ಕುರಿ ಮೇಕೆ ಮತ್ತು ಹಸು ಸಾಕಾಣಿಕೆ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

ಉಪಯುಕ್ತ ಮಾಹಿತಿ

ನಮಸ್ತೆ ಪ್ರಿಯ ಓದುಗರೇ, ನಮ್ಮ ಕರ್ನಾಟಕ ಸರ್ಕಾರವು ಇತ್ತೀಚಿಗೆ ರೈತರಿಗೆ ಉಪಯೋಗವಾಗಲೆಂದು ಹಲವಾರು ಬಗೆಯ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದು ರೈತರಿಗೆ ತುಂಬಾನೇ ಒಳ್ಳೆಯ ಸುದ್ದಿ ಮತ್ತು ಭರ್ಜರಿ ಬಂಪರ್ ಕೊಡುಗೆ ಅಂತ ಹೇಳಬಹುದು. ಹೌದು ದುಡಿಯುವ ಆಸೆ ಇದ್ದರೆ ಕೆಲಸಕ್ಕೇನು ಬರವಿಲ್ಲ ಮಿತ್ರರೇ. ದುಡಿಮೆಯಲ್ಲಿ ದೇವರನ್ನು ಕಾಣಬಹುದು ಅಂತ ಬಸವಣ್ಣವರು ಹೇಳಿದ್ದಾರೆ. ಆದರೆ ನಾವು ಚಿಕ್ಕವರು ಇದ್ದಾಗ ಏನು ಕೆಲಸ ಮಾಡದೇ ಕುಳಿತಾಗ ಮನೆಯಲ್ಲಿ ದೊಡ್ಡವರು ಕುರಿ ಮೇಕೆ ಸಾಕಾಣಿಕೆ ಮಾಡೋಗು ಅಂತ ಗೊಳೋಯುತ್ತಿದ್ದರು. ಆದರೆ ಇಂದು ನಾವು ಕುರಿ ಮತ್ತು ಮೇಕೆ ಸಾಕಾಣಿಕೆ ಊಹಿಸಲಾಗದಷ್ಟು ಎತ್ತರಕ್ಕೆ ಬೆಳೆದು ನಿಂತಿದೆ. ನಮ್ಮ ಕರ್ನಾಟಕ ಸರ್ಕಾರ ಕೇವಲ ರೈತರಿಗೆ ಯೋಜನೆಗಳನ್ನು ಮತ್ತು ಪಿಂಚಣಿ ಸ್ಕೀಮ್ ಗಳನ್ನು ಜಾರಿಗೆ ತರುವುದಲ್ಲದೇ ಕರ್ನಾಟಕದಲ್ಲಿರುವ ಮೇಕೆ ಕುರಿ ಸಾಗಾಣಿಕೆ ಜನರಿಗೆ ಕೂಡ ಸಹಾಯ ಧನವನ್ನು ಕಲ್ಪಿಸಿ ಕೊಡಲಾಗಿದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ.

ಕೃಷಿ ಯೋಜನೆಯ ಜೊತೆಗೆ ಕುರಿ ಮತ್ತು ಮೇಕೆ ಸಾಕಾಣಿಕೆ ಹಸು ಎಮ್ಮೆ ಸಾಕಾಣಿಕೆಗೆ ಪಶು ಸಂಗೋಪನಾ ಇಲಾಖೆ ಇಂದ ರೈತ ಬಾಂಧವರಿಗೆ ಭರ್ಜರಿ ಗುಡ್ ನ್ಯೂಸ್ ಅನ್ನು ಜಾರಿಗೆ ತರಲಾಗಿದೆ. ನೀವೇನಾದರೂ ರೈತರ ಮಕ್ಕಳಾಗಿದ್ದರೆ, ಕುರಿ ಮೇಕೆ ಸಾಕಾಣಿಕೆ ಮಾಡುವವರಾಗಿದ್ದರೆ ಈ ಲೇಖನವನ್ನು ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಾಡಿನ ರೈತ ಬಾಂಧವರಿಗೆ ಪಶು ಸಂಗೋಪನಾ ಇಲಾಖೆ ಇಂದ ಭರ್ಜರಿ ಸುದ್ದಿ ಬಂದಿದೆ. ವ್ಯವಸಾಯದ ಜೊತೆಗೆ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ವ್ಯವಸಾಯದ ಜೊತೆಗೆ ಕುರಿ ಸಾಕಾಣಿಕೆ ಮೇಕೆ ಸಾಕಾಣಿಕೆ ಹಸು ಸಾಕಾಣಿಕೆ ಮಾಡಿಕೊಳ್ಳುತ್ತಾರೆ. ಆದರೆ ಹಲವಾರು ಕಾರಣಗಳಿಂದ ಅಂದರೆ ಕೆಲವು ಸಾಂಕ್ರಾಮಿಕ ರೋಗಗಳಿಂದ ಕುರಿ ಹಸು ಮತ್ತು ಮೇಕೆಗೆ ತಗುಲಿ ಜೊತೆಗೆ ಕೆಲವು ಪ್ರಕೃತಿ ವಿಕೋಪಗಳಿಂದ ಈ ಸಾಕು ಪ್ರಾಣಿಗಳು ಮರಣ ಹೊಂದುತ್ತಿವೆ. ಹೀಗಾಗಿ ನಮ್ಮ ಕರ್ನಾಟಕ ಸರ್ಕಾರದಿಂದ ಪಶು ಸಂಗೋಪನಾ ಇಲಾಖೆ ವತಿಯಿಂದ ಕುರಿ ಮತ್ತು ಮೇಕೆ ಸಾವುಗಳಿಗೆ ರೂಪಾಯಿ 5000 ಮತ್ತು ಹಸುಗಳು ಮರಣ ಹೊಂದಿದ್ದಲ್ಲಿ ರೂಪಾಯಿ 10000 ಸಹಾಯ ಧನ ಅಷ್ಟೇ ಅಲ್ಲದೇ ಕುರಿ ಮರಿಗಳು ಸಾವನ್ನಪ್ಪಿದರೆ 2500 ರೂಪಾಯಿ ಸಹಾಯಧನ ನೀಡಲಾಗುತ್ತದೆ ಅಂತ ಸರ್ಕಾರವು ಘೋಷಣೆ ಮಾಡಿದ್ದಾರೆ.

ಅನುಗ್ರಹ ಯೋಜನೆಯನ್ನು ಪಶು ಸಂಗೋಪನಾ ಇಲಾಖೆಯಲ್ಲಿ ಮುಂದೆವರೆಸಲು ಸರ್ಕಾರವು ಆದೇಶವನ್ನು ಮಾಡಿದೆ ಎಂದು ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಆದ ಎಂ. ಮಂಜುನಾಥ ಪ್ರಸಾದ್ ಅವರು ತಿಳಿಸಿದ್ದಾರೆ. 2017 ರಲ್ಲಿ ಮುಖ್ಯಮಂತ್ರಿ ಆದ ಸಿದ್ದರಾಮಯ್ಯನವರೂ ಈ ಯೋಜನೆಯನ್ನು ಜಾರಿಗೆ ತಂದಿದ್ದರು. ಈ ಯೋಜನೆಯ ಹೆಸರನ್ನು ಅನುಗ್ರಹ ಯೋಜನೆ ಅಂತ ನಾಮಕರಣ ಮಾಡಲಾಗಿತ್ತು. ಈ ಯೋಜನೆಯ ಮುಖ್ಯ ಉದ್ದೇಶವೂ ಸಾಂಕ್ರಾಮಿಕ ರೋಗಗಳಿಂದ ಸಾವನ್ನಪ್ಪುವ ಮತ್ತು ಪ್ರಕೃತಿ ವಿಕೋಪಗಳಿಂದ ಅಂದರೆ ಸಿಡಿಲು ಮಿಂಚು ಗುಡುಗು ಮತ್ತು ಪ್ರವಾಹಗಳಿಗೆ ಸಿಲುಕಿ ಮರಣ ಹೊಂದಿರುವ ಇವುಗಳಿಗೆ ಸಹಾಯಧನವನ್ನು ಪ್ರಾಪ್ತಿ ಮಾಡುವುದರ ಇದರ ಧ್ಯೇಯವಾಗಿದೆ. ಆದರೆ ಬಿಜೆಪಿ ಸರಕಾರ ಆಡಳಿತ ಇರುವಾಗ ಈ ಯೋಜನೆಯನ್ನು ಹಿಂಪಡೆಯಲಾಗಿತ್ತು. ಹೀಗಾಗಿ ಇದು ತನ್ನ ಪ್ರಸಿದ್ದಿಯನ್ನು ಕಳೆದುಕೊಂಡಿತ್ತು.

ಆದ ಕಾರಣ ಸಿದ್ದರಾಮಯ್ಯನವರು ಈ ಯೋಜನೆ ಜಾರಿಗೆ ಮತ್ತೆ ಬರಬೇಕೆಂದು ಸರ್ಕಾರದ ವಿರುದ್ಧ ಇವರು ಪ್ರತಿಭಟನೆ ಮಾಡಲು ಜಾರಿಗಿಳಿದ್ದಿದ್ದರು.ಹೀಗಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅನುಗ್ರಹ ಯೋಜನೆಗೆ ಸಹಾಯಧನವನ್ನು ನೀಡಲು ಅನುಮತಿಯನ್ನು ಘೋಷಣೆ ಮಾಡಿದರು. ಆದರೆ ಪ್ರಸ್ತುತ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಈ ಯೋಜನೆಯನ್ನು ಮುಂದುವರೆಸಲು ಆದೇಶವನ್ನು ಹೊರಡಿಸಿದ್ದಾರೆ. ಕುರಿ ಹಸು ಮತ್ತು ಮೇಕೆಗಳು ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ, ಮತ್ತು ದೃಢೀಕೃತ ವಿಕೋಪಗಳಿಗೆ ಒಳಗಾಗಿ ಮರಣ ಹೊಂದಿದ್ದರೆ ವಿಮೆಗೆ ಒಳಪಟ್ಟ, ಆರು ತಿಂಗಳ ಮೇಲ್ಪಟ್ಟ ಪ್ರತಿ ಕುರಿಗೆ ಮತ್ತು ಮೇಕೇಗೆ 5000ರೂಪಾಯಿ, ಮತ್ತು ಕುರಿ ಮರಿಗೆ 2500 ರೂಪಾಯಿ ಪರಿಹಾರ ಧನವನ್ನು ನೀಡಲಾಗುತ್ತದೆ. ಅದರಲ್ಲಿ ಹಸು ಮೃತ ಪಟ್ಟರೆ 10000ರೂಪಾಯಿ ಪರಿಹಾರ ಧನವನ್ನು ನೀಡಲಾಗುವುದು. ಅನುಗ್ರಹ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪುನಃ ಪ್ರಾರಂಭ ಮಾಡಿರುವುದು ಕುರಿಗಾಯಿಗಳಿಗೆ ಸಂತೋಷದ ಸುದ್ದಿಯಾಗಿದೆ. ಈ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.ಶುಭದಿನ.

Leave a Reply

Your email address will not be published. Required fields are marked *