ಅತಿಯಾದ ಬೆನ್ನು ನೋವು ಸೊಂಟ ನೋವು ಕಾಡುತಿದ್ದರೆ ಇಲ್ಲಿದೆ ಸೂಕ್ತ ಉತ್ತಮ ರಸ ಇದು

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಬೆನ್ನು ನೋವಿನಿಂದ ಇತ್ತಿಚಿನ ದಿನಗಳಲ್ಲಿ ಶೇ. 80 ರಷ್ಟು ಜನರು ಬಳಲುತ್ತಿದ್ದಾರೆ. ಈ ನೋವು ಸರ್ವೇ ಸಾಮಾನ್ಯ ಆಗಿದೆ ಅಂತ ಹೇಳಿದರೆ ತಪ್ಪಾಗಲಾರದು. ಕೊಂಚ ಬಿಡುವು ಇಲ್ಲದೇ ಕೆಲಸವನ್ನು ಮಾಡಿ ಗೋಡೆಗೆ ಒರಗಿ ವಿಶ್ರಾಂತಿ ಪಡೆಯ ಬೇಕೆಂದರೆ ಈ ಬೆನ್ನು ನೋವಿನ ಕಾಟ ಶುರು ಆಗುತ್ತದೆ. ಇದರಿಂದ ನಿದ್ದೆಯೂ ಕೂಡ ಬರುವುದಿಲ್ಲ. ಬೆನ್ನು ನೋವು ಹಲವಾರು ಕಾರಣಗಳಿಂದ ಬರಬಹುದು ಅಂದರೆ ಇತ್ತೀಚಿನ ದಿನಗಳಲ್ಲಿ ಒಂದೇ ಜಾಗದಲ್ಲಿ ಕುಳಿತುಕೊಂಡು ಹೆಚ್ಚಾಗಿ ಕೆಲಸವನ್ನು ಮಾಡುತ್ತಿರುತ್ತಾರೆ ಅಂಥವರಲ್ಲಿ ಈ ನೋವು ಬೇಗನೆ ಕಾಣಿಸಿಕೊಳ್ಳುತ್ತದೆ. ಬೆನ್ನು ನೋವು ಯಾವುದೇ ಇರಲಿ ಆದರೆ ಕೆಲವು ಮನೆಮದ್ದು ಬಳಕೆ ಮಾಡಿಕೊಂಡು ಈ ಬೆನ್ನು ನೋವಿಗೆ ಗುಡ್ ಬೈ ಹೇಳಬಹುದು. ಈ ನೋವು ಒಮ್ಮೆ ಬಂದು ಸೇರಿದರೆ ನಮ್ಮನ್ನು ಬಿಟ್ಟು ಅಗಲುವುದಿಲ್ಲ. ಮನೆಮದ್ದುಗಳನ್ನು ಉಪಯೋಗಿಸುವುದರಿಂದ ಕೊಂಚ ಸಮಯವಾದರು ಸರಿಯೇ ಖಂಡಿತವಾಗಿ ಫಲಿತಾಂಶ ದೊರೆಯುತ್ತದೆ.

ಹಾಗಂತ ಮಾತ್ರೆಗಳನ್ನು ಸೇವಿಸುವುದನ್ನು ಬಿಟ್ಟು ಬಿಡಿ ಅಂತ ಹೇಳುತ್ತಿಲ್ಲ ಗೆಳೆಯರೇ. ಜೊತೆಗೆ ನೋವು ಕೂಡ ನುಂಗುವ ಅವಶ್ಯಕತೆ ಇಲ್ಲ . ಆದರೆ ಮನೆಮದ್ದುಗಳನ್ನು ಪ್ರಯತ್ನಿಸಿ. ಹಾಗಾದರೆ ಬನ್ನಿ ಮನೆಮದ್ದು ಯಾವುದು ಅಂತ ತಿಳಿಯೋಣ. ಮೊದಲನೆಯ ಮನೆಮದ್ದು, ಮೊದಲಿಗೆ ಉಗುರು ಬೆಚ್ಚಗಿನ ಹಾಲು ತೆಗೆದುಕೊಳ್ಳಿ. ತುಂಬಾ ಬಿಸಿ ಇರುವ ಹಾಲನ್ನು ತೆಗೆದುಕೊಳ್ಳಬೇಡಿ. ನಂತರ ಇದಕ್ಕೆ ಒಂದು ಚಮಚ ಜೇನು ತುಪ್ಪವನ್ನು ಹಾಕಿ. ಬಿಸಿಯಾದ ಯಾವುದೇ ವಸ್ತುವಿನಲ್ಲಿ ಜೇನುತುಪ್ಪವನ್ನು ಹಾಕಬೇಡಿ. ಇದರಿಂದ ವಸ್ತು ವಿಷವಾಗುತ್ತದೆ. ತದ ನಂತರ ಇದರಲ್ಲಿ ಚಿಟಿಕೆ ಅರಿಶಿಣಯನ್ನು ಹಾಕಿ. ಅರಿಶಿನ ಹಾಲು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹಲವಾರು ಬಗೆಯ ಆರೋಗ್ಯಕರ ಸಮಸ್ಯೆಗಳನ್ನು ಇದು ದೂರ ಮಾಡುತ್ತದೆ. ಈಗ ಮನೆಮದ್ದು ಸಿದ್ಧವಾಗಿದೆ. ಇದನ್ನು ರಾತ್ರಿ ಮಲಗುವ ಮುನ್ನ ಕುಡಿಯಬೇಕು. ಆದರೆ ನೆನಪಿಡಿ ಬಿಸಿ ಹಾಲಿನಲ್ಲಿ ಜೇನುತುಪ್ಪವನ್ನು ಹಾಕಬೇಡಿ. ಉಗುರು ಬೆಚ್ಚಗಿನ ಹಾಲಿನಲ್ಲಿ ಬೆರೆಸಿ ಕುಡಿಯಿರಿ. ಬೆನ್ನು ನೋವಿನ ಸಮಸ್ಯೆಗೆ ಇದು ರಾಮಬಾಣವಾಗಿ ಕೆಲಸವನ್ನು ಮಾಡುತ್ತದೆ. ಇನ್ನೂ ಎರಡನೆಯ ಮನೆಮದ್ದು. ಮೊದಲಿಗೆ ಎರಡು ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ. ಬೆಳ್ಳುಳ್ಳಿಯು ಔಷಧಿಯ ಗುಣಗಳನ್ನು ಹೊಂದಿದೆ.

ಬೇರೆ ಬೇರೆ ಸಮಸ್ಯೆಗಳನ್ನು ದೂರ ಮಾಡುತ್ತದೆ ಈ ಬೆಳ್ಳುಳ್ಳಿ. ಈ ಬೆಳ್ಳುಳ್ಳಿಯ ಸಿಪ್ಪೆಯನ್ನು ತೆಗೆದುಕೊಳ್ಳಿ. ನಿತ್ಯವೂ ಬೆಳಿಗ್ಗೆ ಎದ್ದು ತಕ್ಷಣ ಹಸಿ ಬೆಳ್ಳುಳ್ಳಿಯನ್ನು ತಿನ್ನುತ್ತಾ ಬರಬೇಕು. ಹೀಗೆ ಮಾಡುವುದರಿಂದ ಬೆನ್ನು ನೋವು ಕ್ರಮೇಣ ಉಪಶಮನ ಆಗುತ್ತದೆ. ಇನ್ನು ಮೂರನೆಯ ಮನೆಮದ್ದು, ಮೊದಲಿಗೆ 5-6 ಬೆಳ್ಳುಳ್ಳಿ ಎಸಲುಗಳನ್ನು ತೆಗೆದುಕೊಳ್ಳಬೇಕು. ಚೆನ್ನಾಗಿ ಅದರ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು ಜಜ್ಜಿಕೊಳ್ಳಬೇಕು. ನಂತರ ಒಂದು ಒಗ್ಗರಣೆ ಪಾತ್ರೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಬೇಕು. ಕೊಬ್ಬರಿ ಎಣ್ಣೆ ಜಾಯಿಂಟ್ ಪೈನ್ ಅನ್ನು ಕಡಿಮೆ ಮಾಡುತ್ತದೆ. ಇನ್ನು ಕಾಯಿಸಿದ ಕೊಬ್ಬರಿ ಎಣ್ಣೆಯಲ್ಲಿ ಜಜ್ಜಿದ ಬೆಳ್ಳುಳ್ಳಿ ಏಸಳಿನ ಪೇಸ್ಟ್ ಅನ್ನು ಹಾಕಿಕೊಂಡು ಚೆನ್ನಾಗಿ ಅದರ ಸತ್ವ ಎಣ್ಣೆಯಲ್ಲಿ ಹೊಂದಿಕೊಳ್ಳುವ ಹಾಗೆ ಕಾಯಿಸಬೇಕು. ಬೆಳ್ಳುಳ್ಳಿ ಕೆಂಪಗೆ ಆದ ಮೇಲೆ ಸ್ಟೋವ್ ಬಂದು ಮಾಡಿ ಪಾತ್ರೆಯನ್ನು ಪಕ್ಕದಲ್ಲಿ ತೆಗೆದುಕೊಂಡು ಕೇವಲ ಅದರಲ್ಲಿರುವ ಎಣ್ಣೆಯನ್ನು ಮಾತ್ರ ಸೋಸಿಕೊಳ್ಳಬೇಕು. ಇನ್ನು ಉಳಿದಿರುವ ಬೆಳ್ಳುಳ್ಳಿಯನ್ನು ಜಗಿದು ತಿನ್ನಬಹುದು. ಇದು ಅಜೀರ್ಣತೆ ಸಮಸ್ಯೆಯನ್ನು ದೂರ ಮಾಡುತ್ತದೆ. ಈ ಎಣ್ಣೆಯು ಸ್ವಲ್ಪ ಬಿಸಿ ಇರುವಾಗಲೇ ಬೆನ್ನು ನೋವಿಗೆ ಸೊಂಟದ ನೋವಿಗೆ ಗಂಟು ಇರುವ ಜಾಗದಲ್ಲಿ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ನೋವೆಲ್ಲವು ಕಡಿಮೆ ಆಗುತ್ತದೆ. ಮೇಲೆ ತಿಳಿಸಿರುವ ಮನೆಮದ್ದುಗಳಲ್ಲಿ ನಿಮಗೆ ಸುಲಭವಾದ ಮನೆಮದ್ದು ಉಪಯೋಗಿಸಿ. ಬೆನ್ನು ನೋವಿನಿಂದ ಮುಕ್ತಿ ಪಡೆಯಿರಿ.

Leave a Reply

Your email address will not be published. Required fields are marked *