ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಿಂತ ಹೆಚ್ಚಾಗಿ ಬ್ರೈನ್ ಸ್ಟ್ರೋಕ್ ನಿಂದ ತುಂಬಾ ಜನ ಬಾಳುತ್ತಿದ್ದಾರೆ. ಇದನ್ನು ಆಲಸ್ಯ ಮಾಡಿದರೆ ಪ್ರಾಣಕ್ಕೆ ಅಪಾಯ ಸರಿಯಾದ ಸಮಯಕ್ಕೆ ಚಿಕಿತ್ಸೆ ತೆಗೆದುಕೊಳ್ಳದೆ ಹೋದರೆ ಪ್ರಮಾದ ತಪ್ಪಿದ್ದಲ್ಲ. ಸ್ಟ್ರೋಕ್ ಇಲ್ಲಾ ಬ್ರೈನ್ ಅಟ್ಯಾಕ್ ಅಂದರೆ ಏನು. ಸ್ಟ್ರೋಕ್ ಎನ್ನುವುದು ರಕ್ತ ಪ್ರಸರಣ ತಡೆಗಟ್ಟುವುದು, ಇಲ್ಲಾ ನರಗಳನ್ನು ಬೇರ್ಪಡಿಸುವುದು, ಎಳೆಯುವುದು, ನಿಶ್ಯಕ್ತಿ, ಇಂತಹ ಸಮಯದಲ್ಲಿ ಚಿಕಿತ್ಸೆ ಅತ್ಯಾವಶ್ಯಕವಾಗಿರುತ್ತದೆ. ಅಂದರೆ ಮೆದುಳಿಗೆ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ತೆಗೆದುಕೊಂಡು ಹೋಗುವ ರಕ್ತನಾಳಗಳು ಚಿದ್ರವಾಗುವುದು ಮೆದುಳಿನ ಒಂದು ಭಾಗಕ್ಕೆ ಆಕ್ಸಿಜನ್ ಅಡಚಣೆ ಆಗುವುದರಿಂದ ಆ ಬಾಗದ ಕಣ ಮರಣಕ್ಕೆ ದಾರಿತೋರಿಸುತ್ತದೆ.
ಸ್ಟ್ರೋಕ್ ನ್ನೂ ಕಂಡುಹಿಡಿಯುವ ಸಂಕೇತಗಳು ಮತ್ತು ಲಕ್ಷಣಗಳು: ಸ್ಟ್ರೋಕ್ ಅತ್ಯಂತ ಸಾಧಾರಣವಾಗಿ ಕಂಡುಹಿಡಿಯುವ ಲಕ್ಷಣಗಳಲ್ಲಿ ಇವುಕೂಡ ಇರುತ್ತವೆ ಮಾತಾಡುವುದು ಮತ್ತು ಅರ್ಥ ಮಾಡಿಕೊಳ್ಳುವುದರಲ್ಲಿ ತೊಂದರೆಯುಂಟಾಗುವುದು, ಪಕ್ಷಪಾತ ಇಲ್ಲಾ ಸೆಳೆತ, ಒಬ್ಬ ವ್ಯಕ್ತಿಗೆ ಅಕಸ್ಮಾತಾಗಿ ಸೆಳೆತ, ಬಲಹೀನತೆ ಇಲ್ಲಾ ದೇಹದ ಬಾಗಗಳಲ್ಲಿ ಪಕ್ಷಪಾತ ಸಂಭವಿಸಬಹುದು. ಹೆಚ್ಚಾಗಿ ಮುಖ, ಕೈಕಾಲುಗಳು ಒಂದೇ ಕಡೆಗೆ ತಿರುಗುವುದು ಆಗುತ್ತದೆ. ದೃಷ್ಟಿಯಲ್ಲಿ ಸಮಸ್ಯೆಗಳು ವಸ್ತುಗಳು ಎರಡಾಗಿ ಕಾಣಿಸುವುದು, ಒಂದು ಕಣ್ಣು ಅಥವಾ ಎರಡು ಕಣ್ಣು ಮಂಜಾಗುವುದು. ಅಕಸ್ಮಾತಾಗಿ ತೀವ್ರವಾದ ತಲೆನೋವು ಸ್ಟ್ರೋಕ್ ಗೆ ಸಂಬಂಧಪಟ್ಟ ತಲೆನೋವು ಅಕಸ್ಮಾತಾಗಿ ತೀವ್ರವಾಗಿ ಕಾಣಿಸಬಹುದು. ವಾಂತಿಯಾಗುವುದು, ಇಲ್ಲ ಸ್ಪೃಹ ಕಳೆದುಕೊಳ್ಳುವುದು, ಓಡಾಡುವುದಕ್ಕೆ ಕಷ್ಟಪಡುವುದು, ಈ ಲಕ್ಷಣಗಳು ಕೆಲವೊಂದು ಸಾರಿ ಒಂದು ಕಡಿಮೆಯಾದರೂ ಇಲ್ಲಾ ಪೂರ್ತಿಯಾಗಿ ಕಡಿಮೆಯಾದರೂ ತಕ್ಷಣವೇ ಚಿಕಿತ್ಸೆ ಮಾಡಿಸಬೇಕು.
ಸಂದೇಹ ಬಂದನಂತರ ಯಾವರೀತಿ ಗುರ್ತಿಸಬೇಕು: ನಗುವುದಕ್ಕೆ ಹೇಳಬೇಕು, ನಗುವಾಗ ಮೂತಿ ಒಂದು ಕಡೆಗೆ ಹೋದರೆ ಸ್ಟ್ರೋಕ್ ಆಗಿ ಅನುಮನಿಸಬೇಕು. ಮತ್ತು ಎರಡು ಕೈ ಹಿಡಿದುಕೊಂಡು ತಲೆಯಮೇಲೆ ಇಟ್ಟುಕೊಳ್ಳುವುದಕ್ಕೆ ಹೇಳಬೇಕು ಒಂದು ಕೈ ಮೇಲೆತ್ತಲು ಸಾಧ್ಯವಾಗದೆ ಹೋದರೆ ಇಲ್ಲಾ ಕೈ ಒಂದುಕಡೆ ವಾಲಿದರೆ ಇದನ್ನು ಸ್ಟೋಕ್ ಆಗಿ ಅನುಮಾನಿಸಬೆಕು. ಮಾತಾಡುವ ವಿಧಾನ, ಸರಳವಾದ ತುಟಿಗಳನ್ನು ಅಲುಗಾಡಿಸುವುದು ಇಲ್ಲಾ ಯಾವುದಾದರೂ ಪದವನ್ನು ಪುನರಾವರ್ತನೆ ಮಾಡುವಂತೆ ಹೇಳಬೇಕು. ಮಾತಾಡುವ ವಿಧಾನ ಸರಿಯಾಗಿ ಇಲ್ಲವಾದರೆ ಇಲ್ಲಾ ತೊದಲುವುದು ಈಗೆ ಮಾಡಿದರೆ ಸ್ಟ್ರೋಕ್ ಆಗಿ ಅನುಮಾನಿಸಬೇಕು. ಈ ಲಕ್ಷಣಗಳಲ್ಲಿ ಯಾವುದಾದರೂ ಕಂಡು ಬಂದರೆ ಸಮಯ ತುಂಬಾ ಮುಖ್ಯವಾದದ್ದು. ಅತ್ಯವಸರ ಚಿಕಿತ್ಸೆ ತಕ್ಷಣವೇ ಮಾಡಿಸಬೇಕು. ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದ ಸಮಯದ ಮೇಲೆ ಪ್ರತ್ಯೆಕವಾದ ಗಮನವನ್ನು ವಹಿಸಬೇಕು ತಕ್ಷಣವೇ ತಜ್ಞರು ಹತ್ತಿರ ಕರೆದುಕೊಂಡು ಹೋಗಬೇಕು.
ಸ್ಟ್ರೋಕ್ ಎನ್ನುವುದು ಪ್ರಧಾನವಾಗಿ ಇಸ್ಕಿಮೀಕ್ (ischemic) ಇಲ್ಲಾ ಹಿಮರೋಜಿಕ್ ಸ್ಟೋಕ್ (Hemorrhagic stroke ) ಎರಡು ರೀತಿಯಲ್ಲಿವೆ. ಕೆಲವೊಂದು ಸಾರಿ ಒಬ್ಬವ್ಯಕ್ತಿ ಮೆದುಳಿಗೆ ಒಬ್ಬಾವ್ಯಕ್ತಿ ಮೆದುಳಿಗೆ ರಕ್ತಪರಚಲನೆ ಮಾಡುವುದಕ್ಕೆ ಅಡ್ಡಿಪಡಿಸುವುದು ಇದು ತಾತ್ಕಲಿಕವಾಗಿ ಇರುತ್ತದೆ ಮತ್ತು ಶಾಶ್ವತ ಲಕ್ಷಣಗಳಿಗೆ ದಾರಿ ತೋರುವುದಿಲ್ಲ ಈ ಪರಿಸ್ಥಿತಿಯನ್ನು ತಾತ್ಕಾಲಿಕ ಇಸ್ಕೆಮಿಕ್ ಅಟ್ಯಾಕ್ TIA ಅಂತ ಕರೆಯುತ್ತಾರೆ. ರಕ್ತನಾಳಗಳು ಒಳಗಿನಿಂದ ಲಿಕೆಜ್ ಆಗುವುದು, ಕೆಲವೊಂದು ಸಲ ಇಸ್ಕೆಮಿಯಾ ಇಲ್ಲಾ ಮೆದುಳಿಗೆ ರಕ್ತಪ್ರಸರಣ ಕಡಿಮೆಯಾಗುವುದು ತುಂಬಾ ಕಡಿಮೆ ಮಟ್ಟದಲ್ಲಿ ಆಗುತ್ತದೆ. ಇದು ಐದು ನಿಮಿಷಕ್ಕಿಂತ ಕಡಿಮೆ ಇದ್ದರೆ ಶಾಶ್ವತವಾಗಿ ನಷ್ಟವನ್ನು ಕೊಡುವುದಿಲ್ಲ. ಗಡ್ಡೆ ಕಟ್ಟುವುದು, ಇದು ನಾಡಿ ವ್ಯವಸ್ತೆಯನ್ನು ಒಂದು ಭಾಗಕ್ಕೆ ರಕ್ತ ಪ್ರಸರಣವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುತ್ತದೆ.
ಸ್ಟೋಕ್ ಬರುವುದಕ್ಕೆ ಕಾರಣಗಳೇನು.
ವಯಸ್ಸು, 55 ವಯಸ್ಸಿಗಿಂತ ಹೆಚ್ಚಾಗಿ ಇರುವ ವ್ಯಕ್ತಿಗಳಲ್ಲಿ ಸಾಧಾರಣವಾಗಿ ಕಾಣಿಸುತ್ತದೆ. ಇದು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಸ್ಟೋಕ್ ಬರುವ ಸಾಧ್ಯತೆ ಇರುತ್ತದೆ. ಜೀವನಶೈಲಿ ಕಾರಣಗಳು. ಬೊಜ್ಜು, ಇಲ್ಲಾ ಹೆಚ್ಚಿದ ತೂಕ, ಬೀಡಿ ಸೇದುವುದು, ಮಾದಕ ವ್ಯಸನಿ, ಯಾವ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಾತಾಡುವುದಕ್ಕೆ ಕಷ್ಟ ಪಡುವುದು, ಬಲಹೀನತೆ ಸಮಸ್ಯೆ, ಹೊಡಾಡುವುದರಲ್ಲಿ ತೊಂದರೆಯಾಗುವುದು, ಸ್ಪರ್ಶ ಕಳೆದುಕೊಳ್ಳುವುದು, ತಿನ್ನುವುದು ಇಲ್ಲಾ ನುಂಗುವುದರಲ್ಲಿ ಕಷ್ಟ ಪಡುವುದು, ಡಿಪ್ರೆಶನ್, ಮೂತ್ರದಲ್ಲಿ ಸಮಸ್ಯೆ, ಈ ರೀತಿಯಾಗಿ ಕಾಣಿಸುತ್ತವೆ.