ನಮಸ್ತೆ ಪ್ರಿಯ ಓದುಗರೇ, ಡ್ರೈ ಫ್ರೂಟ್ಸ್ ಗಳಲ್ಲಿ ತುಂಬಾನೇ ವಿಧವಾದ ಡ್ರೈ ಫ್ರೂಟ್ಸ್ ನಮಗೆ ಸಿಗುತ್ತದೆ ಡ್ರೈ ಫ್ರೂಟ್ಸ್ ಅಂದ್ರೆ ಎಲ್ಲರಿಗೂ ಬಾಯಲ್ಲಿ ನೀರು ಬರುತ್ತದೆ. ಇನ್ನೂ ಡ್ರೈ ಫ್ರೂಟ್ಸ್ ಬಗ್ಗೆ ನಾವು ಮಾತನಾಡಲು ಶುರು ಮಾಡಿದರೆ ನಮಗೆ ಮೊದಲಿಗೆ ನೆನಪು ಆಗುವುದು ಬಾದಾಮಿ. ಬಾದಾಮಿ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಹಾಗಾದರೆ ಇಂದಿನ ಲೇಖನದಲ್ಲಿ ನಿತ್ಯವೂ ಬಾದಾಮಿಯನ್ನು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಿದರೆ ಏನೆಲ್ಲ ಲಾಭಗಳು ಸಿಗುತ್ತದೆ ಅಂತ ಎಳೆ ಎಳೆಯಾಗಿ ತಿಳಿಸಿಕೊಡುತ್ತೇವೆ ಬನ್ನಿ. ಬಾದಾಮಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾನೇ ಲಾಭಗಳು ಆಗುತ್ತವೆ ಅಂತ ಅತಿಯಾಗಿ ತಿಂದರೂ ಕೂಡ ಅನಾರೋಗ್ಯವನ್ನು ಅನುಭವಿಸಬೇಕಾಗುತ್ತದೆ. ಹಾಗಾದರೆ ಬನ್ನಿ ಯಾರು ಬಾದಾಮಿಯನ್ನು ತಿನ್ನಬೇಕು ಯಾರು ಬಾದಾಮಿಯನ್ನು ತಿನ್ನಬಾರದು ಅಂತ ನೋಡೋಣ. ಬಾದಾಮಿಯನ್ನು ತಿನ್ನುವುದರಿಂದ ನಮ್ಮ ಶರೀರದಲ್ಲಿ ಡಿಟಾಕ್ಸಿನ್ ಅನ್ನು ಬಿಡುಗಡೆ ಮಾಡುತ್ತದೆ. ಹೃದ್ರೋಗ, ಡಯಾಬಿಟಿಸ್, ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದಕ್ಕೆ ಕೀಳು ನೋವಿಗೆ ಮತ್ತು ಕ್ಯಾನ್ಸರ್ ನಂತಹ ಭಯಾನಕ ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ. ಹಾಗೆಯೇ ಕೂದಲಿನ ಬೆಳವಣಿಗೆಗೆ ಮತ್ತು ಚರ್ಮದ ಕಾಂತಿಗೆ ಮತ್ತು ಮೆದುಳಿನ ಬೆಳವಣಿಗೆ ಇದು ತುಂಬಾನೇ ಉಪಯುಕ್ತಕಾರಿ ಆಗಿ ಕೆಲಸವನ್ನು ಮಾಡುತ್ತದೆ ಈ ಬಾದಾಮಿ. ಈ ಬೀಜದಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಂ, ಕಾಫರ್, ಜಿಂಕ್ ಐರನ್, ಬಯೋಟಿನ್ ಮ್ಯಾಗ್ನಿಷಿಯಂ ವಿಟಮಿನ್ ಮತ್ತು ಇನ್ನಿತರ ಅಂಶಗಳು ಇದರಲ್ಲಿ ಅಡಗಿರುತ್ತದೆ.
