1 ವಾರದಲ್ಲಿ ಹೊಟ್ಟೆ ಬೊಜ್ಜು ಕರಗುತ್ತದೆ.ಹೊಟ್ಟೆ ಬೊಜ್ಜು 5 ಇಂಚು ಕರಗಿ ನಿಮ್ಮ ತೊಡೆ ಸೊಂಟ ಎಲ್ಲವೂ ಕಡಿಮೆ ಆಗುತ್ತದೆ

ಆರೋಗ್ಯ

ನಮಸ್ತೆ ಪ್ರಿಯ ಓದುಗರೇ, ನೀವು ತುಂಬಾನೇ ದಪ್ಪವಾಗಿ ಇದ್ದೀರಾ ನಿಮ್ಮ ಹೊಟ್ಟೆ ತುಂಬ ಮುಂದು ಬಂದಿದೆಯಾ, ಹಾಗಾದ್ರೆ ಬನ್ನಿ ಕೇವಲ ಒಂದು ವಾರದಲ್ಲಿ ಐದು ಇಂಚು ಅಥವಾ ಐದು ಕೆಜಿ ಕಡಿಮೆ ಮಾಡಿಕೊಳ್ಳಬಹುದು. ಕೆಲವರಿಗೆ ಜೊಳ್ಳು ಹೊಟ್ಟೆ ಇದ್ದರೆ ಅವರಿಗೆ ಇನ್ನೊಬ್ಬರ ಮುಂದೆ ನಿಂತು ಮಾತನಾಡಲು ತುಂಬಾನೇ ಮುಜುಗರ ಆಗುತ್ತದೆ. ಯಾವುದೇ ರೀತಿಯ ಶರ್ಟ್ಸ್ ಮತ್ತು ಪ್ಯಾಂಟ್ ಹಾಕಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಅವರು ಇನ್ನೊಬ್ಬರನ್ನು ನೋಡಿ ತುಂಬಾನೇ ಬೇಸರಿಸುತ್ತಾರೆ. ಆದರೆ ಚಿಂತೆ ಬೇಡ ಮಿತ್ರರೇ ಇಂದಿನ ಲೇಖನದಲ್ಲಿ ನಾವು ನಿಮಗೆ ಒಂದು ಉತ್ತಮವಾದ ಮನೆಮದ್ದು ಜೊತೆಗೆ ತೂಕವನ್ನು ಇಳಿಸಿಕೊಳ್ಳಲು ಕೆಲವು ಸಲಹೆಗಳನ್ನು ತಿಳಿಸಿಕೊಡುತ್ತೇವೆ ಯಾವುದೇ ರೀತಿಯಿಂದ ಅಡ್ಡ ಪರಿಣಾಮಗಳೂ ಬೀರುವುದಿಲ್ಲ. ಜೊತೆಗೆ ನೀರನ್ನು ಯಾವಾಗ ಕುಡಿಯಬೇಕು ಜೊತೆಗೆ ನೀರಿನಲ್ಲಿ ಏನು ಹಾಕಿ ಕುಡಿಯಬೇಕು ಅಂತ ವಿವರವಾಗಿ ತಿಳಿದುಕೊಳ್ಳೋಣ.

ತೂಕವನ್ನು ಇಳಿಸಿಕೊಳ್ಳಲು ಸೂಪರ್ ಮನೆಮದ್ದು ತಿಳಿಯೋಣ ಬನ್ನಿ, ಅನ್ನವನ್ನು ಎಲ್ಲರೂ ಮಾಡುತ್ತಾರೆ. ಆವಾಗ ನೀವು ಅನ್ನವನ್ನು ಮಾಡಲು ನೀರು ಜಾಸ್ತಿ ಹಾಕಿ ಕುದಿಸಬೇಕು, ಅಕ್ಕಿಯನ್ನು ಕುದಿಸಿ ಅದರ ಗಂಜಿಯನ್ನು ಸೋಸಿಕೊಳ್ಳಬೇಕು. ಒಂದು ಲೋಟ ಅನ್ನದ ಗಂಜಿಯನ್ನು ತೆಗೆದುಕೊಳ್ಳಿ. ನಿತ್ಯವೂ ಇದನ್ನು ಬೆಳಿಗ್ಗೆ ಉಪಹಾರ ಮಾಡುವ ಮುನ್ನ ಕುಡಿಯಬೇಕು. ನಂತ್ರ ಏನು ಮಾಡಬೇಕು ಅಂದ್ರೆ ಕರಿ ಮೆಣಸಿನ ಕಾಳು ತೆಗೆದುಕೊಳ್ಳಬೇಕು. ಇದು ಬೊಜ್ಜು ಮತ್ತು ತೂಕವನ್ನು ಇಳಿಸಿಕೊಳ್ಳಲು ತುಂಬಾನೇ ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಎ, ಕೆ, ಸಿ ಜೊತೆಗೆ ಆಂಟಿ ಆಕ್ಸಿಡೆಂಟ್ ಇರುವುದರಿಂದ ಆರೋಗ್ಯವಾಗಿ ತೂಕವನ್ನು ಇಳಿಸಿಕೊಳ್ಳಲು ಸೂಪರ್ ಆಗಿದೆ ಅಂತ ಹೇಳಲಾಗಿದೆ. ಮತ್ತು ಇದು ತಿಂದ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡಲು ಸಹಾಯ ಮಾಡುತ್ತದೆ. ನಂತ್ರ ಕೇವಲ ಎರಡು ಚಿಟಿಕೆ ಅಷ್ಟು ಇದರ ಪುಡಿ ಮಾಡಿ ತೆಗೆದುಕೊಂಡು ಅದರಲ್ಲಿ ಹಾಕಬೇಕು. ತದ ನಂತರ ಒಣ ಶುಂಠಿ ಪುಡಿ ತೆಗೆದುಕೊಳ್ಳಬೇಕು. ಈ ಒಣ ಶುಂಠಿ ಪುಡಿ ದೇಹದಲ್ಲಿ ಮೊದಲೇ ಶೇಖರಣೆ ಆಗಿರುವ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ. ಹಾಗೆಯೇ ದೇಹದಲ್ಲಿ ನೀರಿನ ಅಂಶ ಕಡಿಮೆ ಮಾಡಿ ದೇಹವು ಒಣಗಿದಂತೆ ಇಡಲು ಸಹಾಯ ಮಾಡುತ್ತದೆ ಈ ಒಣ ಶುಂಠಿ.

