ಏಳು ದಿನ ಬೆಲ್ಲವನ್ನು ತಿಂದು ನೀರು ಕುಡಿಯಿರಿ ಇದರಿಂದ ಆಗುವ ಲಾಭಗಳು ಅಚ್ಚರಿ ಮೂಡಿಸುತ್ತವೆ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಇತ್ತೀಚಿನ ದಿನಗಳಲ್ಲಿ ಬೆಲ್ಲದ ಬದಲಾಗಿ ಸಕ್ಕರೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಸಕ್ಕರೆ ಎಷ್ಟು ಅಧಿಕವಾಗಿ ಉಪಯೋಗಿಸುತ್ತೇವೆ ಅಷ್ಟು ವಿಷ. ಆದರೆ ಬೆಲ್ಲವನ್ನು ನೀವು ಎಷ್ಟು ಬೇಕಾದರೂ ತಿಂದು ನೋಡಿ ಅದರಿಂದ ಲಾಭವೋ ಲಾಭ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಬೆಲ್ಲವನ್ನು ತಿಂದು ನೀರು ಕುಡಿಯಬೇಕು. ಹೀಗೆ ಮಾಡುವುದರಿಂದ ದೊರೆಯುವ ಲಾಭಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ ಬನ್ನಿ. ಆದ್ದರಿಂದ ಕೊಂಚ ಸಮಯವನ್ನು ಮಾಡಿಕೊಂಡು ಈ ಚಿಕ್ಕ ಆರೋಗ್ಯಕರ ಲೇಖನವನ್ನು ಓದಿರಿ. ನಮಗೆ ಅಂಟಿಕೊಳ್ಳುವ ರೋಗಗಳಿಗೆ ನಮ್ಮ ಅಡುಗೆ ಮನೆಯಲ್ಲಿ ಮನೆಮದ್ದು ಇದೇ ಅಂತ ಕೆಲವರು ಮರೆತು ಬಿಡುತ್ತಾರೆ.ನಿಮಗೆ ಗೊತ್ತೇ ಅಡುಗೆ ಮನೆಯಲ್ಲಿ ದೊರೆಯುವ ಪ್ರತಿಯೊಂದು ಆಹಾರ ಪದಾರ್ಥಗಳು ಔಷಧೀಯ ಗುಣಗಳನ್ನು ಹೊಂದಿದೆ. ಮತ್ತು ಬಹುಮಟ್ಟಿಗೆ ರೋಗಗಳಿಂದ ನಮ್ಮನ್ನು ದೂರವಿರಿಸುತ್ತದೆ. ಹಾಗೂ ಆರೋಗ್ಯವನ್ನು ಕಾಪಾಡುವ ಶಕ್ತಿಯನ್ನು ಹೊಂದಿರುತ್ತವೆ ಅದರಲ್ಲಿ ಬೆಲ್ಲವು ಕೂಡ ಒಂದಾಗಿದೆ.

ಬೆಲ್ಲ ನೋಡಲು ಗಟ್ಟಿಯಾಗಿದ್ದು ರುಚಿಯಲ್ಲಿ ತುಂಬಾನೇ ಸಿಹಿಯಾಗಿರುತ್ತದೆ. ನಿತ್ಯವೂ ಬೆಲ್ಲವನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ದಿನಕ್ಕೆ 2೦ ಗ್ರಾಮ್ ನಷ್ಟು ಬೆಲ್ಲವನ್ನು ಸೇವಿಸಿದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ ಆಯುರ್ವೇದದಲ್ಲಿ ಸಾಬೀತಾಗಿದೆ. ನಿತ್ಯವೂ ಬೆಲ್ಲವನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿವೆ. ಇದರಿಂದ ಮಲಬದ್ಧತೆ ಸಮಸ್ಯೆಯು ಕೂಡ ದೂರವಾಗುತ್ತದೆ. ಹಾಗೆಯೇ ಹೊಟ್ಟೆಗೆ ಸಂಭಂದ ಪಟ್ಟ ಯಾವುದೇ ಕಾಯಿಲೆಗಳಾದ ಹೊಟ್ಟೆ ಉರಿ, ಹೊಟ್ಟೆ ನೋವು ಹೊಟ್ಟೆ ಉಬ್ಬರ ಎಲ್ಲ ಸಮಸ್ಯೆಗಳನ್ನು ದೂರ ಮಾಡುತ್ತದೆ ಮತ್ತು ಗ್ಯಾಸ್ ಸಮಸ್ಯೆಯನ್ನು ಪರಿಹರಿಸಲು ಈ ಬೆಲ್ಲದ ಸೇವನೆ ಸೂಕ್ತ. ಇನ್ನೂ ರಾತ್ರಿ ಮಲಗುವ ವೇಳೆಗೆ ನಿತ್ಯವೂ ಏಳು ದಿನಗಳ ಕಾಲ ಸತತವಾಗಿ ಬೆಲ್ಲವನ್ನು ತಿನ್ನುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ. ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗಳು ದೂರವಾಗುತ್ತವೆ. ಬೆಲ್ಲವನ್ನು ಹಾಲು ಮತ್ತು ನೀರಿನ ಜೊತೆಗೆ ಸೇವನೆ ಮಾಡಬೇಕು ಮುಖ್ಯವಾಗಿ ಅದರಲ್ಲೂ ಚಳಿಗಾಲದಲ್ಲಿ ಬೆಲ್ಲವನ್ನು ಸೇವಿಸಬೇಕು. ಇದರಿಂದ ಚಳಿಗಾಲದಲ್ಲಿ ಸತತವಾಗಿ ಕಾಡುವ ಶೀತ ನೆಗಡಿ ಕೆಮ್ಮು ಸಮಸ್ಯೆಗಳಿಗೆ ಈ ಬೆಲ್ಲವು ರಾಮಬಾಣ. ಆದ್ದರಿಂದ ಅಂತಹ ಸಮಯದಲ್ಲಿ ಬೆಲ್ಲವನ್ನು ನೀವು ನೀರಿನಲ್ಲಿ ಅಥವಾ ಹಾಲಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕುಡಿಯಬೇಕು. ಸ್ವಲ್ಪ ಬೆಲ್ಲವನ್ನು ಶುಂಠಿಯ ಜೊತೆಗೆ ಸೇರಿಸಿ ಅದನ್ನು ಬಿಸಿ ಮಾಡಿ ತಿನ್ನುವುದರಿಂದ ಗಂಟಲು ನೋವು ಮಾಯವಾಗುತ್ತದೆ.

ನಿಮ್ಮ ಧ್ವನಿಯು ಮಧುರವಾಗುತ್ತದೆ. ಶುಂಠಿಯನ್ನು ಬೆಲ್ಲದ ಜೊತೆಗೆ ಮಿಕ್ಸ್ ಮಾಡಿ ಸೇವಿಸುವುದರಿಂದ ಕೀಲು ನೋವು ಮಂಡಿ ನೋವು ಸಂಧಿವಾತ ಇನ್ನಿತರ ಸಮಸ್ಯೆಗಳು ದೂರವಾಗುತ್ತವೆ. ಬೆಲ್ಲವು ರಕ್ತದಲ್ಲಿರುವ ಕೆಟ್ಟ ಅಂಶಗಳನ್ನು ಹೊರಹಾಕಿ ರಕ್ತವನ್ನು ಶುದ್ಧಿಕರಿಸುತ್ತದೆ. ಬೆಲ್ಲ ತಿನ್ನುವುದರಿಂದ ನಮ್ಮ ಚರ್ಮಕ್ಕೆ ತುಂಬಾನೇ ಒಳ್ಳೆಯದು. ಯಾವುದೇ ರೀತಿಯ ಚರ್ಮಕ್ಕೆ ಸಂಭಂದ ಪಟ್ಟ ತೊಂದರೆಗಳು ಇದ್ದರೆ ಕ್ರಮೇಣ ಕಡಿಮೆ ಆಗುತ್ತವೆ. ಏಕೆಂದರೆ ಬೆಲ್ಲವು ದೇಹದಲ್ಲಿ ರಕ್ತವನ್ನು ಶುದ್ಧವಾಗಿ ಮಾಡುತ್ತದೆ. ನಿತ್ಯವೂ ಬೆಲ್ಲವನ್ನೂ ತಿಂದು ನೀರು ಕುಡಿಯಬೇಕು. ಇದರಿಂದ ದೇಹಕ್ಕೆ ಅಗತ್ಯವಾದ ಕ್ಯಾಲಶಿಯಂ ದೊರೆಯುತ್ತದೆ.ದೇಹದಲ್ಲಿ ಕ್ಯಾಲ್ಶಿಯಂ ಅಧಿಕವಾಗಿದ್ದರೆ ಆರೋಗ್ಯವು ಉತ್ತಮವಾಗಿ ಇರುತ್ತದೆ. ಇನ್ನು ನಿಮ್ಗೆ ಸುಸ್ತು ಆಗುತ್ತಿದ್ದರೆ ಬೆಲ್ಲವನ್ನು ತಿಂದು ನೀರು ಕುಡಿಯಬೇಕು ಇದರಿಂದ ಸುಸ್ತು ಬೇಗನೆ ಕಡಿಮೆ ಆಗುತ್ತದೆ. ಇದರಿಂದ ನೀವು ಉಲ್ಲಾಸದಾಯಕವಾಗಿ ಇರುತ್ತೀರಿ. ನೋಡಿದ್ರಲಾ ನೀರು ಮತ್ತು ಬೆಲ್ಲವನ್ನು ತಿನ್ನುವುದರಿಂದ ಆಗುವ ಲಾಭಗಳು. ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *