ಬರಿ 5 ರೂ. ಗೆ ಸ್ನ್ಯಾಕ್ಸ್ ಪ್ಯಾಕೆಟ್ ತಯಾರಿಸಿ 850 ಕೋಟಿ ರೂ. ವರೆಗೆ ಕಂಪನಿ ಬೆಳೆಸಿದ ಈ ಸಾಧಕರು ನಿಮಗೂ ಮಾದರಿ

ಇತರೆ

ಜೀವನದಲ್ಲಿ ಸಾಧನೆ ಮಾಡಬೇಕು ಎಂದರೆ ಕೋಟಿ-ಕೋಟಿ ಹಣ ಇದ್ದರೆ ಮಾತ್ರ ಸಾಧ್ಯವಲ್ಲ, ಒಂದೇ ರೂಪಾಯಿಂದ ಕೂಡ ಬ್ಯುಸಿನೆಸ್ ಶುರು ಮಾಡಬಹುದು ಅದು, ಎಂತಹದೇ ಇರಲಿ ಅದಕ್ಕೆ ಬೇಕಾದ ಸರಿಯಾದ ಗುರಿ ಇಟ್ಟುಕೊಂಡು ಮುಂದೆ ಹೋದರೆ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ, ಆದರೆ ಚಿಕ್ಕ ಬ್ಯುಸಿನೆಸ್ ಅದು ಇದು ಅಂದುಕೊಂಡು ಇದ್ದರೆ ಜೀವನದಲ್ಲಿ ಏನು ಮಾಡಲು ಆಗುವುದಿಲ್ಲ , ಇದಕ್ಕೆ ಹಲವು ನಿರ್ದರ್ಶನಗಳು ಕೂಡ ಇವೇ. ಆದರಂತೆ ಕೇವಲ ಚಾಕ್ಲೆಟ್ ಮಾರಿ ದೊಡ್ಡ ಕಂಪನಿ ಕಟ್ಟಿದ ಸಾಕ್ಷಿಗಳು ಕೂಡ ಇವೇ. ಇದಕ್ಕೆ ಉದಾಹರಣೆ ಎಂದರೆ 5 ₹ ಪ್ಯಾಕೆಟ್ ಮಾರಿ 850 ಕೋಟಿಯ ಬಿಜಿನೆಸ್ ಕಟ್ಟಿದ್ದು ಮಾದರಿ ಅಂತಾನೆ ಹೇಳಬಹುದು.

ಆಹಾರ ಪದಾರ್ಥಗಳನ್ನು ಮಾರಿ ಸಾವಿರಾರು ಕೋಟಿಯ ಒಡೆಯರಾದ ಹಲವು ನಿರ್ದರ್ಶನಗಳು ತುಂಬಾ ಇವೇ. ಇದಕ್ಕೆ ಸಾಕ್ಷಿ ಎಂದರೆ ಎಲ್ಲರಿಗೂ ಗೊತ್ತಿರುವ ಮತ್ತು ರುಚಿ ನೋಡಿರುವ ಚಟಪಟಾ ಟೇಸ್ಟಿ ಫುಡ್ ಗಳ ಕ್ಷೇತ್ರದಲ್ಲಿ ಲೋಕಲ್ ಬ್ರಾಂಡ್ ಗಳು ಸ್ವಾದ ಅಥವಾ ರುಚಿಯಲ್ಲಿ ಜನರ ಮನಗೆಲ್ಲುವದರೊಂದಿಗೆ ಕೋಟ್ಯಾಂತರ ರೂಪಾಯಿಗಳ ಹೂಡಿಕೆಯೊಂದಿಗೆ ಫಾರಿನ್ ಬ್ರಾಂಡ್ ಗಳಿಗೆ ಸೈಡ್ ಹೊಡೆದು ಹಣ ಗಳಿಸುವದರಲ್ಲಿ ನಾಗಾಲೋಟದಿಂದ ಮುನ್ನುಗ್ಗುತ್ತಿವೆ. ಅದರಂತೆ ಐದು ರುಪಾಯಿಗಳಿಗೆ ಪ್ಯಾಕೆಟ್ ಮಾಡಿದ್ದು ಈಗ 850 ಕೋಟಿ ₹ ಗಳ ಟರ್ನಓವರ್ ಮಾಡುತ್ತಿದೆ.

