ನಮಸ್ತೆ ಪ್ರಿಯ ಸ್ನೇಹಿತರೆ, ನಿಮ್ಮ ಕೀಲುಗಳಲ್ಲಿ ಮೊಣಕಾಲಿನಲ್ಲಿ ಕಟ್ ಕಟ್ ಅಂತ ಶಬ್ದ ಬರುವುದನ್ನು ನೀವು ಗಮನಿಸಿರಬಹುದು. ಇದನ್ನು ವೈಜ್ಞಾನಿಕವಾಗಿ ಜಾಯಿಂಟ್ ಕ್ರಿಪಿಟೇಶನ್ ಅಂತ ಕರೆಯುತ್ತಾರೆ. ಸಾಮಾನ್ಯವಾಗಿ ಈ ಸಮಸ್ಯೆ ಅನ್ನುವುದು ಯುವಕರಲ್ಲಿ ಹೆಚ್ಚಾಗಿ ಕಂಡು ಬಾರದೇ ಇದ್ದರೂ ಕೂಡ ವೃದ್ಧರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಸಮಸ್ಯೆ ಬರಲು ಕಾರಣ ಸ್ನಾಯುಗಳ ಮಧ್ಯೆದಲ್ಲಿ ಲ್ಯುಬ್ರಿಕಂಟ್ ರಸದೂತದಲ್ಲಿ ಗಾಳಿ ತುಂಬಿಕೊಂಡರೆ ನೀವು ನಡೆಯುವಾಗ ಕುಳಿತುಕೊಳ್ಳುವಾಗ ನಿಮ್ಮ ಸ್ನಾಯುಗಳಿಂದ ಕಟ್ ಕಟ್ ಅಂತ ಶಬ್ದ ಬರುತ್ತದೆ. ಇದರಿಂದ ಕೆಲವರಿಗೆ ಭಯ ಅನ್ನುವುದು ಹುಟ್ಟಿದರೆ ಇನ್ನೂ ಕೆಲವರು ಇದನ್ನು ಅಲಕ್ಷ್ಯ ಮಾಡುವ ಜನರೇ ಹೆಚ್ಚು. ಸಮಸ್ಯೆ ಚಿಕ್ಕದಾಗಿರಲಿ ದೊಡ್ಡದಾಗಿರಲಿ ಯಾವುದನ್ನು ಕೂಡ ಅಲಕ್ಷ್ಯವನ್ನು ಮಾಡಬಾರದು ಇಲ್ಲವಾದರೆ ತುಂಬಾನೇ ಕಠಿಣವಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಈ ಸಮಸ್ಯೆ ನಿಮ್ಮಲ್ಲಿ ಕಾಣಿಸಿಕೊಂಡರೆ ನಾವು ಇಂದಿನ ಲೇಖನದಲ್ಲಿ ತಿಳಿಸುವ ಈ ಮೂರು ಪದಾರ್ಥಗಳನ್ನು ನೀವು ನಿತ್ಯವೂ ತಪ್ಪದೇ ಸೇವನೆ ಮಾಡಿದರೆ ಈ ಕಟ್ ಕಟ್ ಅನ್ನುವ ಶಬ್ದಕ್ಕೆ ಗುಡ್ ಬೈ ಹೇಳಬಹುದು. ಹಾಗಾದರೆ ಬನ್ನಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ.
ಮೊದಲಿಗೆ ನಿಮ್ಮ ಸ್ನಾಯುಗಳಲ್ಲಿ ಈ ರೀತಿಯಾಗಿ ಶಬ್ದ ಬಂದರೆ ನಿತ್ಯವೂ ಮೆಂತ್ಯೆ ಕಾಳು ಸೇವನೆ ಮಾಡುತ್ತಾ ಬನ್ನಿ. ಇದರಲ್ಲಿ ಆಂಟಿ ಬಯೋಟಿಕ್ ಆಂಟಿ ಇನ್ಫ್ಲಾಮೆಟರಿ ಗುಣಗಳು ಸಮೃದ್ಧವಾಗಿ ಇರುವ ಕಾರಣವೇ ಇದು ಕೀಲುಗಳಲ್ಲಿ ನೋವನ್ನು ಆದಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ವಯಸ್ಸಿಗೆ ಅನುಗುಣವಾಗಿ ನೀವು ಮೆಂತ್ಯೆ ಕಾಳುಗಳನ್ನು ತೆಗೆದುಕೊಂಡು ರಾತ್ರಿ ಹೊತ್ತು ನೆನೆಸಿ ಇಡಬೇಕು. ಬೆಳಿಗ್ಗೆ ಎದ್ದು ತಕ್ಷಣ ಇದರ ನೀರನ್ನು ಚೆನ್ನಾಗಿ ಕುದಿಸಿಕೊಂಡು ಕುಡಿಯಬೇಕು. ಇನ್ನುಳಿದ ಮೆಂತ್ಯೆ ಕಾಳುಗಳನ್ನು ಜಗಿದು ತಿನ್ನಬೇಕು. ಇದು ಆರೋಗ್ಯಕ್ಕೆ ತುಂಬಾನೆ ಉತ್ತಮವಾಗಿ ಕೆಲಸವನ್ನು ಮಾಡುತ್ತದೆ. ಅಷ್ಟೇ ಅಲ್ಲದೆ ಇದು ದೇಹಕ್ಕೆ ಶಕ್ತಿ ಕೊಡುವುದರ ಜೊತೆಗೆ ಕೂದಲಿನ ಬೆಳವಣಿಗೆಗೆ ಸಹಕಾರಿ ಆಗಿದೆ. ಆದರೆ ಮಿತ್ರರೇ ಇಲ್ಲಿ ನಿಮಗೆ ತಿಳಿಸುವ ಮುಖ್ಯ ವಿಷಯ ಅಂದರೆ ಮಿತ್ರರೇ ಗರ್ಭಿಣಿಯರು ಈ ಮೆಂತ್ಯೆ ಕಾಳುಗಳನ್ನು ಸೇವನೆ ಮಾಡಬೇಡಿ ಏಕೆಂದರೆ ಇದು ದೇಹದ ಉಷ್ಣತೆ ಯನ್ನು ಅಧಿಕ ಗೊಳಿಸುತ್ತದೆ. ಅದ ಕಾರಣವೇ ಗರ್ಭಿಣಿಯರು ಇದರಿಂದ ದೂರವಿರುವುದು ಒಳ್ಳೆಯದು.
