ನಮಸ್ತೆ ಪ್ರೀತಿಯ ಓದುಗರೇ, ತುಳಸಿ ಗಿಡ ಅಥವಾ ತುಳಸಿ ಮಾತೆಗೆ ನಮ್ಮ ಹಿಂದೂ ಧರ್ಮದಲ್ಲಿ ಒಂದು ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ ಅದರಲ್ಲೂ ಭಗವಾನ್ ವಿಷ್ಣುವಿಗೆ ತುಂಬಾನೇ ಬಲು ಪ್ರಿಯವಾದ ಸಸ್ಯವಾಗಿದೆ. ಹೌದು ತುಳಸಿ ಗಿಡವನ್ನು ನಾವು ಈಗ ಪ್ರತಿಯೊಬ್ಬರ ಮನೆಯಂಗಳದಲ್ಲಿ ಕಾಣುತ್ತೇವೆ. ಏಕೆಂದರೆ ತುಳಸಿ ಗಿಡವನ್ನು ದೇವಿ ಎಂದು ಪೂಜೆಯನ್ನು ಕೂಡ ಮಾಡುತ್ತೇವೆ. ಇನ್ನೂ ಕೆಲವೊಂದು ಅಧ್ಯಯನಗಳು ಕೂಡ ಇದನ್ನು ಸಾಬೀತು ಮಾಡಿವೆ. ತುಳಸಿ ಗಿಡವನ್ನು ಹೆಚ್ಚಾಗಿ ಭಾರತದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಧಾರ್ಮಿಕ ಹಾಗೂ ಔಷಧಿಯಾಗಿಯೂ ಇದನ್ನು ಬಳಕೆ ಮಾಡಲಾಗುತ್ತದೆ. ಈ ತುಳಸಿ ಗಿಡವು ಕೇವಲ ಪೂಜೆಗೆ ಮಾತ್ರವಲ್ಲದೆ ಇದು ವಾತಾವರಣದಲ್ಲಿ ಅಧಿಕವಾದ ಆಮ್ಲಜನಕ ಬಿಡುಗಡೆ ಮಾಡುತ್ತದೆ. ಆದ್ದರಿಂದ ಇದು ಆರೋಗ್ಯಕ್ಕೆ ಕೂಡ ತುಂಬಾನೇ ಒಳ್ಳೆಯದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ತುಳಸಿ ಎಲೆಗಳನ್ನು ತಿನ್ನುವುದರಿಂದ ಆಗುವ ಲಾಭಗಳ ಪಟ್ಟಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ಮೊದಲಿಗೆ ತುಳಸಿ ಸಸ್ಯವನ್ನು ನಿಮ್ಮ ಮನೆಯ ಅಂಗಳದಲ್ಲಿ ಯಾಕೆ ಬೆಳೆಸಬೇಕೆಂದರೆ ಇದು ವಾತಾವರಣದಲ್ಲಿ ಆಮ್ಲಜನಕ ಬಿಡುಗಡೆ ಮಾಡುತ್ತದೆ. ಮನೆಯ ಸುತ್ತಮುತ್ತಲಿನ ವಾತಾವರಣ ಹಾಗೂ ಪರಿಸರ ಉತ್ತಮವಾದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತಿದ್ದರೆ ಅದರಿಂದ ನಮ್ಮ ಆರೋಗ್ಯವು ವೃದ್ಧಿ ಆಗುತ್ತದೆ. ಹಾಗೆಯೇ ಒಳ್ಳೆಯ ಆಮ್ಲಜನಕ ರೋಗಗಳು ಬರದಂತೆ ತಡೆಯುತ್ತದೆ.