ಈ ಕಂಪನಿಯನ್ನು ಮಧ್ಯಪ್ರದೇಶದ ಇಂದೂರ್ ಪಟ್ಟಣದ ನಿವಾಸಿ ಶುರುಮಾಡಿದ್ದು, ಈ ಸ್ನ್ಯಾಕ್ಸ್ ಫುಡ್ ತಯಾರಿಸುವಾಗ ಆತನಿಗೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತೆ ಎಂದು ಗೊತ್ತಿರಲಿಲ್ಲವಂತೆ, ಈ ಕಂಪನಿ ಒಂದು ದಿನ ಈ ರೀತಿ ಅಗ್ರಪಟ್ಟದಲ್ಲಿ ಬೆಳೆಯುತ್ತೆ ಎಂದು, ಆದರೆ ಏನು ತಿಳಿಯದೆ 2003 ರಲ್ಲಿ ಅಮಿತ್ ಕುಮಾತ್, ಅಪೂರ್ವ ಕುಮಾತ್ ಇಬ್ಬರೂ ತಮ್ಮ ಮಿತ್ರನಾದ ಅರವಿಂದ್ ಮೇಹತಾ ನೋಡಗೂಡಿ ಕಂಪನಿಯ ಶುಭಾರಂಭ ಮಾಡಿದರು. ಇಂದು ಈ ಕಂಪನಿ ದೇಶದಲ್ಲಿ ನಾಲ್ಕು ಕಾರಖಾನೆಗಳೊಂದಿಗೆ 24 ರಾಜ್ಯಗಳಲ್ಲಿ 168 ಸ್ಟೋಅರ್ ಹೌಸ್ ಮತ್ತು 2900 ವಿತರಕರಿಂದ ಕೂಡಿದೆ. ಅಷ್ಟೇಅಲ್ಲದೆ ದೆಶ್ಯಾದಂತ ಅಪ್ರತಿಮ ಹೆಸರು ಮಾಡಿದೆ.

ಇದಕ್ಕೂ ಮೊದಲು ದೈರ್ಯ ಗೇಡುವ ಲಾಸ್ ಒಂದನ್ನು ಕಂಪನಿಯವರು ಅನುಭವಿಸಿದ್ದರಂತೆ, ಒಂದು ಸ್ನ್ಯಾಕ್ಸ್ ಕಂಪನಿಯಲ್ಲಿ 10 ವರ್ಷಗಳವರೆಗೆ ಕೆಲಸ ಮಾಡಿದ ಮೇಲೆ, ಅಮಿತ್ 2001 ರಲ್ಲಿ ಸ್ವಂತ ಉದ್ಯೋಗವನ್ನು ಪ್ರಾರಂಭಿಸುವ ಮನಸ್ಸು ಮಾಡಿ ಒಂದು ರಸಾಯನ ನಿರ್ಮಾಣ ಮಾಡುವ ಕೆಲಸಕ್ಕೆ ಕೈ ಹಾಕಿ 6 ಕೋಟಿ ₹ ಗಳ ಸಾಲ ಮಾಡಿಕೊಂಡು ನಂತರ ಕಂಪನಿಗೆ ಬೀಗ ಜಡಿದನು. ಸಾಲದ ಕೆಟ್ಟ ದಿನಗಳನ್ನು ತಳ್ಳುತ್ತಾ ಸಂಬಂಧಿಕರಿಂದ ಹಣದ ವ್ಯವಸ್ಥೆ ಮಾಡಿ ಸಾಲಗಾರರಿಗೆ ಕೊಟ್ಟನು. ಆದರು ತನ್ನ ಕನಸನ್ನು ಕೈ ಬಿಡದೇ ಅವಮಾನವಾದ ಕ್ಷೇತ್ರದಲ್ಲೇ ಏನಾದರು ಸಾಧಿಸಬೇಕೆಂದು ಮತ್ತೆ ಅಪೂರ್ವ ಮತ್ತು ಅರವಿಂದ್ ರ ಜೊತೆಗೆ ಸೇರಿ 2002 ರಲ್ಲಿ ‘ನಮಕಿನ್’ ಕ್ಷೇತ್ರದಲ್ಲಿ ವ್ಯವಸಾಯ ಮಾಡುವ ಯೋಚನೆ ಮಾಡಿ ಮನೆಯವರನ್ನು ಕಾಡಿ 15 ಲಕ್ಷ ರೂ. ಗಳನ್ನು ಪಡೆದು ‘ಪ್ರತಾಪ್’ ಸ್ನ್ಯಾಕ್ಸ್ ಹೆಸರಿನ ಕಂಪನಿ ಪ್ರಾರಂಭಿಸಿದರು.

