ಮನೆಗೆ ಬಂದ ಅತಿಥಿಗಳಿಗೆ ತಣ್ಣನೆಯ ನೀರು ಕೊಡುವುದರಿಂದ ದೋಷಗಳು ನಿವಾರಣೆ ಆಗುತ್ತೆ ಏನಿದರ ಮಹತ್ವ

ಜ್ಯೋತಿಷ್ಯ ಧಾರ್ಮಿಕ

ನಮಸ್ತೇ ಪ್ರಿಯ ಓದುಗರೇ, ಅತಿಥಿ ದೇವೋ ಭವ ಅಂತ ನಮ್ಮಲ್ಲಿ ಹಿರಿಯರು ಹೇಳುತ್ತಾರೆ. ಹಾಗೇಯೇ ಈ ಒಂದು ವಾಕ್ಯವನ್ನು ಆಧುನಿಕ ಕಾಲದಲ್ಲಿ ಯುವಜನತೆ ಎಷ್ಟು ಅಳವಡಿಸಿಕೊಳ್ಳುತ್ತದೆ ತಿಳಿದಿಲ್ಲ ಗೆಳೆಯರೇ ಆದರೆ ನಮ್ಮ ಮೊದಲಿನ ಕಾಲದ ಹಿರಿಯರು ಈ ಸಭ್ಯತೆಯನ್ನು ಅಳವಡಿಸಿಕೊಂಡು ಬರುತ್ತಿದ್ದರು. ಹಾಗೆಯೇ ಅತಿಥಿಗಳನ್ನು ನಾವು ಸಾಕ್ಷಾತ್ ದೇವರಿಗೆ ಹೋಲಿಸುತ್ತೇವೆ. ಅವರನ್ನು ನಾವು ಒಳ್ಳೆಯ ಮನೋಭಾವನೆ ಆದರದಿಂದ ಸ್ವಾಗತಿಸಿ ನೋಡಿಕೊಂಡರೆ ಅದು ದೇವರಿಗೆ ಸಲ್ಲಿಸುವ ಪೂಜೆಯಾಗುತ್ತದೆ. ಹಾಗೂ ಅತಿಥಿಗಳಲ್ಲಿ ನಾವು ದೇವರನ್ನು ಕಾಣುತ್ತೇವೆ. ಅತಿಥಿಗಳ ರೂಪದಲ್ಲಿ ದೇವರು ಬಂದಿದ್ದಾನೆ ಎಂದು ತಿಳಿದು ನಾವು ಉಪಚಾರವನ್ನು ಮಾಡಬೇಕು. ನಮ್ಮ ಹಿಂದೂ ಧರ್ಮದಲ್ಲಿ ಅತಿಥಿಗಳು ಮನೆಗೆ ಬಂದರೆ ಅವರಿಗೆ ಮೊಟ್ಟ ಮೊದಲಿಗೆ ನೀರು ಕೊಟ್ಟು ಒಳಗಡೆ ಸ್ವಾಗತಿಸುವುದು ನಮ್ಮ ಸಂಪ್ರದಾಯ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಮನೆಗೆ ಬಂದ ಅತಿಥಿಗಳಿಗೆ ತಂಪಾದ ನೀರು ಕೊಡುವುದರಿಂದ ದೋಷಗಳು ನಿವಾರಣೆ ಆಗುತ್ತದೆ ಅನ್ನುವ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ವಿವರಣೇ ಕೊಡುತ್ತೇವೆ. ದೇವರ ಪೂಜೆಯ ಜೊತೆಗೆ ಕೆಲವು ನಂಬಿಕೆಗಳು ಅನಾದಿ ಕಾಲದಿಂದಲೂ ಬೆಳೆದು ಬಂದಿದೆ ಈ ಮೂಲಕ ದೇವರು ಕೂಡ ಸಂತೃಪ್ತನಾಗುತ್ತಾನೆ. ಮತ್ತು ದೇವರನ್ನು ನಾವು ಪ್ರಸನ್ನಗೊಳಿಸಬಹುದು.

ಇನ್ನೂ ಮನೆಗೆ ಅತಿಥಿಗಳು ಬಂದರೆ ಮೊಟ್ಟ ಮೊದಲಿಗೆ ನಾವು ಅವರಿಗೆ ತಣ್ಣನೆಯ ನೀರು ಕೊಡುತ್ತೇವೆ. ಹೀಗೆ ಮಾಡುವುದರಿಂದ ರಾಹು ದೋಷ ನಿವಾರಣೆ ಆಗುತ್ತದೆ ಜೊತೆಗೆ ಜಾತಕದಲ್ಲಿ ಕಾಳ ಸರ್ಪದೋಷ ಇದ್ದರು ಕೂಡ ನಿವಾರಣೆ ಆಗುತ್ತದೆ. ಸರ್ಪ ದೋಷ ಇದ್ದವರು ಮುಖ್ಯವಾಗಿ ಇದರ ಬಗ್ಗೆ ಗಮನ ಹರಿಸುವುದು ಸೂಕ್ತ. ದೇವರ ಮನೆಯನ್ನು ಯಾವಾಗಲೂ ಸುಂದರವಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ದೇವರ ಮನೆಯಲ್ಲಿ ಇರುವ ದೇವರು ಫೋಟೋ ಗಳನ್ನು ಮತ್ತು ದೇವರ ಮೂರ್ತಿಗಳನ್ನು ವಾಸ್ತು ಪ್ರಕಾರ ಜೋಡಿಸಿ ಇಡಬೇಕು. ಇದರಿಂದ ದೇವರು ತೃಪ್ತಿಗೊಂಡು ಮನೆಯಲ್ಲಿ ಸದಾ ಕಾಲ ನೆಲೆಸುತ್ತಾನೆ. ಜೊತೆಗೆ ಜಾತಕದಲ್ಲಿ ದೋಷಗಳಿದ್ದರೆ ತಕ್ಷಣವೆ ನಿವಾರಣೆ ಆಗುತ್ತದೆ. ಇನ್ನು ಕೆಲವರ ಅಡುಗೆ ಮನೆಯು ತುಂಬಾನೇ ಗಲೀಜು ಆಗಿರುತ್ತದೆ. ಆಡುಗೆ ಮನೆಯನ್ನು ಯಾರು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲ ಅಂಥವರಿಗೆ ಮಂಗಳ ದೋಷ ಕಾಡುತ್ತದೇ. ಈ ದೋಷಕ್ಕೆ ಒಮ್ಮೆ ತುತ್ತಾದರೆ ಮದುವೆಯಲ್ಲಿ ಅಡಚಣೆಗಳು ಮದುವೆ ವಿಳಂಬ ಆಗುವುದು ಈ ಬಗೆಯ ಸಮಸ್ಯೆಗಳು ಕಾಡ ತೊಡಗುತ್ತವೆ. ಮತ್ತೆ ಭೂಮಿಗೆ ಸಂಭಂದ ಪಟ್ಟ ಎಲ್ಲ ಸಮಸ್ಯೆಗಳು ನಿಮ್ಮನ್ನು ಬೆನ್ನಟ್ಟಿ ಕಾಡುತ್ತವೆ.

ಆದ್ದರಿಂದ ನೀವು ನಿಮ್ಮ ಅಡುಗೆ ಮನೆಯನ್ನು ಶುದ್ಧವಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಬುಧ ಸೂರ್ಯ ಚಂದ್ರನ ದೋಷಗಳನ್ನು ಹೊಂದಿರುವವರು ಸಸ್ಯಗಳ ಆರೈಕೆಯನ್ನು ಮಾಡಬೇಕು ಅವುಗಳ ಪಾಲನೆ ಪೋಷಣೆಯನ್ನೂ ನೋಡಿಕೊಳ್ಳಬೇಕು. ಸಸ್ಯಗಳ ಆರೈಕೆ ಮಾಡುವುದರಿಂದ ಮಾನಸಿಕ ಒತ್ತಡವು ಕೂಡ ಕಡಿಮೆ ಆಗುತ್ತದೇ. ಖಿನ್ನತೆಯಿಂದ ಮುಕ್ತಿ ಸಿಕ್ಕಿ ನೀವು ತುಂಬಾನೇ ಉಲ್ಲಾಸದಾಯಕವಾಗಿ ಇರುತ್ತೀರಿ. ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಇನ್ನೂ ಮನೆಯ ಹಿರಿಯರನ್ನು ನಾವು ಸದಾ ಕಾಲ ಗೌರವಿಸಬೇಕು. ಒಂದು ವೇಳೆ ಮನೆಯಲ್ಲಿ ಇರುವ ಹಿರಿಯರನ್ನು ನೀವು ಗೌರವಿಸದೆ ಇದ್ದಲ್ಲಿ ನಿಮಗೆ ಯಾವುದೇ ರೀತಿಯ ಒಳ್ಳೆಯದು ಆಗುವುದಿಲ್ಲ. ಸದಾ ಕಾಲ ಹಾನಿ ಆಗುತ್ತದೆ. ಭಾಗ್ಯವೂ ಕೈ ಹಿಡಿಯುವುದಿಲ್ಲ. ಆದ್ದರಿಂದ ಮನೆಯಲ್ಲಿರುವ ಹಿರಿಯರಿಗೆ ಗೌರವ ಸಲ್ಲಿಸಬೇಕು. ಹಾಗೂ ಸಮಾಜದಲ್ಲಿ ಇರುವ ಜನರಿಗೆ ಮರ್ಯಾದೆಯಿಂದ ಹೊಂದಿಕೊಂಡು ಗೌರವಿಸಿ ನಡೆಯಬೇಕು. ಇದರಿಂದ ಮನೆಯ ಶಾಂತಿ ಮತ್ತು ಮನಶಾಂತಿ ಎಂದಿಗೂ ಹಾಳಾಗುವುದಿಲ್ಲ. ಹೌದು ಒಳ್ಳೆಯ ಜೀವನ ಮತ್ತು ನೆಮ್ಮದಿಯ ಜೀವನಕ್ಕೆ ನಾವು ಕೆಲವು ನಿಯಮಗಳನ್ನು ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಜೀವನ ಸುಖಮಯವಾಗುತ್ತದೆ.

Leave a Reply

Your email address will not be published. Required fields are marked *