ನಮಸ್ತೆ ಪ್ರಿಯ ಓದುಗರೇ ಮಾವಿನ ಹಣ್ಣು ಈ ಹಣ್ಣು ಅಂದರೆ ಚಿಕ್ಕ ಮಕ್ಕಳಿಂದ ದೊಡ್ಡವರಿಗೆ ಬಲು ಪ್ರಿಯವಾದ ಹಣ್ಣು. ಮಾವಿನ ಹಣ್ಣು ಅಂದರೆ ಸಾಕು ಬಾಯಲ್ಲಿ ನೀರೂರಿಯುತ್ತದೆ. ಮಾವಿನ ರುಚಿಗೆ ಸೋಲದವರೆ ಇಲ್ಲ ಮಿತ್ರರೇ. ಇದರ ರುಚಿಯನ್ನು ಎಲ್ಲರೂ ಸವೆದಿದ್ದಾರೆ. ಈ ಹಣ್ಣು ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಅಂಗಡಿಗಳಲ್ಲಿ ದೊರೆಯುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ಹಣ್ಣು ಉತ್ತಮವಾಗಿರುವುದರಿಂದ ಈ ಹಣ್ಣು ತಿನ್ನುವುದು ಅನಿವಾರ್ಯ. ನಮ್ಮ ಹಿಂದಿನ ಕಾಲದಲ್ಲಿ ಮಾವಿನ ಮರಗಳ ಗಿಡಗಳನ್ನು ನಾವು ಹಳ್ಳಿಗಳಲ್ಲಿ ಸಾಲು ಸಾಲಾಗಿ ನೋಡೋತ್ತಿದ್ದೇವು ಆದರೆ ಇಂದಿನ ದಿನಗಳಲ್ಲಿ ಕೇವಲ ಅಂಗಡಿಯಿಂದ ತಂದು ತಿನ್ನುವ ಪರಿಸ್ಥಿತಿ ಬಂದು ಬಿಟ್ಟಿದೆ ಮಿತ್ರರೇ ಅಲ್ವಾ. ನಿಮಗೆ ಗೊತ್ತಿರುವ ಹಾಗೆ, ಮಾವಿನ ಹಣ್ಣನ್ನು ನಾವು ವಿಧವಾಗಿ ಸೇವನೆ ಮಾಡಬಹುದು ಜ್ಯೂಸ್ ರೀತಿಯಲ್ಲಿ, ಸ್ಲೈಸ್ ಮಾಡಿಕೊಂಡು ಹಾಗೆ ತಿನ್ನಬಹುದು ಅಥವಾ ಮಾವಿನ ಹಣ್ಣಿನ ಶೀಕರಣಿ ಮಾಡಿ ತಿನ್ನುತ್ತಾರೆ. ಆದರೆ ಗೆಳೆಯರೇ ಇಂದಿನ ಲೇಖನದಲ್ಲಿ ನಾವು ನಿಮಗೆ ಒಂದು ವಿಶೇಷವಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಬನ್ನಿ ಅದುವೇ ಮೊಸರಿನಲ್ಲಿ ಮಾವಿನ ಹಣ್ಣು ಮಿಕ್ಸ್ ಮಾಡಿ ಅಥವಾ ಬೆರೆಸಿ ತಿನ್ನುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಪರಿಚಯಿಸಿ ಕೊಡುತ್ತೇವೆ.
ಮೊಸರಿನಲ್ಲಿ ಮಾವಿನ ಹಣ್ಣು ಬೆರೆಸಿ ತಿನ್ನುವುದರಿಂದ ಸಿಗುವ ಖುಷಿ ಅಂತಿಂಥದ್ದು ಅಲ್ಲಾ ಮಿತ್ರರೇ, ಅದರ ರುಚಿ ತಿಂದವರಿಗೆ ಮಾತ್ರ ಗೊತ್ತಿರುತ್ತದೆ. ಈ ಎರಡು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಆಂಟಿ ಆಕ್ಸಿಡೆಂಟ್ ಗಳು, ಪೋಷಕಾಂಶಗಳು ವಿಟಮಿನ್ಸ್ಗಳು ದೊರೆಯುತ್ತದೆ. ಈ ಮಿಶ್ರಣ ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ ಮಲಬದ್ಧತೆ ಸಮಸ್ಯೆ ಅನ್ನುವುದನ್ನು ನಿವಾರಣೆ ಮಾಡುತ್ತದೆ. ಮೊಸರು ಮತ್ತು ಮಾವಿನ ಹಣ್ಣು ಬೆರೆಸಿ ತಿನ್ನುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಚರ್ಮದ ಹೊಳಪು ಕೂಡ ಜಾಸ್ತಿ ಆಗುತ್ತದೆ. ನೀವು ತುಂಬಾನೇ ಸುಂದರವಾಗಿ ಕಾಣುತ್ತೀರಿ.ಇದು ನೀವು ಯೌವ್ವನವಾಗಿ ಕಾಣಲು ನಿಮ್ಮ ದೇಹವನ್ನು ಗಟ್ಟಿ ಮುಟ್ಟಾಗಿ ಮಾಡುತ್ತದೆ. ಮೊಸರು ಮತ್ತು ಮಾವಿನ ಹಣ್ಣಿನಲ್ಲಿ ಅಧಿಕವಾದ ಕ್ಯಾಲ್ಸಿಯಂ ಇರುವುದರಿಂದ ಇದು ಮೂಳೆಗಳಿಗೆ ತುಂಬಾನೇ ಉತ್ತಮ. ಮೂಳೆಗಳನ್ನು ದಷ್ಟ ಪುಷ್ಟವಾಗಿ ಬೆಳೆಯುವಂತೆ ಮಾಡುತ್ತದೆ. ಅಷ್ಟೇ ಅಲ್ಲದೇ ಈ ಮೊಸರು ಮತ್ತು ಮಾವಿನ ಹಣ್ಣಿನ ಮಿಶ್ರಣವು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಹಾಗೆಯೇ ದಂತ ಸಮಸ್ಯೆಯನ್ನು ಹೋಗಲಾಡಿಸಿ ದಂತಗಳು ಮತ್ತು ಒಸಡುಗಳು ಆರೋಗ್ಯವಾಗಿ ಇರುವಂತೆ ಮಾಡುತ್ತದೆ. ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಎ ತುಂಬಾನೇ ಮುಖ್ಯವಾಗಿ ಬೇಕಾಗುತ್ತದೆ.
ಆ ವಿಟಮಿನ್ ಅಂಶವನ್ನು ಈ ಮೊಸರು ಮತ್ತು ಮಾವಿನ ಹಣ್ಣು ಒಳಗೊಂಡಿವೆ ಇವೆರಡನ್ನು ಬೆರೆಸಿ ತಿನ್ನುವುದರಿಂದ ನಿಮ್ಮ ಕಣ್ಣುಗಳ ಸಮಸ್ಯೆಯಿಂದ ನೀವು ಮುಕ್ತಿಯನ್ನು ಪಡೆಯಬಹುದು. ನಿಮ್ಮ ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ. ನಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವಲ್ಲಿ ಈ ಮಿಶ್ರಣ ತುಂಬಾನೇ ಸಹಾಯ ಮಾಡುತ್ತದೆ. ಇದನ್ನು ತಿನ್ನುವುದರಿಂದ ಇನ್ನಿತರ ಯಾವುದೇ ವ್ಯಾಧಿಗಳು ಕಾಯಿಲೆಗಳು ಬರುವುದಿಲ್ಲ. ಗ್ಯಾಸ್ಟ್ರಿಕ್ ಸಮಸ್ಯೆಗೆ ಇದು ರಾಮಬಾಣ ಅಂತ ಹೇಳಿದರೆ ತಪ್ಪಾಗಲಾರದು. ಇದು ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊರಹಾಕಿ ಹೈ ಕೊಲೆಸ್ಟ್ರಾಲ್ ಅನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಹೃದ್ರೋಗ ಸಮಸ್ಯೆಯನ್ನು ಕೂಡ ಹೊಡೆದೋಡಿಸಬಹುದು. ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಮಧ್ಯಾಹ್ನ ಹೊತ್ತಿನಲ್ಲಿ ಮೊಸರಿನಲ್ಲಿ ಮಾವಿನ ಹಣ್ಣು ಬೆರೆಸಿ ತಿನ್ನುವುದರಿಂದ ರಾತ್ರಿ ವೇಳೆಗೆ ನಿಮಗೆ ಸುಖದ ನಿದ್ದೆ ಬರುತ್ತದೆ. ಇನ್ನೂ ಈ ಎರಡು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ತಿನ್ನುವುದರಿಂದ ಖಿನ್ನತೆ ಒತ್ತಡ ಸಮಸ್ಯೆಯಿಂದ ಕೂಡ ಪಾರಾಗಬಹುದು. ರಕ್ತ ಹೀನತೆ ಉಂಟಾಗದಂತೆ ತಡೆಯುತ್ತದೆ. ನಿಶ್ಯಕ್ತಿ ಅಧಿಕವಾಗಿ ಇರುವವರು ಇದನ್ನು ಸೇವಿಸಿ. ಈ ಎರಡು ಪದಾರ್ಥಗಳು ದೇಹಕ್ಕೆ ಅಧಿಕವಾದ ಶಕ್ತಿಯನ್ನು ನೀಡುತ್ತದೆ ಅನ್ನುವ ಮಾತಿನಲ್ಲಿ ಯಾವುದೇ ಸಂದೇಹವಿಲ್ಲ. ಶುಭದಿನ.