ನಮಸ್ತೆ ಪ್ರಿಯ ಓದುಗರೇ, ಇತ್ತೀಚಿನ ದಿನಗಳಲ್ಲಿ ಜನರು ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಬಂದರೆ ಜನರು ಯಾರೊಂದಿಗೆ ಕೂಡ ಹಂಚಿಕೊಳ್ಳಲು ತುಂಬಾನೇ ಮುಜುಗರ ಪಡುತ್ತಾರೆ. ವೈದ್ಯರಲ್ಲಿ ಸುಳ್ಳು ಹೇಳಬಾರದು ಅನ್ನುವ ಮಾತಿದೆ ಮಿತ್ರರೇ, ವೈದ್ಯರ ಹತ್ತಿರ ಕೂಡ ಈ ಮಾತನ್ನು ಪಿಸು ಪಿಸು ಆಗಿ ವಿವರಣೆ ಮಾಡುತ್ತಾರೆ. ಯಾರು ಕೂಡ ಈ ಸಮಸ್ಯೆ ಬಗ್ಗೆ ಮಾಹಿತಿಯನ್ನು ಬಹಿರಂಗ ಮಾಡುವುದಿಲ್ಲ. ಆದ್ದರಿಂದ ನೀವು ಈ ಸಮಸ್ಯೆಯನ್ನು ವೈದ್ಯರ ಹತ್ತಿರ ಸ್ಪಷ್ಟವಾಗಿ ವಿವರಣೆ ನೀಡಿದರೆ ಮಾತ್ರ ಅವರು ಇದಕ್ಕೆ ಪರಿಹಾರವನ್ನು ನೀಡಬಲ್ಲರು. ಇನ್ನೂ ಈ ಪೈಲ್ಸ್ ಅನ್ನುವುದು ಗುದದ್ವಾರದಲ್ಲಿ ನೋವು ಮತ್ತು ರಕ್ತಸ್ರಾವ ಆಗುತ್ತದೆ. ಇನ್ನೂ ಗುಪ್ತಾಂಗ ದ ಚರ್ಮವು ಹೊರಗಡೆ ಬಂದ ಹಾಗೆ ಅನ್ನಿಸಲು ಶುರು ಆಗುತ್ತದೆ. ಇದನ್ನು ನಾವು ಮೂಲವ್ಯಾಧಿ ಅಥವಾ ಪೈಲ್ಸ್ ಅಂತ ಕರೆಯುತ್ತೇವೆ. ಮುಖ್ಯವಾಗಿ ಈ ಪೈಲ್ಸ್ ಅನ್ನು ಎರಡು ವಿಧದಲ್ಲಿ ವಿಂಗಡನೆ ಮಾಡಬಹುದು. ಇಂಟರ್ನಲ್ ಪೈಲ್ಸ್ ಮತ್ತು ಎಕ್ಸ್ಟರ್ನಲ್ ಪೈಲ್ಸ್ ಅಂತ. ಈ ಸಮಸ್ಯೆ ಅನ್ನುವುದು ಒಂದೇ ಸ್ಥಳದಲ್ಲಿ ಕುಳಿತು ಕೆಲಸವನ್ನು ಮಾಡುವವರಿಗೆ, ಯಾವುದೇ ವ್ಯಾಯಾಮ ಮತ್ತು ಮೈ ಬಗ್ಗಿಸಿ ಕೆಲಸವನ್ನು ಮಾಡದೇ ಇರುವವರಿಗೆ ಗರ್ಭಿಣಿಯರಿಗೆ ಕಾಣಿಸಿಕೊಳ್ಳುತ್ತದೆ.
ಈ ಸಮಸ್ಯೆ ಪ್ರಾರಂಭದಲ್ಲಿ ಕಾಣಿಸಿಕೊಂಡಾಗ ಮಲದ್ವಾರದಲ್ಲಿ ಉರಿ ಮತ್ತು ರಕ್ತಸ್ರಾವ ಆಗುತ್ತದೆ. ತಕ್ಷಣವೇ ನಾವು ಚಿಕಿತ್ಸೆ ಪಡೆದುಕೊಂಡರೆ ಮಾತ್ರ ಬೇಗನೆ ಗುಣಪಡಿಸಿಕೊಳ್ಳಬಹುದು. ಇಲ್ಲವಾದರೆ ಚಿಕ್ಕದಾದ ಶಸ್ತ್ರ ಚಿಕಿತ್ಸೆ ಮಾಡಬೇಕಾದ ಸಂದರ್ಭ ಒದಗುತ್ತದೆ. ಹಾಗಾದರೆ ಸ್ನೇಹಿತರೇ ಇಷ್ಟೊಂದು ದೊಡ್ಡದಾದ ಈ ಸಮಸ್ಯೆಗೆ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಸುಲಭವಾಗಿ ನಿಧಾನವಾಗಿ ಕಡಿಮೆ ಮಾಡಿಕೊಳ್ಳಬಹುದು. ಆಯುರ್ವೇದದಲ್ಲಿ ತಿಳಿಸಿರುವ ಈ ಮನೆಮದ್ದು ಅನ್ನು ನೀವು ಒಂದು ವಾರಗಳ ಕಾಲ ತೆಗೆದುಕೊಂಡರೆ ಎಷ್ಟೇ ದೊಡ್ಡದಾದ ಪೈಲ್ಸ್ ಸಮಸ್ಯೆ ಇದ್ದರೂ ಕೂಡ ಅದನ್ನು ಹೋಗಲಾಡಿಸಬಹುದು. ಬನ್ನಿ ಹಾಗಾದರೆ ಮನೆಮದ್ದು ಶುರು ಮಾಡೋಣ. ಮೊದಲಿಗೆ ಮೆಹಂದಿ ಗಿಡದ ಎಲೆಗಳನ್ನು ತೆಗೆದುಕೊಳ್ಳಿ. ಮೆಹಂದಿ ಅನ್ನು ಇಷ್ಟ ಪಡದೆ ಇರುವ ಮಹಿಳೆಯರಿಲ್ಲ ಮಿತ್ರರೇ, ಅಷ್ಟೇ ಅಲ್ಲದೆ ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಉತ್ತಮವಾಗಿದೆ. ಇದು ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ದೇಹದ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಜೀರ್ಣಕ್ರಿಯೆ ಶಕ್ತಿಯನ್ನು ಹೆಚ್ಚಿಸುತ್ತದೆ. ಅಸಿಡಿಟಿ ಮಲಬದ್ಧತೆ ಗ್ಯಾಸ್ ಮುಂತಾದ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಮೂಲವ್ಯಾಧಿ ಸಮಸ್ಯೆಗೆ ಮದರಂಗಿ ಎಲೆಗಳು ಒಂದು ರಾಮಬಾಣವಾಗಿ ಕೆಲಸವನ್ನು ನಿರ್ವಹಿಸುತ್ತದೆ. ಈ ಎಲೆಯನ್ನು ಚೆನ್ನಾಗಿ ಧೂಳು ಹೋಗುವಂತೆ ತೊಳೆದು ಒಂದು ಬಟ್ಟಲಿನಲ್ಲಿ ಹಾಕಿ ಅದಕ್ಕೆ ಎರಡು ಲೋಟ ನೀರು ಹಾಕಿ ಇಡಬೇಕು. ನಂತರ ಎರಡನೆಯದಾಗಿ ಬೇಕಾದ ವಸ್ತು ಅಂದರೆ ನೆಲ್ಲಿಕಾಯಿ ಪುಡಿ. ಇದು ಸಾಮಾನ್ಯವಾಗಿ ಎಲ್ಲ ಅಂಗಡಿಯಲ್ಲಿ ಸಿಗುತ್ತದೆ. ಈಗ ಈ ಪುಡಿಯನ್ನು ಇದರಲ್ಲಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ನಿಮಗೆ ಗೊತ್ತೇ ಮೂಲವ್ಯಾಧಿ ಸಮಸ್ಯೆಗೆ ಮುಖ್ಯ ಕಾರಣ ಮಲಬದ್ಧತೆ. ಈ ನೆಲ್ಲಿಕಾಯಿ ಪುಡಿ ಮಲಬದ್ಧತೆ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತದೆ. ಈ ಎರಡು ಸಾಮಗ್ರಿಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಮತ್ತೆ ಒಂದು ಲೋಟ ನೀರು ಹಾಕಿ ರಾತ್ರಿವಿ ಡಿ ನೆನೆಯಿಡಿ. ಮಾರನೆಯ ದಿನ ಎದ್ದು ಈ ನೀರನ್ನು ಸೋಸಿಕೊಂಡು ಕುಡಿಯಿರಿ. ಸತತವಾಗಿ ಹದಿನೈದು ಅಥವಾ ಒಂದು ವಾರಗಳ ಕಾಲ ಕುಡಿಯಿರಿ. ಇದರಿಂದ ಎಂಥಹ ಪೈಲ್ಸ್ ಸಮಸ್ಯೆ ಇದ್ದರೂ ಕೂಡ ವಾಸಿ ಆಗುತ್ತದೆ. ಜೊತೆಗೆ ಈ ಡ್ರಿಂಕ್ ನಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿ ಇರುವುದರಿಂದ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ತುಂಬುತ್ತದೆ.ಹೃದಯವನ್ನು ಆರೋಗ್ಯವಾಗಿರುತ್ತದೆ. ಬಿಪಿ ನಿಯಂತ್ರಣದಲ್ಲಿಡಲು ಸಹಕಾರಿ ಆಗಿದೆ ಜೊತೆಗೆ ಶೀತ ನೆಗಡಿ ಕೆಮ್ಮು ಎಲ್ಲವನ್ನು ನಿವಾರಣೆ ಮಾಡುತ್ತದೆ. ಇಷ್ಟೊಂದು ಅಂಶವನ್ನು ಲಾಭವನ್ನು ಹೊಂದಿರುವ ಈ ಡ್ರಿಂಕ್ ಅನ್ನು ಮಾಡಿ ಕುಡಿಯಲೇಬೇಕು. ಹಾಗಾದರೆ ಈ ಚಿಕ್ಕ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.