ನಮಸ್ತೆ ಪ್ರಿಯ ಓದುಗರೇ, ಗಂಡು ಹೆಣ್ಣು ಸೇರಿ ಸಂತಾನ ಪಡೆಯುವುದು ಸೃಷ್ಟಿಯ ನಿಯಮವಾಗಿದೆ. ಆದರೆ ನಮ್ಮ ದೇಶ ನಮ್ಮ ಜಗತ್ತು ಇಷ್ಟೊಂದು ಆಧುನಿಕತೆಯನ್ನು ಒಳಗೊಂಡಿದ್ದರು ಕೂಡ ಕೆಲವು ದೇಶಗಳು ಇನ್ನೂ ಅದೇ ಹಳೆಯ ಪದ್ಧತಿಯಿಂದ ವಂಚನೆಗೆ ಒಳಗಾಗಿ ಹಿಂದುಳಿದಿವೆ. ಹೌದು ಹೆಣ್ಣು ಗಂಡು ಸೇರಿದರೆ ಮಾತ್ರ ಒಂದು ಹೊಸ ಜೀವ ಹುಟ್ಟಿಕೊಳ್ಳುತ್ತದೆ ಅನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಆಗಿದೆ ಗೆಳೆಯರೇ. ಆದರೆ ನಿಮಗೆ ಗೊತ್ತೇ ಗಂಡಸರೇ ಇಲ್ಲದಿರುವ ಈ ಒಂದು ವಿಶಿಷ್ಟವಾದ ಊರಿನಲ್ಲಿ ಹೆಂಗಸರು ಗರ್ಭಿಣಿಯರು ಆಗುತ್ತಾರಂತೆ. ನಿಜಕ್ಕೂ ಎಷ್ಟೊಂದು ಅಚ್ಚರಿ ಅಲ್ಲವೇ. ಒಂದು ವೇಳೆ ಇದು ಸುಳ್ಳು ಮಾಹಿತಿ ಅಂತ ನಿಮಗೆ ಅನ್ನಿಸಿದರೂ ಕೂಡ ಸ್ನೇಹಿತರೇ, ಇದು ನಿಜಕ್ಕೂ ಸತ್ಯ. ಅಂಥಹ ಒಂದು ವಿಚಿತ್ರವಾದ ಗ್ರಾಮದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ.ಹೌದು ಪುರುಷರು ಇಲ್ಲದೇ ಹೆಂಗಸರು ಮಾತ್ರ ಗರ್ಭವನ್ನು ಧರಿಸಲು ಸಾಧ್ಯವೇ ಅಂತ ನಿಮ್ಮ ಪ್ರಶ್ನೆ ಆಗಿರಬಹುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಮಹಿಳೆಯರು ಮಾತ್ರ ಗರ್ಭವನ್ನು ಹೇಗೆ ಧರಿಸುತ್ತಾರೆ, ಇದರ ಹಿಂದಿನ ಇತಿಹಾಸವಾದರೂ ಏನಿರಬಹುದು. ಅನ್ನುವ ಎಲ್ಲ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.
