕೂದಲಿಗೆ ಬಣ್ಣ ನೀಡುವ ಮೆಲನಿನ್ ಎಂಬ ಬಣ್ಣ ಉತ್ಪತ್ತಿಯಾಗದೆ ಕೂದಲು ಬೆಳ್ಳಗೆ ಆಗಿ ನೆರೆಯುತ್ತದೆ. ಹಾಗಾದ್ರೆ ಇದಕ್ಕೆ ಏನು ಮಾಡಬೇಕು ಅಂತ ಹೇಳುವುದಾದರೆ ಆಯುರ್ವೇದದ ಮೂಲಕ ಎರಡು ಕೂದಲಿಗೆ ಹಚ್ಚುವ ಪುಡಿಯನ್ನು ತಿಳಿಸಿಕೊಡುತ್ತೇವೆ. ಈ ಎರಡು ಪುಡಿಗಳು ನಿಮ್ಮ ಕೂದಲು ಸಾಧ್ಯವಾದಷ್ಟು ಕಪ್ಪಗೆ ಆಗುತ್ತದೆ. ಯಾವುದೇ ರೀತಿಯ ಅಡ್ಡ ಪರಿಣಾಮಗಳೂ ಬೀರುವುದಿಲ್ಲ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಹಚ್ಚಿದರೆ ಕೂದಲು ಕಪ್ಪಗೆ ಆಗುವಷ್ಟು ಈ ಪುಡಿ ಸಹಾಯ ಮಾಡದೇ ಇದ್ದರೂ ನಿಜಕ್ಕೂ ಆಯುರ್ವೇದಿಕ್ ರೀತಿಯಲ್ಲಿ ನಿಮಗೆ ತುಂಬಾನೇ ಸಹಾಯ ಮಾಡುತ್ತದೆ. ಮೊದಲನೆಯದು ಮೆಹಂದಿ ಪುಡಿ. ಇದು ಗ್ರಂಥಿ ಅಂಗಡಿಯಲ್ಲಿ ಸಿಗುತ್ತದೆ.

ಅದನ್ನು ತರಬೇಕು ಇದರ ಜೊತೆಗೆ ನೀಲಿ ಪುಡಿ ಇದನ್ನು ಇಂಡಿಗೋ ಅಂತ ಕರೆಯುತ್ತಾರೆ ಇದು ಒಂದು ಬಗೆಯ ಗಿಡದ ಪುಡಿ ಇದನ್ನು ತೆಗೆದುಕೊಳ್ಳಬೇಕು. ಈ ಮೆಹಂದಿ ಪುಡಿ ಅನ್ನು ನೀರಿನಲ್ಲಿ ಹಾಕಿ ಕಳ್ಸಿ ಅದನ್ನು ಕೂದಲು ತುಂಬಾನೇ ಹಚ್ಚಿ ಹೇರ್ ಪ್ಯಾಕ್ ಮಾಡಿಕೊಳ್ಳಬೇಕು. ನಂತ್ರ ಎರಡು ತಾಸು ಬಿಟ್ಟು ತೊಳೆದುಕೊಳ್ಳಬೇಕು. ಮಾರನೆಯ ದಿನ ಈ ಇಂಡಿಗೋ ಪುಡಿ ತೆಗೆದುಕೊಂಡು ಅದರಲ್ಲಿ ನೀರು ಹಾಕಿ ಚೆನ್ನಾಗಿ ಕಲಸಿ ಅದನ್ನು ಹೇರ್ ಪ್ಯಾಕ್ ಮಾಡಿಕೊಳ್ಳ ಬೇಕು. ಇದನ್ನು ಕೂಡ ಎರಡು ತಾಸು ಬಿಟ್ಟು ತೊಳೆದುಕೊಳ್ಳಬೇಕು. ಇದನ್ನು ನೀವು ವಾರದಲ್ಲಿ ಎರಡು ಮೂರು ಬಾರಿ ಸತತವಾಗಿ ಮಾಡಿದರೆ ನೈಸರ್ಗಿಕವಾಗಿ ನಿಮ್ಮ ಕೂದಲು ಕಪ್ಪಾಗಿ ಇರಲು ಸಹಾಯ ಮಾಡುತ್ತದೆ. ಒಂದು ಬಾರಿ ಪ್ರಯತ್ನ ಮಾಡಿ ನೋಡಿ ಶುಭದಿನ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *