ಒಂದೇ ದಿನದಲ್ಲಿ ಮೊಡವೆ ಗುಳ್ಳೆ ಮಾಯಾ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಮೊಡವೆಗಳೆಂದರೆ ಅದೇನೋ ಬೇಜಾರು ಮುಜುಗರ ಬೇಸರ. ಅದರಲ್ಲೂ ಈ ಹದಿ ಹರಿಯದ ಯುವ ಜನತೆಯಲ್ಲಿ ಈ ಮೊಡವೆ ಸಮಸ್ಯೆಗಳು ಎಡಬಿಡದೇ ಕಾಡುತ್ತವೆ. ಮತ್ತು ಮುಖ್ಯವಾಗಿ ಮಹಿಳೆಯರಲ್ಲಿ ಈ ಮೊಡವೆಯ ಸಮಸ್ಯೆಗಳು ತುಂಬಾನೇ ಸಹಜವಾಗಿ ಬಿಟ್ಟಿದೆ. ಈ ಮೊಡವೆಗಳು ಮುಖದಲ್ಲಿ ಮೂಡಲು ಕಾರಣವನ್ನು ನಾವು ಹುಡುಕುತ್ತಾ ಹೋದರೆ ನಾವು ಸೇವಿಸುವ ಅಪೌಷ್ಟಿಕಾಂಶ ಆಹಾರ ಮತ್ತು ವಿಷಪೂರಿತ ಮಾಲಿನ್ಯಕಾರಕ ಗಾಳಿ ಬೆಳಕು ಹಲವಾರು ಮುಖದಲ್ಲಿ ಮೊಡವೆಗಳಿಗೆ ಕಾರಣವಾಗಿವೆ. ಮುಖದಲ್ಲಿ ಮೊಡವೆಗಳಾದರೆ ತುಂಬಾನೇ ಮುಜುಗರ ಆಗುತ್ತದೆ. ಇದರಿಂದ ಎದುರುಗಡೆ ಇರುವ ವ್ಯಕ್ತಿಯ ಜೊತೆಗೆ ಮುಖ ಕೊಟ್ಟು ಕೂಡ ಮಾತನಾಡಲು ಮನಸ್ಸಾಗುವುದಿಲ್ಲ. ಹಾಗೇಯೇ ಈ ಮೊಡವೆಗಳನ್ನು ಹೋಗಲಾಡಿಸಲು ಯಂಗಸ್ಟರ್ ಗಳು ಮಾರುಕಟ್ಟೆಯಲ್ಲಿ ದೊರೆಯುವ ವಿಷಯುಕ್ತ ಮತ್ತು ರಾಸಾಯನಿಕ ವಸ್ತುಗಳಿಗೆ ಮಾರು ಹೋಗುತ್ತಾರೆ. ಇದರಿಂದ ಅಡ್ಡ ಪರಿಣಾಮಗಳು ಬೀರುವುದರ ಜೊತೆಗೆ ಹಣವು ಕೂಡ ವ್ಯರ್ಥವಾಗುತ್ತವೆ. ಹಾಗೇ ಮುಖವು ಇನ್ನಷ್ಟು ಕುರುಪಾಗಿ ಕಾಣಲು ಶುರು ಆಗುತ್ತದೆ.

ಹಾಗಾದರೆ ಬನ್ನಿ ಮನೆಯಲ್ಲಿ ಸಿಗುವ ವಸ್ತುಗಳಿಂದ ಹೇಗೆ ಮೊಡವೆಗಳನ್ನು ದೂರ ಮಾಡಿಕೊಳ್ಳಬಹುದು ಅಂತ ತಿಳಿಯೋಣ. ಒಂದೇ ದಿನದಲ್ಲಿ ಮೊಡವೆಗಳು ಮಂಗಮಾಯ ಆಗಲು ಈ ಮನೆಮದ್ದು ಬಳಕೆ ಮಾಡಿ. ಮೊದಲನೆಯ ಮನೆಮದ್ದು, ಬೆಳ್ಳುಳ್ಳಿ, ಬೆಳ್ಳುಳ್ಳಿ ಸಮಾನ್ಯವಾಗಿ ಎಲ್ಲರೂ ಅಡುಗೆಗೆ ಬಳಕೆ ಮಾಡುತ್ತಾರೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ಕೂಡ ಒಳ್ಳೆಯದು. ಅಡುಗೆಯ ಗಂಧವನ್ನು ಹೇಗೆ ಅಧಿಕಗೊಳಿಸುತ್ತದೆಯೋ ಹಾಗೆಯೇ ಚರ್ಮಕ್ಕೂ ಕೂಡ ಇದು ಒಳ್ಳೆಯದು. ಬೆಳ್ಳುಳ್ಳಿ ಎಸಲುಗಳನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆದು ಚಿಕ್ಕ ಚಿಕ್ಕ ತುಂಡುಗಳಿಂದ ಮೊಡವೆಗಳ ಮೇಲೆ ಮಸಾಜ್ ಮಾಡಿರಿ. ರಾತ್ರಿ ಪೂರ್ತಿ ಬೆಳ್ಳುಳ್ಳಿ ಮೊಡವೆಗಳ ಮೇಲೆ ಇರುವಂತೆ ನೋಡಿಕೊಳ್ಳಿ. ಮರುದಿನ ಬೆಳೆಗ್ಗೆ ಎದ್ದು ತಕ್ಷಣವೇ ಉರುಗು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ. ಇದರಿಂದ ಮುಖದಲ್ಲಿರುವ ಮೊಡವೆಗಳು ಮಂಗಮಾಯ ಆಗಿರುತ್ತವೆ. ಇನ್ನು ಎರಡನೆಯ ಮನೆಮದ್ದು. ಹೌದು ಐಸ್ ನಿಂದ ನಾವು ಮೊಡವೆಗಳನ್ನು ಹೋಗಲಾಡಿಸಬಹುದು. ಮೊದಲಿಗೆ ಐಸ್ ಕ್ಯೂಬ್ ಅನ್ನು ತೆಗೆದುಕೊಂಡು ಒಂದು ತೆಳು ಬಟ್ಟೆಯಲ್ಲಿ ಹಾಕಿ ಮೊಡವೆಗಳು ಇರುವ ಜಾಗದಲ್ಲಿ ಚೆನ್ನಾಗಿ ಮಸಾಜ್ ಮಾಡಿ. ಹೀಗೆ ದಿನಕ್ಕೆ ಒಂದು ಬಾರೀ ಮಾಡಿದರೆ ಸಾಲದು. ನಾಲ್ಕೈದು ಬಾರಿ ಮಾಡಬೇಕು. ಹೀಗೆ ಮಾಡುವುದರಿಂದ ಮೊಡವೆಗಳು ಮಾಯವಾಗುತ್ತವೆ.

ಹಾಗೆಯೇ ಕಲೆಗಳು ಕೂಡ ಕಡಿಮೆ ಆಗುತ್ತವೆ. ಜೇನುತುಪ್ಪ ರುಚಿಯಲ್ಲಿ ಸಿಹಿ ಮಾತ್ರವಲ್ಲದೇ ಹಲವಾರು ಔಷಧೀಯ ಗುಣಗಳು ಇವೆ. ಹೀಗಾಗಿ ರಾತ್ರಿ ಹೊತ್ತು ಮುಖವನ್ನು ಚೆನ್ನಾಗಿ ತೊಳೆದು ಮೊಡವೆಗಳ ಮೇಲೆ ಜೇನುತುಪ್ಪವನ್ನು ಹಚ್ಚಿ ಬಾಂಡೇಜ್ ನಿಂದ ಕವರ ಮಾಡಿರಿ ರಾತ್ರಿ ಪೂರ್ತಿ ಹಾಗೆ ಬಿಡಿ. ಮರುದಿನ ಬೆಳಿಗ್ಗೆ ಬಾಂಡೇಜ್ ತೆಗೆದು ಮುಖವನ್ನು ಮೃದುವಾಗಿ ತೊಳೆಯಿರಿ. ಇದರಿಂದ ಮೊಡವೆಗಳು ವಾಸಿಯಾಗುತ್ತವೆ. ಇದೆಲ್ಲದರ ಜೊತೆಗೆ ನೀರು ಚೆನ್ನಾಗಿ ಕುಡಿಯಬೇಕು. ಹೌದು ನೀರು ಎಷ್ಟು ಕುಡಿಯುತ್ತೀರಿ ಅಷ್ಟು ಆರೋಗ್ಯಕ್ಕೆ ಒಳ್ಳೆಯದು ಹಾಗೆಯೇ ನೀರು ಕುಡಿಯುವುದರಿಂದ ದೇಹದಲ್ಲಿ ಇರುವ ಟಾಕ್ಸಿನ್ ಬಿಡುಗಡೆ ಆಗಿ ದೇಹವು ಶುದ್ಧವಾಗಿರುತ್ತದೆ. ಇದರಿಂದ ಮೊಡವೆಗಳು ಮೂಡುವುದಿಲ್ಲ. ಹಾಗೆಯೇ ಮೊಡವೆಗಳು ಕ್ರಮೇಣ ಕಡಿಮೆ ಆಗುತ್ತವೆ. ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.

Leave a Reply

Your email address will not be published. Required fields are marked *