ನಮಸ್ತೇ ಪ್ರಿಯ ಓದುಗರೇ, ಉದ್ಯೋಗ ಇರಲಿ ವ್ಯಾಪಾರ ಇರಲಿ ರೈತ ಇರಲಿ ಬಿಜಿನೆಸ್ ಮ್ಯಾನ್ ಇರಲಿ ದುಡಿದು ತಿನ್ನುವವರಿಗೆ ದುಡಿಮೆಗೆ ಏನು ಬರ ಇಲ್ಲ ಗೆಳೆಯರೆ. ವ್ಯಾಪಾರವನ್ನು ಮಾಡುವವರಿಗೆ ಬಿಜಿನೆಸ್ ಮ್ಯಾನ್ ಅನ್ನುತ್ತಾರೆ ಹಾಗೆಯೇ ಕೃಷಿಯನ್ನು ಮಾಡುವವರಿಗೆ ರೈತರು ಅನ್ನುತ್ತಾರೆ. ರೈತರನ್ನು ನಮ್ಮ ದೇಶದ ಬೆನ್ನೆಲುಬು ಅನ್ನುತ್ತಾರೆ. ಕೋಳಿ ಸಾಕಾಣಿಕೆ ಕುರಿ ಆಡು ಮೇಕೆ ಹಸು ಸಾಕಾಣಿಕೆ ಹಂದಿ ಮತ್ತು ಎರೆಹುಳು ಸಾಕಾಣಿಕೆ ಈ ಎಲ್ಲ ಅಂಶಗಳು ರೈತನು ಮಾಡುವ ಉದ್ಯೋಗದಲ್ಲಿ ಬರುತ್ತದೆ. ಇವುಗಳನ್ನೂ ಚಿಕ್ಕ ಉದ್ಯಮಗಳು ಅನ್ನುತ್ತಾರೆ. ಈ ಚಿಕ್ಕ ವ್ಯಾಪಾರ ಗಳಾದ ಕೋಳಿ ಸಾಕಾಣಿಕೆ ಹಂದಿ ಹಸು ಎಮ್ಮೆ ಮೇಕೆ ಘಟಕಗಳನ್ನು ಸ್ಥಾಪನೆ ಮಾಡಲು ಪಶು ಸಂಗೋಪನಾ ಇಲಾಖೆಯು ಕೃಷಿ ಆಧಾರಿತ ಗ್ರಾಮೀಣ ವ್ಯವಸ್ಥೆಯ ಚಟುವಟಿಕೆಯಲ್ಲಿ ಮೇಲಿನ ಎಲ್ಲಾ ವಿಭಾಗಗಳು ಒಳಗೊಂಡಿವೆ. ಈ ಎಲ್ಲ ಚಟುವಟಿಕೆಗಳಲ್ಲಿ ಗ್ರಾಮೀಣ ಭಾರತದಲ್ಲಿ ಸಾಂಪ್ರದಾಯಕವಾಗಿ ಬೆಳೆದು ಬಂದರು ವೈಜ್ಞಾನಿಕವಾಗಿ ಪ್ರಗತಿಯನ್ನು ಸಾಧಿಸಿ ಉದಾರೀಕರಣ ಮಾಡಿ ಮತ್ತು ತಂತ್ರಜ್ಞಾನಿಕವಾಗಿ ಉನ್ನತವಾದ ಸುಧಾರಣೆ ಪ್ರಕ್ರಿಯೆಗಳು ಉದ್ಯಮದಾರರಿಗೆ ಹೂಡಿಕೆ ಮಾಡಲು ದಾರಿ ಮಾಡಿ ಕೊಟ್ಟಿದೆ. ಹಾಗಾದರೆ ಯಾವ ರೀತಿ ಸಹಾಯ ಮಾಡುತ್ತದೆ. ನಮ್ಮ ರಾಜ್ಯ ಸರ್ಕಾರವು ಬಡ್ಡಿ ರಹಿತವಾಗಿ ಯಾವ ರೀತಿಯಾಗಿ ಸಾಲವನ್ನು ಒದಗಿಸಿ ಕೊಡುತ್ತದೆ ಅನ್ನುವ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಬರುವ ಆರ್ಥಿಕ ವರ್ಷದ ಒಳಗಡೆ ಅಧಿಕವಾದ ಕಾಲಾವಧಿಯನ್ನು ನೀಡುವುದರ ಜೊತೆಗೆ ಕರ್ನಾಟಕ ಸರ್ಕಾರರವು ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಎರಡು ಲಕ್ಷದಷ್ಟು ಹಣವನ್ನು ಬಡ್ಡಿ ರಹಿತವಾಗಿ ಸಾಲವನ್ನು ನೀಡುತ್ತದೆ. ಈ ಬಡ್ಡಿ ರಹಿತವಾದ ಸಾಲವನ್ನು ಪಡೆಯಲು ಮೊದಲು ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೆಲವು ಅಗತ್ಯವಾದ ದಾಖಲೆಗಳು ಬೇಕಾಗುತ್ತವೆ. ಮೊದಲಿಗೆ ರೈತರ ಜಮೀನಿನ ಪಹಣಿಯ ಪತ್ರ ಬೇಕಾಗುತ್ತದೆ. ಜೊತೆಗೆ ನೀರು ಬಳಕೆ ಪತ್ರ ಮತ್ತು ರೈತರ ಆಧಾರ ಕಾರ್ಡ್ ಬೇಕಾಗುತ್ತದೆ.ಇನ್ನು ನೀವು ಕುರಿ ಕೋಳಿ ಹಂದಿ ಹಸು ಮೇಕೆ ಸಾಕಾಣಿಕೆ ಮಾಡಲು ಎಷ್ಟು ಸಾಲ ಬೇಕಾಗುತ್ತದೆ. ಅಂತ ಬರೆಯಬೇಕು ಜೊತೆಗೆ ಎಷ್ಟು ಹಸು ಮೇಕೆ ಹಂದಿ ಕೋಳಿ ಎಮ್ಮೆಗಳ ಸಂಖ್ಯೆಯನ್ನು ಕೂಡ ಅದರಲ್ಲಿ ವ್ಯಕ್ತ ಪಡಿಸಿರಬೇಕು. ಇದರ ಜೊತೆಗೆ ಹೇಳಿಕೆ ಪತ್ರ ಮತ್ತು ರೇಷನ್ ಕಾರ್ಡ್ ಬೇಕಾಗುತ್ತದೆ. ಡಿ ಸಿ ಸಿ ಬ್ಯಾಂಕ್ ನ ಉಳಿತಾಯ ಖಾತೆಯ ಜೆರಾಕ್ಸ್ ಬೇಕಾಗುತ್ತದೆ. ಈ ಎಲ್ಲ ದಾಖಲೆಗಳನ್ನು ಅರ್ಜಿಯ ಜೊತೆಗೆ ಲಗತ್ತಿಸಿ ಪಶು ಇಲಾಖೆಗೆ ಸಲ್ಲಿಸಬೇಕು.
ಇನ್ನು ಅರ್ಜಿ ಸಲ್ಲಿಸಿದ ಎರಡು ತಿಂಗಳೊಳಗೆ ಎರಡು ಲಕ್ಷದವರೆಗೆ ಬಡ್ಡಿ ರಹಿತವಾದ ಸಾಲ ಒದಗುತ್ತದೆ. ಈ ಯೋಜನೆಯೂ ಕುಟುಂಬ ಸದಸ್ಯರೆಲ್ಲರಿಗೂ ಅನ್ವಯ ಆಗುವುದಿಲ್ಲ. ಕೇವಲ ಕುಟುಂಬದ ಮುಖ್ಯ ಸದಸ್ಯನಿಗೆ ಮಾತ್ರ ಅನ್ವಯ ಆಗುತ್ತದೆ. ಹಾಗೇಯೇ ಸ್ಥಳೀಯ ಹಾಲು ಉತ್ಪಾದಕ ಸಂಘದಲ್ಲಿ ಸದಸ್ಯರು ಅಗಿರಬೇಕು. ಇದು ಕಡ್ಡಾಯವೂ ಕೂಡ ಒಂದು. ಈ ಘಟಕಗಳನ್ನು ಸ್ಥಾಪನೆ ಮಾಡಲು ಎರಡು ಲಕ್ಷದವರೆಗೆ ಬಡ್ಡಿ ರಹಿತವಾದ ಸಾಲವನ್ನು ನೀಡುತ್ತಾರೆ. ಇನ್ನು ನಿಮಗೆ ಹೆಚ್ಚಿನ ಸಾಲದ ಅವಶ್ಯಕತೆ ಇದ್ದರೆ ಸಾಮಾನ್ಯ ಬಡ್ಡಿದರದಂತೆ ಸಾಲವನ್ನು ವಿಧಿಸುತ್ತಾರೆ. ಬೆಲೆ ಸಾಲ ಪಡೆದ ರೈತರು ಈ ಸಾಲವನ್ನು ಪಡೆಯಬಹುದು. ಈ ಅದ್ಭುತವಾದ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಶುಭದಿನ.