ಯಾವ ರಾಶಿಯವರು ಯಾವ ಬಣ್ಣದ ಬಟ್ಟೆ ಹಾಕಿದರೆ ಅದೃಷ್ಟ ಮತ್ತು ಲಕ್ ಬರುತ್ತೆ ಗೊತ್ತಾ

ಜ್ಯೋತಿಷ್ಯ ಧಾರ್ಮಿಕ

ಇತ್ತೀಚೆಗೆ ಅದೃಷ್ಟ ಯಾರಿಗೆ ಯಾವ ರೀತಿಯಲ್ಲಿ ಬರುತ್ತೆ ಅನ್ನೋದು ತಿಳಿದಿಲ್ಲ ಕೆಲವೊಮ್ಮೆ ಕೆಲವು ರೀತಿಯಾಗಿ ಬರುತ್ತೆ ಆದರೆ ಅದಕ್ಕೆ ನೂರಾರು ಕಾರಣಗಳಿರುತ್ತವೆ ಅದರಲ್ಲಿ ನಿಮ್ಮ ಬಟ್ಟೆಯ ಬಣ್ಣಗಳು ಸಹ ಒಂದು ಮುಖ್ಯ ಕಾರಣವಾಗಿರುತ್ತವೆ, ಹಾಗಾದ್ರೆ ಯಾವ ರಾಶಿಯವರು ಯಾವ ಬಣ್ಣದ ಬಟ್ಟೆ ಹಾಕಿದರೆ ಅದೃಷ್ಟ ಅನ್ನೋದು ಇಲ್ಲಿದೆ ನೋಡಿ.

ಮೇಷ: ಮೇಷ ರಾಶಿಯ ಮಂದಿಗೆ ಮಂಗಳನು ಅಧಿಪತಿಯಾಗಿರುವುದರಿಂದ ಅವರಿಗೆ ಪ್ಯೂರ್ ಹಾಗೂ ಸಿಂಥೆಟಿಕ್ ಮಾದರಿಯ ವಸ್ತ್ರಗಳಷ್ಟೇ ಸರಿ ಹೊಂದುತ್ತವೆ. ಮೇಷ ರಾಶಿಯವರಿಗೆ ಲೆದರ್, ಬೆಳ್ಳಿ, ಕಬ್ಬಿಣದ ವಸ್ತುಗಳು ಸರಿ ಹೊಂದುವುದಿಲ್ಲ. ನೀಲಿ, ಕೆಂಪು, ಕೇಸರಿ ಬಣ್ಣದ ಬಟ್ಟೆಗಳು ಇವರಿಗೆ ಉತ್ತಮ.

ವೃಷಭ- ಹಸಿರು, ಬಿಳಿ, ಕಂದು ಮತ್ತಿತರ ದಟ್ಟ ಬಣ್ಣದ ಸಿಲ್ಕ್ ಬಟ್ಟೆಗಳು ಇವರಿಗೆ ಸರಿಯಾಗಿ ಹೊಂದುತ್ತವೆ. ಈ ಬಣ್ಣದ ಬಟ್ಟೆಗಳು ಸಾದಾ ಅರ್ಥಾತ್ ಡಿಸೈನ್ ರಹಿತ ಹಾಗೂ ಬಹುಬಣ್ಣದ ಲೇಯರ್‌ಗಳುಳ್ಳ ಈಗಿದ್ದರೆ ಇನ್ನೂ ಉತ್ತಮ.

ಮಿಥುನ- ಪರಿಶುದ್ಧ ಕಾಟನ್, ಹಾಗೂ ಲಿನೆನ್ ಬಟ್ಟೆಗಳು ಇವರಿಗೆ ಹೊಂದುತ್ತವೆ. ಹಸಿರು, ಬಿಳಿ ಇವರಿಗೆ ಅತ್ಯುತ್ತಮ. ಪ್ಲಾಟಿನಂ, ಚಿನ್ನ ಹಾಗೂ ಬೆಳ್ಳಿ ಇವರಿಗೆ ಹೊಂದಿಕೊಳ್ಳುತ್ತದೆ.

ಕರ್ಕ: ಕರ್ಕ ರಾಶಿಯ ಮಂದಿಗೆ ಸಿಲ್ಕ್, ಕಾಟನ್ ಹಾಗೂ ಲೆನಿನ್ ಬಟ್ಟೆಗಳು ಅತ್ಯುತ್ತಮ. ಬಿಳಿ ಬಣ್ಣದ ಬಟ್ಟೆಗಳು ಅಥವಾ ತುಂಬ ಸರಳವಾದ ಡಿಸೈನ್ ಹೊಂದಿದ ಬಟ್ಟೆಗಳು ಇವರಿಗೆ ಒಳ್ಳೆಯದು.

ಸಿಂಹ- ಸಿಂಹ ರಾಶಿಯ ಮಂದಿಗೆ ಕೆಂಪು, ಹಳದಿ ಹಾಗೂ ಕೇಸರಿ ಬಣ್ಣದ ಕಾಟನ್ ಬಟ್ಟೆಗಳು ಉತ್ತಮ. ಲೆದರ್, ಫೆದರ್, ಬೆಳ್ಳಿ ಹಾಗೂ ಕಬ್ಬಿಣ ಇವರಿಗೆ ಒಳ್ಳೆಯದಲ್ಲ.

ಕನ್ಯಾ – ಕಾಟನ್ ಹಾಗೂ ಲಿನೆನ್ ಬಟ್ಟೆ ಇವರಿಗೆ ಒಳ್ಳೆಯದು. ಅಗಲವಾದ ಕಟ್‌ಗಳು ಅಥವಾ ಶೇಡ್‌ಗಳಿರುವ ಬಟ್ಟೆ ಅಷ್ಟು ಒಳ್ಳೆಯದಲ್ಲ. ಬೆಳ್ಳಿ, ಪ್ಲಾಟಿನಂ ಚಿನ್ನ ಇವರಿಗೆ ಒಪ್ಪುತ್ತದೆ. ಎಮರಾಲ್ಡ್ ಒಳ್ಳೆಯದು.

ತುಲಾ- ತುಲಾ ರಾಶಿಯ ಮಂದಿಗೆ ಸಿಂಥೆಟಿಕ್ ಸಿಲ್ಕ್ ಬಟ್ಟೆಗಳು ಒಳ್ಳೆಯದು. ಕೆಂಪು, ಕೇಸರಿ ಬಣ್ಣದ ಬಟ್ಟೆಗಳು ಹೊಂದಿಕೆಯಾಗುವುದಿಲ್ಲ. ಬೆಳ್ಳಿ ಹಾಗೂ ಪ್ಲಾಟಿನಂ ಆಭರಣ ಕೂಡಾ ಉತ್ತಮವಲ್ಲ.

ವೃಶ್ಚಿಕ: ವೃಶ್ಚಿಕ ರಾಶಿಯ ಮಂದಿಗೆ ಕಾಟನ್ ಜೊತೆ ಲೇಸ್‌ಗಳುಳ್ಳ ಬಟ್ಟೆ ಒಳ್ಳೆಯದು. ಕೆಂಪು, ಹಳದಿ ಹಾಗೂ ಕೇಸರಿ ಬಣ್ಣದ ಬಟ್ಟೆಗಳು ಉತ್ತಮ. ಬೆಳ್ಳಿ ಹಾಗೂ ಪ್ಲಾಟಿನಂ ಆಭರಣಗಳಿಂದ ದೂರವಿದ್ದರೆ ಉತ್ತಮ.

ಧನು: ಈ ರಾಶಿಯ ಮಂದಿಗೆ ಹಳದಿ, ತೆಳು ಕೇಸರಿ, ಕಿತ್ತಳೆ ಬಣ್ಣಗಳು ಹೊಂದುತ್ತವೆ. ಚಿನ್ನದ ಆಭರಣಗಳು ಚೆನ್ನಾಗಿ ಹೊಂದುತ್ತವೆ.

ಮಕರ: ಈ ರಾಶಿಯ ಮಂದಿಗೆ ಕಾಟನ್, ಸಿಲ್ಕ್, ಲಿನೆನ್ ಮಾದರಿಗಳ ಬಟ್ಟೆ ಉತ್ತಮ. ಕಪ್ಪು, ನೀಲಿ, ಕಂದು ಉತ್ತಮ. ತಾಮ್ರ ಹಾಗೂ ಚಿನ್ನದ ಬಳಕೆಯಿಂದ ದೂರವಿದ್ದರೆ ಉತ್ತಮ.

ಕುಂಭ- ಈ ರಾಶಿಯ ಬಿಳಿ ಜೊತೆ ಕಂಡು ಬಣ್ಣ ಅಥವಾ ಮಂದಿಗೆ ದಟ್ಟ ಬಣ್ಣದ ಬಟ್ಟೆಗಳು ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ.

ಮೀನ- ಈ ರಾಶಿಯವರು ಹಳದಿ, ಕಿತ್ತಳೆ, ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು. ಇವರಿಗೆ ಸಾಮಾನ್ಯವಾಗಿ ಎಲ್ಲಾ ಮಾದರಿಯ ಬಟ್ಟೆ ಹೊಂದುತ್ತವೆ.

Leave a Reply

Your email address will not be published. Required fields are marked *