ಹುಳುಕಡ್ಡಿ ಅಥವಾ ಗಜಕರ್ಣ ಸೋಂಕು ಅನ್ನು ಕೇವಲ ಈ ಮೂರು ಪದಾರ್ಥಗಳನ್ನು ಬಳಕೆ ಮಾಡಿ ಮಂಗಮಾಯ ಮಾಡಬಹುದು

ಆರೋಗ್ಯ

ನಮಸ್ತೆ ಸ್ನೇಹಿತರೇ, ಹುಳುಕಡ್ಡಿ ಅಥವಾ ಗಜಕರ್ಣ ಅಂತ ಕರೆಸಿಕೊಳ್ಳುವ ಈ ಸೋಂಕು ಸಾಮಾನ್ಯವಾಗಿ ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಧ್ಯತೆಗಳು ಹೆಚ್ಚು ಇರುತ್ತದೆ. ಅದಕ್ಕಾಗಿ ಈ ಸಮಸ್ಯೆ ನಿಮ್ಮಲ್ಲಿ ಕಾಣಿಸಿಕೊಂಡಾಗ ನೀವು ಆಲಕ್ಷ್ಯ ಮಾಡದೇ ತಕ್ಷಣವೇ ವೈದ್ಯರ ಸಲಹೆಯನ್ನು ಪಡೆಯುವುದು ಉಚಿತವಾಗಿದೆ. ಇಂದಿನ ಲೇಖನದಲ್ಲಿ ಗಜಕರ್ಣ, ತುರಿಕೆ, ಕಚ್ಚಿ ಹೀಗೆ ಅಂದ್ರೆ ಏನು ಇದು ಬರಲು ಕಾರಣ ಏನು? ನಂತ್ರ ಇದಕ್ಕೆ ತುಂಬಾನೇ ಪರಿಣಾಮಕಾರಿ ಆದ ಮನೆಮದ್ದು ಕೂಡ ತಿಳಿಯೋಣ ಬನ್ನಿ. ಹಾಗಾದ್ರೆ ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಈ ಸೋಂಕು ಸಾಮಾನ್ಯವಾಗಿ ಶಿಲೀಂದ್ರಗಳಿಂದ ಅಥವಾ ಬ್ಯಾಕ್ಟೀರಿಯಾ ದಿಂದ ಹರಡುತ್ತದೆ. ಅದರಲ್ಲಿ ಮುಖ್ಯವಾಗಿ ತುಂಬಾನೇ ಬಿಗಿಯಾದ ಬಟ್ಟೆಯನ್ನು ಧರಿಸುವುದರಿಂದ ಹಾಗೆಯೇ ನಿತ್ಯವೂ ಸ್ನಾನವನ್ನು ಮಾಡದೇ ದೇಹವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವ ಕಾರಣ ದೇಹದಲ್ಲಿ ಬೆವರಿನ ಪ್ರಮಾಣ ಹೆಚ್ಚಾದಾಗ ಮುಖ್ಯವಾಗಿ ನೀವು ಇನ್ನೊಬ್ಬರ ಬಟ್ಟೆಯನ್ನು ಧರಿಸಿದಾಗ ಕೂಡ ಈ ಬಗೆಯ ಸಮಸ್ಯೆಯನ್ನು ನೀವು ಎದುರಿಸಬೇಕಾಗುತ್ತದೆ.

ಇದು ನಿಮ್ಮ ಚರ್ಮದ ಮೇಲೆ ಕಾಣಿಸಿಕೊಳ್ಳುವುದಲ್ಲದೆ ನಿಮ್ಮ ಮುಖದ ಮೇಲೆ ಆಗುವ ಸಾಧ್ಯತೆ ಇರುತ್ತದೆ. ಇದು ಹೆಚ್ಚಾಗಿ ಮಹಿಳೆಯರಲ್ಲಿ ಗುಪ್ತಾಂಗಗಳನ್ನೂ ಸರಿಯಾಗಿ ಸ್ವಚ್ಛ ಮಾಡದೇ ಇದ್ದ ಜಾಗದಲ್ಲಿ ಹಾಗೂ ಬಗಲುಗಳಲ್ಲಿ ಮತ್ತು ಕುತ್ತಿಗೆಯ ಭಾಗದಲ್ಲಿ ಸಂಧಿಗಳಲ್ಲಿ ವೃತ್ತಾಕಾರವಾಗಿ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಚ್ಚಿ,ತುರಿಕೆ, ಗಜಕರ್ಣ ಅಂತ ಕರೆಯುತ್ತಾರೆ. ಹಾಗಾದ್ರೆ ಇದಕ್ಕೆ ಮನೆಮದ್ದು ನೋಡುವುದಾದರೆ ಒಂದು ಹಾಗಲಕಾಯಿ ತೆಗೆದುಕೊಳ್ಳಬೇಕು. ಅದನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಹಾಗಲ ಕಾಯಿ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ ಅಷ್ಟೊಂದು ಆರೋಗ್ಯಕರ ಲಾಭಗಳನ್ನು ಒಳಗೊಂಡಿದೆ. ಇದನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ನಂತ್ರ ಅದನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ಆಮೇಲೆ ಕಹಿಬೇವು ತೆಗೆದುಕೊಳ್ಳಿ. ಇದು ಚರ್ಮದ ಎಲ್ಲ ಕಾಯಿಲೆಯನ್ನು ಮಂಗಮಾಯ ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಅಲ್ಲದೆ ಬ್ಯಾಕ್ಟೀರಿಯ ಮತ್ತು ಫಂಗಸ್ ಅನ್ನು ಆದಷ್ಟು ಬೇಗನೆ ಕಡಿಮೆ ಮಾಡುತ್ತದೆ ತುರಿಕೆ ಉರಿ ಊತವನ್ನು ಕೂಡ ಕಡಿಮೆ ಮಾಡುವ ಗುಣವನ್ನು ಹೊಂದಿದೆ.

ಈ ಎರಡು ಸಾಮಗ್ರಿಯನ್ನು ನೀರು ಹಾಕದೆ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತ್ರ ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಆಮೇಲೆ ನಿಮಗೆ ಎಷ್ಟು ಬೇಕು ಅಷ್ಟು ಸ್ವಲ್ಪ ಭಾಗ ತೆಗೆದುಕೊಂಡು ಅದರಲ್ಲಿ ಕರ್ಪೂರವನ್ನು ಪುಡಿ ಮಾಡಿ ಹಾಕಿ ಮಿಶ್ರಣ ಮಾಡಿಕೊಳ್ಳಿ. ಆಮೇಲೆ ನೀವು ಅರಿಶಿಣ ನೀರು ತಯಾರು ಮಾಡಿಕೊಳ್ಳಿ. ಅಂದ್ರೆ ಒಂದು ಪಾತ್ರೆಯನ್ನು ಇಟ್ಟು ಅದರಲ್ಲಿ ನೀರು ಹಾಕಿ ಅರಿಶಿಣವನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಆಮೇಲೆ ಅದು ಆರಲು ಬಿಡಿ. ನಂತ್ರ ನೀವು ಒಂದು ಕಾಟನ್ ಹತ್ತಿಯನ್ನು ತೆಗೆದುಕೊಂಡು ಗಜಕರ್ಣ ಅಥವಾ ಕಜ್ಜಿ ಆಗಿರುವ ಜಾಗವನ್ನು ಚೆನ್ನಾಗಿ ಒರೆಸಿ. ನಂತ್ರ ನೀವು ಸಿದ್ದ ಮಾಡಿರುವ ಹಾಗಲಕಾಯಿ ಮತ್ತು ಕಹಿಬೇವು ಕರ್ಪೂರವನ್ನು ಹಾಕಿ ಮಾಡಿದ ಪೇಸ್ಟ್ ಅನ್ನು ಅದರ ಮೇಲೆ ಲೇಪಿಸಿ. ಅದನ್ನು ಎರಡು ತಾಸು ಹಾಗೆ ಬಿಡಿ. ಇದು ಕಜ್ಜಿ ತುಂಬಾನೇ ಬೇಗನೆ ವಾಸಿ ಮಾಡುತ್ತದೆ ಜೊತೆಗೆ ನಿಮಗೆ ತುರಿಕೆ ಹೆಚ್ಚಾಗಿ ಆಗಿ ಉರಿಯುತ್ತಿದ್ದರೆ ಅದನ್ನು ಕೂಡ ಕಡಿಮೆ ಮಾಡುತ್ತದೆ. ಆದಷ್ಟು ಬೇಗನೆ ಕಡಿಮೆ ಮಾಡುತ್ತದೆ ಗಜಕರ್ಣ ಸಮಸ್ಯೆಯನ್ನು ಈ ಮನೆಮದ್ದು. ಸ್ನೇಹಿತರೆ ತುಂಬಾನೇ ಸುಲಭವಾದ ಸರಳವಾದ ಮನೆಮದ್ದು ಒಮ್ಮೆ ಪ್ರಯತ್ನ ಮಾಡಿ ನೋಡಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *