ದಿನ ಒಂದು ತುಂಡು ಬೆಲ್ಲ ಸೇವಿಸುತ್ತಾ ಬಂದರೆ ಹಣ ಮತ್ತು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಭಾರೀ ಪ್ರಯೋಜನಗಳಿವೆ

ಆರೋಗ್ಯ

ನಮಸ್ತೆ ಪ್ರಿಯ ಓದುಗರೇ, ಸಕ್ಕರೆಗಿಂತ ಬೆಲ್ಲವನ್ನು ನಾವು ಹೆಚ್ಚಾಗಿ ಇಷ್ಟ ಪಡುವುದಿಲ್ಲ. ಬೆಲ್ಲವನ್ನು ತಿನ್ನುವುದೆಂದರೆ ಮೂಗು ಮುರಿಯುತ್ತೇವೆ ಅಲ್ವಾ ಮಿತ್ರರೇ. ಆದರೆ ಬೆಲ್ಲವು ಔಷಧಗಳ ಗಣಿ ಅಂತ ಹೇಳಿದರೆ ತಪ್ಪಾಗಲಾರದು. ಬೆಲ್ಲವನ್ನು ಕಬ್ಬಿನದ ಹಾಲಿನಿಂದ ಮಾಡಿರುತ್ತಾರೆ ಹಾಗೆಯೇ ಸಕ್ಕರೆಯನ್ನು ಕೂಡ ಕಬ್ಬಿನದ ಹಾಲಿನಿಂದ ತಯಾರಿಸುತ್ತಾರೆ. ಆದರೆ ಸಕ್ಕರೆಗಿಂತ ಬೆಲ್ಲವು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಅದರಲ್ಲೂ ನೀವು ಸಕ್ಕರೆಯನ್ನು ಕಡಿಮೆ ಬಳಕೆ ಮಾಡಬೇಕು. ಬೆಲ್ಲದಲ್ಲಿ ಸಕ್ಕರೆಗಿಂತ ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯಗಳು ಉಳಿದಿರುತ್ತದೆ. ಇಂದಿನ ಲೇಖನದಲ್ಲಿ ನಾವು ನಿಮಗೆ ಸಕ್ಕರೆಗಿಂತ ಬೆಲ್ಲವನ್ನು ಯಾಕೆ ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ ಯಾವ ರೀತಿಯಲ್ಲಿ ಆರೋಗ್ಯದ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ ಅಂತ ತಿಳಿಸಿ ಕೊಡುತ್ತೇವೆ. ಈ ಆಯುರ್ವೇದ ಶಾಸ್ತ್ರವು ಬೆಲ್ಲಕ್ಕೆ ತುಂಬಾನೇ ಪ್ರಾಶಸ್ತ್ಯವನ್ನು ನೀಡುತ್ತದೆ. ಆದರೆ ನಾವೆಲ್ಲರೂ ಸಾಮಾನ್ಯವಾಗಿ ಸಿಹಿ ಪದಾರ್ಥಗಳನ್ನು ಮಾಡಲು ಬೆಲ್ಲದ ಬದಲಾಗಿ ಸಕ್ಕರೆಯನ್ನು ಬಳಸುತ್ತೇವೆ. ಸಕ್ಕರೆಯು ನಮ್ಮ ದೇಹಕ್ಕೆ ತುಂಬಾನೇ ಹಾನಿಕಾರಕ. ಅದರಲ್ಲೂ ಬಿಳಿ ಸಕ್ಕರೆ ಅಂತೂ ತುಂಬಾನೇ ಡೇಂಜರ್ ಅಂತ ಹೇಳಬಹುದು. ಸಕ್ಕರೆ ಇಷ್ಟೊಂದು ಹಾನಿಕಾರಕ ಅಂತ ಗೊತ್ತಿದ್ದರೂ ಇದಕ್ಕೆ ಪರ್ಯಾವವನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಿಲ್ಲ.

ಬೆಲ್ಲವನ್ನು ಮೊದಲಿನ ಕಾಲದಿಂದಲೂ ಬಳಕೆ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಬೆಲ್ಲದಿಂದಲೆ ಹಲವಾರು ಬಗೆಯ ತಿಂಡಿ ತಿನಿಸುಗಳನ್ನು ಮಾಡುತ್ತಿದ್ದರು. ಆದರೆ ಈಗಿನ ಆಧುನಿಕ ಕಾಲದಲ್ಲಿ ಬೆಲ್ಲವನ್ನು ಮರೆತು ಬಿಟ್ಟಿದ್ದಾರೆ. ಇದನ್ನು ಹೆಚ್ಚಾಗಿ ಬಳಸುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ ಬದಲಾಗಿ ಸಕ್ಕರೆಯನ್ನು ಹೆಚ್ಚಾಗಿ ಬಳಕೆ ಮಾಡುವ ಹವ್ಯಾಸವನ್ನು ರೂಢಿ ಮಾಡಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ದೊರೆಯುವ ಬೆಳ್ಳಗೆ ಇರುವ ಬೆಲ್ಲ ತುಂಬಾನೇ ವಿಷಕಾರಿ, ಹಾನಿದಾಯಕ ಮತ್ತು ಅಪಾಯಕಾರಿ ಕೂಡ ಆಗಿರುತ್ತದೆ.ಇಂಥಹ ಬೆಲ್ಲವನ್ನು ಸೇವನೆ ಮಾಡಬಾರದು. ಹಾಗಾದರೆ ಯಾವ ಬೆಲ್ಲ ಶ್ರೇಷ್ಠವಾದದ್ದು ಅಂತ ಹೇಳುವುದಾದರೆ ಕಪ್ಪಾಗಿರುವ ಅಥವಾ ರಾಗಿ ಬಣ್ಣದಲ್ಲಿ ಇರುವ ಬೆಲ್ಲ ತಿನ್ನಲು ಮತ್ತು ಆರೋಗ್ಯಕ್ಕೆ ಸೂಕ್ತ. ನಿತ್ಯವೂ ಬೆಲ್ಲವನ್ನು ಸೇವಿಸುವುದು ತುಂಬಾನೇ ಒಳ್ಳೆಯದು. ಇದರಲ್ಲಿ ಕಬ್ಬಿಣ ಅಂಶ ಅಧಿಕವಾಗಿ ಸಮೃದ್ಧವಾಗಿ ಇರುತ್ತದೆ. ಇದು ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ ಆಗಿದೆ. ಮತ್ತು ಬೆಲ್ಲವನ್ನು ನಿತ್ಯವೂ ಸೇವಿಸುತ್ತಾ ಬಂದರೆ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವು ಹೆಚ್ಚುತ್ತಾ ಹೋಗುತ್ತದೆ. ದೇಹದಲ್ಲಿ ಉತ್ಪತ್ತಿ ಆಗುವ ಕಲ್ಮಶವನ್ನು ಹೊರಗೆ ತೆಗೆದು ಹಾಕುತ್ತದೆ. ಇನ್ನೂ ತಲೆನೋವಿನಿಂದ ಭಾಧೆ ಪಡುತ್ತಿದ್ದರೆ ಸ್ವಲ್ಪ ಬೆಲ್ಲವನ್ನು ಸೇವಿಸಿದರೆ ತಲೆನೋವು ಮಾಯವಾಗುತ್ತದೆ.