ಇನ್ನೂ ಬಾದಾಮಿಯನ್ನು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಅಂತ ಹೇಳುವುದಾದರೆ ದಿನಕ್ಕೆ 12-15 ಬಾದಾಮಿಯನ್ನು ಸೇವನೆ ಮಾಡಬೇಕು. ಬಾದಾಮಿಯನ್ನು ಹಾಗೆ ಸೇವನೆ ಮಾಡಬಾರದು. ಅದನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ ತಿನ್ನಬೇಕು. ರಾತ್ರಿ ಮಲಗುವಾಗ ಒಂದು ಬಟ್ಟಲಿನಲ್ಲಿ 12-15 ಬಾದಾಮಿಯನ್ನು ಹಾಕಿ ಅದರಲ್ಲಿ ನೀರು ಹಾಕಿ ಮಾರನೆಯ ದಿನ ಅದರ ಸಿಪ್ಪೆಯನ್ನು ತೆಗೆದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ಬಾದಾಮಿಯು ದೇಹದಲ್ಲಿ ಸೇರಿ ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗೆಯೇ ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಇನ್ನೂ ಇಲ್ಲಿ ಮುಖ್ಯವಾದ ವಿಷಯವನ್ನು ಹೇಳುವುದಾದರೆ ನಾವು ತಿಳಿಸಿದ ಪ್ರಮಾಣಕ್ಕಿಂತ ಹೆಚ್ಚಿಗೆ ಬಾದಾಮಿಯನ್ನು ಸೇವಿಸಬಾರದು. ಏಕೆಂದರೆ ಅತಿಯಾದರು ಅಮೃತವೂ ವಿಷವೇ ಅನ್ನುವ ಹಾಗೆ ಬಾದಾಮಿಯನ್ನು ಅತಿಯಾಗಿ ಸೇವನೆ ಮಾಡಿದರೆ ಹೊಟ್ಟೆಯಲ್ಲಿ ಫೈಬರ್ ಅಂಶ ಹೆಚ್ಚಾಗಿ ಮಲಬದ್ಧತೆ ಸಮಸ್ಯೆ ಶುರು ಆಗುತ್ತದೆ. ಮುಖ್ಯವಾಗಿ ಕಿಡ್ನಿ ಸ್ಟೋನ್ ಆದವರು ಮಾತ್ರ ಈ ಬಾದಾಮಿಯನ್ನು ಸೇವನೆ ಮಾಡಬಾರದು ಜೊತೆಗೆ ಕಡಿಮೆ ಪ್ರಮಾಣದಲ್ಲಿ ಬೇರೆ ಡ್ರೈ ಫ್ರೂಟ್ಸ್ ತಿನ್ನಬಹುದು.
ಏಕೆಂದರೆ ಇದರಲ್ಲಿ ಆಕ್ಸಲೇಟ್ ಎಂಬ ಅಂಶ ಕಿಡ್ನಿ ಸ್ಟೋನ್ ಗಾತ್ರವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಇನ್ನೂ ಗರ್ಭಿಣಿಯರು ನೆನೆಸಿದ ಬಾದಾಮಿಯನ್ನು ತಪ್ಪದೇ ತಿನ್ನಬೇಕು ಇದರಿಂದ ಹೊಟ್ಟೆಯೊಳಗಿನ ಮಗುವಿನ ಶರೀರರು ಸುಂದರವಾಗಿ ಬೆಳೆಯುತ್ತದೆ ಜೊತೆಗೆ ಮಗುವಿಗೆ ಬೇಕಾದ ಎಲ್ಲ ಪೋಷಕಾಂಶಗಳು ಮತ್ತು ನ್ಯೂಟ್ರಿಷನ್ ಗಳು ಸಿಗುತ್ತವೆ. ಇದು ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ, ಕೀಳು ನೋವು ಕಡಿಮೆ ಮಾಡುತ್ತದೆ. ಮುಖದ ಅಂದವನ್ನು ಮತ್ತು ಕಾಂತಿಯನ್ನು ಹೆಚ್ಚಿಸುತ್ತದೆ. ಮತ್ತು ಮೆದುಳಿನ ಜ್ಞಾಪಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಪ್ರಮುಖವಾಗಿ ಕೆಲಸವನ್ನು ನಿರ್ವಹಿಸುತ್ತದೆ. ಜೊತೆಗೆ ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ. ಇನ್ನೂ ತೂಕವನ್ನು ಹೆಚ್ಚಿಸಿಕೊಳ್ಳಲು ಇಷ್ಟ ಪಡುವವರು ಬಾದಾಮಿಯನ್ನು ಮತ್ತು ಖರ್ಜೂರವನ್ನು ಹಾಲಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕುಡಿಯಿರಿ ಇದರಿಂದ ನಿಮ್ಮ ದೇಹದ ತೂಕವು ಹೆಚ್ಚಾಗುವುದು. ಹಾಗಾಗಿ ಬಾದಾಮಿಯನ್ನು ಆದಷ್ಟು ನೆನೆಸಿ ತಿನ್ನಿ. ಹಾಗೆಯೇ ಯಾವಾಗಲಾದರೂ ಮಾತ್ರ ಒಂದೆರಡು ಹಾಗೆಯೇ ತಿನ್ನಿ. ಇನ್ನೂ ಮಕ್ಕಳಿಗೆ ರಾತ್ರಿ ಹೊತ್ತು ನೆನೆಸಿ ಮಾರನೆಯ ದಿನ ಬಾದಾಮಿಯನ್ನು ಸಿಪ್ಪೆ ತೆಗೆದು ತಿನ್ನಲು ಕೊಡಬೇಕು ಇದರಿಂದ ಮಕ್ಕಳು ತುಂಬಾನೇ ಆರೋಗ್ಯವಾಗಿ ಬೆಳೆಯುತ್ತಾರೆ. ಹಾಗಾದ್ರೆ ನೋಡಿದ್ರಲಾ ಬಾದಾಮಿಯ ಆರೋಗ್ಯಕರ ಲಾಭಗಳನ್ನು ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.