ತುಳಸಿ ಗಿಡವನ್ನು ಪೂಜೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಹಾಗೂ ಯಾವುದೇ ನೋವು ನಿರಾಶೆ ಕೂಡ ಇರುವುದಿಲ್ಲ. ದಿನವೂ ತುಂಬಾನೇ ಉಲ್ಲಾಸದಾಯಕವಾಗಿ ಸಾಗುತ್ತದೆ. ತುಳಸಿ ಎಲೆಗಳಲ್ಲಿ ಇರುವಂತಹ ಅಡಾಪ್ಟೋಜೆನ್ ಎನ್ನುವ ಅಂಶವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇನ್ನೂ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ತುಳಸಿ ಎಲೆಗಳನ್ನು ತಿನ್ನುವುದರಿಂದ ಬುದ್ದಿ ಶಕ್ತಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ವಯಸ್ಸಾದವರಲ್ಲಿ ಕಂಡು ಬರುವ ಸುಸ್ತು ನಿಶ್ಶಕ್ತಿಯನ್ನು ದೂರ ಮಾಡುತ್ತದೆ. ಚರ್ಮದಲ್ಲಿ ಫಂಗಸ್ ಆಗಿದ್ದರೆ ತುರಿಕೆ ಆಗುತ್ತಿದ್ದರೆ ತುಳಸಿ ಎಲೆಗಳ ಸೇವನೆ ಇಂದ ಕ್ರಮೇಣ ವಾಸಿ ಆಗುತ್ತದೆ. ಮತ್ತು ತುಳಸಿ ಎಲೆಗಳನ್ನು ಸೇವಿಸುವ ಅಥವಾ ಅದರ ನೀರು ಕುಡಿಯುವ ಪ್ರಮುಖ ಲಾಭವೆಂದರೆ ಇದು ಪ್ರತಿರೋಧಕ ವ್ಯವಸ್ಥೆ ಬಲಪಡಿಸುವುದು. ಇನ್ನು ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಇದರಿಂದ ಕೀಟಗಳ ಕಾಟವು ಕೂಡ ತಪ್ಪುತ್ತದೆ. ತುಳಸಿ ಎಲೆಗಳ ಕಷಾಯವನ್ನು ಕುಡಿಯುವುದರಿಂದ ಮಾನಸಿಕ ಒತ್ತಡ ತಡೆಯಬಹುದು. ತುಳಸಿ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ ಮತ್ತು ಇದು ಬಾಯಿಯ ದುರ್ವಾಸನೆಯನ್ನು ತುಂಬಾ ಪರಿಣಾಮಕಾರಿ ಆಗಿ ನಿವಾರಣೆ ಮಾಡುವುದು. ಇನ್ನು ಮಧುಮೇಹಿಗಳು ಸಕ್ಕರೆಯ ಕಾಯಿಲೆಯನ್ನು ನಿಯಂತ್ರಣ ಮಾಡಲು ಬಳಕೆ ಮಾಡುತ್ತಾರೆ.
ರಕ್ತದಲ್ಲಿ ಸಕ್ಕರೆ ಮಟ್ಟವು ಹತೋಟಿಗೆ ಬರಲು ತುಳಸಿ ಬಹಳ ಉಪಯುಕ್ತವಾಗಿದೆ. ಇನ್ನು ನಿತ್ಯವೂ 2-4 ತುಳಸಿ ಎಲೆಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮತ್ತು ರಕ್ತದೊತ್ತಡವನ್ನು ಕೂಡ ನಿಯಂತ್ರಣದಲ್ಲಿ ಇಡುತ್ತದೆ.ಇನ್ನು ನಿಮಗೆ ಶೀತ ನೆಗಡಿ ಕೆಮ್ಮು ಅಜೀರ್ಣತೆ ಹೃದಯದ ಇನ್ನಿತರ ಸಮಸ್ಯೆಗಳನ್ನು ವಾಸಿ ಮಾಡುತ್ತದೆ ಈ ತುಳಸಿ ಎಲೆಗಳು. ಇನ್ನೂ ಮುಖ್ಯವಾಗಿ ಹಂದಿಜ್ವರಕ್ಕೆ ತುಳಸಿ ಎಲೆಗಳು ರಾಮಬಾಣವಿದ್ದಂತೆ. ಇದು ಹಂದಿಜ್ವರಕ್ಕೆ ಸಂಭಂದ ಪಟ್ಟ ಕೀಟಾಣುಗಳು ದೇಹವನ್ನು ಸೇರದಂತೆ ನೋಡಿಕೊಳ್ಳುತ್ತದೆ. ಅಷ್ಟೊಂದು ದಿವ್ಯ ಔಷಧವಾಗಿದೆ. ಆರೋಗ್ಯದ ದೃಷ್ಟಿಯಿಂದ ನಿತ್ಯವೂ 6-7 ತುಳಸಿ ಎಲೆಗಳು ತಿನ್ನುವುದು ಒಳಿತು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ವೃದ್ಧಿ ಆಗುತ್ತದೆ ಎಂದು ಸಂಶೋಧನೆಗಳು ಹೇಳಿವೆ. ಉತ್ತಮವಾದ ಆರೋಗ್ಯಕ್ಕೆ ತುಳಸಿ ಎಲೆಗಳ ಸೇವನೆ ಅದ್ಭುತ. ಇದಕ್ಕೆ ಯಾವುದೇ ಹಣದ ಅವಶ್ಯಕತೆ ಇಲ್ಲ ಗೆಳೆಯರೇ, ಪರಿಸರದಲ್ಲಿ ಸಿಗುವ ಹಾಗೂ ಮನೆಯ ಅಂಗಳದಲ್ಲಿ ಬೆಳೆಸುವ ಈ ತುಳಸಿ ಸಸ್ಯದ ಲಾಭಗಳನ್ನು ಕಂಡುಕೊಳ್ಳಿ. ಶುಭದಿನ.