ಹೌದು ಮಾನವ ಅನ್ನೋ ಈ ಜನ್ಮ ಆ ದೇವರು ಯಾಕೆ ಸೃಷ್ಠಿ ಮಾಡಿದ ಅನ್ಸುತ್ತೆ ಕಣ್ರೀ ಯಾಕೆ ಅಂದ್ರೆ ನಿಜವಾಗಲೂ ಈ ಭೂಮಿ ಮೇಲೆ ಮನುಷ್ಯ ಯಾವತ್ತು ಯಾರಿಗೂ ಒಳ್ಳೇದು ಬಯಸಿದ್ದಾನೆ ಅನ್ಸುತ್ತೆ ಹಾಗಂತ ಯಾರು ಒಳ್ಳೆ ಕೆಲಸ ಮಾಡಿಲ್ಲ ಅಂತ ಅಲ್ಲ ಬಹುತೇಕ ಜನರನ್ನು ನೋಡಿದ್ರೆ ಈ ಪ್ರಶ್ನೆ ಬರುತ್ತೆ ಹಾಗೆ ನಾನು ಸಹ ಕೆಲವೊಂದು ವಿಚಾರಗಳನ್ನು ತುಂಬ ಸೂಕ್ಷ್ಮವಾಗಿ ನೋಡಿದಾಗ ನಂಗೆ ಅನಿಸಿದ ನಾಲ್ಕು ವಿಚಾರಗಳನ್ನು ಈ ಕೆಳಗೆ ತಿಳಿಸಿದ್ದೇನೆ ನೋಡಿ.
1. ಬದುಕಿದ್ದಾಗ ನಮಸ್ಕಾರ ಮಾಡದ ಜನ ಸತ್ತಾಗ ಪಾದ ಮುಟ್ಟಿ ಕೈ ಮುಗಿದರು: ಹೌದು ಮನುಷ್ಯನ ಜೀವನವೇ ಅಷ್ಟು ನಾವು ಕೆಲ ವ್ಯಕ್ತಿಗಳಿಗೆ ಅವರು ಬದುಕಿದ್ದಾಗ ಅವರಿಗೆ ಯಾವುದೇ ಗೌರವ ನೀಡುವುದಿಲ್ಲ ಮತ್ತು ಅವರನ್ನು ನಾವು ಕಡೆಗಣಿಸುತ್ತೇವೆ ಆದ್ರೆ ಅವರು ನಮ್ಮಿಂದ ದೂರವಾದಾಗ ಅಥವಾ ಅವರು ಸತ್ತಾಗ ಅವರ ಪಾದ ಮುಟ್ಟಿ ಕೈ ಮುಗಿಯುತ್ತೇವೆ ಇದು ಸರಿ ಅನ್ಸುತ್ತಾ ನೀವೇ ಹೇಳಿ.
2. ಉಸಿರಿರುವಾಗ ನೀ ಸತ್ತಿದ್ದರೇ ಚೆನ್ನಾಗಿರುತಿತ್ತು ಎಂದವರು ಸತ್ತಾಗ ಬದುಕಿರ ಬೇಕಿತ್ತು ಅನ್ನುತ್ತಾನೆ.
ಹೌದು ಈ ಮಾನವನೇ ಇಷ್ಟು ನಾವು ಕೆಲವರನ್ನು ಇವುನು ಯಾಕಾದ್ರೂ ಬದುಕಿದನಪ್ಪ ಅಂತ ಗೊಣಗಾಡುತ್ತೇವೆ ಮತ್ತು ಸತ್ತರೆ ಸಾಕಪ್ಪ ಅಂತ ಕೇಳಿಕೊಳ್ಳುತ್ತವೆ ಅದೇ ವ್ಯಕ್ತಿ ನಮ್ಮನ ಬಿಟ್ಟು ಹೋದಾಗ ಅಥವಾ ಸತ್ತಾಗ ತುಂಬ ಯೋಚನೆ ಮಾಡುತ್ತವೆ. ಮತ್ತೆ ತೋ ಇವುನು ಸಾಯಬಾರದಿತ್ತು ಅಂತ ನಾವೇ ಮರುಗುತ್ತವೆ ಇಂತಹ ಜೀವನ ಯಾಕಪ್ಪ ಬೇಕು.
3. ಅಂಗಳದ ತುಂಬೆಲ್ಲ ಅರಳಿನಿಂತ ಅನಾಮಧೇಯ ಹೂಗಳ ಮುಟ್ಟಲೂ ಸಹ ಬಿಡದಿದ್ದವರು ಸತ್ತಾಗ ಸುವಾಸನೆ ಬೀರುವ ಹೂಗಳ ತಂದು ಅಲಂಕರಿಸುತ್ತಾರೆ. ಹೌದು ನಾವು ನಮ್ಮ ಮನೆಗಳಲ್ಲಿ ಅಥವಾ ನಮ್ಮ ಪಕ್ಕದ ಮನೆಯವರಾಗಲಿ ಇಂತಹ ಕೆಲಸಗಳನ್ನು ಮಾಡುತ್ತವೆ. ನಮ್ಮ ಮನೆಯ ತುಂಬ ಹೂವಿನ ಗಿಡಗಳ ರಾಶಿ ಇದ್ದರು ಬೇರೆಯವರಿಗೆ ಕೊಡುವುದಿಲ್ಲ ಅದೇ ಯಾರಾದ್ರೂ ಸತ್ತಾಗ ಅವರಿಗೆ ಸುವಾಸನೆ ಬೀರುವ ಹೊಗಳನ್ನೇ ತೆಗೆದುಕೊಂಡು ಹೋಗುತ್ತೇವೆ ಇದಕ್ಕೆ ಏನ್ ಹೇಳ್ಬೇಕೋ ನಂಗೆ ಗೊತ್ತಿಲ ನೀವೇ ಯೋಚನೆ ಮಾಡಿ.
4. ಹೊಟ್ಟೆಗಾಗಿ ಬೇಡುವಾಗ ಕುತ್ತಿಗೆಹಿಡಿದು ತಳ್ಳಿದರು ಸತ್ತಾಗ ಅತ್ತು ಹೆಗಲಾದರು: ಹೌದು ಈ ವಿಚಾರದಲ್ಲಿ ತಂದೆ ತಾಯಿ ಮತ್ತು ಬೇರೊಬ್ಬರು ಸಹ ಆಗಿರಲಿ ಎಲ್ಲಾ ಒಂದೇ. ನಮ್ಮ ತಂದೆ ತಾಯಿಗಳಿಗೆ ಬದುಕಿದ್ದಾಗ ಒಂದು ತುತ್ತು ಅನ್ನ ಹಾಕದೆ ಅವರನ್ನು ಮನೆಯಿಂದ ಹೊರಗಡೆ ತಳ್ಳುತ್ತೇವೆ ಅದೇ ಅವರು ಸತ್ತಾಗ ಅತ್ತು ಕರೆದು ಅವರಿಗೆ ನಾವು ಹೆಗಲು ಕೊಡುತ್ತವೆ ಇಂತಹ ಜೀವನ ಯಾರಿಗಾಗಿ ಯಾತಕ್ಕಾಗಿ ಇಂತಹ ಜೀವನ ಮಾಡಬೇಕು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ನಿಮಗೆ ಏನ್ ಅನ್ಸುತ್ತೆ ಹೇಳಿ ಇಂತಹ ಜೀವನ ನಮಗೆ ಬೇಕಾ.