ಅರ್ಧ ತಲೆನೋವಿನ ಬಾಧೆಗೆ ಈ ಗಿಡಮೂಲಿಕೆಗಳು ಐದು ನಿಮಿಷದಲ್ಲಿ ಪರಿಹಾರ

ಆರೋಗ್ಯ

ನಮಸ್ತೆ ಪ್ರಿಯ ಓದುಗರೇ, ತಲೆನೋವು ಅನ್ನುವುದು ಈಗಿನ ಆಧುನಿಕ ಕಾಲದಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ ಅಲ್ವಾ. ತಲೆನೋವು ಯಾರಿಗೆ ಬರಲ್ಲ ಹೇಳಿ ಚಿಕ್ಕವರಿಂದ ದೊಡ್ಡವರವರೆಗೂ ಈ ತಲೆನೋವು ಅನ್ನುವುದು ಇತ್ತೀಚಿಗೆ ಹೆಚ್ಚಾಗಿ ಕಾಣಿಸಿಕೊಳ್ಳಲು ಶುರು ಆಗಿದೆ. ಈ ಸಮಸ್ಯೆ ಎದುರಾದಾಗ ಜನರು ವೈದ್ಯರ ಸಲಹೆಯನ್ನು ಪಡೆಯುವುದಿಲ್ಲ ಬದಲಾಗಿ ಅಂಗಡಿಯಲ್ಲಿ ಸಿಗುವ ಮಾತ್ರೆಯನ್ನು ತಂದು ಸೇವನೆ ಮಾಡುವ ಜನರ ಸಂಖ್ಯೆಯೇ ಅಧಿಕ ಹೊರತು ಮನೆಯಲ್ಲಿ ಈ ತಲೆನೋವಿಗೆ ಯಾವುದೇ ಮನೆಮದ್ದು ಮಾಡಿಕೊಂಡು ಬಳಕೆ ಮಾಡುವವರು ತುಂಬಾನೇ ಕಡಿಮೆ ಅಂತ ಹೇಳಬಹುದು.ನಾವು ತಕ್ಷಣವೇ ತಲೆನೋವು ಕಾಣಿಸಿಕೊಂಡಾಗ ನೆನಪಿಗೆ ಬರುವುದು ಮೆಡಿಕಲ್. ಅಲ್ಲಿಗೆ ಹೋಗಿ ಮಾತ್ರೆಗಳನ್ನು ತಂದು ತಿನ್ನುತ್ತೇವೆ. ಇದು ಕೊಂಚ ತಲೆನೋವಿನಿಂದ ವಿಶ್ರಾಂತಿಯನ್ನೂ ನೀಡಿದರು ಕೂಡ ಶಾಶ್ವತವಾದ ಪರಿಹಾರವನ್ನು ನೀಡುವುದಿಲ್ಲ ಜೊತೆಗೆ ಇದರ ಅಡ್ಡ ಪರಿಣಾಮಗಳೂ ಕೂಡ ಆರೋಗ್ಯದ ಮೇಲೆ ಬೀರುತ್ತದೆ. ಈ ತಲೆನೋವು ಸಮಸ್ಯೆ ಬಂದರೆ ಯಾಕಾದರೂ ಬಂತು ಅಂತ ಅನ್ನಿಸುತ್ತದೆ ಅಷ್ಟೊಂದು ಭಾರವಾಗಿ ನೋವು ಆಗುತ್ತದೆ.

ಈ ಆಫೀಸ್ ಹೋಗುವವರಿಗೇ, ಕಂಪ್ಯೂಟರ್ ಬಳಕೆ ಮಾಡುವವರಿಗೆ, ಈ ತಲೆನೋವು ಬಂದರೆ ಅವರು ಅಷ್ಟೊಂದು ಉಲ್ಲಸಭರಿತವಾಗಿ ಕೆಲಸವನ್ನು ಮಾಡುವುದಿಲ್ಲ ಜೊತೆಗೆ ಕೆಲಸದ ಮೇಲೆ ಗಮನವೇ ಇರುವುದಿಲ್ಲ. ಇನ್ನೂ ಚಿಕ್ಕ ಮಕ್ಕಳಿಗೆ ತಲೆನೋವು ಬಂದರೆ ಮಕ್ಕಳು ಚೆನ್ನಾಗಿ ಓದುವುದಿಲ್ಲ, ನಿದ್ರೆ ಮಾಡುವುದಿಲ್ಲ, ಊಟವನ್ನು ಮಾಡುವುದಿಲ್ಲ ಇದರಿಂದ ಮತ್ತಷ್ಟು ಅವರ ಆರೋಗ್ಯ ಹಾಳಾಗುತ್ತದೆ. ಇನ್ನೂ ಮಹಿಳೆಯರಿಗೆ ತಲೆನೋವು ಕಾಣಿಸಿಕೊಂಡರೆ ಅವರು ಅಂತೂ ತಲೆಯನ್ನು ಜಜ್ಜಿಕೊಳ್ಳಬೇಕು ಅಂತ ಅನ್ನಿಸುತ್ತದೆ ಅಷ್ಟೊಂದು ಪೀಡಿಸುತ್ತದೆ ಈ ತಲೆನೋವು. ಇನ್ನೂ ಕೆಲವರು ಯುವ ಜನತೆಯಲ್ಲಿ ಚಿಕ್ಕ ವಯಸ್ಸಿನಲ್ಲಿ ಈ ಮೈಗ್ರೇನ್ ಸಮಸ್ಯೆ ಕಾಣಿಸಿಕೊಂಡರೆ ಅದನ್ನು ತಡೆಯಲಾರದೆ ನೇಣು ಹಾಕಿಕೊಂಡು ಸತ್ತು ಹೋಗಿದ್ದಾರೆ. ಆದರೆ ಇದಕ್ಕೆ ಮಾತ್ರೆಗಳು ಮತ್ತು ಸಾವು ಪರಿಹಾರವೇ ನಿಜಕ್ಕೂ ಅಲ್ಲ. ಭಗವಂತನು ನಮಗೆ ನೈಸರ್ಗಿಕವಾಗಿ ಕೆಲವೊಂದು ಗಿಡಮೂಲಿಕೆಗಳನ್ನು ನೀಡಿದ್ದಾನೆ. ಹಾಗಾದರೆ ಬನ್ನಿ ಅವುಗಳ ಬಗ್ಗೆ ನಾವು ತಿಳಿಯೋಣ.

