ವಾರದಲ್ಲಿ ಒಂದು ಬಾರಿಯಾದರೂ ಹುರುಳಿ ಕಾಳನ್ನು ಸೇವಿಸಿ. ಏನಾಗುತ್ತದೆ ಗೊತ್ತೇ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಆರೋಗ್ಯವೇ ಭಾಗ್ಯ ಅನ್ನುವ ಗಾದೆ ಮಾತಿದೆ. ಹೌದು ನಾವು ಆರೋಗ್ಯವಾಗಿದ್ದರೆ ನಮ್ಮ ಜೀವನ. ಅದೇ ಅನಾರೋಗ್ಯದಿಂದ ಇದ್ದರೆ ಜೀವನವೇ ನರಕ. ಉತ್ತಮವಾದ ಆರೋಗ್ಯವು ದೇವರು ನಮಗೆ ಕೊಟ್ಟಿರುವ ಅದ್ಭುತವಾದ ಉಡುಗೊರೆ ಅಂತ ಹೇಳಬಹುದು. ಹೌದು ಈ ಉತ್ತಮವಾದ ಆರೋಗ್ಯವನ್ನು ನಾವು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಕೂಡ ಆಗಿದೆ. ಪ್ರತಿದಿನವೂ ನಾವು ಊಟವನ್ನು ಮಾಡುತ್ತೇವೆ. ಈ ಆಹಾರದಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಮತ್ತು ಅಗತ್ಯವಲ್ಲದ ಅಂಶಗಳು ಅಡಗಿರುತ್ತವೆ. ಅದು ತರಕಾರಿ ಸೊಪ್ಪುಗಳು ಕಾಳುಗಳು ಬೀಜಗಳು ಆಗಿರಬಹುದು. ಕ್ಯಾಲ್ಶಿಯಂ ಮತ್ತು ಐರನ್ ಪೊಟ್ಯಾಷಿಯಂ ಹೇರಳವಾಗಿರುವ ಒಂದು ಅದ್ಭುತವಾದ ದ್ವಿದಳ ಧಾನ್ಯ ದ ಬಗ್ಗೆ ತಿಳಿಸಿ ಕೊಡುತ್ತೇವೆ ಅದುವೇ ಹುರುಳಿ ಕಾಳು. ದೇಹಕ್ಕೆ ಶಕ್ತಿ ಬೇಕೆಂದರೆ ಕೇವಲ ಹಸಿರು ಸೊಪ್ಪುಗಳನ್ನು ತಿನ್ನುವುದಲ್ಲ ಗೆಳೆಯರೇ, ಇದರ ಜೊತೆಗೆ ದ್ವಿದಳ ಧಾನ್ಯಗಳ ಸೇವನೆ ಕೂಡ ತುಂಬಾ ಮುಖ್ಯವಾಗಿರುತ್ತದೆ. ಹುರುಳಿ ಕಾಳುಗಳು ಪೌಷ್ಟಿಕ ಧಾನ್ಯಗಳಲ್ಲಿ ಒಂದಾಗಿದೆ. ಇದರಲ್ಲಿ ಅಧಿಕವಾದ ಪೋಷಕಾಂಶಗಳು, ಐರನ್ ಪ್ರೊಟೀನ್ ಖನಿಜಗಳು ಸಮೃದ್ದವಾಗಿವೆ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಹುರುಳಿ ಕಾಳುಗಳು ಸಹಾಯ ಮಾಡುತ್ತದೆ ಅಂತ ನಮ್ಮ ಆಯುರ್ವೇದ ಪದ್ದತಿಯು ತಿಳಿಸುತ್ತದೆ. ಹಾಗೆಯೇ ಸಕ್ಕರೆ ಕಾಯಿಲೆಯನ್ನು ಕೂಡ ನಿಯಂತ್ರದಲ್ಲಿಡಲು ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲದೇ ಪುರುಷರದಲ್ಲಿ ವೀ-ರ್ಯಾಣುಗಳ ಗುಣ ಮಟ್ಟವನ್ನು ವೃದ್ಧಿಸುತ್ತದೆ. ಜೊತೆ ಜೊತೆಗೆ ಶೀಘ್ರ ಸ್ಖ-ಲನ ಮತ್ತು ಪಿಸಿಒಡಿ ಸಮಸ್ಯೆಗಳಿಗೆ ಇದು ರಾಮಬಾಣ ಅಂತ ಹೇಳಬಹುದು. ಇನ್ನು ಕಪವನ್ನು ಕೂಡ ಹೋಗಲಾಡಿಸಲು ಸಹಾಯ ಮಾಡುತ್ತದೆ ಈ ಹುರುಳಿ ಕಾಳುಗಳು. ಹುರುಳಿ ಕಾಳುಗಳನ್ನು ತಿನ್ನುವುದರಿಂದ ದೇಹವು ಶಕ್ತಿ ವರ್ಧಕವಾಗಿ ಕೆಲಸವನ್ನು ಮಾಡುತ್ತದೆ. ಇನ್ನು ಈ ಕಾಳುಗಳ ಪಲ್ಯವನ್ನು ಮಾಡಿ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹುರುಳಿ ಕಾಳುಗಳು ಸಾಮಾನ್ಯವಾಗಿ ಉಷ್ಣ ಕಾರಕ ದ್ವಿದಳ ಧಾನ್ಯವಾಗಿದೆ. ಹೀಗಾಗಿ ಶೀತ ಪ್ರಕೃತಿ ದೇಹವುಳ್ಳವರು ಅಂದರೆ ನೆಗಡಿ ಶೀತ ಕಫ ಕೆಮ್ಮು ಅತಿ ಬೇಗನೆ ಆಂಟಿಕೊಳ್ಳುವವರು ಈ ಹುರುಳಿ ಕಾಳುಗಳನ್ನು ಸೇವಿಸುವುದರಿಂದ ದೇಹವು ಉಷ್ಣವಾಗಿರುತ್ತದೆ. ಇದರಿಂದ ಈ ಬಗೆಯ ಸಮಸ್ಯೆಗಳು ಹತ್ತಿರ ಕೂಡ ಬರುವುದಿಲ್ಲ.

ಹುರುಳಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇನ್ನು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಿ ದೇಹದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ ಹಾಗಾಗಿ ಮಧುಮೇಹಿಗಳು ಈ ಹುರುಳಿ ಕಾಳುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮಧುಮೇಹ ಕಾಯಿಲೆಯಿಂದ ದೂರವಾಗಬಹುದು. ಇನ್ನು ತೂಕ ಅಧಿಕವಾಗಿರುವ ಪುರುಷರು ನ್ಯೂಮಿರೋ ದೌರ್ಬಲ್ಯದಿಂದ ಬಳಲುತ್ತಿದ್ದರೆ ಹುರುಳಿ ಕಾಳು ಸೇವನೆ ಮಾಡುವುದು ಸೂಕ್ತ. ಹೀಗಾಗಿ ಪುರುಷರ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ನ್ಯೂಮಿರೋ ದೌರ್ಬಲ್ಯ ಸಮಸ್ಯೆಯಿಂದ ಪಾರಾಗಬಹುದು. ಇನ್ನು ಸಾಮಾನ್ಯವಾದ ಗುಪ್ತಚರ ಸಮಸ್ಯೆಗಳನ್ನು ಹೋಗಲಾಡಿಸಿ ಕಾಮ-ಉತ್ತೇಜಕವಾಗಿ ಪ್ರೇರೇಪಿಸುತ್ತದೆ. ಹುರುಳಿ ಕಾಳಿನಲ್ಲಿ ನಾರಿನ ಅಂಶ ಅಧಿಕವಾಗಿ ಇರುವುದರಿಂದ ಇದು ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ. ಹಾಗೆಯೇ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಹುರುಳಿ ಕಾಳುಗಳನ್ನು ರಾತ್ರಿವಿಡೀ ನೇನೆಸಿಡಬೇಕು. ಮಾರನೆಯ ದಿನ ನೆನೆಸಿದ ಹುರುಳಿ ಕಾಳುಗಕನ್ನು ತಿನ್ನುವುದರಿಂದ ಶ್ವಾಸಕೋಶದಲ್ಲಿ ಆಗಿರುವ ಕಲ್ಲುಗಳನ್ನು ಕರಗಿಸುವಂತೆ ಸಹಾಯ ಮಾಡುತ್ತದೆ. ಸಂಧಿವಾತ ಸಮಸ್ಯೆ ಇದ್ದರೆ ಹುರುಳಿ ಕಾಳಿನ ಪೇಸ್ಟ್ ಅನ್ನು ಹಚ್ಚಿ ಲೇಪಿಸುವುದರಿಂದ ಸಂಧಿವಾತ ಸಮಸ್ಯೆ ಕ್ರಮೇಣವಾಗಿ ಕಡಿಮೆ ಆಗುತ್ತದೆ. ಕಫ ಮತ್ತು ನೆಗಡಿ ಸಮಸ್ಯೆ ಇದ್ದವರು ಹುರುಳಿ ಕಾಳನ್ನು ಸೇವಿಸುವುದರಿಂದ ನೆಗಡಿ ಮತ್ತು ಕಫ ಕಡಿಮೆ ಆಗುತ್ತದೆ. ದೇಹದಲ್ಲಿ ಇರುವ ಕಲ್ಮಶಗಳನ್ನು ಹೊರ ಹಾಕುತ್ತದೆ. ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲೂ ಕಪ್ಪು ಹುರುಳಿ ಕಾಳುಗಳನ್ನು ತಿನ್ನಬೇಕು. ಈ ಆರೋಗ್ಯಕರ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *