ಗೋಡಂಬಿಯನ್ನು ಯಾವ ಕಾಯಿಲೆಗಳು ಇದ್ದವರು ತಿನ್ನಬಾರದು ಅನ್ನುವ ವಿಷಯ ಇಲ್ಲಿದೆ

ಆರೋಗ್ಯ

ಗೋಡಂಬಿ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಆದರೆ ಈ ಸಮಸ್ಯೆಗಳು ಇದ್ದವರು ಗೋಡಂಬಿಯನ್ನು ತಿನ್ನಬಾರದು ಅನ್ನುವ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ನಮಸ್ತೆ ಪ್ರಿಯ ಓದುಗರೇ ಆಹಾರ ಪದ್ಧತಿಯಲ್ಲಿ ಕೆಲವು ಆಹಾರಗಳು ಇಷ್ಟೊಂದು ರುಚಿಯನ್ನು ಹೊಂದಿರುತ್ತದೆ ಅಂದರೆ ಆಹಾರವನ್ನು ಎಷ್ಟು ತಿಂದರೂ ಕೂಡ ಸಾಲವುದಿಲ್ಲ. ಮತ್ತಷ್ಟು ಮತ್ತಷ್ಟು ತಿನ್ನಬೇಕು ಅಂತ ಆಸೆ ಆಗುತ್ತದೆ. ಕೆಲವರಿಗೆ ಕೆಲವು ಆಹಾರಗಳು ಅವರ ದೇಹಕ್ಕೆ ಹೊಂದಾಣಿಕೆಯಾದರೆ ಇನ್ನೂ ಕೆಲವರಿಗೆ ಹೊಂದಾಣಿಕೆ ಆಗುವುದಿಲ್ಲ. ಅದಕ್ಕಾಗಿ ನಮ್ಮ ದೇಹಕ್ಕೆ ಅಗತ್ಯವಾದ ಅಷ್ಟೇ ಅಲ್ಲದೆ ಹೊಂದಾಣಿಕೆ ಆಗದ ಆಹಾರವನ್ನು ನಾವು ಸೇವಿಸದೇ ಇರುವುದು ಸೂಕ್ತ. ಗೋಡಂಬಿ ಡ್ರೈ ಫ್ರೂಟ್ಸ್ ಗಳಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಆದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಯಾವ ಕಾಯಿಲೆ ಇದ್ದವರು ಗೋಡಂಬಿಯನ್ನು ತಿನ್ನಬಾರದು ಅಂತ ತಿಳಿಸಿಕೊಡುತ್ತೇವೆ ಬನ್ನಿ. ಗೋಡಂಬಿಯನ್ನು ಎಲ್ಲರೂ ತುಂಬಾನೇ ಇಷ್ಟ ಪಟ್ಟು ತಿನ್ನುತ್ತಾರೆ.

ಗೋಡಂಬಿಯನ್ನು ಇಷ್ಟ ಪಡದೇ ಇರುವ ಜನರಿಲ್ಲ. ಗೋಡಂಬಿಯನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೆ ಲಾಭಗಳಿವೆ. ಕೆಲವು ಆಹಾರ ಪದ್ಧತಿಯೂ ಕೆಲವರಿಗೆ ವಾತಾವರಣಕ್ಕೆ ಅನುಗುಣವಾಗಿ ಅವರ ಶರೀರಕ್ಕೆ ಅನುಗುಣವಾಗಿ ಇರಬೇಕು. ಇಲ್ಲವಾದರೆ ಅವರ ಆರೋಗ್ಯವೂ ದಾರಿ ತಪ್ಪಿ ಹೋಗುತ್ತದೆ. ಕೆಲವು ಆಹಾರಗಳು ಆಗದೆ ಇದ್ದರೆ ಅವುಗಳಿಂದ ದೂರ ಇರುವುದು ಒಳಿತು. ಹಾಗಾದರೆ ಈ ಗೋಡಂಬಿಯನ್ನು ಯಾರು ತಿನ್ನಬಾರದು ಅಂದರೆ ಮೊದಲಿಗೆ ಮೂಲವ್ಯಾಧಿ ಸಮಸ್ಯೆ ಇರುವವರು ಹಾಗೆಯೇ ಹೊಟ್ಟೆಗೆ ಸಂಭಂದಪಟ್ಟ ಸಮಸ್ಯೆಗಳು ಇದ್ದವರು ಈ ಗೋಡಂಬಿಯನ್ನು ಅತಿಯಾಗಿ ಸೇವನೆ ಮಾಡಬಾರದು. ಏಕೆಂದರೆ ಈ ಸಮಸ್ಯೆಗಳು ಇದ್ದವರು ಗೋಡಂಬಿಯನ್ನು ತಿಂದರೆ ಹೊಟ್ಟೆ ಉಬ್ಬರ ಹೊಟ್ಟೆ ನೋವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಮೂಲವ್ಯಾಧಿ ಸಮಸ್ಯೆ ಮತ್ತು ಹೊಟ್ಟೆ ಸಮಸ್ಯೆಗಳಿದ್ದರೆ ಗೋಡಂಬಿ ಇಂದ ದೂರವಿರುವುದು ಒಳ್ಳೆಯದು. ಇನ್ನೂ ಗೋಡಂಬಿ ಹೊಟ್ಟೆಯಲ್ಲಿ ಜೀರ್ಣವಾಗಲು ತುಂಬಾನೇ ಸಮಯವನ್ನು ತೆಗೆದುಕೊಳ್ಳುತ್ತದೆ. ನೀವೇನಾದರೂ ಗೋಡಂಬಿಯನ್ನು ಸೇವನೆ ಮಾಡಿದರೆ ನಿಮಗೆ ಮಲಬದ್ಧತೆ ಸಮಸ್ಯೆ ಅನ್ನುವುದು ಮತ್ತಷ್ಟು ಹೆಚ್ಚುತ್ತದೆ. ಹಾಗೆಯೇ ಹೊಟ್ಟೆ ಊದಿಕೊಳ್ಳುವಿಕೆ, ಹೊಟ್ಟೆ ಉಬ್ಬರ, ಹೊಟ್ಟೆ ನೋವು ಹೀಗೆ ಹೊಟ್ಟೆ ಸಂಭಂದಿಸಿದ ಸಮಸ್ಯೆಗಳು ಒಂದೊಂದಾಗಿ ಶುರು ಆಗುತ್ತವೆ.

ಈ ಬಗೆಯ ಸಮಸ್ಯೆಗಳು ನಿಮ್ಮಲ್ಲಿ ಇದ್ದರೆ ತಕ್ಷಣವೇ ಗೋಡಂಬಿಯನ್ನು ತಿನ್ನುವುದನ್ನು ಬಿಟ್ಟುಬಿಡಿ. ಇನ್ನೂ ನೀವು ಡಯೆಟ್ ಮಾಡುತ್ತಿದ್ದರೆ ಅಥವಾ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರೆ ಗೋಡಂಬಿಯನ್ನು ಸೇವನೆ ಮಾಡಬೇಡಿ. ಏಕೆಂದರೆ ಇದು ತೂಕವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಆದ್ದರಿಂದ ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸಿದರೆ ಗೋಡಂಬಿ ತಿನ್ನುವುದನ್ನು ಬಿಟ್ಟು ಬಿಡಿ. ಇನ್ನೂ ಗೋಡಂಬಿ ತಿನ್ನುವುದರಿಂದ ಕೆಲವರಿಗೆ ಅಲರ್ಜಿ ಕೂಡ ಆಗಬಹುದು. ತುರಿಕೆ ಅಲರ್ಜಿ ಅತಿಸಾರ ಇನ್ನಿತರ ಸಮಸ್ಯೆಗಳು ಆದರೆ ಗೋಡಂಬಿ ತಿನ್ನುವುದನ್ನು ಕಡ್ಡಾಯವಾಗಿ ತ್ಯಜಿಸಿ ಬಿಡಿ. ಇನ್ನೂ ಕೆಲವರಿಗೆ ಗೋಡಂಬಿ ತಿನ್ನುವುದರಿಂದ ತಲೆನೋವು ಶುರು ಆಗುತ್ತದೆ. ನಿಮಗೇನಾದರೂ ಗೋಡಂಬಿ ತಿನ್ನುವುದರಿಂದ ತಲೆನೋವು ಬರಲು ಪ್ರಾರಂಭವಾದರೆ ಅದನ್ನು ತಿನ್ನಲು ಹೋಗಬೇಡಿ. ಅಧಿಕವಾದ ರಕ್ತದೊತ್ತಡ ಸಮಸ್ಯೆ ಇರುವವರು ವೈದ್ಯರ ಸಲಹೆ ಮೇರೆಗೆ ಗೋಡಂಬಿಯನ್ನು ಸೇವಿಸಬೇಕು. ಗೊಡಂಭಿಯಲ್ಲಿ ಅಧಿಕ ಪ್ರಮಾಣದ ಸೋಡಿಯಂ ಅಂಶ ಇರುವುದರಿಂದ ಇದು ರಕ್ತದೊತ್ತಡವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಆದ್ದರಿಂದ ನೀವು ಗೋಡಂಬಿ ತಿನ್ನುವ ಮೊದಲು ವೈದ್ಯರ ಹತ್ತಿರ ಸಲಹೆ ಪಡೆದುಕೊಳ್ಳಿ. ನಂತರ ಸೇವನೆ ಮಾಡಿ. ಎಚ್ಚವಿರಲಿ. ಶುಭದಿನ

Leave a Reply

Your email address will not be published. Required fields are marked *