ತಮ್ಮ ಕಾರ್ಯ ಶುರು ಮಾಡಲು ಮೊದಲು ಲೋಕಲ್ ನಲ್ಲಿ ಖಾದ್ಯ ಸಂಸ್ಕರಣ ಮತ್ತು ನಿರ್ಮಾಣದ ಸಹಯೋಗದಲ್ಲಿ ರಿಂಗ್ ಸ್ನ್ಯಾಕ್ಸ್ ತಯಾರಿಸಲು ಒಟ್ಟು 20,000 ಸಾವಿರ ಬಾಕ್ಸ್ ಗಳ ಆರ್ಡರ್ ಕೊಟ್ಟರು. ಮೊದಮೊದಲು ಹಣದ ಅಭಾವದಿಂದ ಉಪಕರಣಗಳು ಕಡಿಮೆ ಮತ್ತು ಯಂತ್ರಗಳ ವ್ಯವಸ್ಥಾಪನೆಗೆ ಜಾಗ ಸಹಿತ ಕಡಿಮೆ ಇತ್ತು. ಹೀಗಾಗಿ ಮೊದಲ ವರ್ಷ 22 ಲಕ್ಷ ರೂ ಗಳ ಆದಾಯವಾಯಿತು. 2 ನೇ ವರ್ಷ ಈ ಲಾಭ ಬೆಳೆದು 1 ಕೋಟಿ ರೂ. ಹೆಚ್ಚಾಯಿತು ವರ್ಷದಲ್ಲಿ 7 ಕೋಟಿ ರೂ. ದಾಟಿತು. ಹೀಗೆ ಮುಂದುವರೆದ ಕಂಪನಿ 2011 ರಲ್ಲಿ ಕಂಪನಿ ಯಲೊ ಡೈಮಂಡ್ ಹೆಸರು ಮಾಡಿತು. ಮತ್ತೆ ಅಭಿವೃದ್ದಿಯಾದ ಕಂಪನಿ ಈಗ ಒಟ್ಟು ಟರ್ನ್ ಓವರ್ 850 ಕೋಟಿ ದಾಟಿದೆ. ಅದಕ್ಕೆ ಹೇಳುವುದು ಒಂದು ಸರಿ ಲಾಸ್ ಆದರೆ ಅದು ಮೋಸ, ಅವಮಾನ ಎನ್ನುವುದು ಬೇಡ ಸರಿಯಾದ ದಾರಿ , ಗುರಿ ಇದ್ದರೆ ಏನೆಲ್ಲಾ ಸಾಧನೆ ಮಾಡಬಹುದು ಎನ್ನುವುದಕ್ಕೆ ಇದೊಂದು ಮಾದರಿ ಎನ್ನಬಹುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *