ನಮಸ್ತೆ ಪ್ರಿಯ ಓದುಗರೇ, ಮನುಷ್ಯನಿಗೆ ಕಷ್ಟಗಳು ಅನ್ನುವುದು ಎಡೆಬಿಡದೆ ಕಾಡುತ್ತಿರುತ್ತದೆ. ಜೀವನದಲ್ಲಿ ಒಂದು ಭಾಗದಷ್ಟು ಸುಖವನ್ನು ದೇವರು ನೀಡಿದರೆ ಇನ್ನುಳಿದ ಎಲ್ಲ ಭಾಗವನ್ನು ಕಷ್ಟಗಳಿಂದ ತುಂಬಿರುತ್ತಾನೆ ದೇವರು. ಕೆಲವರ ಜೀವನವಂತು ಬರೀ ನೋವುಗಳು ದುಃಖ ದುಮ್ಮಾನುಗಳಿಂದ ಕೂಡಿರುತ್ತದೆ. ಈ ಜಗತ್ತಿನಲ್ಲಿ ಯಾವ ಬಗೆಯ ಜನರು ಇರುತ್ತಾರೆ ಅಂದರೆ ತುಂಬಾನೇ ಕಡಿಮೆ ಪ್ರಮಾಣದಲ್ಲಿ ಸುಖವನ್ನು ಅನುಭವಿಸುತ್ತಾರೆ. ಯಾರು ತಾನೇ ಕೇವಲ ದುಃಖವನ್ನು ಮಾತ್ರ ಬಯಸುತ್ತಾರೆ ಹೇಳಿ ಅವರಿಗೂ ಕೂಡ ಸುಖವಾದ ಜೀವನವನ್ನು ನಡೆಸಬೇಕು ಅಂತ ಆಸೆಗಳು ಬಯಕೆಗಳು ಇರುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಒಂದು ತಂತ್ರೋಪಾಯದ ಬಗ್ಗೆ ತಿಳಿಸಿಕೊಡುತ್ತೇವೆ. ಹೀಗೆ ಮಾಡುವುದರಿಂದ ನೀವು ಎಲ್ಲ ಕಷ್ಟಗಳಿಂದ ದುರ್ಭಾಗ್ಯದಿಂದ ಮುಕ್ತಿಯನ್ನು ಪಡೆಯಬಹುದು. ನಿಮ್ಮನ್ನು ಶತ್ರುಗಳು ತುಂಬಾನೇ ಕಾಡುತ್ತಿದ್ದರೆ ಅವರಿಂದ ತುಂಬಾನೇ ಹಿಂಸೆ ಕಾಟ ಆಗುತ್ತಿದ್ದರೆ ಹಣದ ಕೊರತೆ ಆಗುತ್ತಾ ಇದ್ದು ಜೀವನದಲ್ಲಿ ಅಂತೂ ಸುಖ ಶಾಂತಿಗೆ ಜಾಗವೇ ಇರುವುದಿಲ್ಲ.
ಶತ್ರುಗಳ ಕಾಟವೂ ಬೆನ್ನಬಿಡದೆ ಕಾಡುತ್ತಿರುತ್ತದೆ. ಇದಕ್ಕೆಲ್ಲ ತುಂಬಾನೇ ಸರಳವಾದ ಸುಲಭವಾದ ಚಿಕ್ಕದಾದ ತಂತ್ರೋಪಾಯ ಮಾಡಬಹುದು. ಯಾವುದೇ ಹಣದ ಖರ್ಚುವೆಚ್ಚ ಇಲ್ಲದೆ ಕೇವಲ ನಿಮ್ಮ ಉಗುರುಗಳ ಸಹಾಯದಿಂದ ಈ ತಂತ್ರವನ್ನು ಮಾಡಿ ಕಷ್ಟಗಳಿಂದ ಮುಕ್ತಿಯನ್ನು ಪಡೆಯಬಹುದು. ಮಹಾದೇವನು ಈ ಜಗತ್ತಿನ ಲಯಕಾರಕ, ಆತನ ಆಶೀರ್ವಾದ ಮತ್ತು ಕೃಪೆ ಯಾರ ಮೇಲೆ ಇರುತ್ತದೆಯೋ ಅವರಿಗೆ ಕಷ್ಟಗಳು ಕಡಿಮೆ, ಇವರಿಗೆ ಸೋಲು ಅನ್ನುವುದು ಕೂಡ ಹತ್ತಿರ ಬರುವುದಿಲ್ಲ ಜೀವನದಲ್ಲಿ ಅಂತೂ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ಸಾಮಾನ್ಯವಾಗಿ ವ್ಯಕ್ತಿಯ ಉಗುರುಗಳು ಪ್ರತಿದಿನವೂ ಬೆಳೆಯುತ್ತವೆ ಆದರೆ ಅವುಗಳನ್ನು ನಿತ್ಯವೂ ಕತ್ತರಿಸಲು ಆಗದು ಆದ್ದರಿಂದ ವ್ಯಕ್ತಿಯು ಏನು ಮಾಡುತ್ತಾನೆ ಅಂದರೆ ವಾರಕ್ಕೆ, ಹದಿನೈದು ದಿನಗಳಿಗೆ, ತಿಂಗಳಿಗೆ ಅವುಗಳನ್ನು ಕತ್ತರಿಸುತ್ತಾರೆ. ಆದರೆ ಉಗುರುಗಳಲ್ಲಿ ಶಕ್ತಿ ಅಡಗಿರುತ್ತದೆ ಅಂತ ಸಾಮಾನ್ಯವಾಗಿ ಎಲ್ಲರಿಗು ಗೊತ್ತಿರುವುದಿಲ್ಲ.
ಮುಖ್ಯವಾಗಿ ತಂತ್ರ ಗಳಲ್ಲಿ ಉಗುರುಗಳು ಬಟ್ಟೆಗಳು ಕೂದಲನ್ನು ಬಳಕೆ ಮಾಡುತ್ತಾರೆ. ನಿಮ್ಮನ್ನು ಅನಾರೋಗ್ಯವೂ ತುಂಬಾನೇ ಕಾಡುತ್ತಿದ್ದರೆ, ದುರ್ಭಾಗ್ಯವು ಹಿಂಬಾಲಿಸುತ್ತಿದ್ದರೆ ಶತ್ರುಗಳ ಕಾಟ ತಪ್ಪುತ್ತಿಲ್ಲ ಅಂದರೆ ಯಾವುದೇ ಕಾರ್ಯ ಮಾಡಲು ಹೋದರೆ ನಿಮಗೆ ಗೆಲುವು ಸಿಗುತ್ತಿಲ್ಲ ಅಂದರೆ ಯಾವುದೇ ಕೆಲಸ ಮಾಡಲು ಮನಸ್ಸು ಆಗುತ್ತಿಲ್ಲ ಅಂದರೆ ನಿಮ್ಮನ್ನು ನಕಾರಾತ್ಮಕ ಶಕ್ತಿಗಳು ಆವರಿಸಿಕೊಂಡಿವೆ ಅಂತ ತಿಳಿದುಕೊಳ್ಳಬೇಕು. ಈ ಎಲ್ಲ ಸಮಸ್ಯೆಗಳಿಂದ ನೀವು ದೂರ ಹೋಗಲು ಬಯಸಿದರೆ ಈ ಉಪಾಯವನ್ನು ಮಾಡಿ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮಂಗಳವಾರ ಗುರುವಾರ ಮತ್ತು ಶನಿವಾರ ಉಗುರುಗಳನ್ನು ಎಂದಿಗೂ ಕತ್ತರಿಸಬಾರದು. ಕೇವಲ ಭಾನುವಾರ ಮತ್ತು ಬುಧವಾರ ಉಗುರುಗಳನ್ನು ಕತ್ತರಿಸಬೇಕು. ಎರಡು ಕೈ ಕಾಲುಗಳ ಉಗುರುಗಳನ್ನು ಚೆನ್ನಾಗಿ ಕತ್ತರಿಸಿ ಸೂರ್ಯಾಸ್ತ ಆಗುವ ಮುನ್ನವೇ ಅವುಗಳನ್ನು ತೆಗೆದುಕೊಂಡು 41ಬಾರಿ ನಿಮ್ಮ ತಲೆಯ ಮೇಲಿಂದ ಕೆಳಗಿನವರೆಗೂ ನಿವಾಳಿಸಿ ಬೆಂಕಿಯಲ್ಲಿ ಸುಟ್ಟು ಹಾಕಬೇಕು.
ಇದರಿಂದ ನಿಮ್ಮನ್ನು ಆವರಿಸಿರುವ ಎಲ್ಲ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ. ಈ ತಂತ್ರವನ್ನು ನೀವು ವಾರದಲ್ಲಿ ಒಮ್ಮೆ ಅಥವಾ ಹದಿನೈದು ದಿನಗಳಲ್ಲಿ ಒಮ್ಮೆಯಾದರೂ ಮಾಡಿದರೆ ಶತ್ರುಗಳು ದೂರವಾಗುತ್ತಾರೆ. ಕಷ್ಟಗಳು ಎದುರಗುವುದು ಕ್ರಮೇಣ ಕಡಿಮೆ ಆಗುತ್ತದೆ. ಹಾಗೆಯೇ ಅನಾರೋಗ್ಯದಿಂದ ಬಳಲುತ್ತಿದ್ದರೆ ಆರೋಗ್ಯವೂ ಉತ್ತಮವಾಗುತ್ತದೆ. ಕತ್ತರಿಸಿದ ಉಗುರುಗಳನ್ನು ಕೆಲವರು ಬೇಡವಾದ ಜಾಗದಲ್ಲಿ ಹಾಗೂ ಡಸ್ಟ್ ಬೀನ್ ನಲ್ಲಿ ಚೆಲ್ಲುತ್ತಾರೆ ಇದೆ ಕಾರಣದಿಂದ ಅವರ ಜೀವನದಲ್ಲಿ ದುರ್ಭಾಗ್ಯ ಶುರು ಆಗಿರುತ್ತದೆ ಆದ ಕಾರಣವೇ ಈ ತಪ್ಪನ್ನು ಎಂದಿಗೂ ಮಾಡಬೇಡಿ. ಯಾರಿಗಾದರೂ ಕಾಣುವ ಹಾಗೆ ಕಾಲಿನಲ್ಲಿ ತುಳಿಯುವ ಹಾಗೆ ಉಗುರುಗಳನ್ನು ಎಂದಿಗೂ ಎಸೆಯಬಾರದು. ಹಣದ ಕೊರತೆ ಇದ್ದರೆ ನೌಕರಿ ಸಮಸ್ಯೆ ಇದ್ದರೆ ಕೈಕಾಲುಗಳ ಬೆರಳುಗಳನ್ನು ಚೆನ್ನಾಗಿ ಕತ್ತರಿಸಿ ಅವುಗಳನ್ನು ಮರದ ಕೆಳಗಡೆ ಹೂತು ಹಾಕಬೇಕು. ಕೇವಲ ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗುತ್ತದೆ. ಶುಭದಿನ.