ಖಾಲಿ ಕೈಯಲ್ಲಿ ಆರಂಭಿಸಿ ಸಗಣಿಯಲ್ಲಿ ಶುರುಮಾಡಿದ ಉದ್ಯಮ ಇಂದು 100 ಕೋಟಿಯ ಒಡೆಯ ಇದು ಹೇಗೆ ಸಾಧ್ಯ ಗೊತ್ತಾ

ಇತರೆ

ನಮಸ್ತೆ ಪ್ರಿಯ ಓದುಗರೇ, ಅಬ್ದುಲ್ ಕಲಾಂ ಅವರು ಹೇಳುವ ಹಾಗೆ ಕನಸುಗಳು ಕಂಡರೆ ಅವುಗಳು ನಮ್ಮ ನಿದ್ದೆಯನ್ನು ಕೆಡಿಸುವಂತೆ ಇರಬೇಕು ಅಂತ ಹೇಳಿದ್ದಾರೆ. ಒಮ್ಮೆ ನಾವು ಕನಸುಗಳನ್ನು ಕಂಡರೆ ಅವುಗಳನ್ನು ಸಾಕಾರಗೊಳಿಸುವವರೆಗು ನಾವು ಬಿಡಬಾರದು ಅವುಗಳ ಬೆನ್ನಟ್ಟಿ ಸಾಗುತ್ತಾ ಇರಬೇಕು. ಕನಸು ಕಾಣುವುದು ತುಂಬಾನೇ ಸುಲಭ ಆದರೆ ಅವುಗಳನ್ನು ನಾವು ಯಶಸ್ವಿಗೊಳಿಸುವುದು ತುಂಬಾನೇ ಕಷ್ಟದಾಯಕ. ಆದರೆ ಈ ಒಬ್ಬ ವ್ಯಕ್ತಿಯು ಕನಸನ್ನು ಕಂಡು ಅವುಗಳನ್ನು ಸಾಧಿಸಿದ್ದಾರೆ. ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ, ಕನಸುಗಳನ್ನು ನನಸು ಮಾಡಿಕೊಳ್ಳಲು ದಾರಿ ದೀಪವಾಗಿದ್ದಾರೆ ಅಂತ ಹೇಳಬಹುದು. ಆ ವ್ಯಕ್ತಿ ಯಾರು ಅಂತ ತಿಳಿದುಕೊಳ್ಳಲು ನಿಮಗೆ ತುಂಬಾನೇ ಆಸಕ್ತಿ ಇದ್ದರೆ ಈ ಲೇಖನವನ್ನು ಕೊನೆಯವರೆಗೂ ಓದಿ ಅವರೇ ನಾಗರಾಜ್. ಇವರು ಅಮೃತ ಎಂಬ ದೊಡ್ಡ ಸಾವಯವ ಗೊಬ್ಬರ ಕಂಪನಿಯ ಮಾಲೀಕರು. ನಿಮಗೆ ಗೊತ್ತೇ ಸ್ನೇಹಿತರೇ ಜೀವನದಲ್ಲಿ ಯಶಸ್ಸು ಸಾಧಿಸಿದವರು ಮತ್ತೆ ಇತಿಹಾಸವನ್ನು ಮೆರೆದವರು ಯಾರು ಕೂಡ ಶ್ರೀಮಂತ ಕುಟುಂಬದಿಂದ ಬಂದವರಲ್ಲ ಗೆಳೆಯರೇ ಅಂಥವರಲ್ಲಿ ಈ ನಾಗರಾಜ್ ಎಂಬ ವ್ಯಕ್ತಿ ಒಬ್ಬರಾಗಿದ್ದಾರೆ. ಒಬ್ಬ ರೈತನ ಮಗ ಮನಸ್ಸು ಮಾಡಿದರೆ ಆಸೆ ಪಟ್ಟರೆ ಕನಸುಗಳನ್ನು ಕಂಡರೆ ಮುಂದೆ ಜೀವನದಲ್ಲಿ ಒಬ್ಬ ದೊಡ್ಡ ಯಶಸ್ವಿ ಉದ್ಯಮಿ ಆಗಬಹುದು ಅಂತ ಇವರು ನಮಗೆ ತಿಳಿಸಿಕೊಟ್ಟಿದ್ದಾರೆ.ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಈ ವ್ಯಕ್ತಿಯ ಯಶಸ್ಸಿನ ಹಾದಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹ ಮತ್ತು ಆಶೀರ್ವಾದದಿಂದ ಈ ವ್ಯಕ್ತಿಯು ಮಲ್ಲಾಡ ಹಳ್ಳಿಯಲ್ಲಿ 2010ರಂದು ಒಂದು ಚಿಕ್ಕ ಡೈರಿಯನ್ನು ಶುರು ಮಾಡುತ್ತಾರೆ. ಇವರು ಒಂದು ಅನಾಥ ಬಡ ಆಶ್ರಮದಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ. ಇವರ ಗುರುಗಳು ಲಕ್ಷಾಂತರ ಜನರಿಗೆ ಸಹಾಯ ಆಗಬೇಕು ಅನ್ನುವ ಉದ್ದೇಶದಿಂದ ಇವರು ತುಂಬಾನೇ ದೊಡ್ಡದಾದ ಆಶ್ರಮವನ್ನು ನಿರ್ಮಾಣ ಮಾಡಿರುತ್ತಾರೆ. ಅವರ ಎಲ್ಲ ಶಿಷ್ಯರಲ್ಲಿ ಈ ನಾಗರಾಜ್ ಅನ್ನುವ ಒಬ್ಬ ವ್ಯಕ್ತಿ ಕೂಡ ಆಗಿದ್ದರು. ಧ್ಯಾನ ಯೋಗ ಒಳ್ಳೆಯ ಕಲೆ ಕುಶಲತೆ ಅಭ್ಯಾಸವನ್ನು ಮಾಡಿದರು. ಇಷ್ಟೊಂದು ಜ್ಞಾನವನ್ನು ಗಳಿಸಿದ ಇವರು ತಮ್ಮ ಗುರುಗಳಿಗಾಗಿ ಮತ್ತು ಅವರು ಬೆಳೆದ ಆಶ್ರಮಕ್ಕೆ ಮತ್ತು ನೂರಾರು ಜನರಿಗೆ ಕೆಲಸವನ್ನು ಕೊಡಿಸುವ ಉದ್ದೇಶಕ್ಕಾಗಿ ಪರಿಸರದ ರಕ್ಷಣೆಗಾಗಿ ಸಾವಯವ ಗೊಬ್ಬರವನ್ನೂ ತಯಾರಿಸುವ ಒಂದು ದೊಡ್ಡ ಸಂಸ್ಥೆಯನ್ನು ಹುಟ್ಟು ಹಾಕುತ್ತಾರೆ.ಇವರ ತಂದೆಯು ಮೂಲತಃ ಚಿಕ್ಕ ಬಳ್ಳಾಪುರ ಗೌರಿ ಬಿದನೂರು ತಾಲೂಕಿನವರು ಆಗಿದ್ದು, ಇವರು ಚಿತ್ರದುರ್ಗ ಮಲ್ಲಾಡಿ ಹಳ್ಳಿಯಲ್ಲಿ ಉತ್ತಮ ಶಿಕ್ಷಣ ದೊರಕಿದ ಕಾರಣ ಇವರು ಚಿತ್ರದುರ್ಗಕ್ಕೆ ಬಂದು ನೆಲೆ ನಿಲ್ಲುತ್ತಾರೆ. ಬಡ ಕುಟುಂಬದ ಕಾರಣ ಅಭ್ಯಾಸವನ್ನು ಅಲ್ಲಿಗೆ ಬಿಟ್ಟು ಸಾವಯವ ಗೊಬ್ಬರ ಸಂಸ್ಥೆ ಶುರು ಮಾಡುತ್ತಾರೆ. ಆದರೆ ಇವರಿಗೆ ಹಸುಗಳಿಗೆ ಮೇವು ತಂದು ಹಾಕುವುದು ತುಂಬಾನೇ ಕಷ್ಟ ಆಗುತ್ತಿತ್ತು ಆದ್ದರಿಂದ ಅವರು ಭೂಮಿಗೆ ಯಾವ ಪದಾರ್ಥಗಳನ್ನು ಬಿತ್ತನೆ ಮಾಡಿದರೆ ಒಳ್ಳೆ ಬೆಳೆ ಸಿಗುತ್ತದೆ ಅಂತ ತಿಳಿದುಕೊಳ್ಳುತ್ತಾರೆ.

ಪ್ರಾರಂಭದಲ್ಲಿ 10 ಹಸುಗಳಿಂದ ಡೈರಿ ಶುರು ಆದರೆ ನಂತರ 20-80 ಹಸುಗಳಾಗಿ ಹಾಲಿನ ಉತ್ಪನ್ನಗಳ ಜೊತೆಗೆ ಇತರ ಲಾಭಗಳು ಬರಲು ಕೂಡ ಶುರು ಆಗುತ್ತದೆ. ನಂತರ ರೈತರ ಜೊತೆಗೆ ಬೆರೆತು ಅವರು ಬೆಳೆಯುವ ಬೆಳೆಗಳ ಬಗ್ಗೆ ತರಕಾರಿಗಳ ಬಗ್ಗೆ ತಿಳಿದುಕೊಂಡು ಅವರೇ ಸಾವಯವ ಗೊಬ್ಬರವನ್ನು ತಯಾರಿಸಿ ರೈತರಿಗೆ ಕೊಡುತ್ತಾರೆ.ಬ್ಯಾಂಕ್ ನಿಂದ ಸಾಲವನ್ನು ಪಡೆದು ಉದ್ಯಮವನ್ನು ಶುರು ಮಾಡಿ ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ್ದಾರೆ. ಹಿಂದಿನ ಕಾಲದಲ್ಲಿ ರೈತರು ಸಾವಯವ ಗೊಬ್ಬರವನ್ನು ಬಳಕೆ ಮಾಡಿ ಬೆಳೆಗಳನ್ನು ಬೆಳೆಯುತ್ತಿದ್ದರು ಇದರಿಂದ ಬೆಳೆಗಳಿಗೆ ಮತ್ತು ಆರೋಗ್ಯಕ್ಕೆ ಯಾವುದೇ ಹಾನಿ ಆಗುತ್ತಿರಲಿಲ್ಲ. ಆದರೆ ಈಗಿನ ಕಾಲದಲ್ಲಿ ರೈತರು ರಾಸಾಯನಿಕಾಯುಕ್ತ ಪದಾರ್ಥಗಳನ್ನು ಬಳಕೆ ಮಾಡುತ್ತಿರುವ ಕಾರಣ ಬೆಳೆಗಳಿಗೆ ರೋಗಗಳು ಅಂಟಿಕೊಳ್ಳುತ್ತಿವೆ. ಆದ ಕಾರಣ ಅವರು ತಮ್ಮ ತೋಟದಲ್ಲಿ ಸಾವಯವ ಗೊಬ್ಬರವನ್ನು ಪರಿಕ್ಷಣೆ ಮಾಡಿ ರೈತರಿಗೆ ಮನ ಮುಟ್ಟುವಂತೆ ಸಾವಯವ ಗೊಬ್ಬರವನ್ನೆ ಬಳಕೆ ಮಾಡಿ ಆದಾಯವನ್ನು ಹೆಚ್ಚಿಗೆ ಮಾಡುವುದು ಹೇಗೆ ಮತ್ತು ಖರ್ಚು ಕಡಿಮೆ ಮಾಡುವುದು ಹೇಗೆ ಅನ್ನುವ ಉದ್ದೇಶಕ್ಕಾಗಿಯೇ ಈ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದಾರೆ.

ನಾಡಿನಾದ್ಯಂತ ಇರುವಂತಹ ರೈತರಿಗೆ ಸಣ್ಣಪುಟ್ಟ ಉದ್ಯಮಿಗಳಿಗೆ ಆಶಾಕಿರಣವಾಗಿ ತಮ್ಮ ಸಂಸ್ಥೆಯನ್ನು ಬೆಳೆಸಿದ್ದಾರೆ. ನೋಡಿದ್ರಲಾ ಮಿತ್ರರೇ, ಯಾವ ರೀತಿ ಒಬ್ಬ ವ್ಯಕ್ತಿ ಬಡ ಕುಟುಂಬದಿಂದ ಬಂದು ಎಷ್ಟೊಂದು ಸಾಧನೆಯನ್ನು ಮಾಡಿದ್ದಾರೆ ಎಂದು. ಇವರು ರಾಜ್ಯಾದ್ಯಂತ ಹೆಸರು ಗಳಿಸುವುದಲ್ಲದೆ ರೈತರಿಗೆ ಯಾವ ರೀತಿಯಲ್ಲಿ ಬೆಳೆಗಳನ್ನು ಬೆಳೆಯಬೇಕು ಅಂತ ತಿಳಿಸಿ ಕೊಟ್ಟಿದ್ದಾರೆ. ಇಂಥಹ ದೊಡ್ಡ ವ್ಯಕ್ತಿಯ ಉದ್ಯಮ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆದು ರಾಷ್ಟ್ರ ಅಂತ ರಾಷ್ಟ್ರಮಟ್ಟದಲ್ಲಿ ಹೆಸರನ್ನು ಗಳಿಸಲಿ ಎಂದು ನಾವೆಲ್ಲರೂ ಶುಭವಾಗಲಿ ಅಂತ ಹಾರೈಸೋಣ. ಶುಭದಿನ.

Leave a Reply

Your email address will not be published. Required fields are marked *