ಒಂದೇ ಸಲ ಹಚ್ಚಿದಕ್ಕೆ ಮಂಡಿ ನೋವು ಬಾವು ತಕ್ಷಣ ಕಡಿಮೆಯಾಗುತ್ತೆ ಹಳೆಕಾಲದ ಮನೆಮದ್ದು

ಆರೋಗ್ಯ

ನಮಸ್ತೆ ಪ್ರಿಯ ಓದುಗರೇ, ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಸಾಮಾನ್ಯವಾಗಿ ಎಲ್ಲರಲ್ಲು ಕಾಡುವ ಸಮಸ್ಯೆ ಅಂದ್ರೆ ಮಂಡಿ ನೋವು. ಒಮ್ಮೆ ಮಂಡಿ ನೋವು ಮನುಷ್ಯನ ದೇಹವನ್ನು ಹೊಕ್ಕಿಕೊಂಡರೆ ಆತನಿಗೆ ಯಾಕಾದರೂ ಮಂಡಿ ನೋವು ಬಂತು ಸಾಕಪ್ಪಾ ಸಾಕು ಅಂತ ಅನ್ನಿಸುತ್ತದೆ. ಈ ಸಮಸ್ಯೆ ಸಾಮಾನ್ಯವಾಗಿ ಕ್ಯಾಲ್ಸಿಯಂ ಕೊರತೆಯಿಂದ ಮಂಡಿ ನೋವು ಬರುತ್ತದೆ. ಈ ಮಂದಿ ನೋವು ಕಾಣಿಸಿಕೊಂಡಾಗ ಇದಕ್ಕೆ ಕೆಲವು ಪರಿಹಾರಗಳನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಇವುಗಳನ್ನು ನೀವು ಮಾಡಿ ನೋಡಿ ಖಂಡಿತವಾಗಿ ಗುಣವಾಗುತ್ತದೆ. ನಾವು ತಿಳಿಸುವ ಈ ಮನೆಮದ್ದು ತುಂಬಾನೇ ಪರಿಣಾಮಕಾರಿ ಆಗಿ ಕೆಲಸವನ್ನು ಮಾಡುತ್ತದೆ. ಜೊತೆಗೆ ನೀವು ಇದನ್ನು ತಯಾರಿಸಿ ಮೂರು ನಾಲ್ಕು ದಿನಗಳವರೆಗೆ ಬಳಕೆ ಮಾಡಬಹುದು. ನೀವು ಇದನ್ನು ಒಂದೇ ದಿನದಲ್ಲಿ ಬಳಕೆ ಮಾಡಿದ್ರೆ ನಿಮ್ಗೆ ಫಲಿತಾಂಶ ದೊರೆಯುತ್ತದೆ.