ಈ ಅದ್ಭುತವಾದ ಮಾಹಿತಿಯನ್ನು ತಪ್ಪದೇ ಓದುವುದನ್ನು ಮರೆಯಬೇಡಿ. ಹೆಂಗಸರು ಗಂಡಸರು ಇಲ್ಲದೆ ಗರ್ಭವತಿ ಆಗುವ ವಿಚಿತ್ರವಾದ ಮಹಿಳೆಯರು ಇರುವ ವಿಚಿತ್ರವಾದ ಗ್ರಾಮ ಇರುವುದು ಕೀನ್ಯಾ ದೇಶದಲ್ಲಿ. ಕೀನ್ಯಾ ದೇಶದಲ್ಲಿ ಇರುವ ಉಮೋಜೋ ಎಂಬ ಗ್ರಾಮ ಇದಕ್ಕೆ ತಕ್ಕ ಉದಾಹರಣೆ ಆಗಿದೆ. ಮನುಷ್ಯ ಸ್ವಾವಲಂಬಿ ಮತ್ತು ಸಂಘಜೀವಿ. ಪ್ರತಿಯೊಬ್ಬ ಮನುಷ್ಯನೂ ಮತ್ತೊಬ್ಬ ಮಾನವನ ಮೇಲೆ ಅವಲಂಬಿತವಾಗಿರುತ್ತಾರೆ. ಮನುಷ್ಯ ಮನುಷ್ಯರನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಆದರೆ ನಾವು ಹೆಣ್ಣು ಮತ್ತು ಗಂಡಿಗೆ ಹೋಲಿಸಿದರೆ ಗಂಡು ಮತ್ತು ಹೆಣ್ಣು ಬಿಟ್ಟು ಬದುಕಬಹುದು ಅವರ ಅಗತ್ಯಗಳಿಗೆ ಅವಶ್ಯಕತೆಗಳಿಗೆ ಅನುಗುಣವಾಗಿ ಇರಬಹುದು. ಆದರೆ ಕೆಲವು ದೇಶಗಳು ಕೇವಲ ಹೆಂಗಸರಿಗೆ ಮಾತ್ರ ಸೀಮಿತವಾಗಿದೆ. ಕೀನ್ಯಾ ದೇಶದ ಉಮೋಜೋ ಎಂಬ ಗ್ರಾಮದ ತುಂಬಾನೇ ಸಂಪೂರ್ಣವಾಗಿ ಹೆಂಗಸರಿಂದ ತುಂಬಿಕೊಂಡಿದೆ. ಇಲ್ಲಿ ತುಂಬಾನೇ ಸುಂದರವಾದ ಯುವತಿಯರು ಮಹಿಳೆಯರು ಕಾಣಿಸುತ್ತಾರೆ. ಯಾವುದೇ ಕಾರಣಕ್ಕೂ ಒಬ್ಬ ಪುರುಷರು ಕೂಡ ಇಲ್ಲಿ ವಾಸಿಸುವುದಿಲ್ಲ ಹಾಗೆಯೇ ಕಾಣ ಸಿಗುವುದಿಲ್ಲ. ಸುಮಾರು 27 ವರ್ಷಗಳ ಹಿಂದೆ ಕೇವಲ ಮಹಿಳೆಯರು ಮಾತ್ರ ಈ ಊರಿನಲ್ಲಿ ವಾಸಿಸುತ್ತಿದ್ದರು. ಇಲ್ಲಿ ಪುರುಷರನ್ನು ಸಂಪೂರ್ಣವಾಗಿ ನಿಷೇಧವನ್ನು ಮಾಡಲಾಗಿದೆ. ಈ ಗ್ರಾಮ ಹುಟ್ಟಿಕೊಂಡಾಗ ಕೇವಲ 15 ಜನ ಮಹಿಳೆಯರು ಇದ್ದರು. ಈಗ ಈ ಮಹಿಳೆಯರ ಸಂಖ್ಯೆಯೂ 150ಕ್ಕು ಹೆಚ್ಚು ಮೀರಿದೆ ಅಂತೆ ಗೆಳೆಯರೇ.
