ನಮಸ್ತೆ ಪ್ರಿಯ ಓದುಗರೇ ಸ್ಟಾರ್ ಲೆಟ್ ಕಾರ್ಪೋರೇಶನ್ ಅವರು ತುಂಬಾನೇ ಕಡಿಮೆ ಬೆಲೆಗೆ ಒಂದು ಹೊಸದಾದ ತಂತ್ರಜ್ಞಾನವನ್ನು ತುಮಕೂರಿನಲ್ಲಿ ಪರಿಚಯಿಸಿದ್ದಾರೆ. ಆ ಹೊಸದಾದ ತಂತ್ರಜ್ಞಾನ ಯಾವುದು ಅಂದರೆ ಗೀಸರ್ ನ ಬಗ್ಗೆ ಅವರು ಸಂಶೋಧನೆ ಮಾಡಿ ಅದರ ಸಂಪೂರ್ಣ ಲಾಭವನ್ನು ತುಂಬಾನೇ ಕಡಿಮೆ ಬೆಲೆ ಕೊಡಲಿದ್ದಾರೆ. ಹಾಗಾದರೆ ಬನ್ನಿ ಈ ಹೊಸ ಟೆಕ್ನಾಲಜಿಯಾದ ಗೀಸರ್ ಅನ್ನು ಹೇಗೆ ಬಳಕೆ ಮಾಡಬೇಕು. ಎಲ್ಲೆಲ್ಲಿ ಉಪಯೋಗ ಮಾಡಬೇಕು ಮತ್ತು ಇದರಿಂದ ಆಗುವ ಲಾಭಗಳಾದರೂ ಏನು ಅನ್ನುವ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಇಂದಿನ ಲೇಖನದ ಮೂಲಕ ತಿಳಿಸಿಕೊಡುತ್ತೇವೆ ಬನ್ನಿ. ಸ್ಟಾರ್ ಲೆಟ್ ಕಾರ್ಪೊರೇಷನ್ ನವರು ಎರಡು ರೀತಿಯಾದ ಗೀಸರ್ ಗಳನ್ನು ಉತ್ಪಾದನೆ ಮಾಡುತ್ತಾರೆ. ಒಂದು ಲೀಟರ್ ಸಾಮರ್ಥ್ಯವುಳ್ಳ ಗೀಸರ್ ಮೊದಲನೆಯದಾದರೆ, ಎರಡನೆಯದು ಎರಡೂವರೆ ಕೆಪ್ಯಾಸಿಟಿ ಇರುವ ಗೀಸರ್. ಒಂದು ಲೀಟರ್ ಗೀಸರ್ ಗೆ ಮೂರು ಸಾವಿರ ರೂಪಾಯಿ. ಮತ್ತು ಇದರ ಜೊತೆಗೆ ವಾರಂಟಿ ಕಾರ್ಡ್, ಗೀಸರ್ ಯೂನಿಟ್, ಐದು ಮೀಟರ್ ಪೈಪು ನಿಮಗೆ ಈ ಗೀಸರ್ ಖರೀದಿ ಮಾಡುವಾಗ ಕೊಡುತ್ತಾರೆ.
ಜೊತೆಗೆ ಕನೆಕ್ಟರ್, ಪೈಪ್ ಮತ್ತು ಕೊಳವೆಗಳನ್ನು ಕೊಟ್ಟಿರುತ್ತಾರೆ ಇದರಿಂದ ಫಿಟ್ಟಿಂಗ್ ಮಾಡಲು ತುಂಬಾನೇ ಸರಳವಾಗುತ್ತದೆ. ಅದನ್ನು ಗೀಸರ್ ಗೆ ಜೋಡಿಸಬೇಕು ಇನ್ನೊಂದು ತುದಿಯನ್ನು ನಲ್ಲಿಗೆ ಜೋಡಿಸಬೇಕು ನಂತರ ನಲ್ಲಿಯನ್ನು ಚಾಲು ಮಾಡಬೇಕು. ಮಾಡಿದ ನಂತರ ಆಗ ನೀರು ಬರುತ್ತಿರುತ್ತದೆ, ತದ ನಂತರ ನೀರು ಬಂದ ಮೇಲೆ ಪ್ಲಗ್ ಪಾಯಿಂಟ್ ಅನ್ನು ಹಾಕಿ ಸ್ವಿಚ್ ಹಾಕಬೇಕು. ಆಗ ಅಲ್ಲಿ ಹಸಿರು ಬಣ್ಣದ ಲೈಟ್ ಹತ್ತುತ್ತದೆ. ನಂತರ ಕೇವಲ ಹತ್ತು ಸೆಕೆಂಡುಗಳಲ್ಲಿ ನೀರು ಬಿಸಿ ಆಗಲು ಪ್ರಾರಂಭವಾಗುತ್ತದೆ. ನಿಮಗೆ ಎಷ್ಟು ನೀರು ಬೇಕೋ ಅಷ್ಟು ನೀರನ್ನು ಇದರಲ್ಲಿ ಆರಾಮಾಗಿ ಸುಲಭವಾಗಿ ಕಾಯಿಸಿಕೊಳ್ಳಬಹುದು. ನೀರಿನ ಪ್ರಮಾಣಕ್ಕೆ ಯಾವುದೇ ನಿಯಮವಿಲ್ಲ ಗೆಳೆಯರೇ ಇಂತಿಷ್ಟೇ ಹಾಕಬೇಕು ಅಂತ. ಸಾಧ್ಯವಾದರೆ ನಿಮ್ಮ ಟ್ಯಾಂಕ್ ಪೂರ್ತಿ ನೀರನ್ನು ಕೂಡ ಕಾಯಿಸಿಕೊಳ್ಳಬಹುದು. ಇದರಿಂದ ನಿಮಗೆ ಶಾಕ್ ಕೂಡ ಹೊಡೆಯುವುದಿಲ್ಲ. ನೀವು ಏನಾದರೂ ನಲ್ಲಿ ಮಾತ್ರ ಬಂದು ಮಾಡಿ ಸ್ವಿಚ್ ಆರಿಸುವುದನ್ನು ಮರೆತು ಹೋದರೆ ಗೀಸರ್ ನಲ್ಲಿರುವ ನೀರು 90 ಡಿಗ್ರೀವರೆಗೆ ಬಿಸಿಯಾಗಿ ತನ್ನಷ್ಟಕ್ಕೆ ತಾನೇ ಕಟ್ ಆಫ್ ಆಗುತ್ತದೆ. ಇದಕ್ಕೆ ಕಾರಣ ಇದರಲ್ಲಿ ಮ್ಯಾನುಯೇಲ್ ರಿಸೆಟ್ ತಂತಜ್ಞಾನವನ್ನು ಅಳವಡಿಸಲಾಗಿದೆ. ಈ ಗೀಸರ್ ಗಾತ್ರದಲ್ಲಿ ತುಂಬಾನೇ ಕಡಿಮೆ ಇರುವುದರಿಂದ ನೀವು ಪ್ರವಾಸವನ್ನು ಕೈಗೊಂಡರೆ ಬಿಸಿ ನೀರಿಗಾಗಿ ಇದನ್ನು ಕೂಡ ತೆಗೆದುಕೊಂಡು ಹೋಗಬಹುದು.
ಯಾವುದೇ ರೀತಿಯ ವಿದ್ಯುತ್ ಹಾಳಾಗುವುದಿಲ್ಲ. ಇನ್ನೂ ಎರಡು ಅಥವಾ ಐದು ಲೀಟರ್ ಗೀಸರ್ ಬಗ್ಗೆ ಹೇಳುವುದಾದರೆ, ಅದರಲ್ಲಿ ಅಂಗ್ಯುಲರ್ ಕಾಕ್ ಮಿಕ್ಸರ್, ಅಟೋ ಕಟ್ ಆಫ್ ಸೌಲಭ್ಯದ ಜೊತೆಗೆ ಇದರಲ್ಲಿ ಆಟೊರಿಸೆಟ್ ಇರುತ್ತದೆ. ಇವರು ಬೇರೆ ಕಂಪನಿಯ ಗೀಸರ್ ಇಟ್ಟುಕೊಂಡು ತಮ್ಮ ಗೀಸರ್ ಜೊತೆಗೆ ಗ್ರಾಹಕರು ಖರೀದಿಗೆ ಬಂದಾಗ ಡೆಮೊ ಮಾಡಿ ಕೂಡ ತೋರಿಸುತ್ತಾರೆ. ಇದರಿಂದ ನೀವು ಯಾವ ಗೀಸರ್ ಚೆನ್ನಾಗಿ ಕೆಲಸವನ್ನು ಮಾಡುತ್ತದೆ ಅಂತ ಪರಿಶೀಲನೆ ಮಾಡಿ ಖರೀದಿ ಮಾಡಬಹುದು. ಬೇರೆ ಯಾವುದೇ ಅಂಗಡಿಯಲ್ಲಿ ಯಾವುದೇ ವಸ್ತುಗಳ ಡೆಮೋ ಮಾಡಿ ತೋರಿಸುವುದು ತೀರ ಕಡಿಮೆ ಬೆರಳಣಿಕೆಯಷ್ಟು. ಆದರೆ ಈ ಸ್ಟಾರ್ ಲೆಟ್ ಕಾರ್ಪೊರೇಷನ್ ಅವರು ನಿಮಗೆ ನೇರವಾಗಿ ಡೆಮೋ ಮಾಡಿ ತೋರಿಸುತ್ತಾರೆ. ಇದರಿಂದಾಗಿ ನಿಮಗೆ ಗೀಸರ್ ಅನ್ನು ಯಾವ ರೀತಿಯಾಗಿ ಬಳಕೆ ಮಾಡಬಹುದು ಅಂತ ನೀವೇ ತಿಳಿಯಬಹುದು. ಈ ಗೀಸರ್ ಕಡಿಮೆ ಗಾತ್ರವನ್ನು ಹೊಂದಿರುವ ಕಾರಣ ಇದನ್ನು ನೀವು ಸ್ನಾನದ ಕೊನೆಯಲ್ಲಿ ಅಳವಡಿಸಬಹುದು.
ಇನ್ನೂ ವಿಧ್ಯಾರ್ಥಿಗಳು ಪಿಜಿಯಲ್ಲಿ ಕೂಡ ಸುಲಭವಾಗಿ ಜೋಡಣೆ ಮಾಡಬಹುದು. ಅಡುಗೆ ಮನೆಯಲ್ಲಿ ಪಾತ್ರೆಯನ್ನು ತೊಳೆಯಲು ಬಳಕೆ ಮಾಡಬಹುದು. ಅಷ್ಟೇ ಅಲ್ಲದೇ ವಾಟರ್ ಪ್ಯೂರಿಫೈಯರ್ ಜೊತೆ ಜೋಡಿಸಬಹುದು. ಆದರೆ ನೀವು ಇದನ್ನು ಸ್ನಾನಕ್ಕೆ ಬಳಕೆ ಮಾಡಿದ ನಂತರ ಕುಡಿಯುವ ನೀರಿಗೆ ಬಳಸಬೇಡಿ. ಬೇರೆ ಗೀಸರ್ ಗಳಿಗೆ ಹೋಲಿಕೆ ಮಾಡಿದರೆ ನೀವು ಕನಿಷ್ಠ ಅರ್ಧ ಗಂಟೆಯಾದರೂ ಕಾಯಬೇಕು. ಆದರೆ ಈ ಗೀಸರ್ ಖರೀದಿ ಮಾಡಿದರೆ ಕಾಯುವ ಅವಶ್ಯಕತೆ ಇಲ್ಲ ಮಿತ್ರರೇ. ಈ ಬಗೆಯ ಗೀಸರ್ ಅನ್ನು ತುಮಕೂರಿನ ಸ್ಟಾರ್ ಲೆಟ್ ಕಾರ್ಪೊರೇಷನ್ ನವರು ಮಾರುಕಟ್ಟೆಗೆ ತಂದಿದ್ದಾರೆ ಅಷ್ಟೇ ಅಲ್ಲದೇ ಒಂದು ವರ್ಷದ ವಾರಂಟಿ ಕಾರ್ಡ್ ಅಂದರೆ ರಿಪ್ಲೇಸಮೆಂಟ್ ಮತ್ತು ಹತ್ತು ವರ್ಷಗಳ ಗ್ಯಾರಂಟಿ ಅನ್ನು ನೀಡಲಾಗುತ್ತದೆ. ಇವರು ಸ್ವಂತ ಉನ್ನತ ಮಟ್ಟದ ವಸ್ತುಗಳನ್ನು ಬಳಕೆ ಮಾಡಿ ಇದನ್ನು ತಯಾರಿಸುತ್ತಾರೆ ಜೊತೆಗೆ ನೇರವಾದ ಡೆಮೋ ತೋರಿಸುತ್ತಾರೆ. ಈ ಕಂಪನಿ ಕರ್ನಾಟದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಮಾರಾಟ ಮಾಡುತ್ತಿದ್ದಾರೆ. ನೀವು ಆನ್ಲೈನ್ ಮೂಲಕ ಕೂಡ ಇವರಿಂದ ಕಡಿಮೆ ಬೆಲೆಗೆ ಸಿಗುವ ಹಾಗೂ ಉತ್ತಮ ಗುಣಮಟ್ಟದ ಈ ಗೀಸರ್ ಖರೀದಿ ಮಾಡಿ ಅದರ ಉಪಯೋಗವನ್ನು ಪಡೆದುಕೊಳ್ಳಿ. ಶುಭದಿನ.