ನಮಸ್ತೆ ಪ್ರಿಯ ಓದುಗರೇ ಮನುಷ್ಯ ಹುಟ್ಟಿರುತ್ತಾನೆ ಅಂದ ಮೇಲೆ ಆತನೂ ಸಾಯುವುದು ಕೂಡ ಖಚಿತವಾಗಿ ಇರುತ್ತದೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಬ್ಬ ವ್ಯಕ್ತಿ ಹುಟ್ಟಿದ ಮೇಲೆ ಯಾವ ರೀತಿಯ ನಾಮಕರಣ ಸಮಾರಂಭ ಮಾಡುತ್ತಾರೆಯೋ ಹಾಗೆಯೇ ಒಬ್ಬ ವ್ಯಕ್ತಿ ಸತ್ತ ಮೇಲೆ ಕೂಡ ಹಲವಾರು ಬಗೆಯ ಶವಸಂಸ್ಕಾರ ಪೂಜೆ ಮಾಡುತ್ತಾರೆ. ವ್ಯಕ್ತಿ ಸತ್ತ ಮೇಲೆ ಆತನ ಮೃತ ದೇಹಕ್ಕೆ ಸ್ನಾನವನ್ನು ಮಾಡಿಸುತ್ತಾರೆ. ಅಲಂಕಾರವನ್ನು ಮಾಡುತ್ತಾರೆ. ಮೃತ ದೇಹದ ಮೆರವಣಿಗೆ ಮಾಡುತ್ತಾರೆ. ಹಾಗೆಯೇ ಕೆಲವರು ದಾನವನ್ನು ಕೂಡ ಮಾಡುತ್ತಾರೆ ಈ ಬಗೆಯ ಎಲ್ಲ ಕಾರ್ಯಗಳನ್ನು ಒಬ್ಬ ವ್ಯಕ್ತಿ ತೀರಿಕೊಂಡ ಸಮಯದಲ್ಲಿ ಮಾಡಲಾಗುತ್ತದೆ. ವ್ಯಕ್ತಿ ಸತ್ತ ಮೇಲೆ ಮೊದಲಿಗೆ ಆತನ ಎರಡು ಕಾಲಿನ ಬೆರಳುಗಳನ್ನು ಜೋಡಿಸಿ ಒಂದೇ ಕಡೆಗೆ ಮಾಡಿ ಅವುಗಳನ್ನು ಚಿಕ್ಕ ದಾರದಿಂದ ಕಟ್ಟಲಾಗುತ್ತದೆ. ಈ ವಿಚಾರವು ನಮಗೆ ನಿಜಕ್ಕೂ ಅಚ್ಚರಿಯನ್ನು ಉಂಟು ಮಾಡುತ್ತದೆ. ಹೀಗೆ ಕಟ್ಟಿದ ಈ ದಾರವನ್ನು ದೇಹವನ್ನು ದಹನ ಮಾಡುವವರೆಗೆ ಹಾಗೆ ಇಡುತ್ತಾರೆ. ಹೌದು ಈ ಎಲ್ಲ ಸಂಗತಿಗಳನ್ನು ನಮ್ಮ ಹಿರಿಯರು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಇವುಗಳ ಅರಿವು ನಮಗೆ ಇಲ್ಲದೆ ಇದ್ದರು ಕೂಡ ಇವುಗಳು ವೈಜ್ಞಾನಿಕವಾದ ಕಾರಣಗಳನ್ನು ಒಳಗೊಂಡಿರುತ್ತದೆ. ಆದರೆ ಈಗಿನ ಕಾಲದ ಯುವಜನರು ಇದನ್ನು ನಂಬುವುದು ತುಂಬಾನೇ ವಿರಳ.
ಹಾಗೆಯೇ ಈ ಮೂಢನಂಬಿಕೆ ಆಚಾರ ವಿಚಾರ ನಂಬಿಕೆಗಳು ಮನುಷ್ಯನ ಜೀವನದ ಮೇಲೆ ಬಾರೀ ಪ್ರಭಾವವನ್ನು ಬೀರುತ್ತವೆ. ಹಿರಿಯರು ಬೆಳೆಸಿಕೊಂಡು ಬಂದಂತಹ ಕೆಲವು ಕಾರ್ಯಗಳಿಗೆ ತನ್ನದೇ ಆದ ಮಹತ್ವವಿದೆ ಇತಿಹಾಸವಿದೆ ಹಾಗೆಯೇ ಹಿನ್ನಲೆ ಕೂಡ ಇದೆ ಗೆಳೆಯರೇ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಮನುಷ್ಯ ಸತ್ತ ಮೇಲೆ ಆತನ ಕಿವಿಯಲ್ಲಿ ಮತ್ತು ಮೂಗಿನಲ್ಲಿ ಹತ್ತಿಯನ್ನು ಇಡುತ್ತಾರೆ. ಮತ್ತು ಮೃತ ದೇಹದ ತಲೆಯನ್ನು ಪೂರ್ತಿಯಾಗಿ ಸುತ್ತುತ್ತಾರೆ. ಮತ್ತು ಮುಖ್ಯವಾಗಿ ಮನುಷ್ಯನು ಸತ್ತ ಮೇಲೆ ಆತನ ಎರಡು ಕಾಲಿನ ಹೆಬ್ಬೆರಳುಗಳನ್ನು ಕಟ್ಟುತ್ತಾರೆ. ಇವೆಲ್ಲವುಗಳು ಒಬ್ಬ ವ್ಯಕ್ತಿ ಸತ್ತ ಮೇಲೆ ಮಾಡುವ ಧಾರ್ಮಿಕ ವಿಧಿ ವಿಧಾನಗಳಾಗಿವೆ. ಸತ್ತ ವ್ಯಕ್ತಿಯ ಕಾಲಿನ ಹೆಬ್ಬೆರಳುಗಳನ್ನು ಏಕೆ ಕಟ್ಟುತ್ತಾರೆ. ಇದಕ್ಕೆ ನಮ್ಮ ಪೂರ್ವಜರ ನಂಬಿಕೆಯ ಪ್ರಕಾರ ಸತ್ತ ವ್ಯಕ್ತಿಯ ಆತ್ಮವು ಆತನು ವಾಸಿಸುತ್ತಿದ್ದ ಮನೆಯಲ್ಲಿ ಮತ್ತೆ ಮರಳಿ ಪ್ರವೇಶ ಮಾಡಬಾರದು ಅನ್ನುವ ಉದ್ದೇಶದಿಂದ ಈ ರೀತಿ ಪೂರ್ವಜರು ಮಾಡುತ್ತಿದ್ದರು. ಮತ್ತು ಮನುಷ್ಯ ಸತ್ತ ನಂತರ ದೇಹದ ಶಾಂತಿ ಕಾರ್ಯಗಳನ್ನು ಮಾಡುವವರೆಗೂ ಆತನ ಆತ್ಮ ಇಲ್ಲಿಯೇ ಇರುತ್ತದೆ. ಆತ್ಮ ಇದೇ ಲೋಕದಲ್ಲಿ ಸುತ್ತುತ್ತಾ ಇರುತ್ತದೆ ಎಂದು ಹಿಂದೂ ಪುರಾಣದಲ್ಲಿ ಹೇಳಲಾಗುತ್ತದೆ. ಆದರೆ ಆತ್ಮ ಮತ್ತೆ ಮನೆಗೆ ಮರಳಬಾರದು ಎನ್ನುವ ಉದ್ದೇಶದಿಂದ ವ್ಯಕ್ತಿ ಸತ್ತ ನಂತರ ಆತನ ಕಾಲಿನ ಹೆಬ್ಬೆರಳುಗಳಿಗೆ ಈ ರೀತಿ ಹಗ್ಗದಿಂದ ಕಟ್ಟುತ್ತಾರೆ. ಇನ್ನೂ ನಾವು ವೈಜ್ಞಾನಿಕ ದೃಷ್ಟಿಕೋನದಿಂದ ತಿಳಿಯಬೇಕೆಂದರೆ, ವ್ಯಕ್ತಿ ಸತ್ತ ಮೇಲೆ ಆತನ ದೇಹದಲ್ಲಿರುವ ಯಾವುದೇ ಅಂಗಗಳೂ ಸಂಪೂರ್ಣವಾಗಿ ಸತ್ತು ಹೋಗಿ ಕೆಲಸವನ್ನು ಮಾಡುವುದನ್ನು ನಿಲ್ಲಿಸಿರುತ್ತವೆ.
