ಮೂತ್ರನಾಳದಲ್ಲಿ ಅತಿಯಾದ ಹುರಿ, ತುರಿಕೆ, ನೋವು ಇಂತಹ ಸಮಸ್ಯೆಗಳು ಮೂತ್ರನಾಳದ ಇನ್ಫೆಕ್ಷನ್ ಸೂಚನೆಗಳು. ಈ ಸೂಚನೆಗಳು ಇದ್ದಾಗ ಮೂತ್ರ ವಿಸರ್ಜನೆ ಮಾಡುವುದಕ್ಕೂ ಸಹ ತುಂಬಾ ಕಷ್ಟವಾಗುತ್ತದೆ ಇದಕ್ಕೆ ಮುಕ್ಯ ಕಾರಣ ಎಂದರೆ ಹೊಸ ವ್ಯಕ್ತಿಯೊಂದಿಗೆ ಸೆಕ್ಸ್ ಮಾಡುವುದರಿಂದ ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳದೆ ಇರುವುದು ಹಾಗೆಯೇ ಮಧುಮೇಹ ಸಹ ಕಾರಣವಾಗುತ್ತದೆ. ಮುತ್ರಾಷಯವನ್ನು ಸಂಪೂರ್ಣವಾಗಿ ಕಾಲಿ ಮಾಡುವುದರಲ್ಲಿ ಆಲಸ್ಯ ಮಾಡುವುದು ಅಂದರೆ, ಆಗಾಗ ಮೂತ್ರ ವಿಸರ್ಜನೆ ಮಾಡದೆ ಇರುವುದು, ಅಶುದ್ಧ ಸ್ನಾನದ ಕೋಣೆಯನ್ನು ಉಪಯೋಗಿಸುವುದು, ಮೂತ್ರ ಪ್ರವಾಹವನ್ನು ತಡೆಗಟ್ಟುವುದು, ಇದರಿಂದ ಮೂತ್ರ ಪಿಂಡದಲ್ಲಿ ಕಲ್ಲು ಇರುವುದು ಇವೆಲ್ಲವೂ ಮುತ್ರಾಶಯ ಇನ್ಫೆಕ್ಷನ್ಗೆ ಕಾರಣವಾಗುತ್ತವೆ. ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾ ದಂತಹ ಸೂಕ್ಷ್ಮ ಜೀವಿಗಳು ದೇಹದಲ್ಲಿ ರಕ್ಷಣೆಯನ್ನು ಮೀರುತ್ತಿರುವುದರಿಂದ ಯುರಿನರಿ ಟ್ರಾಕ್ಟ್ ಇನ್ಫೆಕ್ಷನ್ ಸಂಭವಿಸುತ್ತದೆ ಅವು ಮೂತ್ರಪಿಂಡ, ಮುತ್ರಾಶಯ ಮತ್ತು ಅವುಗಳ ಮದ್ಯ ನಡೆಯುವ ಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತವೆ.
