ಮೀನು ಸಾಕಾಣಿಕೆ ಇಂದ ತಿಂಗಳಿಗೆ ಲಕ್ಷಗಟ್ಟಲೇ ಹಣವನ್ನು ಮಾಡಿಕೊಳ್ಳಬಹುದು ಅದು ಹೇಗೆ ಅಂತೀರಾ ಇಲ್ಲಿದ್ದ ಅದರ ಮಾಹಿತಿ

ಉಪಯುಕ್ತ ಮಾಹಿತಿ

ನಮಸ್ತೇ ಪ್ರೀಯ ಓದುಗರೇ, ರೈತರು ದವಸ ಧಾನ್ಯಗಳ ಬೆಳೆಯುವುದರ ಜೊತೆಗೆ ಬೇರೆ ಬೇರೆ ಉಪಕಸುಬುಗಳನ್ನು ಮಾಡುತ್ತಾರೆ. ಇದರಿಂದಾಗಿ ಆತನ ಆದಾಯವು ಹೆಚ್ಚುತ್ತದೆ. ಇದು ಅವರ ಧ್ಯೇಯವಾಗಿದ್ದು ಅವರು ಜೀವನದಲ್ಲಿ ಮತ್ತೊಂದು ಹಂತವನ್ನು ತಲುಪುವ ಬಗ್ಗೆ ಯೋಚನೆಯನ್ನು ಮಾಡುತ್ತಾರೆ. ನಮ್ಮ ಭೂಮಿಯು ನೆಲದಿಂದ ಹೆಚ್ಚಾಗಿ ಅವೃತ್ತವಾಗಿಲ್ಲವಾದರು ಸರಿಯೇ ನೀರಿನಿಂದ ಹೆಚ್ಚಾಗಿ ಆವೃತ್ತವಾಗಿದೆ. ಹೀಗಾಗಿ ನೀರಿನಲ್ಲಿ ಜೀವಿಸಬಹುದಾದ ಮೀನು,ಏಡಿ, ಸಿಗಡಿ, ಸಾಕಾಣಿಕೆ ಇಂದ ಕೂಡ ಆದಾಯವನ್ನು ಮಾಡಿಕೊಳ್ಳಬಹುದು. ಮಾಂಸಹಾರದಲ್ಲಿ ಯಾವ ರೀತಿಯಾಗಿ ವಿಧಗಳಿವೆ ಅಂದರೆ ಚಿಕನ್ ಮಟನ್ ಕೋಳಿ ಕುರಿ ಮಾಂಸ ಅಂತ. ಹಾಗೆಯೇ ಮೀನಿನಲ್ಲಿ ಕೆಲವು ವಿಧಗಳಿವೆ. ಮೀನುಗಾರಿಕೆ ಮಾಡುವುದರಿಂದ ಕೂಡ ಜನರ ತಿನ್ನುವ ಆಸೆಯನ್ನು ಪೂರೈಕೆ ಮಾಡಬಹುದು. ಹಾಗೂ ಇದರಿಂದ ಸುಲಭವಾಗಿ ಆದಾಯವನ್ನು ಗಳಿಸಬಹುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಮೀನು ಸಾಕಾಣಿಕೆ ಯಾಕೆ ಮಾಡಬೇಕು, ಹೇಗೆ ಇದರಿಂದ ಆದಾಯವನ್ನು ಗಳಿಸಬಹುದು ಅಂತ ತಿಳಿದುಕೊಳ್ಳೋಣ.

ಚಿಕ್ಕಚಿಕ್ಕ ಕೊಳವೆಗಳಲ್ಲಿ ಜಲವಿನ್ಯಾಸ ಗಳಲ್ಲಿ ಹಾಗೂ ಕೃಷಿಕರ ಹೊಂಡ ದಲ್ಲಿ ಮೀನುಗಾರಿಕೆ ಮಾಡುವುದರಿಂದ ಶೇ60 ಭಾಗದಷ್ಟು ಆದಾಯವನ್ನು ಗಳಿಸಿಕೊಳ್ಳಬಹುದು. ಹಾಗಾಗಿ ಕರ್ನಾಟಕದ ಎಲ್ಲ ರೈತ ವರ್ಗದವರು ಯಾವುದೇ ರೀತಿಯ ನಷ್ಟದ ಭಯವಿಲ್ಲದೇ, ಆತಂಕವಿಲ್ಲದೇ ಮೀನಿನ ಕೃಷಿಯನ್ನು ಮಾಡಬಹುದು. ಇನ್ನು ಯಾವ ರೀತಿಯ ಮೀನುಗಳನ್ನು ಸಾಕಾಣಿಕೆ ಮಾಡಬೇಕು ಅನ್ನುವುದನ್ನು ಚೆನ್ನಾಗಿ ಅರಿತುಕೊಂಡಿರಬೇಕು. ಮೊದಲಿಗೆ ಇತ್ತೀಚಿನ ದಿನಗಳಲ್ಲಿ ಯಾವ ಮೀನಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಲಾಗಿದೆ ಹಾಗೂ ಜನರು ಯಾವ ಮೀನುಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಾರೆ, ಹಾಗೂ ಮಾರುಕಟ್ಟೆಯಲ್ಲಿ ಯಾವ ಮೀನುಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ ಎಂಬ ಮುಖ್ಯವಾದ ಸಂಗತಿಯನ್ನು ತಿಳಿದುಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ. ನಂತರ ಮೀನುಗಳನ್ನು ತಂದು ಸಾಕಾಣಿಕೆ ಮಾಡಬೇಕು. ಇನ್ನು ಮೀನುಗಳ ಉತ್ಪಾದನೆ ಹೇಗೆ ಮಾಡುವುದು ಅವುಗಳ ಕ್ರಮಗಳು ಯಾವುವು ಹಾಗೂ ಯಾವ ರೀತಿಯಾಗಿ ಮೀನುಗಳ ಬೆಳವಣಿಗೆ ಮಾಡಬೇಕು ಅಂತ ಚೆನ್ನಾಗಿ ಅರಿತುಕೊಂಡು ನಂತರ ಮೀನುಗಾರಿಕೆ ಉದ್ಯಮವನ್ನು ಶುರು ಮಾಡಬೇಕು.

ಮೀನುಗಳಿಗೆ ಕಡಲ ದೂರವಿರುವ ಪ್ರದೇಶಗಳಲ್ಲಿ ಒಳ್ಳೆಯ ಬೇಡಿಕೆ ಇರುತ್ತದೆ. ಸಮುದ್ರದ ಹತ್ತಿರ ಇರುವ ಜನರು ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಾರೆ. ಅತಿಯಾದ ಮಳೆ ಇರುವ ಕಾರಣ 3-4 ತಿಂಗಳುಗಳ ಮೀನುಗಾರಿಕೆ ಮಾಡಲು ಅವಕಾಶವೇ ಇರುವುದಿಲ್ಲ. ಹೀಗಾಗಿ ಮೀನುಗಾರಿಕೆ ಕಸುಬು ಮಾಡಿಕೊಂಡಿರುವ ಜನರಿಗೆ ಇದು ತುಂಬಾನೇ ನಿರಾಶೆಯ ವಿಷಯವಾಗಿದೆ. ಹೀಗಾಗಿ ಒಳನಾಡಿನ ಮೀನು ಸಾಕಾಣಿಕೆ ಮಾಡಿ ಆದಾಯದ ಪೂರೈಕೆ ಮಾಡಿಕೊಳ್ಳಬಹುದು. ಮೀನುಗಾರಿಕೆ ವ್ಯಾಪಾರವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆ ಇರುವುದರಿಂದ ಯಾವುದೇ ನಷ್ಟವನ್ನು ಅನುಭವಿಸದೆ ಕೂಡ ಮೀನುಗಾರಿಕೆ ವ್ಯಾಪಾರ ಮಾಡಬಹುದು. ಇನ್ನು ನಮ್ಮ ರಾಜ್ಯ ಸರ್ಕಾರವು ನೀವು ಎಷ್ಟು ಪ್ರಮಾಣದ ಮೀನಿನ ಸಾಕಾಣಿಕೆ ಮಾಡುತ್ತೀರಿ ಅನ್ನುವುದರ ಆಧಾರ ಮೇಲೆ ಸಬ್ಸಿಡಿ ಕೂಡ ನೀಡಲಾಗುತ್ತದೇ. ಇನ್ನು ಮೀನುಗಾರಿಕೆ ಇಲಾಖೆಯಿಂದ ಕೂಡ ಸಮಯಕ್ಕೆ ಸರಿಯಾಗಿ ರಿಯಾಯತಿ ದರ ಕೂಡ ಮೀನು ರೈತರಿಗೆ ನೀಡಲಾಗುತ್ತದೆ. ಇನ್ನು ನೀವು ಯೋಗ್ಯವಾದ ಮೀನುಗಳನ್ನು ಸಾಕಾಣಿಕೆ ಮಾಡಿ ಜನರಿಗೆ ಮಾರುಕಟ್ಟೆಗೆ ಹಾಗೂ ಹೋಟೆಲ್ ಗಳಿಗೆ ಚಿಕ್ಕ ಚಿಕ್ಕ ಅಂಗಡಿಗಳಿಗೆ ಮಾರಾಟ ಮಾಡಿ ತಿಂಗಳಿಗೆ 50-60 ಸಾವಿರ ಆದಾಯವನ್ನು ಗಳಿಸಬಹುದು.

ಇನ್ನು ಮೀನಿನ ಮರಿಗಳನ್ನು ಕೂಡ ಮಾರಾಟ ಮಾಡಬಹುದು. ಮೀನುಗಾರಿಕೆ ಮಾಡುವುದು ಅಷ್ಟೊಂದು ಸುಲಭವಲ್ಲ ಗೆಳೆಯರೇ, ಹೌದು ಮೀನುಗಾರಿಕೆ ಮಾಡಬೇಕಾದರೆ ಮೀನುಗಳನ್ನು ಸಾಕಾಣಿಕೆ ಮಾಡಲು ಮೀನುಗಳ ಮರಿಗಳ ಕನಿಷ್ಠ ಟೆಂಪರೆಚರ ಅನ್ನು ಗಮನಿಸಬೇಕು. ಮೀನುಗಳಿಗೆ ಮುಖ್ಯವಾಗಿ ನೀರು ಬೇಕಾಗುತ್ತದೆ. ಹೀಗಾಗಿ ಶುದ್ಧವಾದ ಸ್ವಚ್ಛವಾದ ನೀರು ನೀಡ ಬೇಕಾಗುತ್ತದೆ ಜೊತೆಗೆ ಆಹಾರದ ಪ್ರಮಾಣವು ಕೂಡ ಉತ್ತಮವಾಗಿರಬೇಕು.ಆಮ್ಲಜನಕ ಕೊರತೆ ಆಗದಂತೆ ಮೀನುಗಳ ಪಾಲನೆ ಪೋಷಣೆ ಮಾಡಬೇಕು. ಯಾವ ಸಮಯದಲ್ಲಿ ಯಾವ ಬೇಡಿಕೆಯ ಮೀನುಗಳನ್ನು ಸಾಕಾಣಿಕೆ ಮಾಡಿದರೆ ಉತ್ತಮವಾದ ಆದಾಯವನ್ನು ಗಳಿಸಬಹುದು ಅಂತ ತಿಳಿದುಕೊಂಡು ಮೀನು ಸಾಕಾಣಿಕೆ ಮಾಡಬೇಕು. ಹೌದು ಯಾವುದೇ ಉದ್ಯಮವನ್ನು ಶುರು ಮಾಡುವ ಮುನ್ನ ಅರಿತುಕೊಂಡು ಶುರು ಮಾಡಬೇಕು. ಹೀಗಾಗಿ ಮೀನು ಕೃಷಿ ಮಾಡುವುದು ಕೂಡ ಉತ್ತಮವಾದ ಕೃಷಿ ಅಂತ ಹೇಳಬಹುದು. ಇದರಿಂದ ನಿಮ್ಮ ಜೀವನವನ್ನು ಕೂಡ ಅಭಿವೃದ್ಧಿ ಪಡಿಸಿಕೊಳ್ಳಬಹುದು. ಶುಭದಿನ.

Leave a Reply

Your email address will not be published. Required fields are marked *