ನಿಮ್ಮ ಜಮೀನಿನ ಪಹಣಿ ಹಾಗು ಹಿಸ್ಸಾ ನಂಬರ್ ಅನ್ನು ಹೇಗೆ ಸುಲಭವಾಗಿ ತಿದ್ದುಪಡಿ ಮಾಡಿಕೊಳ್ಳಬಹುದು ಗೊತ್ತೇ ಇಲ್ಲಿದೆ ತಿಳಿಯಿರಿ

ಉಪಯುಕ್ತ ಮಾಹಿತಿ

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ಭೂಮಿಗೆ ಸಂಭಂದ ಪಟ್ಟ ಡಾಕ್ಯುಮೆಂಟ್ ಗಳಲ್ಲಿ ಒಂದಾದ ಪಹಣಿಯಲ್ಲಿ ಸರ್ವೇ ನಂಬರ್ ಮತ್ತು ಹಿಸ್ಸಾ ನಂಬರ್ ಅನ್ನು ಯಾವ ರೀತಿಯಲ್ಲಿ ಸುಲಭವಾಗಿ ಹೇಗೆ ಬದಲಾವಣೆ ಮಾಡಿಕೊಳ್ಳಬಹುದು ಅಂತ ವಿವರವಾಗಿ ತಿಳಿಸಿಕೊಡುತ್ತೇವೆ. ನೀವು ಕೂಡ ಬದಲಾವಣೆ ಮಾಡಿಕೊಳ್ಳಲು ಬಯಸಿದರೆ ನಮ್ಮ ಲೇಖನವನ್ನು ಕೊನೆವರೆಗೂ ಓದಿ ಹಾಗೆಯೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಮ್ಮ ಕರ್ನಾಟಕ ರಾಜ್ಯದ ರೈತರು ಅವರು ತಮ್ಮ ಜಮೀನಿಗೆ ಸ್ವಂತ ಒಡೆಯನಾಗಿರುವ ಅಥವಾ ಭೂಮಿಯು ತನ್ನ ಹೆಸರಿನಲ್ಲಿ ಇದೆ ಅನ್ನುವುದಕ್ಕೆ ಒಂದು ಸಾಕ್ಷಿ ಬೇಕಾಗುತ್ತದೆ. ಇದನ್ನು ನಾವು ಪಹಣಿ ಅಂತ ಕರೆಯುತ್ತೇವೆ. ಹಾಗೆಯೇ ಇದು ಫಾರ್ಮ್ ಹದಿನಾರು ಅಂತ ಕೂಡ ಕರೆಯಲಾಗಿದ್ದು ಇದರಲ್ಲಿ ಹದಿನಾರು ಕಾಲಂ ಗಳಿದ್ದು ಪ್ರತಿ ಕಾಲಂನಲ್ಲಿ ನಿಮ್ಮ ಜಮೀನಿಗೆ ಸಂಭಂದಪಟ್ಟ ವಿಷಯಗಳನ್ನು ಇದರಲ್ಲಿ ದಾಖಲೆ ಮಾಡಲಾಗುತ್ತದೆ. ನಿಮಗೆಲ್ಲರಿಗೂ ಗೊತ್ತಿರುವ ಹಿಂದಿನ ಕಾಲದಲ್ಲಿ ಕೋರ್ಟ್ ಕಚೇರಿಯಲ್ಲಿ ಅಥವ ಯಾವುದೇ ಸರ್ಕಾರಿ ಕೆಲಸಗಳಲ್ಲಿ ಕೈ ಬರಹಗಳ ಮೂಲಕ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಬಾಲ್ವಿಕೆ ಬರಬೇಕೆನ್ನುವ ಉದ್ದೇಶದಿಂದ ಸಂಗ್ರಹಣೆ ಮಾಡಲಾಗುತ್ತಿತ್ತು.

ಆದರೆ ಹೀಗೆ ಮಾಡುವುದರಿಂದ ಸಾಮಾನ್ಯವಾಗಿ ಒಂದಲ್ಲ ಒಂದು ತಪ್ಪು ಆಗಿಯೇ ಆಗುತ್ತಿದ್ದವು ಇದು ಸಹಜ ಕೂಡ ಆಗಿದೆ. ಹೀಗಾಗಿ ರೈತರು ಜಮೀನು ನಮ್ಮದು ಅನ್ನುವ ಸಾಕ್ಷಿಗೆ ದಾಖಲೆಯಾಗಿರುವ ಪಹಣಿಯಲ್ಲಿ ಮತ್ತು ಸರ್ವೇ ದಾಖಲೆಯಲ್ಲಿ ಇರುವ ವಿಷಯಕ್ಕೆ ಒಂದಕ್ಕೊಂದು ಹೋಲಿಕೆ ಆಗುತ್ತಿರಲಿಲ್ಲ ಈ ಕಾರಣದಿಂದ ರೈತರು ತುಂಬಾನೇ ಸಂಕಷ್ಟಗಳಿಗೆ ಸಿಲುಕಿ ಒದ್ದಾಡಬೇಕಾದ ಪರಿಸ್ಥಿತಿ ಬರುತ್ತಿತ್ತು ಮಿತ್ರರೇ. ಆದ್ದರಿಂದ ನೀವು ಪಹಣಿಯಲ್ಲಿ ತಿದ್ದುಪಡಿ ಮಾಡಿ ಬದಲಾವಣೆ ಮಾಡಿಕೊಂಡು ಜಮೀನು ನಿಮ್ಮ ಹೆಸರಿನಲ್ಲಿ ಮಾಡಿಕೊಳ್ಳುವುದು ತುಂಬಾನೇ ಸೂಕ್ತವಾಗಿದೆ. ಪಹಣಿಯಲ್ಲಿ ಸರ್ವೇ ನಂಬರ್ ಮತ್ತು ಹಿಸ್ಸಾ ನಂಬರ್ ಅನ್ನು ಬದಲಾವಣೆ ಮಾಡುವುದಕ್ಕೆ ಕೆಲವು ಪ್ರಮುಖವಾದ ದಾಖಲೆಗಳು ಬೇಕಾಗುತ್ತವೆ. ಹಾಗಾದರೆ ಬನ್ನಿ ಸರ್ವೇ ದಾಖಲೆಯ ಪ್ರಕಾರ ತಿದ್ದುಪಡಿ ಮಾಡಿಕೊಳ್ಳುವುದು ಹೇಗೆ. ಇದಕ್ಕೆ ಯಾವ ರೀತಿಯ ದಾಖಲೆಗಳು ಬೇಕಾಗುತ್ತವೆ. ಅನ್ನುವ ಮಾಹಿತಿಯನ್ನು ತಿಳಿದುಕೊಳ್ಳೋಣ. ಮೊದಲಿಗೆ ನೀವು ನಿಮ್ಮ ತಹಶೀಲ್ದಾರ್ ಕಚೇರಿಯ ಪಹಣಿ ಕೇಂದ್ರದ ಮೂಲಕ ಪಡೆದುಕೊಂಡಿರುವ ಹಳೆ ಕಾಲದ ಕೈಬರಹದ ಪಹಣಿ ತೆಗೆದುಕೊಂಡು ಇದರ ಜೊತೆಗೆ ಚಾಲ್ತಿಯಲ್ಲಿ ಇರುವ ವರ್ಷದ ಪಹಣಿ ಇವೆರಡೂ ದಾಖಲೆಗಳು ಮುಖ್ಯವಾಗಿ ಬೇಕಾಗುತ್ತದೆ. ಮೂರನೆಯದು ನಿಮ್ಮ ಆಧಾರ್ ಕಾರ್ಡ್ ಹಾಗೆಯೇ ಆಕಾರ್ ಬಂದ್ ಬೇಕಾಗುತ್ತದೆ. ಕೊನೆಯದಾಗಿ ನಿಮ್ಮ ಜಮೀನಿನ ನಕ್ಷೆ. ಆಕಾರ್ ಬಂದ್ ಮತ್ತು ಜಮೀನಿನ ನಕ್ಷೆ ತಹಶೀಲ್ದಾರ್ ಕಚೇರಿಯಿಂದ ನೀವು ಪಡೆದುಕೊಳ್ಳಬಹುದು.

ನಂತರ ನಿಮ್ಮ ಜಮೀನಿಗೆ ಸಂಭಂದ ಪಟ್ಟ ಎಲ್ಲ ಕಾಗದ ಪತ್ರಗಳು ಬೇಕಾಗುತ್ತದೆ. ಮಿತ್ರರೇ ಪಹಣಿಯಲ್ಲಿ ತಿದ್ದುಪಡಿ ಮಾಡಬೇಕೆಂದರೆ ಈ ದಾಖಲೆಗಳ ಜೊತೆಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು. ಆನ್ಲೈನ್ ಮೂಲಕ ಸಲ್ಲಿಸಬೇಕೇ? ಹಾಗೂ ಯಾರಿಗೆ ಈ ಅರ್ಜಿಯನ್ನು ಸಲ್ಲಿಸಬೇಕು ಅಂತ ಮುಂದೆ ತಿಳಿಯೋಣ. ಮೊದಲಿಗೆ ನೀವು ಒಂದು ಸರಳವಾದ ಅರ್ಜಿಯನ್ನು ಬರೆಯಬೇಕು. ನಂತರ ಮೇಲೆ ತಿಳಿಸಿರುವ ಎಲ್ಲ ದಾಖಲೆಗಳನ್ನು ಈ ಅರ್ಜಿ ಸಮೇತವಾಗಿ ಲಗತ್ತಿಸಿ ತಶಿಲ್ದಾರ್ ಕಚೇರಿಯಲ್ಲಿರುವ ಅವಕ ಶಾಖೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಕೇವಲ ಅರ್ಜಿಯನ್ನು ಬರೆದು ಕೊಡುವುದಲ್ಲದೆ ಅವರು ನೀಡುವ ರಶೀದಿಯನ್ನು ತಪ್ಪದೆ ಪಡೆದುಕೊಳ್ಳಬೇಕು. ಈ ಎಲ್ಲ ಹಂತಗಳು ಮುಗಿದ ನಂತರ ಪಹಣಿಯಲ್ಲಿ ಯಾವ ರೀತಿಯಲ್ಲಿ ತಿದ್ದುಪಡಿ ಅಥವಾ ಬದಲಾವಣೆ ಆಗುತ್ತದೆ ಗೊತ್ತೇ.

ನೀವು ಸಲ್ಲಿಸಿದ ದಾಖಲೆಗಳು ಮತ್ತು ಅರ್ಜಿಯನ್ನು ವಿಚಾರಣೆಗೆ ಅಥವಾ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ನಂತರ ಅವಕ ಶಾಖೆಯವರು ಮುಂದಿನ ಕ್ರಮಕ್ಕಾಗಿ ಸರ್ವೇ ಕಚೇರಿಗೆ ಕಳುಹಿಸುತ್ತಾರೆ. ಸರ್ವೇ ಅಧಿಕಾರಿಯು ಕಡತಗಳನ್ನು ಸ್ವೀಕರಿಸಿ ಅದನ್ನು ಪರಿಶೀಲಿಸಿ ಸದರಿ ಕಡತಗಳನ್ನು ನಿರ್ವಹಿಸಲು ಒಬ್ಬ ಕೆಳ ಹಂತದ ಅಧಿಕಾರಿಗಳಿಗೆ ನಿರ್ದೇಶಿಸುತ್ತಾರೆ. ಈ ಅಧಿಕಾರಿ ಕಡತಗಳಿಗೆ ಸಂಭಂದಿಸಿದ ಹಳೆಯ ದಾಖಲೆಯನ್ನು ಪರಿಶೀಲನೆ ಮಾಡುತ್ತಾರೆ. ಸ್ವಲ್ಪ ಸಮಯದ ನಂತರ ಮುಟೇಶನ್ ಪ್ರತಿಗಳು ಮತ್ತು ಕೈಬರಹಗಳ ದಾಖಲೆಯನ್ನು ಪರಿಶೀಲನೆ ಮಾಡಿ ಹೋಲಿಕೆ ಮಾಡಲಾಗುತ್ತದೆ. ಈ ಎಲ್ಲ ಹಂತಗಳು ಮುಗಿದ ನಂತರ ಅಧಿಕಾರಿಗಳು ಭೂಮಾಲೀಕನ ಜೊತೆಗೆ ಸ್ಥಳ ವೀಕ್ಷಣೆಗೆ ಬರುತ್ತಾರೆ. ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಲೆಕ್ಕ ಪರಿಪಾಲಕರು ವರದಿಯನ್ನು ಕೇಳಬಹುದು. ನಂತರ ಹಳೆಯ ದಾಖಲೆಯನ್ನು ಮತ್ತು ವಾಸ್ತವಿಕ ದಾಖಲೆಯನ್ನು ಪರಿಶೀಲನೆ ಮಾಡಿ ನ್ಯಾಯಬದ್ಧ ವರದಿಯನ್ನು ಬರೆದು ಅದನ್ನು ಮುಂದಿನ ಹಂತಕ್ಕೆ ಕಳುಹಿಸಿ ಕೊಡುತ್ತಾರೆ. ಹೀಗೆ ತಿದ್ದುಪಡಿ ಆದೇಶದೊಂದಿಗೆ ಕಡತವು ನೇರವಾಗಿ ಭೂಮಿ ಕೇಂದ್ರಕ್ಕೆ ತಲುಪಿ ಅದು ಕಾರ್ಯಗತವಾಗುತ್ತದೆ. ಅಲ್ಲಿಗೆ ಪಹಣಿಯಲ್ಲಿ ಸರ್ವೇ ನಂಬರ್ ಮತ್ತು ಹಿಸ್ಸಾ ನಂಬರ್ ಬದಲಾವಣೆ ಕಾರ್ಯ ಮುಗಿಯುತ್ತದೆ. ಒಂದು ವೇಳೆ ಅಧಿಕಾರಿಗಳು ಏನಾದ್ರೂ ಅರ್ಜಿಯನ್ನು ತಿರಸ್ಕರಿಸಿದರೆ ರೈತರು ಮತ್ತೆ ಸೂಕ್ತ ಕಾರಣಗಳೊಂದಿಗೆ ಮತ್ತೆ ಹಿಂಬರಹ ಅರ್ಜಿಯನ್ನು ಕೊಡಲಾಗುತ್ತದೆ. ಈ ಮೂಲಕ ನೀವು ಸರ್ವೇ ನಂಬರ್ ಮತ್ತು ಹಿಸ್ಸಾ ನಂಬರ್ ಅನ್ನು ಪಹಣಿಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *