ಮನೆಯ ಅಥವಾ ಸೈಟ್ ನ ದಾಖಲೆ ಪತ್ರಗಳು ಕಳೆದು ಹೋದಲ್ಲಿ ಇಸ್ವತ್ತು ದಾಖಲೆಗಳನ್ನು ಮರಳಿ ಹೇಗೆ ಪಡೆಯಬಹುದು ಇದರ ಸಂಪೂರ್ಣ ಮಾಹಿತಿ

ಉಪಯುಕ್ತ ಮಾಹಿತಿ

ನಮಸ್ತೆ ಪ್ರಿಯ ಓದುಗರೇ, ಹಿಂದುಳಿದ ಪ್ರದೇಶದಲ್ಲಿ ನಗರಗಳಲ್ಲಿ ಹಳ್ಳಿಗಳಲ್ಲಿ ಮನೆಯ ಹಕ್ಕು ಪತ್ರಗಳು ಇಲ್ಲದೆ ಇರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಗ್ರಾಮ ಪಂಚಾಯತ ಸಂಸ್ಥೆಯಲ್ಲಿ ಕೇಳಿದರೆ ಇವುಗಳ ಲಭ್ಯ ಖಂಡಿತವಾಗಿ ಇರುವುದಿಲ್ಲ. ಕಾರಣ ಎಷ್ಟೋ ವರ್ಷಗಳ ಹಿಂದೆಯಿಂದ ಕಾಗದ ಪಾತ್ರಗಳಲ್ಲಿ ದಾಖಲೆ ಮಾಡಿರುವ ಮಾಹಿತಿ ಮತ್ತು ಕಾಗದಗಳು ಹರಿದು ಹೋಗಿರುವ ಸಾಧ್ಯತೆಗಳು ತುಂಬಾನೇ ಇರುತ್ತದೆ ಅಷ್ಟೇ ಅಲ್ಲದೇ ಹರಿದು ಹೋಗುವುದರ ಜೊತೆಗೆ ಕಾಗದ ಪತ್ರಗಳು ಕಳೆದು ಕೂಡ ಹೋಗಿರುತ್ತದೆ. ಒಂದು ವೇಳೆ ಪತ್ರಗಳು ಸಿಕ್ಕಿದರೂ ಕೂಡ ಅವುಗಳಲ್ಲಿರುವ ಅಕ್ಷರಗಳು ಸ್ಪಷ್ಟವಾಗಿ ಕಣ್ಣಿಗೆ ಕಾಣುವುದಿಲ್ಲ. ಈ ರೀತಿಯ ಸಮಸ್ಯೆಗಳು ಗ್ರಾಮೀಣ ಜನರಿಗೆ ತುಂಬಾನೇ ತಂದೊಡ್ಡಿತ್ತಿವೆ. ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು, ಹಕ್ಕು ಪತ್ರಗಳು ಸಿಗದೇ ಅಣ್ಣ ತಮ್ಮಂದಿರು ನಡುವೆ ಜಗಳವಾಗುತ್ತಿರುತ್ತದೆ. ತಂದೆ ತಾಯಿ ಮನೆ ಬಿಟ್ಟು ಹೊರಗೆ ಹಾಕುತ್ತಾರೆ. ಆಸ್ತಿಯನ್ನು ಸಹೋದರ ನಡುವೆ ಇಬ್ಭಾಗ ಮಾಡಲು ಆಸ್ತಿ ಪತ್ರಗಳ ಅವಶ್ಯಕತೆ ತುಂಬಾನೇ ಇರುತ್ತದೆ. ಹೀಗಾಗಿ ಆಸ್ತಿ ಪತ್ರಗಳು ಸಿಗದೇ ಇದ್ದರೆ ತುಂಬಾನೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಒಂದು ವೇಳೆ ನೀವು ಇ ಸ್ವತ್ತು ಪತ್ರಗಳನ್ನು ಕಳೆದುಕೊಂಡಿದ್ದರೆ ಅದನ್ನು ಹೇಗೆ ಪಡೆಯುವುದು ಮತ್ತು ಯಾವ ರೀತಿ ಅರ್ಜಿಯನ್ನು ಸಲ್ಲಿಸುವುದು ಯಾರಿಗೆ ಸಲ್ಲಿಸುವುದು, ಇದರ ಪ್ರಕ್ರಿಯೆ ಹೇಗೆ ಇರುತ್ತದೆ. ಹೇಗೆ ಸುಲಭವಾಗಿ ಇ ಸ್ವತ್ತು ಪತ್ರಗಳನ್ನು ಪಡೆಯಬಹುದು ಅಂತ ವಿವರವಾಗಿ ತಿಳಿಸಿ ಕೊಡುತ್ತೇವೆ ಬನ್ನಿ. ನಾವು ತಿಳಿಸುವ ಕೆಲವು ನಿಯಮಗಳನ್ನು ಪಾಲನೆ ಮಾಡಿರಿ. ಮೊದಲಿಗೆ ನಿಮ್ಮ ಮನೆಯೂ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಬಂದರೆ ಈ ಕೆಲವು ನಿಯಮಗಳನ್ನು ಅನುಸರಣೆ ಮಾಡುವ ಮೂಲಕ ನೀವು ಹಕ್ಕು ಪತ್ರ ಪಡೆಯಬಹುದು. ಹಕ್ಕು ಪತ್ರಗಳು ಕಳೆದು ಹೋಗಿದ್ದರೆ ಅಥವಾ ನಿಮ್ಮಲ್ಲಿ ಲಭ್ಯವಿಲ್ಲದಿದ್ದರೆ ನಿಮ್ಮ ವಿದ್ಯುತ್ ಬಿಲ್ ತೆಗೆದುಕೊಂಡು ಅದರ ಜೊತೆಗೆ ಆಧಾರ್ ಕಾರ್ಡ್ ತೆಗೆದುಕೊಂಡು ಸ್ಥಳೀಯ ಸಿವಿಲ್ ಇಂಜಿನಿಯರಿಂಗ್ ಹತ್ತಿರ ಹೋಗಿ ನಿಮ್ಮ ಮನೆಯ ನಕ್ಷೆಯನ್ನು ಪಡೆಯಬೇಕು. ಮನೆಯ ನಕ್ಷೆಯನ್ನು ಪಡೆದು ಗ್ರಾಮ ಪಂಚಾಯತಿಗೇ ಹೋಗಿ ನಮೂನೆ ಹನ್ನೊಂದು ಬಿ ಮಾಡಿಸಿಕೊಳ್ಳಬೇಕು. ಗ್ರಾಮ ಪಂಚಾಯತಿ ಅಧಿಕಾರಿಗಳು ಸಾಮಾನ್ಯ ಸಭೆಯ ಅನುಮತಿಯೊಂದಿಗೆ ನಮೂನೆ ಹನ್ನೊಂದು ಬಿ ನಿಮಗೆ ನೀಡುತ್ತಾರೆ. ತದ ನಂತರ ನಮೂನೆ ಒಂಬತ್ತು ಪಡೆಯಲು ಏನು ಪ್ರಕ್ರಿಯೆ ಅಂತ ತಿಳಿಯುವುದಾದರೆ, ಗ್ರಾಮ ಪಂಚಾಯತಿ ಇಂದ ಪಡೆದುಕೊಂಡಿರುವ ನಮೂನೆ ಬಿ ನಕಲು ಪತ್ರ, ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಮನೆಯ ನಕ್ಷೆ ಮತ್ತು ಫೋಟೋ, ಕರ ರಶೀದಿ, ಸದರಿ ಗ್ರಾಮ ನಕ್ಷೆ, ಈ ಎಲ್ಲ ದಾಖಲೆಯ ಜೊತೆಗೆ ಒಂದು ಅರ್ಜಿಯನ್ನು ತುಂಬಿ ಗ್ರಾಮ ಪಂಚಾಯತಿ ಗಣಕ ಶಾಖೆಗೆ ಅರ್ಜಿಯನ್ನು ಸಲ್ಲಿಸಬೇಕು.

ಇನ್ನೂ ಇ ಸ್ವತ್ತು ಪಡೆಯಲು ನೀವು ಏನೆಲ್ಲ ಮಾಡಬೇಕು ಅಂದರೆ, ನಿಮ್ಮ ಹತ್ತಿರ ಇರುವ ಅಗತ್ಯವಾದ ದಾಖಲೆಯನ್ನು ತೆಗೆದುಕೊಂಡು ಗ್ರಾಮ ಪಂಚಾಯತಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಿದ ನಂತರ ಪಿಡಿಓನಿಂದ ಒಂದು ಸ್ವೀಕೃತ ಪತ್ರವನ್ನು ಪಡೆದುಕೊಳ್ಳಬೇಕು. ನಂತರ ಪಿಡಿಓ ನಿಮ್ಮ ದಾಖಲೆಯೊಂದಿಗೆ ಮನೆಯ ನಕ್ಷೆಯನ್ನು ಪರೀಶೀಲನೆ ಮಾಡುತ್ತಾರೆ. ನಂತರ ಇವರು ನಿಮ್ಮ ಅರ್ಜಿಯನ್ನು ಇಸ್ವತ್ತು ತಂತ್ರಾಂಶದ ಮೂಲಕ ಅಪ್ಲೋಡ್ ಮಾಡುತ್ತಾರೆ. ಅದನ್ನು ಮೋಜಿನಿಗೆ ಆಸ್ತಿ ಪತ್ರವನ್ನು ಪಡೆಯಲು ವರ್ಗಾವಣೆ ಕೂಡ ಮಾಡುತ್ತಾರೆ. ಆಮೇಲೆ ನೀವು ನಾಡ ಕಚೇರಿಗೆ ಹೋಗಿ ಮೋಜಿನಿ ಆಗುವುದಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ. ಶುಲ್ಕವನ್ನು ಪಾವತಿಸಿದ ನಂತರ ಸ್ವೀಕೃತಿ ಪತ್ರವನ್ನು ಪಡೆಯಬಹುದು. ಇದೆಲ್ಲವೂ ಆದ ನಂತರ 21 ದಿನಗಳೊಳಗೆ ಅರ್ಜಿದಾರರು ಮತ್ತು ಬಾಜುದಾರರ ಸಮ್ಮುಖದಲ್ಲಿ ಪಿಡಿಓ ಬಂದು ಸ್ಥಳವನ್ನು ವೀಕ್ಷಣೆ ಮಾಡುತ್ತಾರೆ, ದ್ವಿತೀಯ ದರ್ಜೆ ಸಹಾಯಕ ನಿಮ್ಮ ಆಸ್ತಿಯ ನಕ್ಷೆಯನ್ನು ಅನುಮೋದಿಸಿ ಪಿಡಿಓ ಗೆ ಕಳುಹಿಸುತ್ತಾರೆ, ಪಿಡಿಓ ಅವರು ಇಸ್ವತ್ತಿನ ಮೇಲೆ ಡಿಜಿಟಲ್ ಸೈನ್ ಮಾಡಿ ನಿಮಗೆ ಅನುಮೋದಿಸುತ್ತಾರೆ.