ಆತನ ದೇಹವು ಕೂಡ ಪೂರ್ತಿಯಾಗಿ ತಂಪಾಗಿ ಹೋಗಿರುತ್ತದೆ. ಹೀಗಾಗಿ ಆತನ ದೇಹದಲ್ಲಿ ರಕ್ತ ಸಂಚಾರ ಸ್ಥಗಿತಗೊಂಡಿರುತ್ತದೆ. ಇದೆ ಕಾರಣದಿಂದ ದೇಹವು ಬಿಗಿಯಾಗುತ್ತಾ ಬರುತ್ತದೆ. ಇದರಿಂದ ದೇಹವು ಯಾವ ಸ್ಥಿತಿಯಲ್ಲಿ ಇರುತ್ತದೆ ಅದನ್ನು ನಾವು ಹಾಗೆಯೇ ಬಿಡಬೇಕಾಗುತ್ತದೆ. ಆದ್ದರಿಂದ ಸತ್ತ ಮೇಲೆ ತಕ್ಷಣವೇ ಜನರು ಮೃತ ದೇಹದ ಕಾಲುಗಳನ್ನು ಮಡಚುತ್ತಾರೆ ಇನ್ನೂ ಕೆಲವರು ದೇಹವನ್ನು ಉದ್ದವಾಗಿ ಮಲಗಿಸಿ ಅವರ ಕಾಲಿನ ಹೆಬ್ಬೆರಳುಗಳನ್ನು ಕಟ್ಟುತ್ತಾರೆ. ಒಂದು ವೇಳೆ ನೀವು ಈ ರೀತಿ ಮಾಡದೇ ಇದ್ದರೆ ಕಾಲುಗಳು ಅಗಲವಾಗುತ್ತಾ ಹೋಗುತ್ತವೆ ಇದರಿಂದ ಅವುಗಳನ್ನು ಮತ್ತೆ ಜೋಡಿಸಲು ಬಲು ಕಷ್ಟವಾಗುತ್ತದೆ. ಆದ್ದರಿಂದ ನಮ್ಮ ಹಿಂದೂ ಸಂಪ್ರದಾಯದಲ್ಲಿ ಈ ರೀತಿ ಮಾಡುತ್ತಾರೆ. ಹೌದು ಕೆಲವು ಆಚಾರಗಳು ವಿಚಾರಗಳು ನಮಗೆ ವಿಚಿತ್ರವಾಗಿ ಅನ್ನಿಸಿದರೂ ಅವುಗಳ ಹಿಂದಿನ ಹಿನ್ನೆಲೆ ಗೊತ್ತಿಲ್ಲದೆ ಇದ್ದರೂ ಕೂಡ ಇವುಗಳು ನಿಜಕ್ಕೂ ಸತ್ಯವಾದ ಸಂಗತಿಯಾಗಿದೆ. ಹಿರಿಯರು ಬೆಳೆಸಿರುವ ಈ ಕೆಲವು ಕಾರ್ಯಗಳು ಒಳ್ಳೆಯ ಉದ್ದೇಶವನ್ನು ಒಳಗೊಂಡಿರುತ್ತವೆ ಹೊರತು ಕೆಟ್ಟದ್ದಲ್ಲ ಅನ್ನುವ ಮಾತನ್ನು ನಾವು ಅರಿತು ನಡೆಯಬೇಕು. ಧನ್ಯವಾದಗಳು.