ಮೈ ಮೇಲೆ ಅಥವಾ ಕೈಗಳ ಮೇಲೆ ಆಗುವ ಇಂತಹ ಗಡ್ಡೆಗಳನ್ನು ಬಹುಬೇಗನೆ ವಾಸಿ ಮಾಡುವ ಉತ್ತಮ ಮನೆಮದ್ದು

ಆರೋಗ್ಯ

ದೇಹದಲ್ಲಿ ಅಲ್ಲಲ್ಲಿ ಕೊಬ್ಬು ಗಡ್ಡೆಗಳು ಕಾಣಿಸುತ್ತವೆ ಇವುಗಳನ್ನು ಲಿಂಪೋಮ ಗಡ್ಡೆಗಳು ಇಲ್ಲಾ ಕೊಬ್ಬು ಗಡ್ಡೆಗಳು ಅಂತ ಕರೆಯುತ್ತಾರೆ. ಇವುಗಳಿಂದ ನೋವು ಇರುವುದಿಲ್ಲ ಆದರೂ ಸಹ ತಜ್ಞರ ಬಳಿ ಒಮ್ಮೆ ಆದರೂ ತೋರಿಸುವುದು ಉತ್ತಮ ಯಾಕೆ ಅಂದರೆ ಕೆಲವೊಮ್ಮೆ ಇಂತಹ ಗಡ್ಡೆಗಳು ಕ್ಯಾನ್ಸರ್ ಅಥವಾ ಬೇರೆ ಯಾವೋದು ರೀತಿಯ ಗಡ್ಡೆಗಳಾಗಿರುತ್ತವೆ. ಈ ಗಡ್ಡೆಗಳು ಕೇವಲ ಕೊಬ್ಬಿನ ಗಡ್ಡೆಗಳಾಗಿದ್ದರೆ ಅಷ್ಟೊಂದು ಭಯಪಡುವ ಅವಶ್ಯಕತೆ ಇರುವುದಿಲ್ಲ ಹೀಗೆ ದೇಹದಲ್ಲಿ ಏರ್ಪಡುವಂತ ಕೊಬ್ಬಿನ ಗಡ್ಡೆಗಳು ಯಾವುದೇ ರೀತಿಯ ಹಾನಿಯನ್ನುಂಟು ಮಾಡದೆ ಹೋದರು ನರಗಳ ಮೇಲೆ ಆಗುವುದರಿಂದ ಒಂದೊಂದು ಬಾರಿ ನೋವು, ಒತ್ತಡವನ್ನು ಉಂಟುಮಾಡುತ್ತವೆ. ಒಂದೇ ಕಡೆ ಆ ಗಡ್ಡೆಗಳು ಆಗಿದ್ದರೆ ಅವುಗಳನ್ನು ಕಡಿಮೆ ಮಾಡಿಕೊಳ್ಳಬಹುದು ಆದರೆ ಕೆಲವೊಬ್ಬರಲ್ಲಿ ದೇಹದಲ್ಲಿ ಎಲ್ಲಿ ಬೇಕಾದರೂ ಆಗಬಹುದು ಹೀಗೆ ಆದಾಗ ಇವುಗಳನ್ನು ಕಡಿಮೆ ಮಾಡಿಕೊಳ್ಳುವ ಅವಕಾಶ ಇದ್ದರೂ ಮತ್ತೆ ಗಡ್ಡೆ ಆಗುವ ಅವಕಾಶ ಇರುತ್ತದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿರುತ್ತದೆ.