ಇಸ್ವತ್ತು ಮಾಡಿಸಲು ಸರ್ಕಾರದ ಶುಲ್ಕ ಕೇವಲ ಐವತ್ತು ರೂಪಾಯಿ ಮಾತ್ರ. ಇಸ್ವತ್ತು ಪತ್ರಗಳಿಗಾಗಿ ನೀವು ಅರ್ಜಿಯನ್ನು ಸಲ್ಲಿಸಿದರೆ ಅದು 45 ದಿನಗಳೊಳಗೆ ನೀಡಬೇಕೆಂಬ ನಿಯಮಗಳು ಕೂಡ ಇದೆ. ಒಂದು ವೇಳೆ ಅರ್ಜಿಯನ್ನು ಹಾಕಿದರೆ ಅದು ಯಾವ ಹಂತದಲ್ಲಿ ಇದೆ ಎಂಬುದನ್ನು ಕರ್ನಾಟಕ ಸರ್ಕಾರ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ಅಭಿವೃದ್ಧಿ ಲಿಂಕ್ ಮೂಲಕ ತಿಳಿದುಕೊಳ್ಳಬಹುದು. ಇನ್ನೂ ಇದರ ಉಪಯೋಗವನ್ನು ನೋಡುವುದಾದರೆ, ಪಿಡಿಓ ಡಿಜಿಟಲ್ ಸೈನ್ ಹಾಕುವುದರಿಂದ ಯಾವುದೇ ಅಕ್ರಮಗಳು ಆಗುವುದಿಲ್ಲ. ಇನ್ನೂ ಗ್ರಾಮ ಪಂಚಾಯತಿ ಅಡಿಯಲ್ಲಿ ಬರುವ ಆಸ್ತಿಯನ್ನು ಮಾರಲು ಮತ್ತು ಕೊಂಡುಕೊಳ್ಳಲು ಇಸ್ವತ್ತು ಕಡ್ಡಾಯವಾಗಿ ಬೇಕಾಗುತ್ತದೆ. ಇನ್ನೂ ನಿಮ್ಮ ಆಸ್ತಿಯನ್ನು ರಿಜಿಸ್ಟರ್ ಮಾಡುವಾಗ ನಮೂನೆ 9 ಮತ್ತು ನಮೂನೆ 11 ನೊಂದಾಯಿಸಬಹುದು. ಹಾಗಾಗಿ ನೀವು ಕೂಡ ಆಸ್ತಿ ಪಾತ್ರವನ್ನು ಮಾಡಿಸಿಕೊಂಡು ಇದರ ಲಾಭವನ್ನು ಪಡೆದುಕೊಳ್ಳಿ.

Leave a Reply

Your email address will not be published. Required fields are marked *