ನಮಸ್ತೆ ಪ್ರಿಯ ಓದುಗರೇ, ನಿಮ್ಮ ಹತ್ತಿರ ಇರುವ ಆಸ್ತಿಯನ್ನು ಗಿಫ್ಟ್ ಮೂಲಕ ಯಾವ ರೀತಿಯಲ್ಲಿ ವರ್ಗಾವಣೆ ಮಾಡಬೇಕು ಎಷ್ಟು ಸ್ಟ್ಯಾಂಪ್ ಫೀಸ್ ಕಟ್ಟಬೇಕು, ರಿಜಿಸ್ಟ್ರೇಷನ್ ಮಾಡಲು ಎಷ್ಟು ಹಣ ಬೇಕಾಗುತ್ತದೆ ಎಲ್ಲ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ. ಮೊದಲಿಗೆ ಗಿಫ್ಟ್ ಡೀಡ್ ಅಂದ್ರೆ ಏನು ಅಂತ ಹೇಳುವುದಾದರೆ ನಿಮ್ಮ ಹತ್ತಿರ ಇರುವ ಆಸ್ತಿಗೆ ನೀವು ಒಡೆಯನಾಗಿದ್ದರೆ ಅದನ್ನು ನೀವು ದಾನದ ಮೂಲಕ ಅಥವಾ ಗಿಫ್ಟ್ ಮೂಲಕ ಕಾನೂನು ಕ್ರಮವಾಗಿ ನೀವು ಇನ್ನೊಬ್ಬರಿಗೆ ಕೊಡಬಹುದು.ಅಂದ್ರೆ ಅದು ಚಿರ ಆಸ್ತಿ ಇರಬಹುದು ಇನ್ನಿತರ ಯಾವುದೇ ವಸ್ತುವನ್ನು ನೀವು ದಾನವಾಗಿ ಕೊಡಬಹುದು. ಆವಾಗ ನೀವು ಒಂದು ಗಿಫ್ಟ್ ಡೀಡ್ ಅಂತ ಒಂದು ಡಾಕ್ಯುಮೆಂಟ್ ಸಿದ್ದ ಮಾಡಿಕೊಳ್ಳಬೇಕಾಗುತ್ತದೆ.ಇದನ್ನು ಲೀಗಲ್ ಡಾಕ್ಯುಮೆಂಟ್ ಅಂತ ಕರೆಯುತ್ತಾರೆ. ಇನ್ನೂ ನೀವು ಈ ಆಸ್ತಿಯನ್ನು ನಿಮ್ಮ ಫ್ಯಾಮಿಲಿ ಮೆಂಬರ್ ಅವರಿಗೆಯೆ ಗಿಫ್ಟ್ ಮೂಲಕ ವರ್ಗಾವಣೆ ಮಾಡುವುದಾದರೆ 5% ರಿಜಿಸ್ಟ್ರೇಷನ್ ಚಾರ್ಜ್ ಕಟ್ಟಬೇಕಾಗುತ್ತದೆ. ಮತ್ತು ಕಾನೂನು ಕೂಡ ನಿಮಗೆ ರಿಬೆಟ್ ಅನ್ನು ಕೊಡುತ್ತದೆ. ಈಗ ತಿಳಿಯೋಣ ಎಷ್ಟು ನೀವು ಸ್ಟಾಂಪ್ ಫೀಸ್ ಮತ್ತು ರಿಜಿಸ್ಟ್ರೇಷನ್ ಫೀಸ್ ಕಟ್ಟಬೇಕು ಅಂತ ತಿಳಿಯೋಣ.
ನಿಮ್ಮ ಆಸ್ತಿಯ ವಿವರಣೆ ಪಂಚಾಯತಿಯಲ್ಲಿ ದಾಖಲೆ ಇರಬೇಕು. ಇನ್ನೂ ನೀವು ನಿಮ್ಮ ಕುಟುಂಬದವರಿಗೆ ನಿಮ್ಮ ಆಸ್ತಿಯನ್ನು ವರ್ಗಾವಣೆ ಮಾಡುವುದಾದರೆ ನೀವು 1130 ರೂಪಾಯಿ ಗವರ್ನಮೆಂಟ್ ಸ್ಟಾಂಪ್ ಫೀಸ್ ಕಟ್ಟಬೇಕು. ಇನ್ನೂ ಕಾವೇರಿ ಆನ್ಲೈನ್ ಸರ್ವೀಸ್ ನಲ್ಲಿ ನಿಮ್ಮ ಆಸ್ತಿ ಇದ್ದಾಗ ನೀವು 5 ಸಾವಿರ ಸ್ಟ್ಯಾಂಪ್ ಫೀಸ್ ಕಟ್ಟಬೇಕು. ಇದರ ಜೊತೆಗೆ ರಿಜಿಸ್ಟ್ರೇಷನ್ 1 ಸಾವಿರ ರೂಪಾಯಿ ಕಟ್ಟಬೇಕು.ಇನ್ನೂ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ ನಿಮ್ಮ ಆಸ್ತಿ ಇದ್ದರೆ, ಸ್ಟ್ಯಾಂಪ್ ಫೀಸ್ 3000 ಮತ್ತು ರಿಜಿಸ್ಟ್ರೇಷನ್ 1 ಸಾವಿರ ರೂಪಾಯಿ ಕಟ್ಟಬೇಕಾಗುತ್ತದೆ. ಇನ್ನೂ ಆಸ್ತಿಯನ್ನು ದಾನವಾಗಿ ಕೊಡಬೇಕಾದರೆ ನಿಮ್ಮ ಈ ಪತ್ರದಲ್ಲಿ ಇರಬೇಕಾದ ಅಂಶಗಳೆಂದರೆ, ದಾನಿ ಮತ್ತು ದಾನವನ್ನು ಪಡೆಯುವ ವ್ಯಕ್ತಿಯ ವಿವರಣೆ ಅಂದ್ರೆ ಹೆಸರು ವಿಳಾಸ ಎಲ್ಲವೂ ಇರಬೇಕು. ಮತ್ತು ದಾನಿಗೂ ಮತ್ತು ದಾನವನ್ನು ಪಡೆಯುವ ವ್ಯಕ್ತಿಗೆ ಇರುವ ಸಂಬಂಧವನ್ನು ಮುಖ್ಯವಾಗಿ ಇದರಲ್ಲಿ ಇರಲೇಬೇಕು.