ಈ ಮಂಡಿ ನೋವು ಬಂದ್ರೆ ಕುಳಿತುಕೊಳ್ಳಲು ಆಗುವುದಿಲ್ಲ. ನಿಲ್ಲಲು ಆಗುವುದಿಲ್ಲ. ಅಷ್ಟೇ ಅಲ್ಲದೇ ರಾತ್ರಿ ಸಮಯ ಮಲಗಲು ಕೂಡ ಆಗುವುದಿಲ್ಲ ಅಷ್ಟೊಂದು ಹಿಂಸೆ ಆಗುತ್ತದೆ ಈ ಮಂಡಿ ನೋವಿನಿಂದ. ಹಾಗೆಯೇ ಈ ಮಂಡಿ ನೋವು ಕಾಣಿಸಿಕೊಂಡರೆ ನಾವು ವೈದ್ಯರ ಹತ್ತಿರ ಹೋಗುತ್ತೇವೆ ತುಂಬಾನೇ ಹಣ ಖರ್ಚು ಮಾಡುತ್ತೇವೆ ಆದರೆ ಈ ಮಾತ್ರೆಗಳ ಸೇವನೆ ಇಂದ ನಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳು ಆಗುವುದಲ್ಲದೆ ಇದು ಸ್ವಲ್ಪ ಮಟ್ಟಿಗೆ ಉಪಶಮನ ಆದರೂ ಕೂಡ ಶಾಶ್ವತವಾಗಿ ಪರಿಹಾರ ಸಿಗುವುದಿಲ್ಲ. ಹೀಗಾಗಿ ನೀವು ಮನೆಯಲ್ಲಿ ಸಿಗುವ ಪದಾರ್ಥಗಳಿಂದ ನೀವು ಲೇಪನವನ್ನು ಲೇಪಿಸಿ ನೀವು ಮಂಡಿ ನೋವಿನಿಂದ ಮುಕ್ತಿಯನ್ನು ಪಡೆಯಬಹುದು. ಮೊದಲಿಗೆ ಹಸಿ ಈರುಳ್ಳಿಯನ್ನು ತೆಗೆದುಕೊಳ್ಳಿ. ಈರುಳ್ಳಿಯಲ್ಲಿ ಇರುವ ಅಂಶಗಳು ಮಂಡಿ ನೋವಿಗೆ ವಿರಾಮವನ್ನು ನೀಡುತ್ತದೆ. ಈರುಳ್ಳಿ ರಸವನ್ನು ಸ್ವಲ್ಪ ಬಿಸಿ ಮಾಡಿ ಮಂಡಿಗೆ ಹಚ್ಚಿದರೆ ನೋವು ಕ್ರಮೇಣ ಕಡಿಮೆ ಆಗುತ್ತದೆ. ಈ ಈರುಳ್ಳಿಯನ್ನು ಸಣ್ಣದಾಗಿ ತುರಿದುಕೊಳ್ಳಿ. ನಂತ್ರ ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ. ಆಮೇಲೆ ಅರಿಶಿಣವನ್ನು ತೆಗೆದುಕೊಳ್ಳಿ. ಅರಿಶಿಣ ತುಂಬಾನೇ ನೋವು ನಿವಾರಕ.

ಈ ಎರಡು ಸಾಮಗ್ರಿಯನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತ್ರ ಅದನ್ನು ಬಿಸಿ ಮಾಡಿಕೊಳ್ಳಿ. ನಂತ್ರ ಎರಡು ಚಮಚ ಸಾಸಿವೆ ಎಣ್ಣೆಯನ್ನು ಹಾಕಿ. ಈ ಸಾಸಿವೆ ಎಣ್ಣೆ ಮಂಡಿ ನೋವು ತುಂಬಾನೇ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಚಳಿಗಾಲದಲ್ಲಿ ಮಂಡಿ ನೋವು ಮತ್ತು ಮಹಿಳೆಯರು ಹೆಚ್ಚಾಗಿ ಕೆಲಸವನ್ನು ಮಾಡಿದರೆ ಮಂಡಿ ನೋವು ಕಾಣಿಸುತ್ತದೆ. ಅವರಿಗೆ ಈ ಮನೆಮದ್ದು ತುಂಬಾನೇ ಅದ್ಭುತವಾಗಿ ಸಹಾಯ ಮಾಡುತ್ತದೆ. ಚಿಕ್ಕ ಮಕ್ಕಳು ಆಟವನ್ನು ಆಡಿ ಬಿದ್ದು ಮಂಡಿ ನೋವು ಮಾಡಿಕೊಂಡರೆ ಅವರಿಗೆ ಈ ಪೇಸ್ಟ್ ಮಾಡಿ ರಾತ್ರಿ ಬಿಸಿ ಬಿಸಿ ಇರುವಾಗಲೇ ಹಚ್ಚಬೇಕು. ಇದರಿಂದ ಮಂಡಿ ನೋವು ಆದಷ್ಟು ಬೇಗನೆ ಕಡಿಮೆ ಆಗುತ್ತದೆ. ಈ ಲೇಪನವನ್ನು ನೀವು ಆದಷ್ಟು ಬಿಸಿ ಇರುವಾಗಲೇ ಸ್ವಲ್ಪ ಬಿಸಿ ತಾಗುವ ಹಾಗೆ ಲೇಪಿಸಬೇಕು ಇದರಿಂದ ನೋವು ತುಂಬಾನೇ ಬೇಗನೆ ಕಡಿಮೆ ಆಗುತ್ತದೆ ನಿಮಗೆ ಯಾವುದೇ ಮಂಡಿ ನೋವು ಮತ್ತೆ ಕಾಣಿಸುವುದಿಲ್ಲ. ನೀವು ಈ ಸರಳ ಮನೆಮದ್ದು ಮಾಡಿ ಖಂಡಿತವಾಗಿ ಮಾಡಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *