ಭಾರತದಲ್ಲಿ ಐಎಎಸ್ ಅಧಿಕಾರಿಗಳಿಗೆ ಸಿಗುವ ಸಂಬಳ ಎಷ್ಟು? ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯಗಳು ಏನು ಗೊತ್ತಾ

ಇತರೆ

ನಮಸ್ತೆ ಪ್ರಿಯ ಓದುಗರೇ, ದೇಶದ ಅತೀ ದೊಡ್ಡ ಮತ್ತು ಗೌರವಾನ್ವಿತ ಹುದ್ದೆಗಳು ಯಾವುದು ನಿಮಗೆ ಗೊತ್ತಾ. ಅದುವೇ ಭಾರತದಲ್ಲಿ ಅಖಿಲ ಭಾರತ ಸೇವೆಗಳಾದ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್ (ಐಎಎಸ್) ಮತ್ತು ಇಂಡಿಯನ್‌ ಪೊಲೀಸ್ ಸರ್ವೀಸ್‌(ಐಪಿಎಸ್) ದೇಶದ ದೊಡ್ಡ ಮತ್ತು ಗೌರವಾನ್ವಿತ ಹುದ್ದೆಗಳಾಗಿವೆ. ಈಗಿನ ಯುವಜನತೆಗೆ ಪ್ರೈವೇಟ್ ಕಂಪನಿಗಳಲ್ಲಿ ಕೆಲಸ ಮಾಡುವುದಕ್ಕಿಂತ ಸಿವಿಲ್ ಸರ್ವಂಟ್ ಆಗುವ ಆಸೆ ಮತ್ತು ಕನಸುಗಳನ್ನು ಹೆಚ್ಚಾಗಿ ಹೊಂದಿರುತ್ತಾರೆ. ಆದರೆ ಇದಕ್ಕೆ ಕೇವಲ ಕನಸುಗಳನ್ನು ಹೊಂದಿದರೆ ಸಾಕಾಗುವುದಿಲ್ಲ ಮಿತ್ರರೇ ಇದಕ್ಕೆ ತಕ್ಕ ಪರಿಶ್ರಮ ನಿದ್ದೆ ಇಲ್ಲದ ರಾತ್ರಿಗಳು ಬೇಕಾಗುತ್ತವೆ. ಈ ಹುದ್ದೆಯನ್ನು ಕೆಲವರು ಸಮಾಜದ ಸೇವೆಯನ್ನು ಮಾಡಬೇಕು ಅಂತ ಇಷ್ಟ ಪಟ್ಟು ದುಡಿಯುತ್ತಾರೆ ಇನ್ನೂ ಕೆಲವರು ಐಷಾರಾಮಿ ಜೀವನ ಮತ್ತು ಸರ್ಕಾರದಿಂದ ಎಲ್ಲ ಸೌಲಭ್ಯ ದೊರೆಯುತ್ತದೆ ಅನ್ನುವ ದೃಷ್ಟಿ ಕೋನದಿಂದ ಈ ಹುದ್ದೆಯ ಆಕ್ಷೇಪವನ್ನು ಮಾಡುತ್ತಾರೆ. ಉದ್ದೇಶ ಯಾವುದೇ ಆಗಿರಲಿ ಆದರೆ ಈ ಒಂದು ಹುದ್ದೆಯೂ ತುಂಬಾನೇ ಶ್ರೇಷ್ಠ ಮತ್ತು ಉನ್ನತ ಮಟ್ಟದ ಹುದ್ದೆ ಅಂತ ಹೇಳಿದರೆ ತಪ್ಪಾಗಲಾರದು. ಪ್ರತಿ ವರ್ಷವೂ ಕೆಂದ್ರಲೋಕ ಸೇವಾ ಆಯೋಗವು ಯುಪಿಎಸ್‌ಸಿ ಐಎಎಸ್‌, ಐಪಿಎಸ್‌, ಐಎಫ್‌ಎಸ್ ಹುದ್ದೆಗಳಿಗೆ ನೋಟಿಫಿಕೇಶನ್ ಪ್ರಕಟಿಸುತ್ತದೆ.

