ದಿನ ಒಂದು ಮೊಟ್ಟೆ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳು ಒಂದಲ್ಲ ನೂರೆಂಟು

ಆರೋಗ್ಯ

ನಮಸ್ತೆ ಪ್ರಿಯ ಓದುಗರೇ, ಮೊಟ್ಟೆಯನ್ನು ಇಷ್ಟ ಪಡದವರಿಲ್ಲ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟ ಪಟ್ಟು ಮೊಟ್ಟೆಯನ್ನು ತಿನ್ನುತ್ತಾರೆ. ಮೊಟ್ಟೆ ತಿನ್ನಲು ರುಚಿಯಾಗಿ ಇರುವುದಿಲ್ಲ ಆದರೆ ಆರೋಗ್ಯಕ್ಕೆ ತುಂಬಾನೇ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಮೊಟ್ಟೆಯನ್ನು ಪೌಷ್ಟಿಕಾಂಶಗಳ ಆಗರ ಅಂತ ಕರೆದರೆ ತಪ್ಪಾಗಲಾರದು. ಇತರ ಆಹಾರಗಳಿಗೆ ಮೊಟ್ಟೆಯನ್ನು ಹೋಲಿಕೆ ಮಾಡಿದರೆ ಇದು ತುಂಬಾನೇ ಪರ್ಯಾಯವಾಗಿದೆ ಜೊತೆಗೆ ಬೆಲೆಯಲ್ಲಿ ಅಗ್ಗವು ಕೂಡ ಆಗಿದೆ. ಆದ್ದರಿಂದ ಇಂದಿನ ಲೇಖನದಲ್ಲಿ ನಾವು ನಿಮಗೆ ಮೊಟ್ಟೆಯನ್ನು ನಿತ್ಯವೂ ಸೇವನೆ ಮಾಡುವುದರಿಂದ ಆಗುವ ಆರೋಗ್ಯಕರ ಲಾಭಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಜೊತೆಗೆ ನಿಮ್ಮಲ್ಲಿ ಒಂದು ಚಿಕ್ಕ ಮನವಿ ಏನೆಂದರೆ ನಮ್ಮ ಈ ಲೇಖನವನ್ನು ಕೊನೆಯವರೆಗೂ ಓದಿ. ಇದರಿಂದ ಮೊಟ್ಟೆಯಲ್ಲಿರುವ ಆರೋಗ್ಯಕರ ಗುಣಗಳನ್ನು ಪ್ರಯೋಜನಗಳನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು.

ಈಗಾಗಲೇ ಹೇಳಿರುವ ಹಾಗೆ ಮೊಟ್ಟೆ ಪೋಷಕಾಂಶಗಳ ಖನಿಜ. ದಿನಕ್ಕೆ ಒಂದು ಮೊಟ್ಟೆಯನ್ನು ತಿಂದರೆ ಬೇಕಾದಷ್ಟು ಶಕ್ತಿ ಸಾಮರ್ಥ್ಯ ಪೋಷಕಾಂಶಗಳು ಪೌಷ್ಟಿಕತೆ ಎಲ್ಲವೂ ದೊರೆಯುತ್ತದೆ. ಮತ್ತು ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶವನ್ನು ನಾವು ಮೊಟ್ಟೆಯನ್ನು ನಿತ್ಯವೂ ಸೇವನೆ ಮಾಡುವುದರಿಂದ ಸುಲಭವಾಗಿ ಪಡೆದುಕೊಳ್ಳಬಹುದು. ಮೊಟ್ಟೆಯಲ್ಲಿ ಕಬ್ಬಿಣ ಸತು ಪೊಟ್ಯಾಶಿಯಂ, ಖನಿಜಗಳು ಲವಣಗಳು ಮತ್ತು ಮ್ಯಾಗ್ನಿಷಿಯಂ ಅಂಥಹ ಅಂಶಗಳು ಒಳಗೊಂಡಿರುತ್ತದೆ. ಹೀಗಾಗಿ ಮೊಟ್ಟೆಯನ್ನು ಸೇವನೆ ಮಾಡುವುದರಿಂದ ಈ ಅಂಶಗಳು ಸಮೃದ್ಧವಾಗಿ ನಮ್ಮ ದೇಹವನ್ನು ಸೇರಿ ದೇಹಕ್ಕೆ ಅಗತ್ಯವಾದ ಎಲ್ಲ ಪೌಷ್ಠಿಕಾಂಶಗಳನ್ನು ಒದಗಿಸಿ ಕೊಡುತ್ತದೆ. ಇನ್ನೂ ಇದರ ಲಾಭಗಳನ್ನು ಒಂದೊಂದಾಗಿ ಹೇಳುವುದಾದರೆ, ಮೊಟ್ಟೆಯಲ್ಲಿ ವಿಟಮಿನ್ ಬಿ12 ಹೇರಳವಾಗಿರುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಪ್ರತಿದಿನ ಒಂದು ಮೊಟ್ಟೆ ತಿನ್ನುವುದರಿಂದ ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಮೊಟ್ಟೆಯ ಬಿಳಿಯನ್ನು ಮುಖಕ್ಕೆ ಲೇಪಿಸಿ, ಒಣಗಿದ ನಂತರ ತಂಪಾದ ನೀರಿನಿಂದ ತೊಳೆದರೆ, ಮುಖದ ಮೇಲಿನ ಕಲೆಗಳು, ನೆರಿಗೆಗಳು ಕಡಿಮೆಯಾಗುತ್ತವೆ. ಮೊಟ್ಟೆಯಲ್ಲಿ ವಿಟಮಿನ್ ಎ ಅಂಶ ಇರುವುದರಿಂದ ವಯಸ್ಸಾದಂತೆ ಕಾಡುವ ಕಣ್ಣಿನ ಕುರುಡುತನ ಸಮಸ್ಯೆಯನ್ನು ಹೋಗಲಾಡಿಸಲು ತುಂಬಾನೇ ಸಹಾಯ ಮಾಡುತ್ತದೆ. ನಮ್ಮ ದೇಹಕ್ಕೆ ಯಾವುದು ಒಳಿತು ಯಾವುದು ಕೆಡಕು ಅನ್ನುವ ಮತ್ತು ಯಾವ ಆಹಾರವನ್ನು ಸೇವಿಸಿದರೆ ದೇಹಕ್ಕೆ ಪೌಷ್ಟಿಕತೆ ಸಿಗುತ್ತದೆ ಅನ್ನುವುದರ ಬಗ್ಗೆ ಚೆನ್ನಾಗಿ ಗಮನ ಹರಿಸಬೇಕು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನುವ ಗಾದೆ ಮಾತಿಗೆ ಈ ಮೊಟ್ಟೆಯೇ ಸಾಕ್ಷಿಯಾಗಿದೆ. ಇನ್ನೂ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ನಿತ್ಯವೂ ಒಂದು ಮೊಟ್ಟೆಯನ್ನು ಸೇವಿಸಿದರೆ ಸಾಕು ಮೊಟ್ಟೆಯು ನಿಮ್ಮ ಹೊಟ್ಟೆಯೂ ತುಂಬಿದಂತೆ ಭಾಸವಾಗುತ್ತದೆ.