ಮೊದಲಿಗೆ ಕುಕ್ಕೆ ಬಳ್ಳಿ ಇದನ್ನು ನೀವು ಬೇರು ತೊಗಟೆ ಸಮೇತವಾಗಿ ತೆಗೆದುಕೊಳ್ಳಬೇಕು. ಎರಡನೆಯದು ಬಾಗೆ ಮರ. ಇದನ್ನು ಸಾಮಾನ್ಯವಾಗಿ ಮೇಕೆಗಳು ಹಸುಗಳು ಎಲ್ಲ ಪ್ರಾಣಿಗಳೂ ತಿನ್ನುತ್ತವೆ. ಇದು ದೊಡ್ಡದಾದ ಮರವಾಗಿ ಬೆಳೆಯುತ್ತದೆ ಈ ಮರದ ಚಕ್ಕೆಯನ್ನು ತೆಗೆದುಕೊಳ್ಳಬೇಕು. ಮೂರನೆಯದು ಬಿಲ್ವ ಪತ್ರೆ ಮರದ ಹಣ್ಣು. ಇದನ್ನು ಜಜ್ಜಿದರೆ ಒಳಗಡೆ ಗೊಜ್ಜು ಅಂತ ದೊರೆಯುತ್ತದೆ ಅದನ್ನು ನೀವು ಬಳಕೆ ಮಾಡಬಹುದು ಇದು ತಲೆನೋವಿಗೆ ರಾಮಬಾಣ ಅಂತ ಹೇಳಿದರೆ ತಪ್ಪಾಗಲಾರದು. ಇನ್ನೂ ನೆಲ ನೆಲ್ಲಿ. ಈ ಗಿಡದ ಕೆಳಗಡೆ ಚಿಕ್ಕದಾದ ರಾಗಿ ಗಾತ್ರದ ಕಾಯಿಗಳು ಸಿಗುತ್ತವೆ ಅದನ್ನು ತೆಗೆದುಕೊಳ್ಳಿ. ಇನ್ನೂ ಐದನೆಯದು ಕಾಡು ಬೆಳ್ಳುಳ್ಳಿ. ಈ ಎರಡು ಪದಾರ್ಥಗಳು ಸರ್ವ ರೋಗಗಳಿಗೆ ಮನೆಮದ್ದು. ಈ ಗಿಡ ಮೂಲಿಕೆಗಳನ್ನೂ ಸಮ ಪ್ರಮಾಣದಲ್ಲಿ ತಂದು ಅದರಲ್ಲಿ ಸಾಸಿವೆ ಎಣ್ಣೆ, ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ ಈ ಮೂರು ಎಣ್ಣೆಯಲ್ಲಿ ಯಾವುದಾದರೂ ಒಂದು ಎಣ್ಣೆಯನ್ನು ಹಾಕಿ 5-6 ಗಂಟೆ ಕಾಯಿಸಬೇಕು. ನಂತರ ಸ್ವಲ್ಪ ಅಂಗೈಯಲ್ಲಿ ಹಾಕಿಕೊಂಡು ಉಜ್ಜಿ ಅದರ ವಾಸನೆಯನ್ನು ನೋಡಿದರೆ ಸಾಕು ತಲೆನೋವು ಕಡಿಮೆ ಆಗುತ್ತದೆ ಅಥವಾ ಹಣೆಯ ಮೇಲೆ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಹಚ್ಚಿದರೆ ತಲೆನೋವು ಕ್ರಮೇಣ ಕಡಿಮೆ ಆಗುತ್ತದೆ. ಇದನ್ನು ಐದು ದಿನಗಳ ಕಾಲ ಒಂದು ವಾರ ಮಾಡಿದರೆ ತಲೆನೋವಿನ ಸಮಸ್ಯೆ ನಿವಾರಣೆ ಆಗುತ್ತದೆ. ಇದರ ಜೊತೆಗೆ ಬಿಸಿ ನೀರು ಕುಡಿಯುತ್ತಾ ಬನ್ನಿ ಜೊತೆಗೆ ಆಹಾರ ಪದ್ಧತಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಿ.

Leave a Reply

Your email address will not be published. Required fields are marked *