ಈಗೆ ಮುತ್ರಾಶಯ ಇನ್ಫೆಕ್ಷನ್ ಇರುವಾಗ ಆಗಾಗ ಮೂತ್ರ ಬಂದಹಾಗೆ ಅನಿಸುವುದು ಒಟ್ಟೆಯಲ್ಲಿ ನೋವು, ಜ್ವರ, ಮೂತ್ರದಲ್ಲಿ ಉರಿ, ಮೂತ್ರದ ಬಣ್ಣ ಬದಲಾಗುವುದು, ಇವುಗಳು ಮುಜುಗರಕ್ಕೆ ಗುರಿ ಮಾಡಿಕೊಟ್ಟಂತಾಗುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಪ್ರತಿದಿನ ನಾಲ್ಕು ಲೀಟರ್ ನೀರನ್ನು ಕುಡಿಯಬೇಕು ಮತ್ತು ಆಗಾಗ ಮೂತ್ರ ವಿಸರ್ಜನೆ ಮಾಡಬೇಕು. ಈಗೆ ಮಾಡುವುದರಿಂದ ಮುತ್ರಾಶಯ ಸ್ವಚ್ಛವಾಗಿ ಅವುಗಳ ಸ್ನಾಯುಗಳ ಮೇಲೆ ಇರುವಂತಹ ಒತ್ತಡ ಕಡಿಮೆ ಆಗುತ್ತದೆ ಮುತ್ರಾಷಯದಲ್ಲಿ ಸೇರಿಕೊಂಡ ಬ್ಯಾಕ್ಟೀರಿಯಾ ಹೊರಗಡೆಗೆ ಹೋಗುತ್ತದೆ. ಇದರ ಜೊತೆಗೆ ಈಗ ಏಳುವ ಸಲಹೆ ಕೂಡ ತುಂಬಾ ಚೆನ್ನಾಗಿ ಮುತ್ರಾಷಯ ಇನ್ಫೆಕ್ಷನ್ ಕಡಿಮೆ ಮಾಡುತ್ತದೆ. ಅದಕ್ಕೋಸ್ಕರ ನಾವು ದನಿಯಾ ಕಾಳು ಕೊತ್ತಂಬರಿ ಬೀಜ ತೆಗೆದುಕೊಳ್ಳಬೇಕು ಕೊತ್ತಂಬರಿ ಕಾಳು ದೇಹದಲ್ಲಿನ ಬಿಸಿಯನ್ನು ಕಡಿಮೆ ಮಾಡಿ ಚಲನೆ ಮಾಡುವ ಗುಣಗಳನ್ನು ಹೊಂದಿರುತ್ತದೆ.
ಮೂತ್ರದಲ್ಲಿ ಇನ್ಫೆಕ್ಷನ್ ಕಡಿಮೆ ಮಾಡಿ ಅದರಿಂದ ಬಂದಂತಹ ತೊಂದರೆಯನ್ನು ತೆಗೆದು ಹಾಕುತ್ತದೆ ಈಗ ಎರಡು ಚಮಚ ಕೊತ್ತಂಬರಿ ಬೀಜವನ್ನು ತೆಗೆದುಕೊಳ್ಳಬೇಕು ಅದರ ಜೊತೆಗೆ ಒಂದು ಚಿಟಿಕೆಯಷ್ಟು ಉಪ್ಪನ್ನು ಹಾಕಿಕೊಳ್ಳಬೇಕು ಈಗ ಇದರ ಜೊತೆಗೆ ಒಂದು ಗ್ಲಾಸಿನಸ್ಟು ಮಾಮೂಲಿ ನೀರನ್ನು ಹಾಕಿಕೊಳ್ಳಬೇಕು ಇದನ್ನು ಚೆನ್ನಾಗಿ ಕುದಿಸಿ ನೀರನ್ನು ಮಾತ್ರ ತೆಗೆದಿಟ್ಟುಕೊಳ್ಳಬೇಕು. ಈ ನೀರನ್ನು ಮೂರು ಭಾಗಗಳಾಗಿ ಮಾಡಿ ದಿನಕ್ಕೆ ಮೂರು ಭಾರಿ ಕುಡಿಯುತ್ತಾ ಬಂದರೆ ಒಂದೇ ದಿನದಲ್ಲಿ ಆಗುವ ಸಂಭವ ಇರುತ್ತದೆ. ಮುತ್ರಾಶಯ ಇನ್ಫೆಕ್ಷನ್ ಬಂದರೂ ಪ್ರತೀಸಾರಿ ಈ ಕಷಾಯವನ್ನು ಕುಡಿಯುವುದರಿಂದ ಮೂತ್ರನಾಳ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು. ಮುತ್ರಾಶಯ ಇನ್ಫೆಕ್ಷನ್ ನಿರ್ಲಕ್ಷ ಮಾಡುವುದರಿಂದ ಮಹಿಳೆಯರಲ್ಲಿ ಹೆಚ್ಚಿನ ಸಮಸ್ಯೆಗಳು ಕಂಡು ಬರುತ್ತವೆ ಮೂತ್ರಪಿಂಡ ಹಾಳಾಗುವ ಸಾದ್ಯತೆ ಕೂಡ ಇರುತ್ತದೆ.