ನಮ್ಮ ಅರೋಗ್ಯ ನಮ್ಮ ಕೈಲ್ಲಿ ಅಂದರೆ ತಪ್ಪೇನು ಇಲ್ಲ ಯಾಕೆ ಅಂದ್ರೆ ಇವತ್ತಿನ ದಿಗಳಲ್ಲಿ ಎಷ್ಟೋ ಜನರಿಗೆ ಈ ನುಗ್ಗೆ ಸೊಪ್ಪಿನ ರುಚಿನೇ ಗೊತ್ತಿಲ್ಲ ಅದರಲ್ಲೂ ಈ ನಗರ ಪ್ರದೇಶದವರಿಗೆ ಇದರ ಬಗ್ಗೆ ಅಷ್ಟೇನೂ ಗೊತ್ತಿಲ್ಲ ಆದರೆ ಹಳ್ಳಿಗಳಲ್ಲಿ ಹೆಚ್ಚಾಗಿ ಸಿಗುವ ನುಗ್ಗೆಗಿಡದ ಸೊಪ್ಪು ತಿನ್ನಲು ವಿಶೇಷ ರುಚಿಯನ್ನು ಹೊಂದಿದ್ದು ಆರೋಗ್ಯಕ್ಕೂ ಪೂರಕವಾಗಿರುವ ನುಗ್ಗೆಸೊಪ್ಪನ್ನು ಆಷಾಢ ಮಾಸದಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಒಂದಿಡಿ ನುಗ್ಗೆ ಸೊಪ್ಪು ತಿಂದರೆ ಒಂದು ಲೋಟ ಹಾಲು, ಒಂದು ಲೋಟ ಕಿತ್ತಳೆ ಹಣ್ಣಿನ ರಸ ಹಾಗೂ 7 ಬಾಳೆಹಣ್ಣು ತಿನ್ನುವುದಕ್ಕೆ ಸಮ. ಹೌದು ನುಗ್ಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ಪೊಟಾಶಿಯಂ ವಿಟಮಿನ್ ಸಿ ಮತ್ತು ಕಣ್ಣಿನ ದೃಷ್ಟಿಗೆ ಅವಶ್ಯಕವಾದ ಜೀವಸತ್ವ ‘ಎ ‘ ಹೇರಳವಾಗಿದೆ. ಇಂತ ನುಗ್ಗೆ ಸೊಪ್ಪನ್ನು ಪ್ರತಿ ದಿನ್ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದರಿಂದ ಹಲವು ರೋಗಗಳಿಂದ ದೂರವಿರುಬಹುದು.
ಲೈಂ-ಗಿಕ ನಿಶ್ಶಕ್ತಿ ಎನ್ನುವುದು ವಯಸ್ಸಾದಂತೆ ಕಾಡುವ ತೀರಾ ಸಾಮಾನ್ಯ ಖಾಯಿಲೆಗಳಲ್ಲೊಂದು. ನುಗ್ಗೆಸೊಪ್ಪಿನಲ್ಲಿ ಲೈಂ-ಗಿಕ ಶಕ್ತಿ ಜಾಗೃತಗೊಳಿಸುವ ತಾಕತ್ತು ಇರುವಂತೆಯೇ ಜೀವನಿರೋಧಕ ಶಕ್ತಿಯೂ ಹೇರಳವಾಗಿದೆ. ನುಗ್ಗೆ ಸೊಪ್ಪು ಬಳಸಿ ಪ್ರತಿದಿನ ಚಹಾ ಮಾಡಿಕೊಂಡು ಕುಡಿಯುವುದರಿಂದ ಕಳೆದುಹೋದ ಲೈಂ-ಗಿಕ ಶಕ್ತಿಯನ್ನು ಮತ್ತೆ ಪಡೆಯಬಹುದು.
ನುಗ್ಗೆಸೊಪ್ಪಿನ ಸಾರು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ಮಾತೆಯರಿಗೆ ಉತ್ತಮ ರೀತಿಯಾದ ಪೋಷಕಾಂಶಗಳಿಂದ ಕೂಡಿದ ಆಹಾರ. ಈ ಸಾರನ್ನು ಅಬಾಲವೃದ್ದಿಯಾದಿಯಾಗಿ ಬಳಸಬಹುದು. ಬೇಯಿಸಿ ಬಸಿದ ನುಗ್ಗೆಸೊಪ್ಪಿನ ರಸಕ್ಕೆ ನಿಂಬೆ ರಸ ಹಿಂಡಿ ಸೇವಿಸಬೇಕು. ಒಂದು ವಾರ ಕಾಲ ಪ್ರತಿದಿನ ಬೆಳಿಗ್ಗೆ ಒಂದು ಬಟ್ಟಲು ರಸ ಸೇವಿಸುತ್ತಿದ್ದರೆ. ತಲೆ ಸುತ್ತುವಿಕೆ ನಿವಾರಣೆಯಾಗುತ್ತದೆ. ಒಂದೇ ಪಾಶ್ರ್ವದಲ್ಲಿ ತಲೆ ನೋಯುತ್ತಿದ್ದರೆ, ನಾಲ್ಕೈದು ತೊಟ್ಟು ನುಗ್ಗೆ ಸೊಪ್ಪಿನ ರಸವನ್ನು ಎಡ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಬಲ ಕಿವಿಗೂ, ಬಲ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಎಡಕಿವಿಗೂ ಬಿಡುವುದರಿಂದ ಗುಣಮುಖ ಕಂಡುಬರುತ್ತದೆ. ಈ ಕ್ರಮವನ್ನು ದಿನಕ್ಕೆ ಒಂದಾವರ್ತಿಯಂತೆ ಮೂರು ದಿನಗಳವರೆಗೆ ಮಾಡುವುದು ಅಗತ್ಯ.
ದೇಹದಲ್ಲಾದ ಯಾವುದೇ ಗಾಯವನ್ನು ಬೇಗನೆ ಶಮನಗೊಳಿಸುವ ಶಕ್ತಿ ಹೊಂದಿರುವ ನುಗ್ಗೆಸೊಪ್ಪಿನ ಚಹಾ ನಿತ್ಯ ಸೇವಿಸುತ್ತಿದ್ದರೆ ರಕ್ತದೊತ್ತಡ, ಸಕ್ಕರೆ ಖಾಯಿಲೆಯನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಅತೀ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವ ನುಗ್ಗೆಸೊಪ್ಪು ನಿಮ್ಮ ಆರೋಗ್ಯಕ್ಕೆ ರಾಮಬಾಣವಾಗಿದೆ.