ಇವುಗಳನ್ನು ಸಹಜವಾಗಿ, ಶಾಶ್ವತವಾಗಿ ಕಡಿಮೆ ಮಾಡಿಕೊಳ್ಳುವುದಕ್ಕೆ ಕೆಲವೊಂದು ಸಲಹೆಯನ್ನು ನೋಡೋಣ. ಅಲೋವೆರಾ ಒಂದು ರೆಂಬೆ ತೆಗೆದುಕೊಂಡು ಮೆತ್ತಗೆ ಮಾಡಿಕೊಳ್ಳಬೇಕು ಇದರಲ್ಲಿ ಒಂದು ಬೆಳ್ಳುಳ್ಳಿ, ಅರ್ದ ಚಮಚ ಹರಿಷಿನ ಪುಡಿ, ಹಾಕಿ ಮೆತ್ತಗೆ ಪೇಸ್ಟ್ ಮಾಡಿ ಇದನ್ನು ಬಿಸಿ ಮಾಡಬೇಕು. ಹೀಗೆ ಬಿಸಿ ಮಾಡಿದ ಮಿಶ್ರಣವನ್ನು ಉಗುರು ಬೆಚ್ಚಗೆ ಇರುವಾಗ ಕೊಬ್ಬು ಗಡ್ಡೆಗಳ ಮೇಲೆ ಅಚ್ಚುವುದರಿಂದ ಗಡ್ಡೆಗಳು ಕಡಿಮೆಯಾಗುತ್ತವೆ. ಈಗೆ ಪ್ರತಿದಿನ ಕನಿಷ್ಠ ನಾಲ್ಕು ದಿನಗಳವರೆಗೆ ಮಲಗುವಾಗ ಅಚ್ಚಿ ಮರುದಿನ ಶುಭ್ರವಾಗಿ ತೊಳೆಯಬೇಕು. ಮತ್ತೊಂದು ಸಲಹೆ ಎಂದರೆ ನುಗ್ಗೆಸೊಪ್ಪಿನ ಎಲೆಯನ್ನು ತೆಗೆದುಕೊಂಡು ಟೀ ಮಾಡಿಕೊಂಡು ಕುಡಿಯುವುದರಿಂದ ಇಲ್ಲಾ ಪೇಸ್ಟ್ ಮಾಡಿ ಕೊಬ್ಬು ಗಡ್ಡೆಗಳ ಮೇಲೆ ಹಚ್ಚುವುದರಿಂದ ಕೊಬ್ಬು ಕರಗಿ ಹೋಗುತ್ತದೆ.

ನುಗ್ಗೆಸೊಪ್ಪಿನ ಜೊತೆಗೆ ತೊಗಟೆ ಎಲೆ ಕೂಡ ಕೊಬ್ಬಿನ ಗಡ್ಡೆಗಳನ್ನು ಕರಗಿಸುವಲ್ಲಿ ಪಾತ್ರವಹಿಸುತ್ತದೆ ಗಿಡದಿಂದ ತೊಗಟೆ ಎಲೆಯನ್ನು ಮಾತ್ರ ತೆಗೆದುಕೊಂಡು ಅದನ್ನು ರುಬ್ಬಿ ಪೇಸ್ಟ್ ಮಾಡಿ ಗಡ್ಡೆಗಳ ಮೇಲೆ ಅಚ್ಚುವುದರಿಂದ ಗಡ್ಡೆಗಳು ಕರಗಿ ಹೋಗುತ್ತವೆ. ಹಾಗೆಯೇ ದಾಸವಾಳ ಎಲೆ ಸಹ ಮೆತ್ತಗೆ ಪೇಸ್ಟ್ ಮಾಡಿ ಕೊಬ್ಬಿನ ಗಡ್ಡೆಗಳಿಗೆ ಅಚ್ಚಿ ಪಟ್ಟಿ ಕಟ್ಟಬೇಕು. ಈಗೆ ಕನಿಷ್ಟ ಒಂದು ವಾರ ಮಾಡುವುದಾದರೆ ಕೊಬ್ಬಿನ ಗಡ್ಡೆಗಳು ಕರಗಿ ಹೋಗುತ್ತವೆ ನಮಗೆ ಹಾಲಿನಲ್ಲಿ ಹೆಚ್ಚಾಗಿ ಕಾಣಿಸುವ ಹಾಲಿನ ಕೆನೆಯನ್ನು ಅಚ್ಚುವುದರಿಂದ ಈ ಕೊಬ್ಬಿನ ಗಡ್ಡೆಗಳನ್ನು ಕರಗಿಸಿಕೊಳ್ಳಬಹುದು. ಈ ಟಿಪ್ಸ್ ಪಾಲಿಸುತ್ತಾ ಆಹಾರದಲ್ಲಿ ಪೋಷಕಾಂಶಗಳು ಇರುವ ಆಹಾರವನ್ನು ತೆಗೆದುಕೊಂಡು ಎಣ್ಣೆ ಜಿಡ್ಡು, ಜಂಕಫುಡ್, ಕಡಿಮೆ ಮಾಡುವುದರಿಂದ ದೇಹದಲ್ಲಿ ಕೊಬ್ಬಿನಾಂಶ ಬೆಳೆಯುವುದನ್ನು ತಡೆಯಬಹುದು.

Leave a Reply

Your email address will not be published. Required fields are marked *