ಇದರಿಂದ ನಿಮಗೆ ಹಸಿವಿನ ಅರಿವು ಬರದೇ ಮಧ್ಯ ಮಧ್ಯ ಯಾವುದೇ ಆಹಾರವನ್ನು ಸೇವಿಸಲು ಮನಸ್ಸು ಆಗದೆ ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಮೊಟ್ಟೆಯಲ್ಲಿ 500ಗ್ರಾಂ ಕ್ಯಾಲೋರಿ ಇರುವುದರಿಂದ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಅಷ್ಟೇ ಅಲ್ಲದೇ ಮೆದುಳಿನ ಆರೋಗ್ಯಕರ ಪೋಷಕಾಂಶಗಳನ್ನು ಈ ಮೊಟ್ಟೆ ಒಳಗೊಂಡಿದೆ. ಮೆದುಳಿನ ಆರೋಗ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ಮೊಟ್ಟೆಯನ್ನು ಹೇಳಿ ಮಾಡಿಸಿದ ಆಹಾರವಾಗಿದೆ. ಇನ್ನೂ ಮೊಟ್ಟೆಯು ಉತ್ತಮವಾದ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತದೆ. ಮೊಟ್ಟೆಯಲ್ಲಿ ಸಾಧಾರಣ ಆರು ಗ್ರಾಂ ನಶ್ಟು ಪ್ರೊಟೀನ್ ಅಂಶವನ್ನು ಒಳಗೊಂಡಿದೆ. ಇದರ ಜೊತೆಗೆ ಅಮೈನೋ ಆಮ್ಲಗಳನ್ನು ಕೂಡ ಹೊಂದಿದೆ. ಹಾಗಾಗಿ ಇಷ್ಟು ಅಂಶಗಳು ನಿತ್ಯವೂ ನಮ್ಮ ದೇಹವನ್ನು ಸೇರುತ್ತಾ ಬಂದರೆ ನಮ್ಮ ದೇಹವು ಕಬ್ಬಿಣದಂತೆ ಗಟ್ಟಿ ಮುಟ್ಟಾಗುತ್ತದೆ. ಮಾಂಸ ಖಂಡಗಳು ಸದೃಢವಾಗಿ ರೂಪುಗೊಳ್ಳುತ್ತವೆ. ಮತ್ತು ರಕ್ತದೊತ್ತಡ ಕಡಿಮೆ ಆಗಿ ಮೂಳೆಗಳು ಸ್ನಾಯುಗಳ ಬಲಶಾಲಿಯಾಗಿ ಬೆಳೆಯುತ್ತವೆ. ಮೊಟ್ಟೆಯ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವು ಊಹಾಪೂಹಗಳು ಹರಿದಾಡಿದರು ಅದರಲ್ಲಿರುವ ಪೋಷಕಾಂಶಗಳು ಎಂದಿಗೂ ಅಡಗಿಯೇ ಇರುತ್ತದೆ ಹೀಗಾಗಿ ಮೊಟ್ಟೆಯನ್ನು ಸೇವಿಸಿ. ಉತ್ತಮವಾದ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *