ಉಪ್ಪಿನಕಾಯಿ ತಿನ್ನುವುದರಿಂದ ಏನೆಲ್ಲಾ ಆಗುತ್ತೆ ಗೊತ್ತೇ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಉಪ್ಪಿನಕಾಯಿ ಎಂಬ ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರೂರಿಯುತ್ತದೆ. ಉಪ್ಪಿನಕಾಯಿ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ ಉಪ್ಪಿನಕಾಯಿ ಎಂದರೆ ಎಲ್ಲರಿಗೂ ಬಲು ಪ್ರಿಯ. ಉಪ್ಪಿನಕಾಯಿ ಪ್ರತಿಯೊಬ್ಬರ ಮನೆಯಲ್ಲಿ ಇರುತ್ತದೆ. ಹಾಗೆಯೇ ಊಟದ ಜೊತೆಗೆ ಇದನ್ನು ಸೇವಿಸುತ್ತಾರೆ ಕೆಲವರು ಉಪ್ಪಿನಕಾಯಿ ಇಲ್ಲದೇ ಊಟವನ್ನು ಕೂಡ ಮಾಡುವುದಿಲ್ಲ. ಉಪ್ಪಿನಕಾಯಿ ಹಲವಾರು ರೀತಿಯಲ್ಲಿ ನಮಗೆ ದೊರೆಯುತ್ತದೆ. ಉಪ್ಪಿನಕಾಯಿ ಬಾಯಿಗೆ ರುಚಿ ನೀಡುತ್ತದೇ ಅಂತ ಅತಿಯಾಗಿ ತಿಂದರೆ ಇದು ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಚಿತ. ಹಾಗದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಉಪ್ಪಿನಕಾಯಿ ತಿನ್ನುವುದರಿಂದ ದೇಹದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿಕೊಡುತ್ತೇವೆ. ಮೊದಲಿಗೆ ಹೃದ್ರೋಗ ಸಮಸ್ಯೆ ಇರುವವರು ಮುಖ್ಯವಾಗಿ ಹೃದಯಕ್ಕೆ ಸಂಭಂದ ಪಟ್ಟಕಾಯಿಲೆಗಳು ಇರುವವರು ಉಪ್ಪಿನಕಾಯಿಯನ್ನು ಸೇವನೆ ಮಾಡಬಾರದು. ಕಾರಣ ಉಪ್ಪಿನಕಾಯಿಯಲ್ಲಿ ಅಧಿಕವಾಗಿ ಮಸಾಲೆ ಪದಾರ್ಥಗಳು ಎಣ್ಣೆ, ಉಪ್ಪು ಇರುತ್ತವೆ.

ಹೃದಯದ ಕಾಯಿಲೆಗಳು ಸಾಮಾನ್ಯವಾಗಿ ಬರುವುದು ಹೃದಯಕ್ಕೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಲುಪಿದಾಗ. ಈ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಕಡಿಮೆ ಬೆಲೆಗೆ ಸಿಗುವ ಎಣ್ಣೆಯಲ್ಲಿ ದೊರೆಯುತ್ತದೆ. ನಿಮಗೆ ಗೊತ್ತೇ ಮಾರುಕಟ್ಟೆಯಲ್ಲಿ ದೊರೆಯುವ ಉಪ್ಪಿನಕಾಯಿ ಪ್ಯಾಕೆಟ್ ಗಳಲ್ಲಿ ಉಪ್ಪಿನಕಾಯಿಯು ಬಹಳ ದಿನಗಳವರೆಗೆ ಹಾಗೆಯೇ ಕೆಡದಂತೆ ಉಳಿಸಯಲು ಅತಿಯಾದ ಎಣ್ಣೆಯನ್ನು ಬಳಕೆ ಮಾಡುತ್ತಾರೆ. ಏಕೆಂದರೆ ಉಪ್ಪಿನಕಾಯಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಇದರಿಂದ ಉಪ್ಪಿನಕಾಯಿ ಸೇವಿಸುವುದರಿಂದ ಎಣ್ಣೆಯುಕ್ತ ಕೊಲೆಸ್ಟ್ರಾಲ್ ಮಟ್ಟವು ದೇಹವನ್ನು ಸೇರಿ ಹೃದಯಕ್ಕೆ ಮತ್ತು ರಕ್ತನಾಳಗಳಿಗೆ ಅಪಾಯವನ್ನು ತಂದೊಡ್ಡುತ್ತದೆ. ಹಾಗೂ ಅಧಿಕ ರಕ್ತದೊತ್ತಡಕ್ಕೆ ಕಾರಣ ಉಪ್ಪಿನ ಅಂಶ. ಆದ್ದರಿಂದ ಉಪ್ಪಿನಕಾಯಿಯಲ್ಲಿ ಉಪ್ಪಿನ ಅಂಶ ಅಧಿಕವಾಗಿ ಇರುವುದರಿಂದ ಇದು ರಕ್ತದೊತ್ತಡವನ್ನು ಮತ್ತಷ್ಟು ದ್ವಿಗುಣಗೊಳಿಸುತ್ತದೆ. ಹೀಗಾಗಿ ಹೃದಯದ ಕಾಯಿಲೆಗಳಿಂದ ಬಳಲುತ್ತಿದ್ದರೆ ಉಪ್ಪಿನಕಾಯಿಯನ್ನು ಸೇವಿಸಬೇಡಿ. ಇನ್ನೂ ಎರಡನೆಯದಾಗಿ ಕಿಡ್ನಿ ಸಂಭಂದ ಪಟ್ಟ ಕಾಯಿಲೆಗಳಿದ್ದರೆ ಉಪ್ಪಿನಕಾಯಿ ಇಂದ ದೂರವಿರುವುದು ಒಳ್ಳೆಯದು. ಏಕೆಂದರೆ ಕಿಡ್ನಿಗಳು ಅಸಮರ್ಪಕ ಕ್ರಿಯೆಗೆ ಮತ್ತು ರಕ್ತ ಸಂಚಾರಕ್ಕೆ ಸಂಭಂದವಿದೆ. ಆದ್ದರಿಂದ ಉಪ್ಪಿನ ಅಂಶ ಇರುವ ಹಾಗೂ ಬಹಳ ದಿನಗಳವರೆಗೆ ಶೇಖರಣೆ ಮಾಡಿದ ಆಹಾರವನ್ನು ಎಂದಿಗೂ ಸೇವಿಸಬೇಡಿ. ಕಾರಣ ಶೇಖರಣೆ ಮಾಡಿದ ಆಹಾರದಲ್ಲಿ ಮತ್ತು ಉಪ್ಪಿನಕಾಯಿಯಲ್ಲಿ ಸೋಡಿಯಂ ಹೆಚ್ಚಾಗಿರುತ್ತದೆ.

ಆದ್ದರಿಂದ ಕಿಡ್ನಿ ಸಮಸ್ಯೆ ಇದ್ದವರು ಉಪ್ಪಿನಕಾಯಿ ಸೇವಸಬಾರದು. ಇನ್ನೂ ಹೊಟ್ಟೆಯಲ್ಲಿ ಉಪ್ಪಿನಕಾಯಿ ಅಧಿಕವಾಗಿ ತಿನ್ನುವುದರಿಂದ ಆಮ್ಲಿಯತೆ ಹೆಚ್ಚುತ್ತದೆ. ಹೊಟ್ಟೆಯಲ್ಲಿ ಆಮ್ಲಿಯತೆ ಹೆಚ್ಚುವುದರಿಂದ ಹುಳಿತೇಗೂ, ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೇ ಉಬ್ಬರ ಅಸಿಡಿಟಿ ಸಮಸ್ಯೆಗಳು ಕಾಡುತ್ತವೆ ಆದ್ದರಿಂದ ಆಮ್ಲಿಯತೆ ಹೆಚ್ಚು ಮಾಡುವ ಉಪ್ಪಿನಕಾಯಿಯನ್ನು ಸೇವಿಸಬಾರದು ಉಪ್ಪಿನಕಾಯಿ ತಿನ್ನುವುದರಿಂದ ಸೋಡಿಯಂ ದೇಹವನ್ನು ಸೇರುತ್ತದೆ. ಇದು ಅಧಿಕ ರಕ್ತದೊತ್ತಡ ಕ್ಕೆ ಕಾರಣವಾಗುತ್ತದೆ. ಉಪ್ಪಿನಕಾಯಿ ಮೂತ್ರ ಪಿಂಡ ಸಮಸ್ಯೆಗೆ ತೊಂದರೆಯನ್ನು ಮಾಡುತ್ತದೆ. ಉಪ್ಪಿನಕಾಯಿಯಲ್ಲಿ ಇರುವ ಲವಣಗಳು ಮೂತ್ರ ಪಿಂಡದ ಕಾರ್ಯವನ್ನು ತಡೆಯುತ್ತದೆ. ಆದ್ದರಿಂದ ಉಪ್ಪಿನಕಾಯಿಯನ್ನು ಮಿತವಾಗಿ ಬಳಕೆ ಮಾಡಿ ಅದರಲ್ಲೂ ಹೊರಗಡೆ ಇಂದ ತಂದ ಉಪ್ಪಿನಕಾಯಿಯಲ್ಲಿ ಕಡಿಮೆ ಬೆಲೆಯ ಎಣ್ಣೆಯ ಜೊತೆಗೆ ರಾಸಾಯನಿಕ ಕೆಮಿಕಲ್ ಗಳನ್ನು ಉಪ್ಪಿನಕಾಯಿ ಹಾಳಾಗಳು ಬೆರೆಕೆ ಮಾಡಿರುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಮಾರುಕಟ್ಟೆಯಲ್ಲಿ ದೊರೆಯುವ ಉಪ್ಪಿನಕಾಯಿ ಸೇವನೆ ಮಾಡುವವರಿಗೆ ಇದೊಂದು ಕಿವಿಮಾತು. ನೆನಪಿನಲ್ಲಿ ಇಟ್ಟುಕೊಳ್ಳಿ. ಹಾಗಂತ ಉಪ್ಪಿನಕಾಯಿ ಸೇವನೆ ಮಾಡಲೇ ಬಾರದು ಅಂತಲ್ಲ ಗೆಳೆಯರೆ, ಸಾಧ್ಯವಾದಷ್ಟು ಮಿತವಾಗಿ ಬಳಕೆ ಮಾಡುವುದು ಜೊತೆಗೆ ಅರಿತು ಸೇವಿಸುವುದು ಸೂಕ್ತವಾಗಿದೆ.

Leave a Reply

Your email address will not be published. Required fields are marked *