ಮುಟ್ಟಿದರೆ ಮುನಿ ಗಿಡ ಎಲ್ಲೇ ಸಿಕ್ಕರೂ ಬಿಡಬೇಡಿ ಕೀಲು ನೋವು ಮಂಡಿ ನೋವು ಗಂಟಲು ಬಾವು ಮೂಲವ್ಯಾಧಿ ಸಮಸ್ಯೆಗೆ ಇದರ ಒಂದು ಲೋಟ ರಸ ಸಾಕು

ಆರೋಗ್ಯ

ನಮಸ್ತೇ ಗೆಳೆಯರೇ, ಮುಟ್ಟಿದರೆ ಮುನಿ ಎಂಬ ಸಸ್ಯದ ಹೆಸರು ನೀವು ಕೇಳಿಯೇ ಇರುತ್ತೀರಿ ಗೆಳೆಯರೇ. ಹೆಸರೇ ಸೂಚಿಸುವಂತೆ ಈ ಸಸ್ಯವು ಮುಟ್ಟಿದರೆ ಮುಚ್ಚಿಕೊಳ್ಳುತ್ತದೆ. ಆದ್ದರಿಂದ ಚಿಕ್ಕ ಮಕ್ಕಳಿಗೆ ಈ ಗಿಡದ ಜೊತೆಗೆ ಆಟವಾಡಲು ತುಂಬಾನೇ ಇಷ್ಟ ಪಡುತ್ತಾರೆ. ಕಾರಣ ಇದರಲ್ಲಿ ಇರುವ ಅದ್ಭುತವಾದ ಗುಣಲಕ್ಷಣವೇ ಕಾರಣವಾಗಿದೆ. ಈ ಸಸ್ಯವನ್ನು ಆಂಗ್ಲ ಭಾಷೆಯಲ್ಲಿ ಟಚ್ ಮಿ ನೋಟ್ ಅಂತ ಕರೆಯುತ್ತಾರೆ ಅಷ್ಟೇ ಅಲ್ಲದೇ ಈ ಸಸ್ಯವನ್ನು ಪತಿವ್ರತೆ, ನಾಚಿಕೆ ಮುಳ್ಳು, ಮುಟ್ಟಿದರೆ ಮುಚುಕ್ ಅಂತ ತುಂಬಾನೇ ಹೆಸರಿನಿಂದ ಈ ಗಿಡವನ್ನು ಕರೆಯುತ್ತಾರೆ. ನಿಮಗೆ ಗೊತ್ತೇ ಯಾರಿಗೂ ಬೇಡವಾದ ಈ ಸಸ್ಯದಲ್ಲಿ ಕಲ್ಪನೆಗೂ ಮೀರಿದ ಅದ್ಭುತವಾದ ಔಷಧೀಯ ಗುಣಗಳು ಅಡಗಿವೆ. ಹಾಗೆಯೇ ಕೆಲವು ಸಸ್ಯಗಳು ಅದ್ಭುತವಾದ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಆದ್ದರಿಂದ ಚಿಕ್ಕ ಮಕ್ಕಳಿಗೆ ಈ ಸಸ್ಯ ತುಂಬಾನೇ ಇಷ್ಟವಾಗುತ್ತದೆ. ಈ ಸಸ್ಯದ ಮೂಲ ತವರು ಮನೆ ಮಧ್ಯ ಅಮೇರಿಕ. ಮೈತುಂಬ ಮುಳ್ಳು, ಎಲೆಗಳನ್ನು ಮುಟ್ಟಿದೊಡನೆ ಮುದುಡಿಕೊಳ್ಳುತ್ತದೆ ಸ್ಪರ್ಶ ತಾಕಿದೊಡನೆ ನಾಚಿ ಕೆಂಪಾಗಿ, ಮುಸುಕೊದ್ದು ಕುಳಿತಂತೆ ಭಾಸವಾಗುತ್ತದೆ.ಇದೊಂದು ಪ್ರಕೃತಿಯ ರಹಸ್ಯವಾಗಿದ್ದು ಸಸ್ಯವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಳವಡಿಸಿಕೊಂಡಿರುವ ತಂತ್ರವಿದು.

