ಎಂ ಆರ್ ಐ ಸ್ಕ್ಯಾನ್ ಮಾಡಿಸುವ ಮೊದಲು ತಪ್ಪದೆ ಇದನ್ನೊಮ್ಮೆ ನೋಡಿ. ಅನಾರೋಗ್ಯದಿಂದ ಡಾಕ್ಟರ್ ಬಳಿ ಹೋದಾಗ ಒಂದುಸಾರಿ ಎಂ ಆರ್ ಐ ಸ್ಕ್ಯಾನ್ ಮಾಡಿಸಬೇಕು ಎಂದು ಸೂಚಿಸುತ್ತಾರೆ. ಆದರೆ ಈ ಸ್ಕ್ಯಾನ್ನಿಂದ ಪ್ರಾಣಕ್ಕೆ ಅಪಾಯ ಇದೆಯೇ, ಈ ಸ್ಕ್ಯಾನ್ ಗೆ ಎಸ್ಟು ಕರ್ಚು ಆಗುತ್ತದೆ, ಇದರಿಂದ ಹಾಗುವ ಲಾಭಗಳೇನು, ಇವೆಲ್ಲಾ ವಿಷಯಗಳನ್ನು ಈಗ ತಿಳಿದುಕೊಳ್ಳೋಣ. ಮೂಲ ಎಂ ಆರ್ ಐ ಎಂದರೆ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್, ಈ ಎಂ ಆರ್ ಐ ಎನ್ನುವುದು ದೇಹದ ನಿರ್ಮಾಣ ವಿಜ್ಞಾನ ಮತ್ತು ದೇಹದ ಬೌತ್ತಿಕ ಪ್ರಕ್ರಿಯೆಗಳ ಚಿತ್ರಗಳನ್ನು ವಿನ್ಯಾಸಗೊಳಿಸುವುದಕ್ಕೆ ರೆಡಿಯೋಲಾಜಿಯಲ್ಲಿ ಉಪಯೋಗಿಸುವ ಮೆಡಿಕಲ್ ಇಮೇಜಿಂಗ್ ಟೆಕ್ನಿಕ್. ಎಂ ಆರ್ ಐ ಸ್ಕ್ಯಾನ್ ದೇಹದಲ್ಲಿ ಅನಾರೋಗ್ಯದಿಂದ ಇರುವ ಅಂಗಗಳ ಚಿತ್ರವನ್ನು ವಿನ್ಯಾಸಗೊಳಿಸಲು ಬಲವಾದ ಅಯಸ್ಕಾಂತ ಕ್ಷೇತ್ರಗಳು, ಅಯಸ್ಕಾಂತ ಕ್ಷೇತ್ರ ಗ್ರೇಡಿಯಂಟ್ಸ್ ಮತ್ತು ರೇಡಿಯೋ ಅಲೆಗಳನ್ನು ಉಪಯೋಗಿಸುತ್ತಾರೆ.
ಎಂ ಆರ್ ಐ ಇಂದ ದೇಹದಲ್ಲಿ ಯಾವುದೇ ರೀತಿಯ ಯಂತ್ರಗಳನ್ನು ಕಲಿಯಿಸದ ಹಾಗೆ ದೇಹದಲ್ಲಿ ಇರುವ ಅಂಗಗಳೆಲ್ಲವುಗಳಿಗೆ ಸಂಕ್ಷಿಪ್ತವಾಗಿ ನೋಡಲು ಸಾಧ್ಯವಾಗುತ್ತದೆ. ದೇಹದಲ್ಲಿ ಎಲ್ಲಿ ಸಮಸ್ಯೆ ಇದೆಯೋ, ಎಲ್ಲಿಯಾದರೂ ಗಡ್ಡೆಗಳು ಇರಬಹುದೇನೋ ಎಂಬುವುದನ್ನು ತಿಳಿದುಕೊಳ್ಳಲು, ದೇಹದಲ್ಲಿ ಯಾವ ಅಂಗಗಳು ಎಸ್ಟು ಚುರುಕಾಗಿ ಕೆಲಸ ಮಾಡುತ್ತವೆ ಎಂಬುವುದನ್ನು ತಿಳಿಯಲು, ತೆಗೆದುಕೊಂಡ ಹೌಷದಿಗಳು ಸರಿಯಾಗಿ ಕೆಲಸ ಮಾಡುತ್ತವೆ ಅಥವಾ ಮಾಡುತ್ತಿಲ್ಲ ಎಂಬುವುದನ್ನು ತಿಳಿದುಕೊಳ್ಳಲು ಈ ಎಂ ಆರ್ ಐ ಸ್ಕ್ಯಾನ್ ತುಂಬಾ ಚೆನ್ನಾಗಿ ಉಪಯೋಗವಾಗುತ್ತದೆ. ಎಂ ಆರ್ ಐ ಸ್ಕ್ಯಾನ್ ಹೇಗೆ ಮಾಡುತ್ತಾರೆ ಎಂಬುವುದನ್ನು ತಿಳಿಯೋಣ ಈ ಸ್ಕ್ಯಾನ್ ಮಾಡುವ ಮೊದಲು ಡಾಕ್ಟರ್ ನಾವು ಆಕಿರುವಂತ ಬಟ್ಟೆಯನ್ನು ತೆಗೆಸಿ ಹಾಸ್ಪಿಟಲ್ ಗೌನ್ ಹಾಕಿಕೊಳ್ಳಲು ಹೇಳುತ್ತಾರೆ. ಯಾಕೆಂದರೆ ನಮ್ಮ ಬಟ್ಟೆಯಲ್ಲಿ ಇರುವಂಥ ಮೆಟಲ್ ನಂತಹ ಐಸ್ಕಾಂತ ಅಲೆಗಳಿಗೆ ಆಕರ್ಷಿತವಾಗಿ ಶಾಕಕ್ಕೆ ಕರಗಿ ಹೋಗುತ್ತವೆ. ಇವು ದೇಹಕ್ಕೆ ಅಂಟಿಕೊಳ್ಳುತ್ತವೆ, ಹಾಗೆಯೇ ದೇಹದಲ್ಲಿ ಇರುವ ಬಂಗಾರ, ವಾಚ್ ನಂತಹ ವಸ್ತುಗಳನ್ನು ಮೊದಲೇ ತೆಗೆಸುತ್ತಾರೆ.