ಕೇವಲ ಕಾಲು ಭಾಗ ಒಣ ಶುಂಠಿ ಪುಡಿ ಹಾಕಿ. ನಂತ್ರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ ಬೆಳಿಗ್ಗೆ ಎದ್ದು ತಕ್ಷಣ ಕುಡಿಯಬೇಕು. ಇದರಲ್ಲಿ ನಿಂಬೆ ರಸ ಹಾಕಿಕೊಳ್ಳಬಹುದು ಅಥವಾ ಜೇನುತುಪ್ಪವನ್ನು ಹಾಕಿ ಕುಡಿಯಬಹುದು. ಇದು ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ ಜೊತೆಗೆ ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ. ಮತ್ತು ದೇಹವು ಸುಸ್ತು ಆಯಾಸ ಆಗದಂತೆ ತಡೆಯುತ್ತದೆ. ನೀವು ಬೆಳಿಗ್ಗೆ ಉಪಹಾರ ಮಾಡುವ ಬದಲು ಇದನ್ನು ಕುಡಿಯಿರಿ ಮಧ್ಯಾಹ್ನ ಚೆನ್ನಾಗಿ ಊಟವನ್ನು ಮಾಡಿ. ಆದರೆ ಊಟವನ್ನು ಮಾಡುವ ಎರಡು ತಾಸು ಮುನ್ನ ನೀರನ್ನು ಕುಡಿಯಿರಿ. ಒಂದು ವೇಳೆ ನೀವು ಮಧ್ಯದ ವೇಳೆಯಲ್ಲಿ ನೀರು ಕುಡಿದರೆ ಅದು ಬೊಜ್ಜು ಆಗಿ ಹಾಗೆಯೇ ಉಳಿದು ಬಿಡುತ್ತದೆ. ಇದು ಜೀರ್ಣಕ್ರಿಯೆಗೆ ಕೂಡ ತೊಂದರೆಯನ್ನು ಮಾಡುತ್ತದೆ. ಆದ್ದರಿಂದ ನಿಮಗೆ ಹಸಿವು ಆದಾಗ ನೀವು ಮಧ್ಯ ಮಧ್ಯದಲ್ಲಿ ನೀರು ಕುಡಿಯಬೇಕು. ನೀರು ಹೆಚ್ಚಾಗಿ ಕುಡಿಯುವುದರಿಂದ ಬೊಜ್ಜು ಕರಗಿ ದೇಹದಲ್ಲಿ ಇರುವ ಎಲ್ಲ ಕಲ್ಮಶಗಳನ್ನು ಹೊರಗೆ ಹಾಕುತ್ತದೆ. ಮಧ್ಯಾಹ್ನ ಊಟವನ್ನು ಮಾಡಿ ಎರಡು ಲೋಟ ಬಿಸಿ ನೀರು ನಿಧಾನವಾಗಿ ಕುಡಿಯಬೇಕು. ಇದು ದೇಹದಲ್ಲಿ ಇರುವ ಜಿಡ್ಡಿನ ಅಂಶವನ್ನು ಕರಗಿಸುತ್ತದೆ.ನಂತ್ರ ರಾತ್ರಿ ಮಲಗುವಾಗ ಒಂದು ಲೋಟ ಜೀರಿಗೆ ನೀರು ಮಾಡಿ ಕುಡಿಯಿರಿ. ವಾಕಿಂಗ್ ಮಾಡಿದರೆ ಹೊಟ್ಟೆ ಕರಗುವುದಿಲ್ಲ ಚೆನ್ನಾಗಿ ಓಡಿ ಜಿಮ್ ಗೆ ಹೋಗಿ. ಇದರಿಂದ ತೂಕವನ್ನು ಇಳಿಸಿಕೊಳ್ಳಬಹುದು.

Leave a Reply

Your email address will not be published. Required fields are marked *