ಹೌದು ಈ ಸಸ್ಯದಲ್ಲಿ ಅಧಿಕವಾಗಿ ಮುಳ್ಳುಗಳು ಇರುವುದರಿಂದ ಈ ಗಿಡವು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ಇದು ಈ ಸಸ್ಯದ ವಿಶೇಷವಾದ ಲಕ್ಷಣ ಅಂತ ಹೇಳಬಹುದು. ಈ ಸಸ್ಯ ಎಲ್ಲಿ ಬೇಕಾದರೂ ಬೆಳೆಯುವ ಕಾರಣ ಇದನ್ನು ಹೆಚ್ಚಾಗಿ ನಾವು ಕಳೆ ಪ್ರದೇಶದಲ್ಲಿ ಕಾಣಬಹುದು. ಆದರೆ ಈ ಸಸ್ಯಕ್ಕೆ ಆಯುರ್ವೇದದಲ್ಲಿ ತುಂಬಾನೆ ಮಹತ್ವವಾದ ಸ್ಥಾನವಿದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಮುಟ್ಟಿದರೆ ಮುನಿ ಈ ಗಿಡದ ಅದ್ಭುತವಾದ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಸಂಪೂರ್ಣವಾಗಿ ಎಳೆ ಎಳೆಯಾಗಿ ತಿಳಿದುಕೊಳ್ಳೋಣ. ಮೂಲವ್ಯಾಧಿ ಸಮಸ್ಯೆ ಒಂದು ಬಾರಿ ಬಂದು ಸೇರಿಕೊಂಡರೆ ಅದರಿಂದ ಆಗುವ ನೋವು ಅನುಭವಿಸಲು ತುಂಬಾನೇ ಕಷ್ಟವಾಗುತ್ತದೆ. ಅಂಥವರು ಈ ಮುಟ್ಟಿದರೆ ಮುನಿ ಎಂಬ ಸಸ್ಯದ ಉಪಯೋಗ ಮಾಡಬಹುದು. ಇನ್ನು ಮಲಬದ್ಧತೆ ಸಮಸ್ಯೆ ಇರುವವರು ಮುಟ್ಟಿದರೆ ಮುನಿಯ ರಸ ಮತ್ತು ಬೇರನ್ನು ಚೆನ್ನಾಗಿ ಜಜ್ಜಿ ಅದರ ರಸವನ್ನು ಕುಡಿಯಬೇಕು. ಎಷ್ಟು ಪ್ರಮಾಣದಲ್ಲಿ ಕುಡಿಯಬೇಕೆಂದರೆ ಒಂದು ಚಮಚ ಮುಟ್ಟಿದರೆ ಮುನಿಯ ರಸಕ್ಕೆ ಒಂದು ಲೋಟ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಬೇಕು.

ಈ ಕಷಾಯವನ್ನು ಕುಡಿಯುವುದರಿಂದ ಹಲವಾರು ಬಗೆಯ ಸಮಸ್ಯೆಗಳಾದ ಮೂಲವ್ಯಾಧಿ ಮಲಬದ್ಧತೆ, ಕೀಲು ನೋವು ಮಂಡಿ ನೋವು ಹೊಟ್ಟೆ ನೋವು ಹೊಟ್ಟೆ ಉಬ್ಬರ ಇನ್ನಿತರ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಇನ್ನು ಅಪಘಾತವಾಗಿ ಗಾಯಗಳು ಆಗಿದ್ದರೆ ಮತ್ತು ಮಕ್ಕಳು ಆಟವಾಡುವಾಗ ಬಿದ್ದು ಪೆಟ್ಟಾಗಿ ರಕ್ತಸ್ತಾವ ಆಗುತ್ತಿದ್ದರೆ ಈ ಗಿಡದ ರಸವನ್ನು ಲೇಪನ ಮಾಡುವುದರಿಂದ ರಕ್ತಸ್ರಾವ ನಿಲ್ಲುತ್ತದೆ. ಇನ್ನು ನಿಮ್ಮ ಮುಖದಲ್ಲಿ ಮೊಡವೆಗಳು, ಗುಳ್ಳೆಗಳು ತುರಿಕೆ ಕಲೆಗಳು ಆಗಿದ್ದರೆ ಮುಟ್ಟಿದರೆ ಮುನಿಯ ರಸವನ್ನು ಹಚ್ಚುವುದರಿಂದ ಮೊಡವೆಗಳು ಮಂಗಮಾಯವಾಗುತ್ತವೆ. ಇನ್ನು ನಿಮಗೆ ಗಂಟಲು ಬಾವು ಸಮಸ್ಯೆ ಇದ್ದರೆ ಈ ಗಿಡದ ಕಾಂಡದ ರಸವನ್ನು ತೆಗೆದುಕೊಂಡು ಬಾವು ಇರುವ ಜಾಗಕ್ಕೆ ಹಚ್ಚುವುದರಿಂದ ಬಾವು ಬೇಗನೆ ಇಳಿಯುತ್ತದೆ. ಈ ಸಸ್ಯದ ಪ್ರತಿಯೊಂದು ಭಾಗವು ಔಷಧೀಯ ಗುಣವನ್ನು ಹೊಂದಿದೆ. ಆದರೆ ಗೆಳೆಯರೇ ನೀವು ಇಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಸಂಗತಿ ಏನೆಂದರೆ ಈ ಗಿಡದ ಎಲೆ ಕಾಂಡ ಬೇರು ತೆಗೆದುಕೊಳ್ಳುವಾಗ ಈ ಗಿಡದಮುಳ್ಳುಗಳು ನಿಮ್ಮ ದೇಹವನ್ನು ತಾಕದಂತೆ ನೋಡಿಕೊಳ್ಳಿ. ಇಲ್ಲವಾದರೆ ದೇಹಕ್ಕೆ ನಂಜು ಸೇರುವ ಸಾಧ್ಯತೆಗಳು ಇರುತ್ತವೆ. ಗೆಳೆಯರೇ, ಆದ್ದರಿಂದ ಯಾವುದೇ ಸಸ್ಯವನ್ನು ಬಳಕೆ ಮಾಡುವ ಮುನ್ನ ಅದರ ಬಗ್ಗೆ ಅರಿತುಕೊಂಡು ಬಳಕೆ ಮಾಡಿರಿ. ಶುಭದಿನ.

Leave a Reply

Your email address will not be published. Required fields are marked *