ಸ್ಮಶಾನ ಮಲ್ಲಿಗೆ ಇದರ ಕಷಾಯವನ್ನು ಸೇವನೆ ಮಾಡಿದರೆ ಈ ಜನ್ಮದಲ್ಲಿ ನಿಮಗೆ ಸಕ್ಕರೆ ಕಾಯಿಲೆ ಬರುವುದಿಲ್ಲ

ಆರೋಗ್ಯ

ನಮಸ್ತೆ ಪ್ರಿಯ ಓದುಗರೇ, ಈ ಹೂವಿನ ಗಿಡ ವಿಶೇಷವಾದ ಔಷಧೀಯ ಗುಣಗಳನ್ನು ಹೊಂದಿದೆ ಈ ಗಿಡದ ಎಲೆಗಳು ಹೂ ಬೇರು ಎಲ್ಲವೂ ಔಷಧೀಯೆ ಔಷಧ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಒಂದು ಅದ್ಭುತವಾದ ಗಿಡದ ಬಗ್ಗೆ ನಾವು ನಿಮಗೆ ತಿಳಿಸಿ ಕೊಡುತ್ತೇವೆ. ಆ ಗಿಡ ಯಾವುದು ಅಂದರೆ ಸ್ಮಶಾನ ಮಲ್ಲಿಗೆ, ನಿತ್ಯ ಮಲ್ಲಿಗೆ, ಸದಾ ಪುಷ್ಪಿ ಅಂತ ಇದನ್ನು ಕರೆಯುತ್ತಾರೆ. ಇಷ್ಟೊಂದು ಹೆಸರಿನಿಂದ ರಾರಾಜಿಸುವ ಈ ಗಿಡವನ್ನು ನಾವು ಎರಡು ವಿಧದಲ್ಲಿ ಕಾಣಬಹುದು. ಒಂದು ಕೆಂಪು ಬಣ್ಣದ ಹೂವಿನ ಗಿಡ ಮತ್ತು ಬಿಳಿ ಬಣ್ಣದ ಹೂವಿನ ಗಿಡ. ಎಲ್ಲ ಬಗೆಯ ಮಣ್ಣಿನ ಗುಣಧರ್ಮ ಮತ್ತು ಹವಾಮಾನಕ್ಕೆ ಹೊಂದಿಕೊಂಡು ಬೆಳೆಯುವ ಈ ಸಸ್ಯವು ನಿತ್ಯವೂ ಹೂವು ಬಿಡುವ ಸಸ್ಯ ಜಾತಿಯ ಪ್ರಬೇಧ ಆದ್ದರಿಂದಲೇ ಇದನ್ನು ನಿತ್ಯ ಪುಷ್ಪಿ ಅಂತ ಕರೆಯುತ್ತಾರೆ. ಈ ಹೂವಿನ ತವರೂರು ವೆಸ್ಟ್ ಇಂಡೀಸ್ ದ್ವೀಪ. ಮೂರು ಶತಮಾನಗಳ ಹಿಂದೆ ಇದನ್ನು ನಮ್ಮ ಭಾರತ ದೇಶಕ್ಕೆ ಪರಿಚಯ ಮಾಡಿಕೊಡಲಾಗಿತ್ತು ಈಗ ಇದು ನಮ್ಮ ಭಾರತ ದೇಶದಲ್ಲಿ ಪ್ರಖ್ಯಾತಿಯನ್ನು ಪಡೆದಿದೆ.

ಸ್ಮಶಾನ ಮಲ್ಲಿಗೆ ಎಂದು ಕರೆಯಿಸಿಕೊಳ್ಳುವ ಇದು ದೇವರ ಪೂಜೆಗೂ ಬಳಕೆಯಾಗಬಲ್ಲ ಪುಷ್ಪ. ಈ ಹೆಸರಿನ ಕಾರಣದಿಂದಲೇ ಮನೆಯಂಗಳದಲ್ಲಿ ನಿತ್ಯಪುಷ್ಪವನ್ನು ನೆಟ್ಟು ಬೆಳೆಸಬಾರದೆಂಬ ನಂಬಿಕೆಯಿದೆ. ಈ ಹೂವಿಗೆ ಕನ್ನಡ ಭಾಷೆಯಲ್ಲಿ- ಮಸಣ ಮಲ್ಲಿಗೆ, ಸದಾ ಪುಷ್ಪ, ಹೇನು ಹೂವು, ತಿಗಣೆ ಹೂವು, ದಂಡಕ್ಕಿ ಹೂವು ಎನ್ನುತ್ತಾರೆ. ಹಾಗಾದರೆ ಈ ಗಿಡದ ವಿಶೇಷತೆ ಏನು? ಇದನ್ನು ಯಾವ ರೋಗಗಳಿಗೆ ಬಳಕೆ ಮಾಡುತ್ತಾರೆ ಅಂತ ತಿಳಿಯೋಣ. ಇಂದಿನ ಲೇಖನದಲ್ಲಿ ನಾವು ನಿಮಗೆ ಬಿಳಿ ಸ್ಮಶಾನ ಮಲ್ಲಿಗೆ ಗಿಡದ ಲಾಭಗಳ ಬಗ್ಗೆ ವಿವರಣೆಯನ್ನು ನಿಮಗೆ ಪರಿಚಯ ಮಾಡಿ ಕೊಡುತ್ತೇವೆ ಬನ್ನಿ. ಈ ಗಿಡದ ಎಲೆಗಳನ್ನು ಕತ್ತರಿಸಿಕೊಂಡು ನೆರಳಿನಲ್ಲಿ ಒಣಗಿಸಬೇಕು. ಇದರ ಜೊತೆಗೆ ತಂಗಡಿ ಸೊಪ್ಪು ಮತ್ತು ಮದನಾಸಿನಿ ಸೊಪ್ಪು, ದಾಳಿಂಬೆ ಹಣ್ಣಿನ ಮೇಲಿನ ಭಾಗ ಮತ್ತು ನೇರಳೆ ಸೊಪ್ಪು ಇವುಗಳನ್ನು ಚೆನ್ನಾಗಿ ಒಣಗಿಸಿ ಇದರ ಪುಡಿ ಮಾಡಿ ನಿತ್ಯವೂ ಕಷಾಯವನ್ನು ಮಾಡಿ ಕುಡಿಯುತ್ತಾ ಬಂದರೆ ನಿಮ್ಮ ದೇಹದಲ್ಲಿ ಇರುವ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಎಂತಹ ಸಕ್ಕರೆಯ ಮಟ್ಟ 500 ಇರಲಿ 600 ಇರಲಿ ಈ ಮನೆಮದ್ದು ಅಥವಾ ಈ ಗಿಡದ ಎಲೆಗಳನ್ನು ನೀವು ತಂದು ಕಷಾಯವನ್ನು ಮಾಡಿ ಕುಡಿಯುತ್ತಾ ಬನ್ನಿ. ಇದರಿಂದ ನಿಮಗೆ ಸಕ್ಕರೆ ಕಾಯಿಲೆ ಅನ್ನುವುದು ಗುಣವಾಗುತ್ತದೆ. ಹಾಗೆಯೇ ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಸಕ್ಕರೆ ಕಾಯಿಲೆ ಅನ್ನುವುದು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಈ ಗಿಡದಲ್ಲಿ ಎರಡು ವಿಧಗಳಿವೆ ಬಿಳಿ ಮತ್ತು ಕೆಂಪು. ಸಕ್ಕರೆ ಕಾಯಿಲೆ ಇರುವವರು ಮಾತ್ರ ಈ ಬಿಳಿ ಸ್ಮಶಾನ ಮಲ್ಲಿಗೆ ಎಲೆಗಳನ್ನು ಮಾತ್ರ ಉಪಯೋಗಿಸಿ. ಕೆಂಪು ಬಣ್ಣದ ಹೂವಿನ ಗಿಡದ ಎಲೆಗಳನ್ನು ಬಳಕೆ ಮಾಡಬೇಡಿ. ಇದು ಸಕ್ಕರೆ ಕಾಯಿಲೆ ಇರುವವರಿಗೆ ಸೂಕ್ತವಲ್ಲ. ಆದ್ದರಿಂದ ಬಿಳಿ ಬಣ್ಣದ ಹೂವಿನ ಗಿಡ ಮಾತ್ರ ತೆಗೆದುಕೊಂಡು ಕಷಾಯವನ್ನು ಮಾಡಿ ಕುಡಿಯಿರಿ. ಇದು ಮಧುಮೇಹವನ್ನು ನಿಯಂತ್ರಣ ಮಾಡುವುದಲ್ಲದೆ ಮಹಿಳೆಯರಿಗೆ ಮುಖ್ಯವಾಗಿ ಕಾಡುವ ಋತು ಸಮಸ್ಯೆಗೆ ಇದು ಸೂಕ್ತ ಮನೆ ಮದ್ದು ಇನ್ನು ದೇಹದ ಅಧಿಕ ರಕ್ತದೊತ್ತಡ ಮೂಗು ಮತ್ತು ಬಾಯಿಯಲ್ಲಿ ರಕ್ತ ಸ್ರಾವ ಆಗುವುದು ಬಾಯಿಯಲ್ಲಿ ಇರುವ ಹುಣ್ಣು ಯಾವುದೇ ರೀತಿಯ ಹುಳುಗಳ ಕಡಿತ ಡಿಪ್ರೆಶನ್ ಆತಂಕ ಮತ್ತು ಗಾಯಗಳು ಹುಣ್ಣುಗಳು ಹೀಗೆ ಅನೇಕ ಆರೋಗ್ಯಕರ ಸಮಸ್ಯೆಗಳಿಗೆ ಇದು ಸೂಕ್ತ ಮನೆ ಮದ್ದು. ಈ ಗಿಡದ ಕಷಾಯವನ್ನು ಮಾಡಿ ಕುಡಿಯಬಹುದು ಗಾಯಗಳು ಕಜ್ಜಿ ತುರಿಕೆ ಆದರೆ ಈ ಗಿಡದ ಎಲೆಗಳನ್ನು ತಂದು ಜಜ್ಜಿ ಲೇಪನ ಮಾಡಿ ಹಚ್ಚಿಕೊಳ್ಳಬಹುದು. ಹೀಗೆ ಈ ಗಿಡದ ಲಾಭಗಳನ್ನು ಪಡೆಯಬಹುದು.

Leave a Reply

Your email address will not be published. Required fields are marked *