ಮೈಗ್ರೇನ್ ಸಮಸ್ಯೆಗೆ ಇದು ರಾಮಬಾಣ ಅಂತ ಹೇಳಬಹುದು. ನಿತ್ಯವೂ ನೀವು ಬೆಲ್ಲವನ್ನು ಕಡ್ಡಾಯವಾಗಿ ಸೇವಿಸುವುದನ್ನು ರೂಢಿಸಿಕೊಳ್ಳಿ. ಇದು ಸ್ಥೂಲಕಾಯವನ್ನು ಕೂಡ ಹೋಗಲಾಡಿಸುತ್ತದೆ. ರಕ್ತಹೀನತೆ ಬರದಂತೆ ತಡೆಯುತ್ತದೆ. ಬೆಲ್ಲದಲ್ಲಿ ಮೆಗ್ನಿಷಿಯಂ, ಪೊಟಾಷ್ಯಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್‌, ಸೆಲೆನಿಯಂ, ಸತು ಇರುವುದರಿಂದ ರಕ್ತಹೀನತೆ ಬರದಂತೆ ತಡೆಯುತ್ತದೆ. ಇನ್ನೂ ಹಾಲಿನ ಜೊತೆಗೆ ಬೆಲ್ಲವನ್ನು ತಿನ್ನಬಹುದು. ಆದರೆ ಹಾಲಿನಲ್ಲಿ ಬೆಲ್ಲವನ್ನು ಬೆರೆಸಿ ಕುಡಿಯಬಾರದು. ದೇಹಕ್ಕೆ ಅತ್ಯುತ್ತಮವಾದ ಆಹಾರ ಅಂದರೆ ಮೊಸರಿನಲ್ಲಿ ಬೆಲ್ಲವನ್ನು ಮಿಶ್ರಣ ಮಾಡಿ ತಿನ್ನುವುದು. ಮತ್ತು ಬೆಲ್ಲದ ಉಂಡೆಗಳನ್ನು ಮಾಡಿ ತಿನ್ನುವುದರಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುತ್ತದೆ. ಬೆಲ್ಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಲ್ಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ವಿವಿಧ ರೋಗಗಳು ಮತ್ತು ಸೋಂಕುಗಳನ್ನು ದೂರವಿಡುತ್ತದೆ. ಹಸಿಗಡಲೆ ಅಥವಾ ಶೇಂಗಾ ಜೊತೆಗೆ ಬೆಲ್ಲವನ್ನು ಬೆರೆಸಿ ಅವುಗಳ ಉಂಡೆಯನ್ನು ಮಾಡಿ ಸೇವಿಸಿ. ಇದರಿಂದ ಹೊಟ್ಟೆಯಲ್ಲಿರುವ ಆಮ್ಲಗಳು ನಿವಾರಣೆ ಆಗುತ್ತವೆ.ಬೆಲ್ಲ ತಿಂದರೆ ದೇಹದಲ್ಲಿ ಸಕ್ಕರೆಯಂಶ ಕೂಡಲೇ ಅಧಿಕವಾಗುವುದಿಲ್ಲ. ಬೆಲ್ಲವು ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು. ಸ್ವಲ್ಪವಾದರೂ ಸರಿಯೇ ನಿತ್ಯವೂ ಬೆಲ್ಲವನ್ನು ಸೇವಿಸುವುದು ಒಳಿತು. ಇದು ಹಲವಾರು ಕಾಯಿಲೆಗಳಿಂದ ನಮ್ಮನ್ನು ರಕ್ಷಣೆಯನ್ನು ಕೂಡ ಮಾಡುತ್ತದೆ. ಆದ್ದರಿಂದ ಸಕ್ಕರೆಯನ್ನು ಹೆಚ್ಚಾಗಿ ಸೇವನೆ ಮಾಡುವುದನ್ನು ನಿಲ್ಲಿಸಿ ಬದಲಾಗಿ ಬೆಲ್ಲವನ್ನು ಸೇವಿಸಿ. ಉತ್ತಮವಾದ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *