ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ನಾವು ಊಟವನ್ನು ಮಾಡಬೇಕಾದರೆ ಬಿಳಿ ಅಕ್ಕಿಯನ್ನು ಸೇವನೆ ಮಾಡಿಯೇ ಮಾಡುತ್ತೇವೆ. ಆದರೆ ನಿಮಗೆ ಗೊತ್ತೇ ಈ ಅಕ್ಕಿಯಲ್ಲಿಯು ಕೂಡ ಹಲವಾರು ವಿಧಗಳಿವೆ. ಬಿಳಿ ಅಕ್ಕಿ, ಕೆಂಪು ಅಕ್ಕಿ, ಕಂದು ಅಕ್ಕಿ, ಕಂಪು ಅಕ್ಕಿ ಅಂತ. ಸ್ನೇಹಿತರೇ ನಾವೆಲ್ಲರೂ ಬಿಳಿ ಅಕ್ಕಿಯನ್ನು ಸೇವನೆ ಮಾಡಿರುತ್ತೇವೆ ಆದರೆ ಮಾರುಕಟ್ಟೆಯಲ್ಲಿ ಕೆಂಪು ಅಕ್ಕಿ ಅಥವಾ ಬ್ರೌನ್ ರೈಸ್ ಅಂತ ಸಿಗುತ್ತದೆ ಇದನ್ನು ತಿನ್ನುವವರು ತುಂಬಾನೇ ಕಡಿಮೆಯುಳ್ಳ ಜನರು ಇದ್ದಾರೆ. ಹೌದು ಮಿತ್ರರೇ ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಕೆಂಪು ಅಥವಾ ಬ್ರೌನ್ ರೈಸ್ ತಿನ್ನುವುದರಿಂದ ದೇಹಕ್ಕೆ ಸಿಗುವ ಲಾಭಗಳ ಪಟ್ಟಿ ತಿಳಿಸಿಕೊಡುತ್ತೇವೆ ಜೊತೆಗೆ ಇವುಗಳಲ್ಲಿ ಯಾವುದು ಶ್ರೇಷ್ಠ ಅಂತ ಕೂಡ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಬನ್ನಿ. ಹಲವಾರು ವಿಧದಲ್ಲಿ ದೊರೆಯುವ ಅಕ್ಕಿಯಲ್ಲಿ ಕೆಂಪು ಅಕ್ಕಿ ಉತ್ತಮ. ಏಕೆಂದರೆ ಇದರಲ್ಲಿ ಮ್ಯಾಗ್ನಿಷಿಯಂ ಪೊಟ್ಯಾಶಿಯಂ ಕ್ಯಾಲ್ಸಿಯಂ ಐರನ್ ವಿಟಮಿನ್ ದೇಹಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಇದು ಅಧಿಕವಾಗಿ ಹೊಂದಿರುತ್ತದೆ. ಕೆಂಪು ಅಕ್ಕಿಯಲ್ಲಿ ಯಾವುದೇ ನ್ಯೂಟ್ರಿಷನ್ ಹಾಳಾಗುವುದಿಲ್ಲ. ಬಿಳಿ ಅಕ್ಕಿ ಸೇವನೆ ಮಾಡುವುದರಿಂದ ನಮಗೆ ಅಷ್ಟೊಂದು ಲಾಭಗಳು ಸಿಗುವುದಿಲ್ಲ. ಆದರೆ ಕೆಂಪು ಅಕ್ಕಿಯಿಂದ ನೂರೆಂಟು ಲಾಭಗಳು ಉಂಟಾಗುತ್ತವೆ.
ಬಿಳಿ ಅಕ್ಕಿ ನೋಡಲು ಸುಂದರವಾಗಿ ಬೆಳ್ಳಗೆ ಇರಲು ಕಾರಣ ಇದನ್ನು ಪಾಲಿಶ್ ಮಾಡಿರುತ್ತಾರೆ ಈ ಕಾರಣದಿಂದ ಇದರಲ್ಲಿ ಅಡಗಿರುವ ಹಾಗೆಯೇ ನಮ್ಮ ದೇಹಕ್ಕೆ ಬೇಕಾಗುವ ಎಲ್ಲಾ ಪೋಷಕಾಂಶಗಳು ಬಸಿದು ಹೋಗುತ್ತದೆ. ಹಾಗಾಗಿ ಕೆಂಪು ಅಕ್ಕಿ ಸೇವನೆ ಉತ್ತಮ. ಇನ್ನೂ ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿಯಲ್ಲಿ ಹಲವಾರು ನಾರಿನ ಅಂಶ ಮತ್ತು ಪೌಷ್ಟಿಕಾಂಶಗಳು ಅಡಗಿರುತ್ತವೆ. ಆದರೆ ಈ ಎಲ್ಲ ಅಂಶಗಳು ಬಿಳಿ ಅಕ್ಕಿಯಲ್ಲಿ ಸಿಗುವುದಿಲ್ಲ. ಮಧುಮೇಹಿಗಳಿಗೆ ವೈದ್ಯರು ಅನ್ನವನ್ನು ಕಡಿಮೆ ಸೇವನೆ ಮಾಡಿ ಅಥವಾ ಸೇವನೆ ಮಾಡಲೇ ಬೇಡಿ ಅಂತ ಹೇಳಿರುತ್ತಾರೆ. ಇದಕ್ಕೆ ಕಾರಣ ಬಿಳಿ ಅಕ್ಕಿಯು ದೇಹದಲ್ಲಿ ಶುಗರ್ ಲೆವೆಲ್ ಅನ್ನು ಅಧಿಕ ಮಾಡಿ ಮಧುಮೇಹಿಗಳಿಗೆ ಮತ್ತಷ್ಟು ತೊಂದರೆಯನ್ನು ತಂದೊಡ್ಡುತ್ತದೆ. ಜೊತೆಗೆ ತೂಕವನ್ನು ಹೆಚ್ಚು ಕೂಡ ಮಾಡುವಲ್ಲಿ ಬಿಳಿ ಅಕ್ಕಿ ತನ್ನ ಪಾತ್ರವನ್ನು ವಹಿಸುತ್ತದೆ. ಕೆಂಪು ಅಕ್ಕಿಯ ಲಾಭಗಳ ಪಟ್ಟಿ ನೋಡುವುದಾದರೆ ಇದರಲ್ಲಿ ಸಲೋನಿಯಂ ಎಂಬ ಪೌಷ್ಟಿಕಾಂಶ ಅಡಗಿದೆ. ಈ ಪೌಷ್ಟಿಕಾಂಶ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹಾಗೆಯೇ ಹೃದಯಕ್ಕೆ ಸಂಭಂದ ಪಟ್ಟ ಯಾವುದೇ ಕಾಯಿಲೆಗಳು ಇದ್ದರೂ ಕೂಡ ಅವುಗಳನ್ನು ನಿಯಂತ್ರಣ ಮಾಡುತ್ತದೆ ಈ ಕೆಂಪು ಅಕ್ಕಿ. ಮೂಳೆಗಳು ಬಲವಾಗಿ ಇರಬೇಕಾದರೆ ಮೂಳೆಗಳಿಗೆ ಕ್ಯಾಲ್ಸಿಯಂ ಅವಶ್ಯಕತೆ ತುಂಬಾನೇ ಮುಖ್ಯವಾಗಿ ಬೇಕಾಗುತ್ತದೆ.
ಈ ಕೆಂಪು ಅಕ್ಕಿಯಲ್ಲಿ ಕ್ಯಾಲ್ಸಿಯಂ ಅಂಶ ಸಮೃದ್ಧವಾಗಿ ಇರುವುದರಿಂದ ಇದು ಮೂಳೆಗಳನ್ನು ಬಲಪಡಿಸುತ್ತದೆ. ಮತ್ತು ದೇಹದ ಚಯಾಪಚಯ ಕ್ರಿಯೆಯನ್ನು ಸುಗಮವಾಗಿ ನಡೆಯುವಂತೆ ಸಹಾಯ ಮಾಡುತ್ತದೆ. ಹಾಗೆಯೇ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಂಪು ಅಕ್ಕಿ ದೇಹದಲ್ಲಿ ಆಂಟಿ ಎಂಜಿಂಗ್ ರೀತಿಯಲ್ಲಿ ಕೆಲಸ ಮಾಡುವುದರಿಂದ ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ಬೆಳೆಯದಂತೆ ಕಾಪಾಡುತ್ತದೆ. ಮಧುಮೇಹಿಗಳು ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿಯನ್ನು ಸೇವನೆ ಮಾಡಿದರೆ ತುಂಬಾನೇ ಒಳ್ಳೆಯದು. ಫೈಬರ್ ಅಂಶವನ್ನು ಹೊಂದಿರುವ ಕೆಂಪು ಅಕ್ಕಿ ನಮ್ಮ ಜೀರ್ಣಕ್ರಿಯೆಗೆ ತುಂಬಾನೇ ಸಹಾಯ ಮಾಡುತ್ತದೆ. ಕೆಂಪು ಅಕ್ಕಿ ಸೇವನೆ ಮಾಡುವುದರಿಂದ ದೇಹದಲ್ಲಿ ಇರುವ ಕಲ್ಮಶಗಳನ್ನು ಹೊರಹಾಕುತ್ತದೆ ಇದರ ಜೊತೆಗೆ ಮಲಬದ್ಧತೆಯನ್ನು ನಿವಾರಿಸುತ್ತದೆ. ಈ ಅಕ್ಕಿಯು ಚರ್ಮವು ಸುಕ್ಕು ಗಟ್ಟದಂತೆ ಹಾಗೆಯೇ ಚರ್ಮದ ಕಾಂತಿಯು ಯೌವ್ವನದಂತೆ ಕಾಣಲು ಸಹಾಯ ಮಾಡುತ್ತದೆ. ಒಬಿಸಿಟಿ ಸಮಸ್ಯೆ ಇರುವವರು ಬಿಳಿ ಅಕ್ಕಿ ಬಿಟ್ಟು ಕೆಂಪು ಅಕ್ಕಿ ಸೇವನೆ ಮಾಡಿದರೆ ನಿಮ್ಮ ತೂಕವು ಕ್ರಮೇಣ ಕಡಿಮೆ ಆಗುತ್ತದೆ. ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ಕೆಂಪು ಅಕ್ಕಿ ಸೇವನೆ ಮಾಡಿ. ಈ ಅಕ್ಕಿಯು ಬೇಗನೆ ಬೇಯುವುದಿಲ್ಲ ಅಂತ ತುಂಬಾ ಜನರು ನಿರಾಕರಿಸುತ್ತಾರೆ ಅದಕ್ಕಾಗಿ ಸ್ನೇಹಿತರೇ ನೀವು 4-5 ಗಂಟೆ ಮುಂಚಿತವಾಗಿ ಇದನ್ನು ನೆನೆಸಿಟ್ಟು ನಂತರ ಅನ್ನವನ್ನು ಮಾಡಿ ಸೇವನೆ ಮಾಡಿ ಇದರಿಂದ ಹತ್ತಾರು ಲಾಭಗಳನ್ನು ಪಡೆದುಕೊಳ್ಳಿ.