ಅತೀ ಹೆಚ್ಚು ಪೋಷಕಾಂಶ ಹೊಂದಿರುವ ಆರೋಗ್ಯದ ರಾಜ ಈ ಕಿವಿ ಹಣ್ಣು ಸೇವನೆಯಿಂದ ಏನೆಲ್ಲಾ ಆಗುತ್ತೆ ಗೊತ್ತಾ

ಆರೋಗ್ಯ

ಕಿವಿ ಹಣ್ಣು ಈ ಹಣ್ಣನ್ನು ತುಂಬಾ ಹೆಸರುಗಳಿಂದ ಕರೆಯಲ್ಪಡುತ್ತಾರೆ ತುಂಬಾ ಜನ ಇದನ್ನು ವಂಡರ್ ಪ್ರೂಟ್ ಅಂತ ಕೂಡ ಕರೆಯುತ್ತಾರೆ. ಈ ಹಣ್ಣು ಏಷ್ಟೋ ಆರೋಗ್ಯ ಪ್ರಯೋಜನಗಳನ್ನು ಹೊಂದಿರುತ್ತದೆ ಎಲ್ಲಾ ಹಣ್ಣುಗಳಿಗಿಂತ ಇದು ಹೆಚ್ಚು ಪೋಷಕಾಂಶಗಳಿಂದ ಕೂಡಿದೆ. ಈ ಕಿವಿ ಹಣ್ಣಿನ ಮೇಲೆ Rutgers ಯೂನಿವರ್ಸಿಟಿಗೆ ಸೇರಿದ ಡಾಕ್ಟರ್ ಪಾಲ್ ಲಾರೆನ್ಸ್ ಕೆಲವೊಂದು ಸಂಶೋದನೆ ಮಾಡಿದ್ದಾರೆ. ಸಾಧಾರಣವಾಗಿ ನಾವು ತಿನ್ನುವ 27 ತರಹದ ಹಣ್ಣುಗಳಲ್ಲಿ ಇರುವ ಪೋಷಕಾಂಶಗಳಿಗಿಂತ ಈ ಕಿವಿ ಹಣ್ಣಿನಲ್ಲಿ ಅತಿ ಹೆಚ್ಚಿನ ಪೋಷಕಾಂಶಗಳು ಇರುತ್ತವೆ ಎಂದು ಒಂದು ಸ್ಟಡಿ ಹೇಳುತ್ತದೆ.

ಕಿವಿ ಹಣ್ಣಿನಿಂದ ಸಿಗುವ ಆರೋಗ್ಯ ಪ್ರಾಯೋಜನೆಗಳು: ಕಿವಿ ಹಣ್ಣಿನಲ್ಲಿ ವಿಟಮಿನ್ – ಸಿ ಹೆಚ್ಚಾಗಿ ಇರುತ್ತದೆ ಅರೇಂಜ್ ಗಿಂತ ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಎರಡು ಪಟ್ಟು ಹೆಚ್ಚಿರುತ್ತದೆ. ದಿನಾಲೂ ತಿನ್ನುವಂತಹ ಪೋಷಕಾಂಶಗಳ ಬದಲಾಗಿ ಒಂದು ಕಿವಿ ಹಣ್ಣು ತಿಂದರೆ ಸಾಕು ಎಂದು ಸ್ಟಡಿ ಹೇಳುತ್ತದೆ ಕಿವಿ ಹಣ್ಣು ಉಸಿರಾಟಕ್ಕೆ ಸಂಬಂದಿಸಿದ ಮತ್ತು ಅಸ್ತಮಾ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡುತ್ತದೆ. ಇದರಿಂದ ವಾರದಲ್ಲಿ ಒಂದು ಸಾರಿ ಆದರೂ ಮಕ್ಕಳಿಗೆ ಕೊಡಬೇಕು ಇಲ್ಲವಾದರೆ ಮಕ್ಕಳಲ್ಲಿ ಕೆಮ್ಮು ಶೀತ ಆಗುತ್ತದೆ. ಬಾಳೆಹಣ್ಣಿನಲ್ಲಿ ಎಸ್ಟು ಪೊಟಾಶಿಯಂ ಇದೆಯೋ ಅಷ್ಟೇ ಕಿವಿ ಹಣ್ಣಿನಲ್ಲಿ ಇರುತ್ತದೆ ಬಾಳೆಹಣ್ಣಿಗೆ ಹೋಲಿಸಿದರೆ ಕ್ಯಾಲೋರಿಗಳು ಕೂಡ ಕಡಿಮೆ ಇರುವುದರಿಂದ ಹೃದಯಕ್ಕೆ ಪ್ರಯೋಜನೆಗಳೂ ಆಗುತ್ತವೆ. ಇದರಲ್ಲಿ ಸೋಡಿಯಂ ಲೆವೆಲ್ಸ್ ಕೂಡ ಕಡಿಮೆ ಇದ್ದು ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಯ ಸಮಸ್ಯೆ ಬರದ ಹಾಗೆ ಕಾಪಾಡುತ್ತದೆ.

ವಿಟಮಿನ್ ಈ ಹೆಚ್ಚಾಗಿ ಇರುವ ಆಹಾರದಲ್ಲಿ ಕೊಬ್ಬಿನಾಂಶ ಕೂಡ ಹೆಚ್ಚಾಗಿರುತ್ತದೆ ಎಂದು ನಮಗೆ ತಿಳೆದೆಯಿದೆ ಆದರೆ ಕಿವಿ ಹಣ್ಣಿನಲ್ಲಿ ಕಡಿಮೆ ಕೊಬ್ಬಿನಾಂಶ ಇದ್ದು ಇದರಿಂದ ವಿಟಮಿನ್ ಡಿ ದೊರೆಯುತ್ತದೆ. ಹೆಚ್ಚು ಯಾಂಟಿ ಆಕ್ಸಿಡೆಂಟ್ಗಳನ್ನು ಒದಗಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಕಿವಿ ಹಣ್ಣಿನಲ್ಲಿ ಪೋಲಿಕ್ ಯಸಿಡ್ ಅಧಿಕವಾಗಿರುತ್ತದೆ ಗರ್ಭ ಧರಿಸಿರುವ ಮಹಿಳೆಯರು ಇದನ್ನು ತೆಗೆದುಕೊಂಡರೆ ಒಳ್ಳೆಯ ಪ್ರಾಯೋಜನೆಗಳೂ ಸಿಗುತ್ತವೆ. ಪೊಲೀಕ್ ಯಾಸಿಡ್ ಮಕ್ಕಳಲ್ಲಿ ನರಗಳ ಬಲಹೀನತೆ ಬರದ ಹಾಗೆ ಮಾಡುತ್ತದೆ ಗರ್ಭಾವತಿಗೆ ಬೇಕಾದಂತಹ ವಿಟಮಿನ್ ಕೂಡ ಕೊಡುತ್ತದೆ. ಹೊಟ್ಟೆಯಲ್ಲಿ ಮಗುವಿನ ಬೆಳವಣಿಗೆ ಮತ್ತು ಮೆದುಳು, ಹೃದಯ ಸಂಬಂಧಿತ ಕಾಯಿಲೆಯಿಂದ ದೂರವಿರಿಸುತ್ತದೆ.

ಈ ಹಣ್ಣಿನಲ್ಲಿ ನಾರಿನಂಶ ಕೂಡ ಹೆಚ್ಚಾಗಿ ಇದ್ದು ಜೀರ್ಣಕ್ರಿಯೆ ವ್ಯವಸ್ತೆಯನ್ನು ಶುದ್ದಮಾಡಿ ಮಲಬದ್ಧತೆ ಸಮಸ್ಯೆ ಬಾರದ ಹಾಗೆ ತಡೆಯುತ್ತದೆ. ಕೊಲೆಸ್ಟ್ರಾಲ್ ಕಡಿಮೆಮಾಡಿ ಹೃದಯ, ಕ್ಯಾನ್ಸರ್, ರಕ್ತದಲ್ಲಿ ಶುಗರ್, ಡಯಾಬಿಟಿಸ್, ಬಾರದ ಹಾಗೆ ತಡೆಗಟ್ಟುತ್ತದೆ. ಕಿವಿ ಹಣ್ಣು ಹೊಟ್ಟೆ ತುಂಬಿಸುತ್ತದೆ ಇದರಿಂದ ತೂಕ ಸಹ ಕಡಿಮೆ ಮಾಡುತ್ತದೆ ಚರ್ಮ, ಕೂದಲು, ಕಣ್ಣು, ಮುಂತಾದವುಗಳಿಗೆ ಆರೋಗ್ಯಕರವಾದ ಅಂಶಗಳನ್ನು ಹೊಂದಿರುತ್ತದೆ. ಇದು ನಮ್ಮ ದೇಶದ ಹಣ್ಣು ಅಲ್ಲದೆ ಹೋದರು ಇದರ ಪೋಷಕಾಂಶಗಳನ್ನು ನೋಡಿದರೆ ಎಲ್ಲಿಂದ ಬೇಕಾದರೂ ತರಿಸಿ ತಿನ್ನಬಹುದು. ಇದು ಹಣ್ಣು ಆದಾಗ ಸ್ವಲ್ಪ ಮೆತ್ತಗೆ ಇರುತ್ತದೆ ತಿನ್ನುವುದಕ್ಕೆ ತುಂಬಾ ರುಚಿಕರವಾಗಿರುತ್ತದೆ. ಇಗಾದರೆ ಎಲ್ಲಾ ಸೂಪರ್ ಮರ್ಕೆಟ್ಗಳಲ್ಲಿ ಸಿಗುತ್ತದೆ ಇಷ್ಟು ಆರೋಗ್ಯ ಪ್ರಯೋಜನೆಗಳು ಇರುವ ಕಿವಿ ಹಣ್ಣನ್ನು ತಿಂದು ಆನಂದಿಸಿ.

Leave a Reply

Your email address will not be published. Required fields are marked *