ಇನ್ನೂ ಮೇಲೆ ತಿಳಿಸಿದ ಹಾಗೆ ಕೀಲುಗಳಲ್ಲಿ ಲ್ಯುಬ್ರಿಕಂಟ್ ನಲ್ಲಿ ಜಿಡ್ಡಿನ ಅಂಶ ಕಡಿಮೆ ಆದರೆ ಈ ಸಮಸ್ಯೆ ಮುಖ್ಯವಾಗಿ ಬರುತ್ತದೆ. ಅದನ್ನು ಹೋಗಲಾಡಿಸಲು ನೀವು ನಿತ್ಯವೂ ಹಾಲನ್ನು ಕುಡಿಯುತ್ತಾ ಬನ್ನಿ. ಇದರಿಂದ ನಿಮ್ಮ ಸ್ನಾಯುಗಳು ಬಲಗೊಳ್ಳುತ್ತದೆ. ಮತ್ತು ಇದರಿಂದ ಬರುವ ಶಬ್ದ ಕೂಡ ನಿಲ್ಲುತ್ತದೆ ಜೊತೆಗೆ ಕ್ಯಾಲ್ಸಿಯಂ ನಿಮ್ಮ ದೇಹಕ್ಕೆ ಸಾಕಷ್ಟು ದೊರೆಯುತ್ತದೆ. ಇದರಿಂದ ನಿಮ್ಮ ಮೂಳೆಗಳು ಮತ್ತಷ್ಟು ದಷ್ಟ ಪುಷ್ಟವಾಗಿ ಬೆಳೆಯುತ್ತದೆ. ಇನ್ನೂ ಕೊನೆಯದಾಗಿ ಹುರುದಿರುವ ಕಡಲೆ ಕಾಳು ಮತ್ತು ಕಪ್ಪು ಬೆಲ್ಲ. ಈ ಎಲ್ಲ ಪದಾರ್ಥಗಳನ್ನು ನೀವು ನಿತ್ಯವೂ ನಿಮ್ಮ ಉಪಹಾರದಲ್ಲಿ ಸೇರಿಸಿಕೊಂಡು ಸೇವನೆ ಮಾಡಿದರೆ ನಿಮ್ಮ ದೇಹಕ್ಕೆ ಕ್ಯಾಲ್ಸಿಯಂ ಐರನ್ ಪೊಟ್ಯಾಶಿಯಂ ವಿಟಮಿನ್ಸ್ ಮಿನರಲ್ಸ್ ಎಲ್ಲವೂ ಅಧಿಕವಾಗಿ ದೊರೆಯುತ್ತದೆ. ಜೊತೆಗೆ ನಿಮ್ಮ ಸ್ನಾಯುಗಳಿಂದ ಬರುವ ಶಬ್ದವನ್ನು ಕೂಡ ಕಡಿಮೆ ಮಾಡುತ್ತದೆ. ಇದರಲ್ಲಿ ಯಾವುದಾದರೂ ಒಂದು ಪದಾರ್ಥಗಳನ್ನು ನೀವು ಮಿಸ್ ಮಾಡಿದರು ಕೂಡ ಯಾವುದೇ ತೊಂದರೆ ಆಗುವುದಿಲ್ಲ ಮಿತ್ರರೇ ಆದರೆ ನಿತ್ಯವೂ ಕನಿಷ್ಠ ನೀವು ಮೆಂತ್ಯೆ ಕಾಳು ಸೇವನೆ ಮಾಡಿ. ನಿಜಕ್ಕೂ ಅದ್ಭುತವಾಗಿದೆ. ಆದಷ್ಟು ನಿಮ್ಮ ಮನೆಯ ಹಿರಿಯರಿಗೆ ಕೊಡುತ್ತಾ ಬನ್ನಿ. ಶುಭದಿನ.