ಹಾಲಿನ ಜೊತೆಗೆ ಈ ಆಹಾರ ಪದಾರ್ಥಗಳನ್ನು ಎಂದಿಗೂ ಕೂಡ ಸೇವನೆ ಮಾಡಬೇಡಿ

ಆರೋಗ್ಯ

ನಮಸ್ತೆ ಪ್ರಿಯ ಓದುಗರೇ, ಹಾಲು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಷ್ಟೇ ಅಲ್ಲದೆ ಇದು ನಮ್ಮ ದೇಹದ ರಚನೆ ಮತ್ತು ದೇಹಕ್ಕೆ ಮುಖ್ಯವಾಗಿ ಬೇಕಾಗುವ ಮತ್ತು ಅಗತ್ಯವಾದ ಕ್ಯಾಲ್ಸಿಯಂ ಅನ್ನು ಸಮೃದ್ಧವಾಗಿ ಒದಗಿಸುತ್ತದೆ.ಮತ್ತು ನಮ್ಮ ದೇಹವನ್ನು ಆರೈಕೆ ಮಾಡುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮನುಷ್ಯನ ದೇಹಕ್ಕೆ ನಿತ್ಯವೂ ಹಲವು ಬಗೆಯ ಪೌಷ್ಟಿಕಾಂಶಗಳು ಜೀವಸತ್ವಗಳು ಖನಿಜಗಳು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಬೇಕೇ ಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ನಾವು ಹಾಲಿನಲ್ಲಿ ಕಾಣಬಹುದು. ಹಾಲಿನಲ್ಲಿ ಕ್ಯಾಲ್ಸಿಯಂ, ಐರನ್, ವಿಟಮಿನ್, ಪೊಟ್ಯಾಶಿಯಂ, ಮಿನರಲ್ಸ್ ಎಲ್ಲವೂ ಸಮೃದ್ಧವಾಗಿ ಒಳಗೊಂಡಿರುತ್ತದೆ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಡೈರಿ ಉತ್ಪನ್ನಗಳು ಆರೋಗ್ಯಕ್ಕೆ ಸಹಕಾರಿ. ಹಾಲನ್ನು ನಾವು ಹಾಗೆಯೇ ಸೇವಿಸಿದರು ಕೂಡ ತುಂಬಾನೇ ಒಳ್ಳೆಯದು. ಆದರೆ ಇಂದಿನ ಲೇಖನದಲ್ಲಿ ನಾವು ಒಂದು ಗೊತ್ತಿಲ್ಲದ ಮಾಹಿತಿಯನ್ನು ನಿಮಗೆ ಪರಿಚಯಿಸಿ ಕೊಡುತ್ತೇವೆ ಬನ್ನಿ. ಅದುವೇ ಹಾಲಿನಲ್ಲಿ ಯಾವ ಆಹಾರ ಪದಾರ್ಥಗಳನ್ನು ಸೇರಿಸಿ ಸೇವನೆ ಮಾಡಬಾರದು ಅಂತ. ಹಾಗಾಗಿ ಗೆಳೆಯರೇ ಯಾವುದೇ ಕಾರಣಕ್ಕೂ ತಪ್ಪದೇ ನಮ್ಮ ಈ ಆರೋಗ್ಯಕರ ಲೇಖನವನ್ನು ಓದುವುದನ್ನು ಮರೆಯಬೇಡಿ.

ನಿತ್ಯವೂ ಹಾಲನ್ನು ಸೇವಿಸುವುದು ತುಂಬಾನೇ ಅವಶ್ಯಕವಾಗಿದೆ. ಆರೋಗ್ಯ ಮತ್ತು ಫಿಟ್ನೆಸ್ ದೃಷ್ಠಿ ಇಂದ ನೋಡುವುದಾದರೆ ಹಾಲು ಒಂದು ಅದ್ಭುತವಾದ ಉತ್ಪನ್ನಗಳಲ್ಲಿ ಒಂದಾಗಿದೆ. ಏಕೆಂದರೆ ಇದರಲ್ಲಿ ಅಷ್ಟೊಂದು ಅಂಶಗಳು ಅಡಗಿರುತ್ತದೆ. ಆದರೆ ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ಸಂಗತಿ ಏನೆಂದರೆ ಪ್ರತಿಯೊಂದರಲ್ಲೂ ಲಾಭವಿದ್ದರೆ ಅದರ ಜೊತೆಗೆ ಹಾನಿಯೂ ಕೂಡ ಇರುತ್ತದೆ ಅನ್ನುವುದನ್ನು ಮರೆಯಬಾರದು. ಏಕೆಂದ್ರೆ ಕೆಲವು ಆಹಾರಗಳು ತದ್ವಿರುದ್ದವಾಗಿರುತ್ತದೆ. ಹೀಗಾಗಿ ಕೆಲವು ಆಹಾರಗಳನ್ನು ಸೇವಿಸಿದ ನಂತರ ಮುಖ್ಯವಾದ ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬಾರದು. ಬನ್ನಿ ಹಾಗಾದರೆ ಹಾಲಿನ ಜೊತೆಗೆ ಅಥವಾ ಅದರಲ್ಲಿ ಯಾವೆಲ್ಲ ಆಹಾರವನ್ನು ಬೆರೆಸಿ ತಿನ್ನಬಾರದು ಅಂತ ಹೇಳುವುದಾದರೆ ಮೊದಲಿಗೆ ಹಾಲಿನ ಜೊತೆಗೆ ಹುಳಿ ಪದಾರ್ಥಗಳನ್ನು ತಿನ್ನಬಾರದು. ಉದಾಹರಣೆಗೆ ನಿಂಬೆ ಹಣ್ಣು, ಉಪ್ಪಿನ ಕಾಯಿ, ಕಿತ್ತಳೆ ಹಣ್ಣು. ಏಕೆಂದರೆ ಹುಳಿ ಅಂಶ ಇರುವ ಪದಾರ್ಥಗಳಲ್ಲಿ ಸಿಟ್ರಿಕ್ ಅಂಶ ಅಧಿಕವಾಗಿ ಇರುತ್ತದೆ. ಹೀಗಾಗಿ ಹಾಲಿನ ಜೊತೆಗೆ ಹುಳಿ ಪದಾರ್ಥಗಳನ್ನು ತಿನ್ನುವುದರಿಂದ ಹೊಟ್ಟೆ ನೋವು ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇದನ್ನು ತ್ಯಜಿಸುವುದು ಉತ್ತಮ. ಇನ್ನೂ ಎರಡನೆಯದು ಬಿಸಿಯಾದ ಅನ್ನದಲ್ಲಿ ಹಾಲನ್ನು ಮತ್ತು ಮೊಸರನ್ನು ಬೆರೆಸಿ ಊಟವನ್ನು ಮಾಡಬೇಡಿ. ಏಕೆಂದರೆ ಇದು ಜಾಂಡೀಸ್ ಎಂಬ ರೋಗವನ್ನು ತಂದೊಡ್ಡುವ ಅವಕಾಶಗಳು ಅಧಿಕವಾಗಿರುತ್ತದೆ. ಚಿಕ್ಕ ಮಕ್ಕಳಿಗೆ ದೊಡ್ಡವರು ಈ ರೀತಿಯಾಗಿ ಮಾಡಿ ಊಟವನ್ನು ಮಾಡಿಸುತ್ತಾರೆ. ಆದ್ದರಿಂದ ಚಿಕ್ಕ ಮಕ್ಕಳು ಜಾಂಡೀಸ್ ಎಂಬ ರೋಗಕ್ಕೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ.

ಆದ್ದರಿಂದ ಹೀಗೆ ಮಾಡುವುದನ್ನು ನಿಲ್ಲಿಸಿ. ಇನ್ನೂ ನಿಮಗೆ ಮಲಬದ್ಧತೆ ಸಮಸ್ಯೆ ಅಥವಾ ತಿಂದ ಆಹಾರವು ಸರಿಯಾಗಿ ಜೀರ್ಣವಾಗದೆ ಇದ್ದರೆ ಬೆಳಿಗ್ಗೆ ಎದ್ದು ತಕ್ಷಣ ಬಿಸಿ ಹಾಲಿನ ಜೊತೆಗೆ ಬ್ರೆಡ್ ಸೇವನೆ ಮಾಡುವುದನ್ನು ನಿಲ್ಲಿಸಿ. ಏಕೆಂದರೆ ಇದು ತುಂಬಾನೇ ಸಮಯವನ್ನು ತೆಗೆದುಕೊಳ್ಳುತ್ತದೆ. ಮುಖ್ಯವಾಗಿ ಈ ಅಭ್ಯಾಸವು ಸಾಮಾನ್ಯವಾಗಿ ಎಲ್ಲರೂ ಹೊಂದಿರುತ್ತಾರೆ. ಆದರೆ ಈ ಸಮಸ್ಯೆಗಳು ಇರುವವರು ಹೀಗೆ ಮಾಡುವುದು ಸೂಕ್ತವಲ್ಲ. ಇನ್ನೂ ಜಿಮ್ ಗೆ ಹೋಗುವವರು ಹಾಲಿನ ಜೊತೆಗೆ ಪ್ರೊಟೀನ್ ಪೌಡರ್ ಅನ್ನು ಹಾಕಿಕೊಂಡು ಕುಡಿಯುತ್ತಾರೆ. ಆದರೆ ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ ಹಾಲಿನ ಬದಲಾಗಿ ನೀರಿನೊಂದಿಗೆ ಪ್ರೊಟೀನ್ ಪೌಡರ್ ಅನ್ನು ಬೆರೆಸಿ ಕುಡಿಯಿರಿ. ಇನ್ನೂ ರಾತ್ರಿ ಸಮಯ ಹಾಲು ಸೇವನೆ ಮಾಡುವುದನ್ನು ತಪ್ಪಿಸಿ. ಏಕೆಂದರೆ ಇದು ಜೀರ್ಣವಾಗಲು ತುಂಬಾನೇ ಸಮಯವನ್ನು ತೆಗೆದುಕೊಳ್ಳುತ್ತದೆ.

ಮತ್ತು ಮಸಾಲೆ ಪದಾರ್ಥಗಳನ್ನು, ಮೆಣಸಿನ ಕಾಳನ್ನು ಹಾಲು ಕುಡಿದ ನಂತರ ಸೇವಿಸಬೇಡಿ. ಇದರಿಂದ ಅಸಿಡಿಟಿ ಮತ್ತು ಜೀರ್ಣಾಂಗವ್ಯೂಹಕ್ಕೆ ಸಂಭಂದ ಪಟ್ಟ ಸಮಸ್ಯೆಗಳು ಬರಬಹುದು. ಇನ್ನೂ ಮೀನು ಸೇವಿಸಿದ ನಂತರ ಹಾಲನ್ನು ಕುಡಿಯಬೇಡಿ. ಇದು ಉತ್ತಮವಾದ ಕಾಂಬಿನೇಶನ್ ಅಲ್ಲ. ಏಕೆಂದರೆ ಹೀಗೆ ಮಾಡುವುದರಿಂದ ಇದು ನಿಮ್ಮ ತ್ವಚೆಯ ಮೇಲೆ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಅಂತ ವೈದ್ಯರು ಹೇಳುತ್ತಾರೆ. ಆದ್ದರಿಂದ ನಿತ್ಯವೂ ಈ ಬಗೆಯ ತಪ್ಪುಗಳನ್ನು ಮಾಡುತ್ತಾ ಇರುತ್ತೇವೆ. ಆದಷ್ಟು ಇಂಥಹ ವಿಷಯಗಳನ್ನು ತಿಳಿದುಕೊಂಡು ಅವುಗಳ ಪಾಲನೆ ಮಾಡಬೇಕು. ಶುಭದಿನ.

Leave a Reply

Your email address will not be published. Required fields are marked *