ನಮಸ್ತೆ ಪ್ರಿಯ ಓದುಗರೇ ನಮ್ಮ ದೇಹದಲ್ಲಿ ಕೆಲವೊಂದು ಬಾರಿ ನಮಗೆ ಅರಿವು ಇಲ್ಲದೆ ದೇಹದಲ್ಲಿ ಏನೇನೋ ಬದಲಾವಣೆಗಳು ಆಗುತ್ತಿರುತ್ತದೆ, ಏನೇನೋ ಸಮಸ್ಯೆಗಳು ಉದ್ಭವ ಆಗುತ್ತಿರುತ್ತವೆ. ಆದರೆ ಈ ರೋಗದ ಲಕ್ಷಣಗಳು ನಿಧಾನವಾಗಿ ಒಂದೊಂದಾಗಿ ಕಾಣಿಸಿಕೊಳ್ಳುತ್ತದೆ. ಆ ರೋಗವೇ ಥೈರಾಯ್ಡ್. ಈ ಥೈರಾಯ್ಡ್ ಸಮಸ್ಯೆ ಅನ್ನುವುದು ಒಂದು ವೈದ್ಯಕೀಯ ಭಾಷೆಯಲ್ಲಿ ಗಂಭೀರ ಕಾಯಿಲೆ ಅಂತ ಹೇಳಬಹುದು. ಈ ಸಮಸ್ಯೆ ಸಾಮಾನ್ಯವಾಗಿ ಹಾರ್ಮೋನ್ ಗಳ ಅಸಮತೋಲನದಿಂದಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದ ಮುಂದೆ ಮಕ್ಕಳು ಆಗುವ ಕಡಿಮೆ ಸಂಭವ ಇರುತ್ತದೆ ಆದ್ದರಿಂದ ಇದರ ಬಗ್ಗೆ ಕಾಳಜಿ ಮಾಡುವುದು ತುಂಬಾನೇ ಅತ್ಯವಶ್ಯಕ. ಇದು ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಹಾರ್ಮೋನ್ ಗಳ ಬಿಡುಗಡೆ ಆಗದೆ ಇದ್ದರೆ ಈ ಸಮಸ್ಯೆ ಅನ್ನುವುದು ಖಂಡಿತವಾಗಿ ಬರುತ್ತದೆ ಇದರಲ್ಲಿ ಎರಡನೆಯ ಮಾತು ಇಲ್ಲ ಮಿತ್ರರೇ. ನಮ್ಮ ಭಾರತ ದೇಶದಲ್ಲಿ 10 ಜನರಲ್ಲಿ ಒಬ್ಬರಿಗಾದರು ಈ ಸಮಸ್ಯೆ ಅನ್ನುವುದು ಖಂಡಿತವಾಗಿ ಇರುತ್ತದೆ. ಈ ಥೈರಾಯ್ಡ್ ಸಮಸ್ಯೆಯ ಮುಖ್ಯ ಲಕ್ಷಣಗಳು ಅಂದರೆ ನಿಶ್ಯಕ್ತಿ, ಕೂದಲು ಉದುರುವಿಕೆಗೆ, ತೂಕ ಇಳಿಯುವುದು ಹೀಗೆ ಇನ್ನಿತರ ಈ ರೋಗದ ಲಕ್ಷಣಗಳು ಆಗಿವೆ ಹಾಗೆಯೇ ದೇಹದಲ್ಲಿ ಪ್ರೊಟೀನ್ ಕ್ಯಾಲ್ಸಿಯಂ ವಿಟಮಿನ್ ಗಳ ಕೊರತೆ ಇಂದ ಈ ರೋಗ ಬರುತ್ತದೆ ಮುಖ್ಯವಾಗಿ ದೇಹದಲ್ಲಿ ಅಯೋಡಿನ್ ಕೊರತೆ ಇಂದ ಈ ಸಮಸ್ಯೆ ಎದುರಾಗುತ್ತದೆ.
ಹಾಗಾದರೆ ಮನೆಯಲ್ಲಿ ನಾವು ಸಿಗುವ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಮನೆಮದ್ದು ತಯಾರಿಸಿ ಕಡಿಮೆ ಖರ್ಚಿನಲ್ಲಿ ನಾವು ಈ ಥೈರಾಯ್ಡ್ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು. ಜೊತೆಗೆ ನಮ್ಮ ಆಹಾರ ಕ್ರಮದಲ್ಲಿ ಸರಿಯಾದ ಬದಲಾವಣೆ ಮಾಡಿಕೊಂಡರೆ ಖಂಡಿತವಾಗಿ ಈ ಸಮಸ್ಯೆಯಿಂದ ನಾವು ಪಾರಾಗಬಹುದು. ಈ ಸಮಸ್ಯೆ ಅನ್ನುವುದು ತುಂಬಾನೇ ದೊಡ್ಡ ಸಮಸ್ಯೆ ಆಗಿದೆ ಆದ್ರೆ ನಾವು ಪ್ರಾರಂಭದ ಹಂತದಲ್ಲಿ ಕಾಳಜಿಯನ್ನು ವಹಿಸಿದರೆ ಭಯ ಪಡುವ ಅವಶ್ಯಕತೆ ಇಲ್ಲ ಮಿತ್ರರೇ. ಆದರೆ ನಿರ್ಲಕ್ಷ್ಯವನ್ನು ಮಾಡಿದರೆ ಮುಂದೆ ಭವಿಷ್ಯದಲ್ಲಿ ತುಂಬಾನೇ ದೊಡ್ಡದಾದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ನಾವು ತಿಳಿಸುವ ಈ ಕೆಲವು ಸಲಹೆಯನ್ನು ಮನೆಮದ್ದನ್ನು ನೀವು ಅಳವಡಿಸಿಕೊಂಡರೆ ಖಂಡಿತವಾಗಿ ನೀವು ಈ ಥೈರಾಯ್ಡ್ ಸಮಸ್ಯೆಗೆ ಬೈ ಬೈ ಹೇಳಬಹುದು. ಥೈರಾಯ್ಡ್ ಸಮಸ್ಯೆ ಇರುವವರಿಗೆ ಬೇಗ ಬೇಗ ಊಟ ಮಾಡಲು ಆಗುವುದಿಲ್ಲ. ಇವರು ವೈದ್ಯರ ಹತ್ತಿರ ಹೋಗಿ ಇದಕ್ಕೆ ಚಿಕಿತ್ಸೆ ಪಡೆಯುತ್ತಾರೆ ಜೊತೆಗೆ ಮಾತ್ರೆಗಳನ್ನು ಸದಾ ಕಾಲ ತಿನ್ನುತ್ತಲೇ ಬರುತ್ತಾರೆ.
ಈ ಥೈರಾಯ್ಡ್ ನಲ್ಲಿ ಎರಡು ವಿಧಗಳಿವೆ, ಒಂದು ದೇಹದ ತೂಕವನ್ನು ಹೆಚ್ಚಿಸುವ ಥೈರಾಯ್ಡ್ ಮತ್ತು ದೇಹದ ತೂಕವನ್ನು ಕಡಿಮೆ ಮಾಡುವ ಥೈರಾಯ್ಡ್ ಎಂಬ ಎರಡು ಬಗೆಯ ವಿಧಗಳಿವೆ. ನೀವು ರಕ್ತ ತಪಾಸಣೆ ಮೂಲಕ ಈ ರೋಗವನ್ನು ನೀವು ಪತ್ತೆ ಹಚ್ಚಬಹುದು. ಹಾಗೆಯೇ ಯಾವ ಮನೆಮದ್ದುಗಳನ್ನು ಬಳಕೆ ಮಾಡಿದರೆ ಈ ಸಮಸ್ಯೆಯಿಂದ ದೂರವಾಗುವುದು ಅಂತ ನೋಡುವುದಾದರೆ, ಕೊತ್ತಂಬರಿ ಬೀಜದ ನೀರು. ಇದು ಹಳೆಯ ಕಾಲದ ಪದ್ಧತಿ ಆಗಿದ್ದು ಇದನ್ನು ಮೊದಲಿನ ಕಾಲದಿಂದಲೂ ಜನರು ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ನೀವು 2 ಟೀ ಚಮಚ ಕೊತ್ತಂಬರಿ ಬೀಜಗಳನ್ನು ಇಡಿ ರಾತ್ರಿ ಒಂದು ಲೋಟ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡಬೇಕು. ಪ್ರತಿ ದಿನ ಈ ರೀತಿ ಮಾಡುತ್ತಾ ಬಂದರೆ ಕ್ರಮೇಣವಾಗಿ ನಿಮ್ಮ ಥೈರಾಯ್ಡ್ ಹಾರ್ಮೋನಿನ ಸಮಸ್ಯೆ ಬಗೆಹರಿಯುತ್ತದೆ. ಇದು ಆಯುರ್ವೇದದಲ್ಲಿ ಈ ಚಿಕಿತ್ಸೆಗೆ ತುಂಬಾನೇ ಬೇಡಿಕೆ ಇದೆ ಮಿತ್ರರೇ. ಇದು ತುಂಬಾನೇ ಸರಳವಾದ ಸುಲಭವಾದ ಮನೆಮದ್ದು ಆಗಿದೆ. ಒಂದು ಬಾರಿ ಪ್ರಯತ್ನ ಮಾಡಿ ಥೈರಾಯ್ಡ್ ಎಂಬ ಮಹಾಮಾರಿ ರೋಗದಿಂದ ಮುಕ್ತಿ ಪಡೆಯಿರಿ.