ಈ ಗಿಫ್ಟ್ ಅಥವಾ ಆಸ್ತಿಯನ್ನು ವರ್ಗಾವಣೆ ಮಾಡುವಾಗ ಯಾವುದೇ ಹಣದ ವ್ಯವಹಾರ ನಡೆಯಬಾರದು. ಇಲ್ಲಿ ಕೇವಲ ಪ್ರೀತಿ ವಾತ್ಸಲ್ಯ ಮಮತೆ ಇರಬೇಕು. ಇನ್ನೂ ನೀವು ಸ್ವಯಂ ಪ್ರೇರಿತವಾಗಿ ನಿಮ್ಮ ಗಿಫ್ಟ್ ಡೀಡ್ ಅನ್ನು ಇನ್ನೊಬ್ಬರಿಗೆ ಕೊಡಬಹುದು ಅಂದ್ರೆ ಇಲ್ಲಿ ಯಾವುದೇ ನಿಮ್ಮ ಮೇಲೆ ಬಲವಂತ ಒತ್ತಾಯ ಒತ್ತಡ ಯಾವುದೇ ಇಲ್ಲದೆ ನೀವು ಪ್ರೀತಿಯಿಂದ ಚಿಂತೆ ಮುಕ್ತವಾಗಿ ಆಸ್ತಿಯನ್ನು ದಾನ ಮಾಡಬಹುದು. ಇನ್ನೂ ನಾಲ್ಕನೆಯ ಷರತ್ತು ಏನೆಂದರೆ ಮಾಲೀಕನ ಪೂರ್ತಿಯಾದ ವಿವರಣೆ ಇರಬೇಕು ಮತ್ತು ಕೊನೆಯದಾಗಿ ಆಸ್ತಿಯ ಡೀಟೇಲ್ಸ್ ಇರಬೇಕು ಅದು ಯಾವ ಲೊಕೇಶನ್ ನಲ್ಲಿ ಇದೆ ಎಲ್ಲವೂ ಇರಬೇಕಾಗುತ್ತದೆ.
ಇನ್ನೂ ದಾನವನ್ನು ಮಾಡಿದ ಆಸ್ತಿಯೂ ದಾನವನ್ನು ಪಡೆದ ವ್ಯಕ್ತಿಯು ಮಾಲೀಕನು ಆಗುತ್ತಾನೆ ಅವನು ಅದನ್ನು ಏನು ಬೇಕಾದರೂ ಮಾಡಬಹುದು ಮಾರಾಟ ಮಾಡಬಹುದು ಬಾಡಿಗೆ ಕೊಡಬಹುದು ಅಥವಾ ಬ್ಯಾಂಕ್ ನಲ್ಲಿ ಅಡ ಇಡಬಹುದು ಮಾರ್ಟ್ಗೆಜ್ ಮಾಡಬಹುದು ಇದು ಆತನಿಗೆ ಸ್ವಂತ ಆಗುತ್ತದೆ ಅಂತ ನೀವು ಗಿಫ್ಟ್ ಡೀಡ್ ನಲ್ಲಿ ಮೆನಶನ್ ಮಾಡಬೇಕು. ಗಿಫ್ಟ್ ಡೀಡ್ ಮಾಡುವಾಗ ಇಬ್ಬರ ಸಾಕ್ಷಿಗಳು ಬೇಕಾಗುತ್ತದೆ. ಅವರ ಪೂರ್ಣ ವಿಳಾಸ ಎಲ್ಲವೂ ಇದರಲ್ಲಿ ಕಡ್ಡಾಯವಾಗಿ ಬರೆದಿರಬೇಕು. ನಂತ್ರ ಇದನ್ನು ನೀವು ಕಾನೂನು ಮೂಲಕ ಎಕ್ಸಿಕ್ಯೂಟ್ ಮಾಡಬಹುದು ಅದಕ್ಕೆ ಸ್ಟಾಂಪ್ ಫೀಸ್ ಮತ್ತು ರಿಜಿಸ್ಟ್ರೇಷನ್ ಫೀಸ್ ಕಡಿಮೆ ನೀಡುತ್ತದೆ. ಇದರಿಂದ ನೀವು ತುಂಬಾನೇ ಕಡಿಮೆ ವೆಚ್ಚದಲ್ಲಿ ನೀವು ನಿಮ್ಮ ಆಸ್ತಿಯನ್ನು ಗಿಫ್ಟ್ ಮೂಲಕ ವರ್ಗಾವಣೆ ಮಾಡಬಹುದು.