ಅದರಂತೆಯೇ ಪರೀಕ್ಷೆಯನ್ನು ನಡೆಸಲಾಗುತ್ತಾರೆ. ಈ ಪರೀಕ್ಷೆಯನ್ನು ಪ್ರತಿ ವರ್ಷವೂ ನಡೆಸುತ್ತಾ ಬಂದಿದ್ದು ಲಕ್ಷಾಂತರ ಜನರು ಈ ಪರೀಕ್ಷೆಯನ್ನು ಬರೆಯುತ್ತಾರೆ. ಆದರೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವು ದು ಕೇವಲ ಬೆರಳಣಿಕೆಯಷ್ಟು ಮಾತ್ರ. ಏಕೆಂದರೆ ನಮ್ಮ ಭಾರತೀಯ ಆಡಳಿತದ ಪರೀಕ್ಷೆಗಳು ಅಷ್ಟೊಂದು ಸುಲಭವಲ್ಲ. ತುಂಬಾನೇ ಕ್ಲಿಷ್ಟಕರವಾದ ತುಂಬಾನೇ ಕಠಿಣವಾದ ಪರೀಕ್ಷೆ ಇದಾಗಿರುತ್ತದೆ. ಈ ಪರೀಕ್ಷೆಯನ್ನು ಪಾಸಾಗಲು ಕೆಲವರು ಕೋಚಿಂಗ್ ಸೆಂಟರ್ ಗೆ ಹೋಗಿ ಅಭ್ಯಾಸವನ್ನು ಮಾಡುತ್ತಾರೆ. ವರ್ಷಾನುಗಟ್ಟಲೆ ಸಿದ್ಧತೆಯನ್ನು ಮಾಡಿಕೊಂಡು ಈ ಪರೀಕ್ಷೆಯನ್ನು ಬರೆಯಲು ಸಿದ್ಧರಾಗುತ್ತಾರೆ. ನಿಮಗೆ ಗೊತ್ತೇ ಈ ಐಎಎಸ್‌, ಐಪಿಎಸ್‌, ಐಎಫ್‌ಎಸ್ ಹುದ್ದೆಗಳಿಗೆ ನೀವು ಸೇರಿಕೊಂಡರೆ ನಿಮ್ಮ ಮಾಸಿಕ ವೇತನ ಎಷ್ಟು? ಮತ್ತು ಏನೆಲ್ಲ ಸಕಲ ಸೌಕರ್ಯಗಳು ಇರುತ್ತದೆ ಅಂತ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ, ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸಿ ಕೊಡುತ್ತೇವೆ. ಭಾರತದ ಸಂವಿಧಾನದ ಮೂಲಕ ಈ ಪರೀಕ್ಷೆಯನ್ನು ನೀವು ಉತ್ತೀರ್ಣರಾದರೆ ಅಂತಹ ಗೌರವಾನ್ವಿತ ಹುದ್ದೆಯ ಅಧಿಕಾರವನ್ನು ನೀಡಲಾಗುತ್ತದೆ.

ಮತ್ತು ಐಎಎಸ್ ಆಫೀಸರ್ ಗೆ ಎಂಟ್ರಿ ಲೆವೆಲ್‌ನಲ್ಲಿ ಬೇಸಿಕ್ ಸ್ಯಾಲರಿ ರೂ.56,100 ನೀಡಲಾಗುತ್ತದೆ. ರೂ.16,500 ಗ್ರೇಡ್‌ ಪೇ ನೀಡಲಾಗುತ್ತದೆ. ಇನ್ನೂ ನೀವು ಹೆಚ್ಚಿನ ಕಾಲಾವಧಿಯವರೆಗೆ ನೀವು ಸೇವೆ ಸಲ್ಲಿಸಿದ್ದರೆ ಅಂದರೆ ಸೀನಿಯರ್ ಐಎಎಸ್ ಅಧಿಕಾರಿಯಾಗಿ ಅವರ ಮಾಸಿಕ ವೇತನವೂ ರೂ.2,70,000 ಪಡೆಯಬಹುದು. ಅಷ್ಟೇ ಅಲ್ಲದೆ ಈ ಮಾಸಿಕ ವೇತನದ ಜೊತೆಗೆ ಇನ್ನಿತರ ಭತ್ಯೆಯನ್ನು ನೀಡಲಾಗುವುದು. ಅವುಗಳೆಂದರೆ, ತುಟ್ಟಿ ಭತ್ಯೆ, ಪ್ರಯಾಣ ಭತ್ಯೆ, ಮನೆ ಬಾಡಿಗೆ ಭತ್ಯೆ, ಮೆಡಿಕಲ್ ಭತ್ಯೆ
ಮತ್ತು ಸಾರಿಗೆ ಭತ್ಯೆ. ಇದರ ಜೊತೆಗೆ ಹಲವಾರು ಸಕಲ ಸೌಕರ್ಯಗಳಾದ ಸರ್ಕಾರಿ ಬಂಗಲೆ, ಸಿಬ್ಬಂದಿ ವರ್ಗ, ಕಾರು ಇನ್ನಿತರ ಭದ್ರತಾ ರಕ್ಷಣೆಯ ಸೌಲಭ್ಯಗಳನ್ನು ಸರ್ಕಾರವು ಐಎಎಸ್ ಅಧಿಕಾರಿಗೆ ನೀಡುತ್ತದೆ. ಮತ್ತು ಮೂವರು ಹೋಮ್ ಗಾರ್ಡ್ ಮತ್ತು ಇಬ್ಬರು ಅಂಗರಕ್ಷಕರನ್ನು ನೇಮಿಸಿರುತ್ತಾರೆ. ಮತ್ತು ಇವರ ಖರ್ಚು,ವೆಚ್ಚ,ಕಾರು,ಚಾಲಕ,ವಿದ್ಯುತ್ ಬಿಲ್,ನೀರಿನ ಬಿಲ್ ಹೀಗೆ ಎಲ್ಲಾ ರೀತಿಯ ಖರ್ಚು ವೆಚ್ಚಗಳನ್ನ ಸರ್ಕಾರವೇ ಭರಿಸುತ್ತದೆ.

ಐಎಎಸ್ ಅಧಿಕಾರಿಗಳು ಜಿಲ್ಲೆಯ ಅಧಿಕಾರಿ ಆದರೆ ಅವರು ಜಿಲ್ಲೆಯ ಸುಪ್ರೀಂ ಆಗಿ ತಮ್ಮ ಅಧಿಕಾರವನ್ನು ಚಲಾಯಿಸಬಹುದು. ಈ ಹುದ್ದೆಯಿಂದ ಇಷ್ಟೊಂದು ಲಾಭಗಳನ್ನು ನೀವು ಪಡೆಯಬಹುದು. ಕೆಲವರು ಈ ಹುದ್ದೆಯನ್ನು ಐಷಾರಾಮಿ ಜೀವನ ಕಳೆಯುವುದಕ್ಕಾಗಿ ಸೇರಿಕೊಂಡಿರುತ್ತಾರೆ. ಆದರೆ ಇನ್ನುಳಿದ ಜನರು ಸಮಾಜದ ಸೇವೆಗಾಗಿ ದೇಶದ ಸೇವೆಯ ಮನೋಭಾವನೆ ವ್ಯಕ್ತಿತ್ವವನ್ನು ಇಟ್ಟುಕೊಂಡು ಈ ಪರೀಕ್ಷೆಯನ್ನು ಪಾಸು ಮಾಡಿಕೊಂಡು ದಿಟ್ಟತನದಿಂದ ಈ ಹುದ್ದೆಯನ್ನು ಪಡೆದುಕೊಳ್ಳುತ್ತಾರೆ. ಈ ಹುದ್ದೆಯಲ್ಲಿ ಯಾವುದೇ ಲಂಚವಿಲ್ಲ ಮೋಸವಿಲ್ಲ. ನೀವು ಎಷ್ಟು ಕಷ್ಟ ಪಡುತ್ತೀರಿ ಅಷ್ಟು ನಿಮಗೆ ಶ್ರೇಯಸ್ಸು ಯಶಸ್ಸು ಸಿಗುತ್ತದೆ. ನೋಡಿದ್ರಲಾ ಐಎಎಸ್ ಅಧಿಕಾರಿಯ ಸಂಪೂರ್ಣ ವೇತನ ಮತ್ತು ಸೌಲಭ್ಯಗಳ ಮಾಹಿತಿಯನ್ನು. ಹಾಗಾದರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *