ನಮಸ್ತೇ ಪ್ರಿಯ ಓದುಗರೇ, ತರಕಾರಿಗಳಲ್ಲಿ ಪ್ರತಿಯೊಂದು ತರಕಾರಿ ಅಂದರೆ ಕಾಳುಗಳು ಬೀಜಗಳು ಹಸಿರು ಸೊಪ್ಪುಗಳು ತುಂಬಾನೇ ಮುಖ್ಯವಾಗಿರುತ್ತವೆ. ನಿಮಗೆ ಗೊತ್ತಿರುವ ಹಾಗೆ ತರಕಾರಿಗಳಲ್ಲಿ ಕ್ಯಾಬೇಜ್ ಅಥವಾ ಎಲೆಕೋಸು ಕೂಡ ಒಂದಾಗಿದೆ. ಅಷ್ಟೇ ಅಲ್ಲದೆ ಇದು ತುಂಬಾನೇ ಜನಪ್ರಿಯವಾದ ಆಹಾರ ಅಂತ ಹೇಳಿದರೆ ತಪ್ಪಾಗಲಾರದು. ಈ ಎಲೆಕೋಸು ನೋಡಲು ತುಂಬಾನೇ ಸುಂದರವಾಗಿ ತನ್ನ ಎಲೆಗಳ ಪದರುಗಳಿಂದ ಚಾಚಿಕೊಂಡಿರುತ್ತದೆ. ಈ ಎಲೆಕೋಸು ತರಕಾರಿಯಿಂದ ಪಲ್ಯ ಸಾಂಬಾರ್ ಗೋಬಿ ಮಂಜೂರಿ ಹಾಗೆಯೇ ಬರ್ಗರ್ ಮುಂತಾದ ಫಾಸ್ಟ್ ಫುಡ್ ಗಳಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಇದು ರುಚಿಯಲ್ಲಿ ಕೂಡ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಎಲೆಕೋಸು ಅಡುಗೆಗೆ ಮಾತ್ರವಲ್ಲದೇ ಸೌಂದರ್ಯ ವರ್ಧಕವಾಗಿ ಬಳಕೆ ಮಾಡಲಾಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಕ್ಯಾಬೇಜ್ ಸೇವನೆ ಮಾಡುವುದರಿಂದ ದೇಹದಲ್ಲಿ ಆಗುವ ಹಲವಾರು ಪ್ರಯೋಜನಗಳ ಪಟ್ಟಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ಈ ಎಲೆಕೋಸು ತಿನ್ನುವುದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಕ್ಯಾಬೇಜ್ ನಲ್ಲಿ ಕಬ್ಬಿಣ ಪೊಟ್ಯಾಶಿಯಂ ಕ್ಯಾಲಿಯಂದಂತಹ ಪೋಷಕಾಂಶಗಳು ಸಮೃದ್ದವಾಗಿವೆ.
ಜೀವಕೋಶ ಮತ್ತು ದ್ರವಗಳು ಬಹುಮುಖ್ಯವಾದ ಪೊಟ್ಯಾಶಿಯಂ ರಕ್ತದೊತ್ತಡವನ್ನು ಮತ್ತು ಹೃದಯದ ಬಡಿತವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ. ಕಣ್ಣಿನ ರಕ್ಷಣೆಗೆ ಬೀಟಾ ಕ್ಯಾರೋಟಿನ್ ಎಂಬ ಅಂಶ ತುಂಬಾನೇ ಅಗತ್ಯವಾಗಿದೆ. ಈ ಅಂಶ ಕ್ಯಾಬೇಜ್ ನಲ್ಲಿ ತುಂಬಾನೇ ಹೇರಳವಾಗಿ ಅಡಗಿದೆ. ಹೀಗಾಗಿ ಎಲೆಕೋಸು ಆಗಾಗ ತಿನ್ನುವುದರಿಂದ ಕಣ್ಣಿನ ಸುತ್ತ ಮತ್ತು ಕಣ್ಣಿನ ಒಳಗಡೆ ಪೊರೆ ಬೆಳೆಯುವುದನ್ನು ತಪ್ಪಿಸುತ್ತದೆ. ಮಲಬದ್ಧತೆ ಸಮಸ್ಯೆಗೆ ಮುಖ್ಯ ಕಾರಣ. ದೇಹದಲ್ಲಿ ನೀರಿನ ಅಂಶ ಕಡಿಮೆ ಇರುವುದು. ಆದರೆ ನಿಮಗೆ ಗೊತ್ತೇ ಕ್ಯಾಬೇಜ್ ನಲ್ಲಿ ಅಧಿಕ ಪ್ರಮಾಣದ ನಾರಿನ ಅಂಶ ಇರುವುದರಿಂದ ಇದು ತಿಂದ ಆಹಾರವನ್ನು ಸರಿಯಾಗಿ ಜೀರ್ಣವಾಗುವಂತೆ ಮಾಡುತ್ತದೆ. ಹಾಗೆಯೇ ಇದರಲ್ಲಿ ಕ್ಯಾಲ್ಶಿಯಂ ಪ್ರಮಾಣ ಅಧಿಕವಾಗಿ ಇರುವುದರಿಂದ ಇದು ಮೂಳೆಗಳನ್ನು ದಷ್ಟ ಪುಷ್ಟವಾಗಿ ಮಾಡುತ್ತದೆ. ನರಗಳ ಸಮಸ್ಯೆ ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ. ಎಲೆಕೋಸು ದೇಹದಲ್ಲಿ ರಕ್ತದ ಸರಬರಾಜು ಚೆನ್ನಾಗಿ ಮಾಡುವಂತೆ ನೋಡಿಕೊಳ್ಳುತ್ತದೆ. ಇದರಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿ ಅಡಗಿರುವುದರಿಂದ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಇದರಲ್ಲಿ ವಿಟಮಿನ್ ಕೆ ಅಂಶವು ಮರುವಿನ ಸಮಸ್ಯೆಯನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಕ್ಯಾಬೇಜನಲ್ಲಿ ಪ್ರಚೋದಕ ಶಕ್ತಿ ಇರುವುದರಿಂದ ಇದು ಕೂದಲಿಗೆ ಉತ್ತಮವಾದ ತರಕಾರಿ ಆಗಿದೆ. ಈ ಶಕ್ತಿಯು ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.
ಇದರಲ್ಲಿ ಕೇವಲ 33 ಕ್ಯಾಲೋರಿ ಇರುವುದರಿಂದ ತೂಕ ಇಳಿಸಿಕೊಳ್ಳಲು ಇಷ್ಟ ಪಡುವವರಿಗೇ ಇದು ರಾಮಬಾಣ ಅಂತ ಹೇಳಬಹುದು. ಎಲೆಕೋಸು ತಿನ್ನುವುದರಿಂದ ತ್ವಚೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಹಾಗೆಯೇ ಚರ್ಮದಲ್ಲಿ ಇರುವ ಫ್ರೀ ರಿಡಿಕಲ್ಸ್ ಅನ್ನು ಹೊರ ಹಾಕುತ್ತದೆ. ತ್ವಚೆಯು ಯವ್ವನದಂತೆ ಕಾಣಲು ಸಹಾಯ ಮಾಡುತ್ತದೆ. ನಿಮಗೆ ಗೊತ್ತೇ ದೇಹಕ್ಕೆ ಅಗತ್ಯವಾದ ವಿಟಮಿನ್ ಗಳು ಪೋಷಕಾಂಶಗಳು ಪೌಷ್ಟಿಕಾಂಶಗಳು ದೊರೆತರೆ ಮಾತ್ರ ಆರೋಗ್ಯವಾಗಿ ಇರಲು ಸಾಧ್ಯವಾಗುತ್ತದೆ. ಈ ತರಕಾರಿಯನ್ನು ಕೆಲವರು ಇಷ್ಟ ಪಡುವುದಿಲ್ಲ. ಕಾರಣ ಇದರ ವಾಸನೆ. ಹೀಗಾಗಿ ಈ ತರಕಾರಿ ಅಂದರೆ ಕೆಲವರು ಮೂಗು ಮುರಿಯುತ್ತಾರೆ. ಆದರೆ ಕಹಿಯಾಗಿದೆ ಅಂದರೆ ಹಾಗಲಕಾಯಿ ತಿನ್ನುವುದನ್ನು ಬಿಟ್ಟರೆ ಸಕ್ಕರೆ ಕಾಯಿಲೆಯಿಂದ ಮುಕ್ತಿ ಹೇಗೆ ಪಡೆಯುವುದು ಅಲ್ಲವೇ ಹಾಗೆಯೇ ದೇಹಕ್ಕೆ ಯಾವುದು ಒಳ್ಳೆಯದೋ ಅದನ್ನು ನಾವು ತಿನ್ನುವುದು ಸೂಕ್ತ. ಕ್ಯಾಬೇಜ್ ನಲ್ಲಿ ಆಂಟಿ ಟೆರಾಕ್ಸಿನ್ ಎಂಬ ಅಂಶ ಇರುವುದರಿಂದ ಥೈರಾಯಿಡ್ ಮತ್ತು ಹೈಪೋ ಥೈರಾಯಿಡ್ ಕಾಯಿಲೆ ಇದ್ದವರು ಮಾತ್ರ ಈ ಎಲೆಕೋಸು ತಿನ್ನಬಾರದು. ಇನ್ನು ಎಲೆಕೋಸು ಅನ್ನು ಚೆನ್ನಾಗಿ ತೊಳೆದು ಬಳಕೆ ಮಾಡಬೇಕು. ವಿನೆಗರ್ ಅಥವಾ ಬಿಸಿ ನೀರಿನಲ್ಲಿ ಉಪ್ಪನ್ನು ಹಾಕಿ ಚೆನ್ನಾಗಿ ತೊಳೆದು ತರಕಾರಿ ಮಾಡಿ ಸೇವಿಸಬೇಕು. ಈ ಅದ್ಭುತವಾದ ಆರೋಗ್ಯಕರ ಮಾಹಿತಿಯು ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.