ಇದು ನಿಜಕ್ಕೂ ಅಚ್ಚರಿ ಅಲ್ಲವೇ. ಒಬ್ಬ ಪುರುಷನು ಇಲ್ಲದೆ ಇದ್ದರೂ ಕೂಡ ಮಹಿಳೆಯರ ಸಂಖ್ಯೆ ಅಧಿಕವಾಗಲು ಹೇಗೆ ಸಾಧ್ಯ ಅಂತ ನೀವು ಯೋಚಿಸಬಹುದು. ಇದಕ್ಕೆ ಒಂದು ಇತಿಹಾಸ ಅಂದರೆ ಒಂದು ಆಸಕ್ತಿಯುಳ್ಳ ಕಥೆಯೂ ಅಡಗಿದೆ. ಈ ಉಮೊಜೋ ಗ್ರಾಮವನ್ನು ಪ್ರವೇಶ ದ್ವಾರದ ಬಳಿ ಒಂದು ದೊಡ್ಡದಾದ ಬೋರ್ಡ್ ನಲ್ಲಿ ಕಪ್ಪು ಅಕ್ಷರಗಳಿಂದ ಇಲ್ಲಿ ಪುರುಷರಿಗೆ ಪ್ರವೇಶವನ್ನು ನಿಷೇಧ ಮಾಡಲಾಗಿದೆ ಅಂತ ಬರೆಯಲಾಗಿದೆ. 1990 ವರ್ಷದಲ್ಲಿ ಆಂಗ್ಲರು ಕೀನ್ಯಾ ದೇಶದ ಸ್ತ್ರೀಯರ ಮೇಲೆ ಆಕ್ರಮಣ ಮಾಡಿದ್ದರು. ಅವರ ದೌರ್ಜನ್ಯ ಮತ್ತು ಹಿಂಸೆಯನ್ನು ತಾಳಲಾರದೆ ತಮ್ಮದೇ ಆದ ಒಂದು ಗ್ರಾಮವನ್ನು ಕಟ್ಟಿಕೊಂಡು ಯಾರ ಹಂಗಿಲ್ಲದೆ ಬದುಕಬೇಕು ಅನ್ನುವ ಉದ್ದೇಶದಿಂದ ಈ ಮಹಿಳೆಯರು ಈ ಉಮೋಜೊ ಎಂಬ ಗ್ರಾಮವನ್ನು ಕಟ್ಟುತ್ತಾರೆ. ಆಗ ಅಲ್ಲಿಯ ಮಹಿಳೆಯರ ಸಂಖ್ಯೆ ಕೇವಲ ಹದಿನೈದು ಜನರು ಮಾತ್ರ.
ಇದು ಹೇಗೆ ಸಾಧ್ಯವಾಯಿತು ಅಂದರೆ ಪ್ರಕೃತಿಯ ನಿಯಮದ ಪ್ರಕಾರ ದೇಹದ ಆಸೆಯನ್ನು ತೀರಿಸಿಕೊಳ್ಳಲು ಈ ಮಹಿಳೆಯರು ಪಕ್ಕದ ಊರಿಗೆ ಹೋಗುತ್ತಿದ್ದರು. ಅವರು ಗರ್ಭಿಣಿಯಾಗಿ ತಮಗೆ ಹೆಣ್ಣು ಮಗುವಾದರೆ ತಮ್ಮ ಜೊತೆಗೆ ಉಮೋಜೋ ಊರಿಗೆ ಕರೆದುಕೊಂಡು ಬರುತ್ತಿದ್ದರು ಒಂದು ವೇಳೆ ಗಂಡುವಾದರೆ ಯಾವ ಪುರುಷನ ಜೊತೆಗೆ ದೈಹಿಕ ಸಂಪರ್ಕವನ್ನು ಹೊಂದಿರುತ್ತಾರೆಯೋ ಅವರಿಗೆ ಆ ಗಂಡು ಮಗುವನ್ನು ಒಪ್ಪಿಸಿ ಬರುತ್ತಿದ್ದರು ಇಂಥಹ ಒಂದು ವಿಚಿತ್ರವಾದ ಪದ್ಧತಿ ಅಲ್ಲಿ ಇತ್ತು ಗೆಳೆಯರೇ. ಆದರೆ ಈ ಊರಿನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಗೆ ಕೊರತೆ ಇರಲಿಲ್ಲ. ಉಮೋಜೋ ಗ್ರಾಮದಲ್ಲಿ ಸುಜಜ್ಜಿತ ಆಸ್ಪತ್ರೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸುಂದರವಾದ ಉದ್ಯಾನಗಳು ಕೂಡ ಇಲ್ಲಿವೆ. ಇವರು ಉದ್ಯಾನವನದ ಪ್ರವೇಶ ಶುಲ್ಕದ ಮೂಲಕ ಹಣವನ್ನು ಸಂಪಾದನೆಯನ್ನು ಕೂಡ ಮಾಡುತ್ತಾರೆ. ಆದರೆ ಇಲ್ಲಿ ಪುರುಷರನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಇಷ್ಟೊಂದು ಟೆಕ್ನಾಲಜಿ ಮುಂದುವರೆದಿದ್ದರೂ ಕೂಡ ಕೀನ್ಯಾ ದೇಶದ ಈ ಗ್ರಾಮವು ಒಂದು ವಿಶಿಷ್ಟತೆ ಹೊಂದಿದೆ. ಶುಭದಿನ.