ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ಅಂಟುವಾಳ ಕಾಯಿ ಬಗ್ಗೆ ತಿಳಿಸಿಕೊಡುತ್ತೇವೆ. ಬಹಳ ಹಿಂದಿನ ಕಾಲದಲ್ಲಿ ಜನರು ದೇಹದ ಸ್ವಚ್ಛತೆಗೆ ಮತ್ತು ಸೌಂದರ್ಯಕ್ಕೆ ಸೋಪುಗಳಿಗಿಂತ ಈ ಅಂಟುವಾಳ ಕಾಯಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಈ ಅಂಟುವಾಳ ಕಾಯಿಯನ್ನು ಹಿಂದಿನ ಕಾಲದಿಂದಲೂ ಬಳಕೆ ಮಾಡಲಾಗಿದ್ದು ಇದನ್ನು ಬೆಳ್ಳಿಯ ಆಭರಣಗಳನ್ನು ತಯಾರಿಸಲು ಬಟ್ಟೆಯನ್ನು ತೊಳೆಯಲು ಮತ್ತು ಸೌಂದರ್ಯ ವರ್ಧಕ ಉತ್ಪನ್ನಗಳನ್ನು ತಯಾರಿಸಲು ಈ ಅಂಟುವಾಳ ಕಾಯಿಯನ್ನು ಬಳಕೆ ಮಾಡುತ್ತಿದ್ದರು. ಇದು ಒಂದು ನೈಸರ್ಗಿಕ ಮಾರ್ಜಕ ಆಗಿದ್ದು, ಯಾವುದೇ ಅಡ್ಡ ಪರಿಣಾಮಗಳೂ ಇಲ್ಲದೆ ಯಾವುದೇ ರಾಸಾಯನಿಕಯುಕ್ತವಲ್ಲದೆ ಚರ್ಮಕ್ಕೆ ಸುರಕ್ಷತೆಯನ್ನು ಒದಗಿಸುವಲ್ಲಿ ಜನಪ್ರಿಯತೆಯನ್ನು ಒಳಗೊಂಡಿದೆ ಈ ಅಂಟುವಾಳ ಕಾಯಿ. ಕೇವಲ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ತಯಾರಿಸಲು ಬಳಸುವುದಲ್ಲದೇ ಕೂದಲಿನ ಆರೋಗ್ಯಕರ ಪೋಷಣೆಗೆ ಈ ಕಾಯಿಯನ್ನು ಬಳಕೆ ಮಾಡುತ್ತಿದ್ದರು. ಇದು ಮೂಲತಃ ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣ ಸಿಗುತ್ತದೆ ಇದನ್ನು ಅಂಟಲ್ ಕಾಯಿ ಅಂತ ಕೂಡ ಕರೆಯುತ್ತಾರೆ. ಇನ್ನೂ ದಕ್ಷಿಣ ಭಾರತದಲ್ಲಿ ಇದನ್ನು ನಾವು ಯಥೇಚ್ಛವಾಗಿ ಕಾಣಬಹುದು. ಈ ವೃಕ್ಷವು 10-12 ಮೀಟರ್ ಮಧ್ಯಮ ಗಾತ್ರದಲ್ಲಿ ಬೆಳೆಯುವ ಮರವಾಗಿದೆ.
ಈ ಕಾಯಿ ನೋಡಲು ಕಪ್ಪು ಬಣ್ಣದ್ದಾಗಿದ್ದು ತುಂಬಾನೇ ಗಟ್ಟಿಯಾಗಿ ಇರುತ್ತವೆ. ಈ ಅಂಟಳ್ ಕಾಯಿಯ ಕಾಲವು ಫೆಬ್ರುವರಿ ಮತ್ತು ಮೇ ತಿಂಗಳು. ಹಾಗಾದರೆ ಬನ್ನಿ ಈ ಕಾಯಿಯ ಪ್ರಯೋಜನಗಳ ಪಟ್ಟಿಯನ್ನು ನಿಮಗೆ ಪರಿಚಯ ಮಾಡಿ ಕೊಡುತ್ತೇವೆ. ಈ ಅಂಟುವಾಳ ಕಾಯಿಯನ್ನು ಸಂಗ್ರಹಿಸಿ ಉಪಯೋಗಿಸುವುದು ಮತ್ತು ಅದನ್ನು ಜಜ್ಜಿ ಅದರ ರಸ ಅಥವಾ ಪುಡಿ ಮಾಡಿ ಬಳಕೆ ಮಾಡುವುದು ಶ್ರಮದ ಕೆಲಸವಾಗಿದೆ. ಆದ್ದರಿಂದ ಇಂದಿನ ಆಧುನಿಕ ಯುಗದಲ್ಲಿ ರೆಡಿಮೇಡ್ ಶ್ಯಾಂಪೂಗಳು ಬಂದಿರುವ ಕಾರಣ ಈ ಕಾಯಿಯು ಯಾರಿಗೂ ಬೇಡವಾಗಿ ಹೋಗಿ ಬಿಟ್ಟಿದೆ. ಮೊದಲನೆಯ ಉಪಯೋಗ ಹೇಳುವುದಾದರೆ ಈ ಗಿಡದ ಕಾಯಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಒಣಗಿಸಿ ಕೂದಲಿಗೆ ಚೆನ್ನಾಗಿ ಹಚ್ಚಿ ಶಾಂಪೂವಿನಂತೆ ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಸುಂದರವಾಗಿ ದಟ್ಟವಾಗಿ ಉದ್ದವಾಗಿ ಕೋಮಲದಂತೆ ಕೂದಲು ಬೆಳೆಯುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಅಂಟುವಾಳ ಕಾಯಿಯು ತಲೆ ಕೂದಲು ಮತ್ತು ಚರ್ಮಕ್ಕೆ ಹೇಳಿ ಮಾಡಿಸಿರುವ ಒಂದು ಕಾಯಿಯಾಗಿದೆ. ಆದ್ದರಿಂದ ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕಾಯುಕ್ತ ಶಾಂಪೂಗಳನ್ನು ಬಳಕೆ ಮಾಡುವ ಬದಲು ಅಂಟುವಾಳ ಕಾಯಿ ಬಳಕೆ ಮಾಡುವುದು ಸೂಕ್ತ ಎನ್ನಲಾಗಿದೆ. ಇನ್ನೂ ನೀವು ತಲೆಯಲ್ಲಿ ಹೇನಿನ ಸಮಸ್ಯೆಯಿಂದ ಮುಜುಗರ ಪಡುತ್ತಿದ್ದರೆ ಈ ಗಿಡದ ಕಾಯಿಯನ್ನು ತಂದು ಅದನ್ನು ಜಜ್ಜಿ ವಿನೆಗರ್ ಜೊತೆಗೆ ಸೇರಿಸಿ ಕಲಸಿ ತಲೆ ಕೂದಲಿಗೆ ಹಚ್ಚುವುದರಿಂದ ಹೇನುಗಳು ನಾಶವಾಗುತ್ತವೆ.
ಇನ್ನೂ ಕೈ ತೊಳೆಯುವ ಉತ್ಪನ್ನಗಳಲ್ಲಿ ಮುಖ ತೊಳೆಯುವ ಕೆಲವು ವರ್ಧಕಗಳಲ್ಲಿ ಈ ಅಂಟುವಾಳ ಕಾಯಿಯನ್ನು ಬಳಕೆ ಮಾಡಲಾಗುತ್ತಿದೆ. ಇನ್ನೂ ಚೇಳು, ಹುಳುಕಡ್ಡಿ ಇನ್ನಿತರ ವಿಷಕಾರಿ ಕೀಟಗಳ ಕಡಿತಕ್ಕೆ ಈ ಅಂಟುವಾಳ ಕಾಯಿ ಗಂಧದ ಲೇಪನವನ್ನು ಮಾಡುವುದರಿಂದ ನೋವು ಕಡಿಮೆ ಆಗುತ್ತದೆ ಜೊತೆಗೆ ವಿಷವು ದೇಹದ ತುಂಬಾ ಹರಿಯುವುದನ್ನು ತಡೆಹಿಡಿಯುತ್ತದೆ. ಹೌದು ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕ ಯುಕ್ತ ಪ್ರಾಡಕ್ಟ್ ಗಳನ್ನೂ ಬಳಕೆ ಮಾಡುವುದರಿಂದ ಇದು ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಬೀರುತ್ತವೆ ಅನ್ನುವ ಸಂಗತಿ ನಿಮಗೂ ಗೊತ್ತಿದೆ ಗೆಳೆಯರೇ. ಆದ್ದರಿಂದ ಪ್ರಕೃತಿ ಅನ್ನುವುದು ನಮಗೆ ಸಾಕಷ್ಟು ಉಡುಗೊರೆಯನ್ನು ಕೊಟ್ಟಿದೆ ಆದ್ದರಿಂದ ಆದಷ್ಟು ಪ್ರಕೃತಿಯಲ್ಲಿ ದೊರೆಯುವ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡಿ. ಇದರಿಂದ ಯಾವುದೇ ಅಡ್ಡಪರಿಣಾಮಗಳು ಕೂಡ ಬೀರುವುದಿಲ್ಲ. ಜೊತೆಗೆ ನಿಧಾನವಾದರೂ ಸರಿಯೇ ಸುರಕ್ಷಿತವಾದ ಫಲಿತಾಂಶವನ್ನು ಪಡೆಯಬಹುದು. ಇನ್ನೂ ಈ ಅಂಟುವಾಳ ಕಾಯಿಯನ್ನು ನೀರಿನಲ್ಲಿ ನೆನೆಸಿ ಅದರ ಜೊತೆಯಲ್ಲಿ ಬಂಗಾರದ ವಿಗ್ರಹಗಳನ್ನು ಹಾಕಿ ಚೆನ್ನಾಗಿ ತೊಳೆಯಿರಿ ಇದರಿಂದ ತುಕ್ಕು ಕೊಳೆ ಎಲ್ಲವೂ ತೊಳೆದು ಹೋಗುತ್ತದೆ. ಇಷ್ಟೊಂದು ಲಾಭದಾಯಕವಾಗಿದೆ ಈ ಅಂಟುವಾಳ ಕಾಯಿ. ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.