ಆಪರೇಶನ್ ಮಾಡುವಾಗ ಬ್ರೆಯಿನ್ ಮ್ಯಾಪಿಂಗ್ ನಂತಹುಗಳನ್ನು ಎಂ ಎಸ್ ಐ ಸ್ಕ್ಯಾನ್ ನಿಂದ ಮಾಡುತ್ತಾರೆ. ಸ್ಕ್ಯಾನಿಂಗ್ ಮಾಡುವ ಮೊದಲು ಡಾಕ್ಟರ್ ಗೆ ಹೇಳುವಂತಹ ಕೆಲವೊಂದು ವಿಷಯಗಳೆಂದರೆ ನೀವು ಗರ್ಭವತಿ ಆಗಿದ್ದರೆ ತಪ್ಪದೆ ಈ ವಿಷಯವನ್ನು ಡಾಕ್ಟರ್ ಗೆ ಹೇಳಬೇಕು, ಯಾಕೆಂದರೆ ತುಂಬಾ ಪರಿಣಾಮಕಾರಿಯಾದ ಐಸ್ಕಾಂತ ಕಿರಣಗಳು ದೇಹದ ಮೇಲೆ ಬೀಳುತ್ತವೆ ಇದು ಮಗುವಿನ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದು. ಹಾಗೆಯೇ ಮೈಮೇಲೆ ಹಚ್ಚೆ, ದೇಹದಲ್ಲಿ ರಾಡು, ಇಂತಹ ಯಾವುದಾದರೂ ಮೆಟಲ್ ಅಬ್ಜೆಕ್ಟ್ ಇರುವಾಗ ಡಾಕ್ಟರ್ ಗೆ ತಪ್ಪದೆ ತಿಳಿಸಬೇಕು ಈಗೆ ಮೊದಲೇ ಹೇಳುವುದರಿಂದ ನಿಮ್ಮ ದೇಹಕ್ಕೆ ತಕ್ಕಂತೆ ಸ್ಕ್ಯಾನಿಂಗ್ ಮಾಡುತ್ತಾರೆ. ಸ್ಕ್ಯಾನಿಂಗ್ ಮಾಡುವ ನಾಲ್ಕು ಗಂಟೆ ಮೊದಲು ಯಾವುದೇ ರೀತಿಯ ಆಹಾರ ತೆಗೆದುಕೊಳ್ಳಬಾರದು ಸ್ಕ್ಯಾನಿಂಗ್ ಮಾಡುವಾಗ ಶಬ್ದಗಳು ಬರುತ್ತವೆ ಅವು ನಮಗೆ ಕೆಲಿಸಬಾರದು ಎಂದು ಕಿವಿಗೆ ಹೆಡ್ಸಟ್ ಹಾಕುತ್ತಾರೆ. ಈ ಪ್ರಕ್ರಿಯೆ 30 ರಿಂದ 90 ನಿಮಿಷದ ವರೆಗೆ ನಡೆಯುತ್ತದೆ. ಎಂ ಆರ್ ಐ ಸ್ಕ್ಯಾನ್ ಮಾಡುವುದಕ್ಕೆ 15 ಸಾವಿರದಿಂದ 25 ಸಾವಿರದ ವರೆಗೆ ಖರ್ಚಾಗುತ್ತದೆ. ನಾವು ಯಾವ ಅಂಗಗಳಿಗೆ ಮಾಡಿಸುತ್ತೇವೆ, ಎಂಥಹ ಹಾಸ್ಪಿಟಲ್ನಲ್ಲಿ ಮಾಡಿಸುತ್ತೇವೆ ಎನ್ನುವ ಆದಾರದ ಮೇಲೆ ಅದರ ದರ ಇರುತ್ತದೆ. ಎಂ ಆರ್ ಐ ಸ್ಕ್ಯಾನ್ ಮಾಡಿಸುವ ಅವಕಾಶ ಬಂದರೆ ಇಡೀ ದೇಹಕ್ಕೆ ಮಾಡಿಸುವುದರಿಂದ ದೇಹದಲ್ಲಿ ನಮಗೆ ಮತ್ತು ಡಾಕ್ಟರ್ ಗೆ ತಿಳಿಯದೆ ಇರುವ ಅನಾರೋಗ್ಯ ಇದ್ದರೆ ಇದರಿಂದ ಹೊರಬೀಳುತ್ತವೆ ಸಮಯಕ್ಕೆ ಚಿಕಿತ್ಸೆ ಮಾಡಿಸಿಕೊಳ್ಳಬಹುದು.