ಮುಟ್ಟು ಸರಿಯಾಗಿ ಆಗುತ್ತಿಲ್ಲವೆ ಆಗಾದರೆ ಈ ಸಮಸ್ಯೆ ಇರಬಹದು ಒಂದು ಸಾರಿ ನೋಡಿ

ಆರೋಗ್ಯ

ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸುತ್ತಾ ಬೆಳೆಯುವಾಗ ಅವರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತವೆ. ಎಸ್ಟೇ ಕಷ್ಟದ ಸಮಸ್ಯೆಯಾದರೂ ತಮ್ಮ ಬುದ್ದಿ ಶಕ್ತಿಯಿಂದ ಪರಿಹರಿಸಿಕೊಂಡು ಹೋಗುತ್ತಾರೆ ಆದರೆ ಮಹಿಳೆಯರ ಮಾನಸಿಕ ಒತ್ತಡಗಳು ಆರೋಗ್ಯವನ್ನು ಅಸ್ತವ್ಯಸ್ತವಾಗಿ ಮಾಡುತ್ತವೆ. ಈಗಿನ ಕಾಲದಲ್ಲಿ ಮಹಿಳೆಯರ ಜೀವನದಲ್ಲಿ ಸಾಮಾನ್ಯವಾಗಿ ಕಾಣುವಂತಹ ಸಮಸ್ಯೆ ಎಂದರೆ pcod, ಮೊದಲು ಈ pcod ಎಂದರೆ ಏನು, ಇದರ ಲಕ್ಷಣಗಳೇನು, ಏಕೆ ಬರುತ್ತದೆ, ಇದಕ್ಕೆ ಪರಿಹಾರ ಏನು, ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ವಿಶ್ಲೇಷಣೆ. ಈ ಸಮಸ್ಯೆಯಿಂದ ಬರುವಂತ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದರಿಂದ. ಈ ಸಮಸ್ಯೆ ಅಂದರೆ ಮಹಿಳೆಯರ ದೇಹದಲ್ಲಿ ಪ್ರತಿ ತಿಂಗಳು ಬಿಡುಗಡೆ ಆಗುವುದಕ್ಕೆ ಬೇಕಾದಂತಹ ಅಂಡಗಳ ಕೇಂದ್ರವಾದ ಅಂಡಾಶಯದಲ್ಲಿ ದ್ರವದಿಂದ ಕೂಡಿದ ಸಣ್ಣ ಸಣ್ಣ ನೀರಿನ ಚೀಲಗಳು ಏರ್ಪಾಡಾಗುತ್ತವೆ. ಇದನ್ನೇ ಪ್ರಸ್ತುತ ಸಮಸ್ಯೆಯಾಗಿ ಭಾವಿಸುತ್ತಾರೆ.

ಲಕ್ಷಣಗಳು; pcod ಸಮಸ್ಯೆಗೆ ದೇಹದಲ್ಲಿ ಸಂಭವಿಸುವ ಕೆಲವೊಂದು ಬದಲಾವಣೆಗಳು ಆಧಾರವಾಗಿ ಕಾಣಬಹುದು. ಸಣ್ಣದಾಗಿ ಇರುವ ಮಹಿಳೆಯರು ಇದ್ದಕ್ಕಿದ್ದಂತೆ ದಪ್ಪ ಆಗುವುದು, ದೇಹದಲ್ಲಿ ಹೆಚ್ಚಾಗಿ ಕೂದಲು ಬೆಳೆಯುವುದು, ಮುಖದಲ್ಲಿ ಗುಳ್ಳೆಗಳ ಸಮಸ್ಯೆ ಎಸ್ಟೇ ಹೌಷದಿ ತೆಗೆದುಕೊಂಡರು ಕಡಿಮೆಯಾಗದೇ ಇರುವುದು, ಹೊಟ್ಟೆನೋವು ಬರುವುದು ಇಂತಹ ಸಮಸ್ಯೆಗಳಿದ್ದರೆ pcod ಲಕ್ಷಣಗಳು ಇವೆ ಎಂದು ಅರ್ಥ.

ರೋಗನಿರ್ಣಯ; pcod ರೋಗ ನಿರ್ಣಯ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮೂಲಕ ನಿರ್ಧಾರ ಮಾಡುತ್ತದೆ. ಹಾಗೆಯೇ ಮೇಲೆ ಹೇಳಿದ ಕಾರಣಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ಸಮಸ್ಯೆಯನ್ನು ನಿರ್ಧರಿಸುತ್ತಾರೆ.

ಸಮಸ್ಯೆಗಳು: ಮೇಲೆ ಹೇಳಿದ ಹಾಗೆ ದಪ್ಪ ಆಗುವುದು, ಗುಳ್ಳೆಗಳು, ದೇಹದಲ್ಲಿ ಕೂದಲು ಬೆಳೆಯುವುದು, ಇದಲ್ಲದೆ ಅಂಡಗಳು ಬಿಡುಗಡೆ ಆಗದೆ ಇರುವುದು, ಎರಡು ಮೂರು ತಿಂಗಳಾದರೂ ಮುಟ್ಟಾಗದೆ ಇರುವುದು, ಒಂದು ವೇಳೆ ಮುಟ್ಟು ಆದರೂ ಸ್ವಲ್ಪವೇ ರಕ್ತಸ್ರಾವ ಆಗುವುದು ಇಲ್ಲಾ ಅತಿ ಹೆಚ್ಚಾಗಿ ರಕ್ತಸ್ರಾವ ಆಗುವುದು, ಎಸ್ಟೇ ಹೌಷದಿಯನ್ನು ತೆಗೆದುಕೊಂಡರು ಇದಕ್ಕೆ ಪರಿಷ್ಕಾರ ಸಿಗದೆ ಇರುವುದು. ಮದುವೆಯಾದವರಲ್ಲಿ ಈ ಸಮಸ್ಯೆಯಿಂದ ಗರ್ಭ ಧರಿಸಲು ಆಗುವುದಿಲ್ಲ ಒಂದು ವೇಳೆ ಗರ್ಭ ಧರಿಸಿದರು ಅದು ನಿಲ್ಲುವ ಅವಕಾಶ ತುಂಬಾ ಕಡಿಮೆ ಇರುತ್ತದೆ ದೇಹದಲ್ಲಿ ಇಮೋಗ್ಲೋಬಿನ್ ತುಂಬಾ ಕಡಿಮೆ ಇರುವುದು ಕೂಡ ತುಂಬಾ ಜನರಲ್ಲಿ ಕಾಣಿಸುತ್ತದೆ.

ಕಾರಣಗಳು; pcod ಸಮಸ್ಯೆಗೆ ಮುಕ್ಯವಾದ ಕಾರಣವೆಂದರೆ ಒತ್ತಡದಿಂದ ಹಾರ್ಮೋನ್ ಅಸಮತೋಲನ ಕೊರತೆ ಮಾಡಿಕೊಳ್ಳುತ್ತದೆ. ಇಸ್ಟ್ರೋಜೋನ್, ಅಂಡ್ರೋಜೋನ್, ಪ್ರಾಜೆಸ್ಟಾರಾನ್, ಹಾರ್ಮೋನ್ ಅಸಮತೋಲನದಿಂದ pcod ಸಮಸ್ಯೆ ಬರುತ್ತದೆ. ಹಾಗೆಯೇ ದೇಹದಲ್ಲಿ ಇನ್ಸುಲಿನ್ ಹೆಚ್ಚಾಗುವುದರಿಂದ ಕೂಡ ಹೆಚ್ಚು ದಪ್ಪ ಆಗುತ್ತಾರೆ.

ಚಿಕಿತ್ಸೆ ; pcod ಸಮಸ್ಯೆ ಕೇವಲ ಹೌಷದಿಗಳಿಂದ ಕಡಿಮೆಯಾಗುವ ಅನುಭವ ಹೆಚ್ಚು ಅವರ ಲೈಪ್ ಸ್ಟೈಲ್ ಬದಲಾವಣೆ ಮಾಡಿಕೊಳ್ಳಬೇಕು. ಆಹಾರ ಸರಿಯಾಗಿ ತೆಗೆದುಕೊಳ್ಳುವುದು, ದಿನಾಲೂ ತಪ್ಪದೆ ವ್ಯಾಯಾಮ ಮಾಡುವುದು, ಯೋಗ, ನಡೆಯುವುದು, ದ್ಯಾನ ಮಾಡುವುದು, ಇವುಗಳನ್ನು ಅನುಸರಿಸಬೇಕು. ಹೆಚ್ಚಾಗಿ ಭಾವನೆಗಳಿಗೆ ಗುರಿಯಾಗಿದೆ ಲವ ಲವಿಕೆಯಿಂದ ಇರಬೇಕು ಸೊಪ್ಪು ಕಾಲುಗಳು ಡ್ರೈ ಫ್ರೂಟ್ಸ್ ರಕ್ತ ಹೆಚ್ಚಾಗುವುದಕ್ಕೆ ಉಪಯೋಗವಾಗುವ ಕ್ಯಾರೆಟ್, ಬೀಟ್ರೂಟ್, ಜ್ಯೂಸ್ ತೆಗೆದುಕೊಳ್ಳಬೇಕು. ಕೊಬ್ಬಿನ ಪದಾರ್ಥಗಳು ಹೆಣ್ಣೇಯಲ್ಲಿ ಹೆಚ್ಚಾಗಿ ಕರಿದ ಆಹಾರ ಹಾಗೆಯೇ ಹೊರಗಡೆ ಸಿಗುವ ಆಹಾರದಿಂದ ದೂರವಿರಬೇಕು. ಇದನ್ನು ಪಾಲಿಸುತ್ತಾ ಬಂದರೆ ನಿಮ್ಮ ಸಮಸ್ಯೆ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *