ರಕ್ತವನ್ನು ಸುಲಭವಾಗಿ ಶುದ್ಧಿಕರಿಸಿ 140 ಅಧಿಕ ರೋಗಗಳಿಂದ ದೂರವಿರಿ ಸುಲಭ ವಿಧಾನ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ರಕ್ತವನ್ನು ಶುದ್ಧಿಕರಿಸುವ ಕೆಲವು ವಿಧಾನಗಳ ಬಗ್ಗೆ ತಿಳಿಸಿ ಕೊಡುತ್ತೇವೆ ಬನ್ನಿ. ರಕ್ತ ಶುದ್ದಿಗೆ ಯೋಗ್ಯವಾದ ಔಷಧ ಅಂದರೆ ಅದುವೇ ಬಸಳೆ ಸೊಪ್ಪು. ರಕ್ತವನ್ನು ಶುದ್ಧಿಕರಿಸುವಲ್ಲಿ ಬಸಳೆ ಸೊಪ್ಪು ಅತ್ಯದ್ಭುತವಾದ ಮನೆಮದ್ದು. ದೇಕೆಲವುಹದಲ್ಲಿ ಶುದ್ಧವಾದ ರಕ್ತವಿದ್ದರೆ ಯಾವುದೇ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. ಆದ್ದರಿಂದ ನಮ್ಮ ದೇಹದಲ್ಲಿ ಎಷ್ಟು ರಕ್ತ ಶುದ್ಧವಾಗಿರುತ್ತದೆ ಅಷ್ಟು ನಾವು ಆರೋಗ್ಯವಾಗಿರುತ್ತೇವೆ. ಅದಕ್ಕಾಗಿ ಈ ಬಸಳೆ ಸೊಪ್ಪು ರಕ್ತವನ್ನು ಶುದ್ಧ ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಈ ಬಸಳೆ ಸೊಪ್ಪು ಶೀತಕಾರಕ ಸೊಪ್ಪು. ಈ ಬಸಳೆ ಸೊಪ್ಪು ತಿನ್ನುವುದರಿಂದ ರಕ್ತವನ್ನು ಶುದ್ಧಿಕರಿಸಿಕೊಳ್ಳಬಹುದು. ಹೌದು ಗೆಳೆಯರೇ ನೀವು ಪ್ರಶ್ನೆ ಮಾಡಬಹುದು, ಗಬಗಬನೆ ಈ ಬಸಳೆ ಸೊಪ್ಪು ತಿಂದರೆ ರಕ್ತ ಶುದ್ದಿಯಾಗುತ್ತದೆಯೇ ಅಂತ. ಖಂಡಿತವಾಗಿ ಇಲ್ಲ ಗೆಳೆಯರೇ.ಕೆಲವು ರೋಗಗಳಿಗೆ ಮನೆಯಲ್ಲಿ ದೊರೆಯುವ ಹಲವಾರು ಪದಾರ್ಥಗಳಿಂದ ರೋಗಗಳನ್ನು ದೂರ ಮಾಡಿಕೊಳ್ಳಬಹುದು. ಆದರೆ ಇವುಗಳ ಜೊತೆಗೆ ಪತ್ತೆಯನ್ನು ಕೂಡ ಮಾಡಬೇಕು.

ಅಂದರೆ ಹಸಿ ಮೆಣಸಿಕಾಯಿ ಸೇವನೆ ಕರಿದ ಪದಾರ್ಥಗಳ ಸೇವನೆ ಬೇಕರಿ ಉತ್ಪನ್ನಗಳ ಸೇವನೆಗೆ ಕಡಿತ ಇರಬೇಕು. ಜೊತೆಗೆ ಪಾನೀಯಗಳಾದ ಚಹಾ ಕಾಫೀ, ಟೀ, ಆಲೂಗಡ್ಡೆ ಬದನೆಕಾಯಿ ಬಿಟ್ಟು ಇವುಗಳ ಜೊತೆಗೆ ಮಧ್ಯಪಾನ ಧೂಮಪಾನ ತ್ಯಜಿಸಿ ನಂತರ ಈ ಬಸಳೆ ಸೊಪ್ಪು ತಿನ್ನುವುದರಿಂದ ನಿಮಗೆ ಲಾಭಗಳು ಸಿಗುತ್ತವೆ. ಇಲ್ಲವಾದರೆ ನೀವು ಯಾವುದೇ ರೀತಿಯ ಪತ್ತೆಯನ್ನು ಮಾಡದೇ ರಕ್ತ ಶುದ್ಧಿಯಾಗಬೇಕು ಅಂದರೆ ಖಂಡಿತವಾಗಿ ಇದು ಸಾಧ್ಯವಿಲ್ಲ ಗೆಳೆಯರೇ. ಈ ಕೆಟ್ಟ ಚಟಗಳನ್ನು ಬಿಟ್ಟು ಈ ಸೊಪ್ಪನ್ನು ಸೇವಿಸಿದರೇ ಖಂಡಿತವಾಗಿ ನೀವು ಫಲಿತಾಂಶ ಪಡೆದುಕೊಳ್ಳಬಹುದು. ಹಾಗಾದರೆ ಬನ್ನಿ ಇದನ್ನು ಹೇಗೆ ಉಪಯೋಗಿಸಬೇಕು ಅಂತ ತಿಳಿಯೋಣ. ಮೊದಲಿಗೆ 8-10 ಈ ಬಸಳೆ ಸೊಪ್ಪು ಎಲೆಗಳನ್ನು ತೆಗೆದುಕೊಳ್ಳಿ. ಅವುಗಳನ್ನು ಚೆನ್ನಾಗಿ ಜಜ್ಜಿ ಕುಟ್ಟಿಕೊಳ್ಳಿ. ಹೀಗೆ ಜಜ್ಜಿದ ಈ ಪೇಸ್ಟ್ ಅನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ನಂತರ ಇದನ್ನು ಶೋಧಿಸಿಕೊಳ್ಳದೆ ಹಾಗೆಯೇ ಕುಡಿಯಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸತತವಾಗಿ ಹನ್ನೊಂದು ದಿನಗಳವರೆಗೆ ಮಾಡಬೇಕು.

ಇದರಿಂದ ರಕ್ತ ಶುದ್ದವಾಗುತ್ತದೆ. ಇನ್ನೂ ರಾತ್ರಿ ಮಲಗುವಾಗ ನೀವು ಸ್ವಲ್ಪ ಹರಳೆಣ್ಣೆ ಮತ್ತು ಬಸಳೆ ಸೊಪ್ಪಿನ ಜೊತೆಗೆ ಮಿಕ್ಸ್ ಮಾಡಿ ಚೆನ್ನಾಗಿ ಅಗೆದು ನಂತರ ಹರಳೆಣ್ಣೆ ಸೇವನೆ ಮಾಡಬೇಕು. ಈ ರೀತಿಯಾಗಿ ಮಾಡುವುದರಿಂದ ಬೆಳಿಗ್ಗೆ ಎದ್ದು ತಕ್ಷಣವೇ ಮೋಷನ್ ಆಗುತ್ತದೆ ಇದರಿಂದ ನಿಮ್ಮ ಹೊಟ್ಟೆಯೆಲ್ಲವು ಶುದ್ದವಾಗುತ್ತದೆ. ಇದು ಶರೀರದಲ್ಲಿ ಅಡಗಿರುವ ಎಲ್ಲ ಕಲ್ಮಶಗಳನ್ನು ದೂರ ಮಾಡುತ್ತದೆ. ಮತ್ತು ಪಿತ್ತವಿನಾಶಕವಾಗಿ ಕೆಲಸವನ್ನು ಮಾಡುತ್ತದೆ. ಇನ್ನೂ ದೇಹದಲ್ಲಿ ರಕ್ತ ಶುದ್ಧವಾಗಿರಬೇಕು ಯಾಕೆ ಅಂತ ಹೇಳುವುದಾದರೆ, ರಕ್ತವು ಶುದ್ದವಾಗಿಲ್ಲ ಅಂದರೆ ಚರ್ಮದ ಕಾಯಿಲೆಗಳು ಬರುತ್ತವೆ. ಸೋರಿಯಾಸಿಸ್ ಕಾಯಿಲೆ ಕಾಡುತ್ತದೆ. ಕೂದಲು ಉದುರುವ ಸಮಸ್ಯೆ ಕಣ್ಣುಗಳು ಮಂಜಾಗುವ ಸಮಸ್ಯೆ ಈ ಎಲ್ಲ ಸಮಸ್ಯೆಗಳಿಗೆ ಕಾರಣವೇ ರಕ್ತದ ಅಶುದ್ಧತೆ. ಹೃದಯ ನಾಳಗಳಿಗೆ ರಕ್ತವು ಸರಿಯಾಗಿ ಸಂಚಾರ ಆಗದೇ ಹೃದಯಾಘಾತ ಆಗುವ ಸಾಧ್ಯತೆ ಇರುತ್ತದೆ. ಹಾಗೂ ರಕ್ತದ ಅಶುದ್ಧತೆ ಇಂದ ಮಾನಸಿಕ ಒತ್ತಡ ಕಾಡುತ್ತದೆ. ಹೀಗಾಗಿ ರಕ್ತದ ಆಶುದ್ಧತೆ ಇಂದ 140 ಕಾಯಿಲೆಗಳು ಬಂದು ಸೇರುತ್ತವೆ. ಆದ್ದರಿಂದ ನೀವು ಆದಷ್ಟು ರಕ್ತದ ಶುದ್ದೀಕರಣ ಕಡೆಗೆ ಗಮನ ಹರಿಸಬೇಕು. ಆದ ಕಾರಣ ಈ ಬಸಳೆ ಸೊಪ್ಪು ಸೇವನೆ ಮಾಡಿ. ನಿಮ್ಮ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *