ನಿಂಬೆಹಣ್ಣಿನ ನೂರೆಂಟು ಲಾಭಗಳು ಕೇವಲ ನಿಂಬೆ ಹಣ್ಣಿನಿಂದ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು

ಆರೋಗ್ಯ

ನಮಸ್ತೆ ಪ್ರಿಯ ಓದುಗರೇ, ಸೌಂದರ್ಯವನ್ನು ಕಾಪಾಡಿಕೊಳ್ಳಲು ಜನರು ಹರಸಾಹಸವನ್ನು ಮಾಡುತ್ತಾರೆ. ಬ್ಯೂಟಿ ಪಾರ್ಲರ್ ಗೆ ಹೋಗಿ ಸಾವಿರಾರು ಹಣವನ್ನು ಖರ್ಚು ಮಾಡುತ್ತಾರೆ. ಮಾರುಕಟ್ಟೆಯಲ್ಲಿರುವ ಹಲವಾರು ಪ್ರಾಡಕ್ಟ್ ಗಳನ್ನು ಬಳಕೆ ಮಾಡುತ್ತಾರೆ. ಇವುಗಳೆಲ್ಲವೂ ಇಂಗ್ಲಿಷ್ ಬ್ಯೂಟಿ ಪ್ರಾಡಕ್ಟ್ ಆಗಿರುವುದರಿಂದ ಸ್ವಲ್ಪ ಮಟ್ಟಿಗೆ ಸುಂದರವಾಗಿ ಕಾಣಲು ಸಹಾಯ ಮಾಡಿದರು ಕೂಡ ಇದರಿಂದ ವಯಸ್ಸಾದ ಮೇಲೆ ಇದರ ಪರಿಣಾಮಗಳೂ ಒಂದೊಂದಾಗಿ ತಿಳಿಯುತ್ತಾ ಬರುತ್ತದೆ. ಹಾಗೆಯೇ ನಿಮ್ಮ ಹಣವೂ ಕೂಡ ಅನಾವಶ್ಯಕವಾಗಿ ವ್ಯರ್ಥವಾಗುತ್ತದೆ ಮಿತ್ರರೇ. ನಿಮಗೆ ಗೊತ್ತೇ ಮನೆಯಲ್ಲಿ ಸಿಗುವ ಮತ್ತು ತುಂಬಾನೇ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ನಿಂಬೆ ಹಣ್ಣಿನಲ್ಲಿ ನಿಮ್ಮ ಸೌಂದರ್ಯವೆ ಅಡಗಿದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಕೇವಲ ನಿಂಬೆ ಹಣ್ಣು ಬಳಕೆ ಮಾಡಿಕೊಂಡು ನಿಮ್ಮ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಅಂತ ತಿಳಿಸಿ ಕೊಡುತ್ತೇವೆ. ಇಂದಿನ ವಾತಾವರಣದಲ್ಲಿ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೇ ಕಷ್ಟದ ಕೆಲಸವಾಗಿದೆ. ಹಾಗೆಯೇ ಇದು ಎಲ್ಲರಿಗು ಒಂದು ದೊಡ್ಡ ಸವಾಲು ಕೂಡ ಆಗಿದೆ ಅಂತ ಹೇಳಿದರೆ ತಪ್ಪಾಗಲಾರದು.

ವಾತಾವರಣ ಹೇಗೆ ಕಲುಷಿತ ಆಗುತ್ತದೆಯೋ ಹಾಗೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಸೌಂದರ್ಯ ವರ್ಧಕಗಳು ಕಾಲಿಡುತ್ತಿದೆ.ಇವುಗಳನ್ನು ಬಳಕೆ ಮಾಡುವುದರಿಂದ ಸ್ವಲ್ಪ ದಿನಗಳವರೆಗೆ ನಿಮ್ಮ ಮುಖದ ಕಾಂತಿಯೂ ಹೆಚ್ಚಬಹುದು ಆದರೆ ಇದು ಎಂದಿಗೂ ಶಾಶ್ವತವಾಗಿ ಉಳಿಯುವುದಿಲ್ಲ. ಏಕೆಂದ್ರೆ ಈ ವಸ್ತುಗಳನ್ನು ಬಳಕೆ ಮಾಡುವುದು ಶಾಶ್ವತವಾದ ಪರಿಹಾರವೂ ಕೂಡ ಅಲ್ಲ ಅಂತ ನಾವು ಮೊದಲು ತಿಳಿದುಕೊಳ್ಳಬೇಕು. ಆದರೆ ಕೆಲವೊಂದನ್ನು ನಮ್ಮ ಅಡುಗೆ ಮನೆಯಲ್ಲಿ ದೊರೆಯುವ ನೈಸರ್ಗಿಕವಾದ ವಸ್ತುಗಳನ್ನು ಬಳಕೆ ಮಾಡಿಕೊಂಡು ನಿಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು ಜೊತೆಗೆ ಕಾಪಾಡಿಕೊಳ್ಳಬಹುದು. ನಿಂಬೆ ಹಣ್ಣಿನಲ್ಲಿ ನಿಮ್ಮ ಚರ್ಮವನ್ನು ಬಿಳಿ ಮಾಡುವಲ್ಲಿ ತ್ವಚೆಯ ಬ್ಲೀಚಿಂಗ್ ರೀತಿಯಲ್ಲಿ ನೈಸರ್ಗಿಕ ಬ್ಲೀಚಿಂಗ್ ಆಗಿ ಕೆಲಸವನ್ನು ನಿರ್ವಹಿಸುತ್ತದೆ. ಅದಕ್ಕಾಗಿ ನೀವು ನಿಂಬೆ ಹಣ್ಣು ಮತ್ತು ಜೇನುತುಪ್ಪವನ್ನು ಬೆರೆಸಿ ಒಂದು ಫೇಸ್ ಮಾಸ್ಕ್ ರೀತಿಯಲ್ಲಿ ತಯಾರಿಸಿ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷದವರೆಗೆ ಹಾಗೆ ಬಿಟ್ಟು ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ. ಇದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ ಜೊತೆಗೆ ಕಪ್ಪು ಕಲೆಗಳು ಮಾಯವಾಗುತ್ತದೆ.
ತಲೆ ಹೊಟ್ಟಿನ ಸಮಸ್ಯೆಗೆ ನಿಂಬೆ ಹಣ್ಣು ತುಂಬಾನೇ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಒಂದು ಬಟ್ಟಲಿನಲ್ಲಿ ನಿಂಬೆ ಹಣ್ಣಿನ ರಸವನ್ನು ಚೆನ್ನಾಗಿ ಹಿಂಡಿ ಅದರ ರಸವನ್ನು ನಿಮ್ಮ ತಲೆಯ ಬುರುಡೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ಅದಕ್ಕೆ ತೈಲವನ್ನು ಹಚ್ಚಿ ಸ್ವಲ್ಪ ಮಸಾಜ್ ಮಾಡಿ.

ಎಣ್ಣೆಯನ್ನು ಯಾಕೆ ಹಚ್ಚಬೇಕು ಅಂದರೆ ನಿಂಬೆ ಹಣ್ಣಿನ ರಸವನ್ನು ಹಚ್ಚಿದ ಮೇಲೆ ತಲೆಯ ಬುರುಡೆಯ ಒಣಗುತ್ತದೆ. ಆದ್ದರಿಂದ ಸ್ವಲ್ಪ ಎಣ್ಣೆಯನ್ನು ಹಚ್ಚಿ ನಂತರ ಮೈಲ್ಡ್ ಶಾಂಪೂವಿನಿಂದ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಇದರಿಂದ ತಲೆಹೊಟ್ಟು ನಿವಾರಣೆ ಆಗುತ್ತದೆ. ಇನ್ನೂ ನಿಮಗೆ ಚರ್ಮದ ಅಲರ್ಜಿ ಆಗುತ್ತಿದ್ದರೆ, ನಿಂಬೆ ಹಣ್ಣಿನ ರಸದಲ್ಲಿ ಇರುವ ವಿಟಮಿನ್ ಸಿ ಅಂಶವು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೆಲವೊಂದು ಸಣ್ಣ ಸಣ್ಣ ಚರ್ಮದ ಅಲರ್ಜಿಯನ್ನು ಹೋಗಲಾಡಿಸುತ್ತದೆ. ಇನ್ನೂ ಚರ್ಮದ ರಂಧ್ರಗಳನ್ನು ಮುಚ್ಚುವಲ್ಲಿ ನಿಂಬೆ ಹಣ್ಣು ಸಹಾಯ ಮಾಡುತ್ತದೆ. ನಿಂಬೆ ಹಣ್ಣಿನ ಮೇಲೆ ಉಪ್ಪನ್ನು ಹಚ್ಚಿ ನಿಮ್ಮ ಮುಖದ ತುಂಬಾ ನಿಧಾನವಾಗಿ ಉಜ್ಜಿಕೊಳ್ಳಿ. ಇದರಿಂದ ಚರ್ಮದ ಮೇಲಿನ ಎಲ್ಲ ಕೊಳೆ ಹೊರಗೆ ಬರುತ್ತದೆ ಮತ್ತು ಚರ್ಮದ ಮೇಲಿನ ರಂಧ್ರಗಳು ಮುಚ್ಚಿ ಹೋಗುತ್ತವೆ. ನಿಮ್ಮ ಕೂದಲಿಗೆ ಕಂಡೀಷನರ್ ಆಗಿ ನಿಂಬೆ ಹಣ್ಣು ಬಳಕೆ ಮಾಡಿ. ಶೀಖಾಕಾಯಿ ಬಳಕೆ ಮಾಡುತ್ತಿದ್ದರೆ ಕೃತಕ ಕಂಡೀಷನರ್ ಬಳಕೆ ಮಾಡಬೇಡಿ ಬದಲಾಗಿ ನಿಂಬೆ ಹಣ್ಣು ಬಳಕೆ ಮಾಡಿ. ಮೊಡವೆಗಳಿಗೆ ನಿಂಬೆ ಹಣ್ಣು ರಾಮಬಾಣ. ಇದು ಚರ್ಮದಲ್ಲಿ ಅಡಗಿರುವ ಎಣ್ಣೆ ಅಂಶವನ್ನು ಹೊರಗೆ ಹಾಕುತ್ತದೆ ಜೊತೆಗೆ ಮೊಡವೆಗಳನ್ನೂ ಆದಷ್ಟು ಕಡಿಮೆ ಮಾಡುತ್ತದೆ. ಶುಭದಿನ

Leave a Reply

Your email address will not be published. Required fields are marked *